ಅನಿಮಲ್​ ಚಿತ್ರದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿರುವ ನಟಿ ತೃಪ್ತಿ ದಿಮ್ರಿಗೆ ಈಗ ನ್ಯಾಷನಲ್​ ಕ್ರಷ್​ ಪಟ್ಟ ಸಿಕ್ಕಿದೆ. ಆದರೆ ತೃಪ್ತಿ ದಿಮ್ರಿ ನಿರ್ವಹಿಸಿದ ಪಾತ್ರಕ್ಕೆ ಮೊದಲ ಚಾಯ್ಸ್ ಅವರಾಗಿರಲ್ಲಿಲ್ಲ. ಹಲವು ಸ್ಟಾರ್‌ಕಿಡ್‌ಗಳು ಈ ಪಾತ್ರಕ್ಕಾಗಿ ಅಡಿಷನ್ ಕೊಟ್ಟಿದ್ದರು. ಅದರಲ್ಲೂ ಬಾಲಿವುಡ್‌ನ ಖ್ಯಾತ ನಟನ ಈ ಪುತ್ರಿ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ನಟಿಸಬೇಕು ಅಂತ ಬಯಸಿದ್ರಂತೆ.

ಅನಿಮಲ್​ ಚಿತ್ರದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿರುವ ನಟಿ ತೃಪ್ತಿ ದಿಮ್ರಿಗೆ ಈಗ ನ್ಯಾಷನಲ್​ ಕ್ರಷ್​ ಪಟ್ಟ ಸಿಕ್ಕಿದೆ. ಚಿತ್ರದ ನಾಯಕಿ ನಟಿ ರಶ್ಮಿಕಾ ಮಂದಣ್ಣಗಿಂತಲೂ ತೃಪ್ತಿ ದಿಮ್ರಿ ಹೆಸರು, ನಟನೆ ಹೆಚ್ಚು ಫೇಮಸ್ ಆಗಿದೆ. ಈಗ ಬಿ-ಟೌನ್​ನಲ್ಲಿ ನಟಿ ತೃಪ್ತಿ ದಿಮ್ರಿಯದ್ದೇ ಹವಾ. ಕೆಲ ದಿನಗಳ ಹಿಂದೆ ಹೀಗೊಬ್ಬ ನಟಿ ಇದ್ದಳೆಂದು ತಿಳಿಯದವರೂ ಇದೀಗ ಈಕೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗದಿದ್ದ ತೃಪ್ತಿ ರಾತ್ರೋರಾತ್ರಿ 20 ಲಕ್ಷ ಫಾಲೋವರ್ಸ್​ ಅಭಿಮಾನಿಯಾಗಿದ್ದಾರೆ.

ಅಂದಹಾಗೆ ಇದೇ ಡಿಸೆಂಬರ್​1 ರಂದು ಬಿಡುಗಡೆಯಾಗಿರುವ ನಟ ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಐದಾರು ದಿನಗಳಲ್ಲಿಯೇ ಜಗತ್ತಿನಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ. ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ನಾಗಾಲೋಟದಿಂದ ಓಡುತ್ತಿದೆ. ಆದರೆ ತೃಪ್ತಿ ದಿಮ್ರಿ ನಿರ್ವಹಿಸಿದ ಪಾತ್ರಕ್ಕೆ ಮೊದಲ ಚಾಯ್ಸ್ ಅವರಾಗಿರಲ್ಲಿಲ್ಲ. ಹಲವು ಸ್ಟಾರ್‌ಕಿಡ್‌ಗಳು ಈ ಪಾತ್ರಕ್ಕಾಗಿ ಅಡಿಷನ್ ಕೊಟ್ಟಿದ್ದರು. ಆದ್ರೆ ರಿಜೆಕ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.

Animal: ಹೆಣ್ಣಿನ ಮೇಲೆ ದೌರ್ಜನ್ಯ, ಕ್ರೌರ್ಯ ನೋಡೋದೆಂದ್ರೆ ಅಷ್ಟು ಇಷ್ಟನಾ? ಇದೆಂಥ ಮನಸ್ಥಿತಿ? ನಟಿ ದೀಪಿಕಾ ಹೇಳಿದ್ದೇನು?

ಅನಿಮಲ್‌ಗಾಗಿ ಆಡಿಷನ್‌ನಲ್ಲಿ ವಿಫಲವಾದ ಸ್ಟಾರ್ ಕಿಡ್
ವರದಿಯ ಪ್ರಕಾರ, ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್ ಅವರು ನಟಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗ ಅನಿಮಲ್‌ನಲ್ಲಿ ಜೋಯಾ ಪಾತ್ರಕ್ಕಾಗಿ ಆಡಿಷನ್ ಮಾಡಿದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಚಿತ್ರದಲ್ಲಿ ಸಾರಾ ಕೂಡ ಇರಲು ಉತ್ಸುಕರಾಗಿದ್ದರು ಎಂದು ವರದಿಗಳು ತಿಳಿಸಿವೆ. ಆದರೆ, ತೃಪ್ತಿ ಪಾತ್ರಕ್ಕಾಗಿ ಆಡಿಷನ್ ಮಾಡಿದ ನಂತರ, ಆಕೆ ಆ ಪಾತ್ರಕ್ಕೆ ಪರಿಪೂರ್ಣ ಆಯ್ಕೆ ಎಂದು ಸಂದೀಪ್ ರೆಡ್ಡಿ ಭಾವಿಸಿದರು. ಆದ್ದರಿಂದ, ಸಾರಾ ಪಾತ್ರವನ್ನು ಕಳೆದುಕೊಂಡರು ಎಂದು ತಿಳಿದುಬಂದಿದೆ. ನಟಿ ಗ್ಯಾಸ್‌ಲೈಟ್, ಜರಾ ಹಟ್ಕೆ ಜರಾ ಬಚ್ಕೆ, ಮತ್ತು ಇನ್ನೂ ಬಿಡುಗಡೆಯಾಗದ ಏ ವತನ್ ಮೇರೆ ವತನ್ ನಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಇನ್ನು ತೃಪ್ತಿ ದಿಮ್ರಿ, 2017ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಬುಲ್‌ಬುಲ್ ಚಿತ್ರದಲ್ಲೂ ನಟಿಸಿದ್ದರು. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು. ಈಗ ಅನಿಮಲ್ ಸಿನಿಮಾದಲ್ಲಿ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ.ತೃಪ್ತಿ ಅವರ ಗ್ಲಾಮರ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ರಶ್ಮಿಕಾ ಮಂದಣ್ಣನನ್ನೇ ಮೀರಿಸುವಂತೆ ಬಟ್ಟೆ ಬಿಚ್ಚಿದ ತೃಪ್ತಿ, ನಗ್ನ ಸೀನ್ಸ್‌ಗೂ ಸೈ ಎಂದ ನಟಿ!

ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕ ನಟನಾಗಿದ್ದು, ಅನಿಲ್ ಕಪೂರ್ ಅವರ ತಂದೆಯಾಗಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ಅವರ ಪತ್ನಿಯಾಗಿ ನಟಿಸಿದ್ದಾರೆ. ತೃಪ್ತಿ ಮ್ರಿಯ ಪಾತ್ರವು ದ್ವಿತೀಯಾರ್ಧದಲ್ಲಿ ರಬರುತ್ತದೆ. ಚಿತ್ರದಲ್ಲಿ ಅವರ ಉಪಸ್ಥಿತಿಯು ಟೀಕೆಗೆ ಒಳಗಾಗಿದ್ದರೂ, ಅವರ ಅಭಿನಯವನ್ನು ಪ್ರಶಂಸಿಸಲಾಗಿದೆ.