9 ತಿಂಗಳಲ್ಲಿ ಮಾತಾ ವೈಷ್ಣೋದೇವಿಗೆ 2ನೇ ಬಾರಿ ಭೇಟಿ ನೀಡಿದ ನಟ ಶಾರೂಖ್
ಬಾಲಿವುಡ್ ಕಿಂಗ್ ಖಾನ್ ಶಾರೂಖ್ ತಮ್ಮ ಬಹುನಿರೀಕ್ಷಿತ ಜವಾನ್ ಸಿನಿಮಾ ಬಿಡುಗಡೆಗೂ ಮೊದಲು ಕಾಶ್ಮೀರದಲ್ಲಿರುವ ಹಿಂದೂ ತೀರ್ಥಕ್ಷೇತ್ರ ಮಾತಾ ವೈಷ್ಣೋದೇವಿ ಸನ್ನಿಧಿಗೆ ರಹಸ್ಯವಾಗಿ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ ಎಂದು ಕೆಲ ಅಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಜಮ್ಮು: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ತಮ್ಮ ಬಹುನಿರೀಕ್ಷಿತ ಜವಾನ್ ಸಿನಿಮಾ ಬಿಡುಗಡೆಗೂ ಮೊದಲು ಕಾಶ್ಮೀರದಲ್ಲಿರುವ ಹಿಂದೂ ತೀರ್ಥಕ್ಷೇತ್ರ ಮಾತಾ ವೈಷ್ಣೋದೇವಿ ಸನ್ನಿಧಿಗೆ ರಹಸ್ಯವಾಗಿ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ ಎಂದು ಕೆಲ ಅಂಗ್ಲ ಮಾಧ್ಯಮಗಳು ವರದಿ ಮಾಡಿವೆ. ನೀಲಿ ಬಣ್ಣದ ಹುಡೆಡ್ ಧಿರಿಸು ಧರಿಸಿರುವ ಶಾರೂಖ್ ಖಾನ್ ಈ ಸಂದರ್ಭ ತಮ್ಮ ಮುಖವನ್ನು ಕೂಡ ಸಂಪೂರ್ಣವಾಗಿ ಮುಚ್ಚಿಕೊಂಡು ನಡೆದು ಹೋಗುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಜಮ್ಮು ಕಾಶ್ಮೀರದ ರೇಸೈ ಜಿಲ್ಲೆಯಲ್ಲಿರುವ ತ್ರಿಕೂಟ ಹಿಲ್‌ನಲ್ಲಿ ಮಾತಾ ವೈಷ್ಣೋದೇವಿ (Mata Vaishno Devi)ದೇಗುಲವಿದೆ. ಹಿಂದೂಗಳ ಪುಣ್ಯಕ್ಷೇತ್ರ ಇದಾಗಿದ್ದು, ಪ್ರತಿವರ್ಷವೂ ಲಕ್ಷಾಂತರ ಜನ ಹಿಂದೂಗಳು ಇಲ್ಲಿಗೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ.
ಕೆಲ ಉನ್ನತ ಮೂಲಗಳ ಮಾಹಿತಿ ಪ್ರಕಾರ 58 ವರ್ಷದ ನಟ ಶಾರೂಖ್ ಖಾನ್ (Shah Rukh khan) ಮಂಗಳವಾರ ರಾತ್ರಿ ವೇಳೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಮಂಗಳವಾರ ಸಂಜೆ ಕತ್ರಾದ ಬೇಸ್ ಕ್ಯಾಂಪ್ ತಲುಪಿದ್ದರು, ಅಲ್ಲಿಂದ ಅವರು ವೈಷ್ಣೋದೇವಿಗೆ ತೆರಳಲು ಹೊಸದಾಗಿ ನಿರ್ಮಾಣವಾಗಿರುವ ತಾರಕೋಟೆ ಮಾರ್ಗದ ಮೂಲಕ ವೈಷ್ಣೋದೇವಿ ದೇಗುಲಕ್ಕೆ ರಾತ್ರಿ 11.40 ರ ಸುಮಾರಿಗೆ ತಲುಪಿದರು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ಕೂಡಲೇ ಅಲಿಂದ ಹೊರಟು ಹೋದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯಾರೋ ಕೈ ಕತ್ತರಿಸ್ತಾರೆ ಅನ್ನೋ ವಿಚಿತ್ರ ಭಯದಲ್ಲಿ ಒದ್ದಾಡುತ್ತಿರುವ ಶಾರುಖ್ ಖಾನ್! ಇದ್ಯಾಕೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 9 ಸೆಕೆಂಡ್‌ಗಳ ವೀಡಿಯೋದಲ್ಲಿ ಶಾರೂಕ್ ನೀಲಿ ಬಣ್ಣದ ಹೂಡಿ ಜಾಕೆಟ್ ಧರಿಸಿದ್ದು, ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾರೆ. ವೈಷ್ಣೋದೇವಿ ದೇಗುಲ ಸಮಿತಿಯ ಕೆಲ ಅಧಿಕಾರಿಗಳು, ಕೆಲವು ಪೊಲೀಸರು ಮತ್ತೆ ಕೆಲವು ವೈಯಕ್ತಿಕ ಸಿಬ್ಬಂದಿಗಳು ಶಾರುಖ್ ಜೊತೆ ಹೆಜ್ಜೆ ಹಾಕುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಕಳೆದ 9 ತಿಂಗಳಲ್ಲಿ ವೈಷ್ಣೋದೇವಿಗೆ ಶಾರೂಖ್ 2ನೇ ಬಾರಿ ಭೇಟಿ ನೀಡಿದ್ದು, ಕಳೆದ ಡಿಸೆಂಬರ್‌ನಲ್ಲಿಯೂ ಅವರು ತಮ್ಮ ಪಠಾಣ್ ಸಿನಿಮಾ ರಿಲೀಸ್‌ಗೂ ಮೊದಲು ವೈಷ್ಣೋದೇವಿ ದರ್ಶನ ಪಡೆದಿದ್ದರು. ಶಾರೂಖ್ ಅಭಿನಯದ ಜವಾನ್ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಅವರ ಈ ದೇಗುಲ ಭೇಟಿ ಮಹತ್ವ ಹೆಚ್ಚಿಸಿದೆ.
ವೈವಾಹಿಕ ಜೀವನದಲ್ಲಿ ಹ್ಯಾಪಿಯಾಗಿರಲು ಬಾಲಿವುಡ್ ಕಪಲ್ ಶಾರುಖ್ ಖಾನ್-ಗೌರಿ ಖಾನ್ ಟಿಪ್ಸ್
ಆಕ್ಷನ್ ಥ್ರಿಲರ್ ಜವಾನ್ ಸಿನಿಮಾವನ್ನು ತಮಿಳು ನಿರ್ಮಾಪಕ ಅಟ್ಲಿ ನಿರ್ಮಾಣ ಮಾಡಿದ್ದು, ಇದು ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಶಾರೂಖ್ ಜೊತೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದು, ಜೊತೆಗೆ ವಿಜಯ್ ಸೇಥುಪತಿ, ಪ್ರಿಯಾಮಣಿ ಹಾಗೂ ಸಾನ್ಯಾ ಮಲ್ಹೋತ್ರಾ, ದೀಪಿಕಾ ಪಡುಕೋಣೆ ಇತರ ತಾರಾ ಭೂಮಿಕೆಯಲ್ಲಿದ್ದಾರೆ.