ಮಾಲಿವುಡ್‌ ಚಿತ್ರರಂಗದ ರೈಸಿಂಗ್‌ ಬಡ್‌ ಸಹ ನಟಿಗೆ ಅವಕಾಶ ನೀಡುವುದಾಗಿ ಹೇಳಿ ಕೇರಳ ಚಲಚಿತ್ರ ಅಕಾಡೆಮಿ ಚೇರ್‌ಮನ್‌ ಕಮಲ್  ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 

ಏಪ್ರಿಲ್‌ 26,2019ರಲ್ಲಿ Aami ಸಿನಿಮಾ ಚಿತ್ರೀಕರಣದ ವೇಳೆ ಕಮಲ್ ಸಹ ನಟಿಗೆ ಅವಕಾಶ ನೀಡುವುದಾಗಿ ಮಾತು ನೀಡಿದ್ದಾರೆ. ಈ ಸಮಯದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಅವಕಾಶವೂ ನೀಡದೆ ಮೋಸ ಮಾಡಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ.

ಪೋರಿ ಇತ್ತ ಓಡಿ ಬಂದ್ಲೋ, ಜಿಂಬೋಲೆ ಜಿಂಬೋಲೆ ಜಿಂಕೆ ಮರಿ ರೇಖಾ ಎಲ್ಲೀಗ? .

ವಿಚಾರ ತಿಳಿಯುತ್ತಿದ್ದಂತೆ ಕಮಲ್‌ ಮಾಧ್ಯಮದಲ್ಲಿ ಸ್ಪಷ್ಟನೇ ನೀಡಿದ್ದಾರೆ. 'ಯಾವುದೇ ಆಧಾರವಿಲ್ಲದೆ ಮಾಡಿರುವ ಆರೋಪವಿದು .  ನಾನು ವರ್ಷಗಳ ಹಿಂದೆಯೇ ಆಕೆಯಿಂದ ಲೀಗಲ್‌ ನೋಟಿಸ್‌ ಪಡೆದಿರುವೆ  ಇದರ ಬಗ್ಗೆ ನಾನು ವಕೀಲರನ್ನು ಸಂಪರ್ಕಿಸಿದಾಗ  ಇದೆಲ್ಲಾ ಸುಳ್ಳು ಆರೋಪ ಎಂದು ಕೇಳಿದಾಕ್ಷಣ ಸುಮ್ಮನಾಗಿರುವೆ. ಇದಾದ ನಂತರ ಸಹ ನಟಿ ಯಾವುದೇ ರೀತಿಯಲ್ಲಿ ಕೇಸ್‌ ಮುಂದೂಡಿಸಲಿಲ್ಲ ಹಾಗಾಗಿ ನಾನು  ಸುಮ್ಮನಾದೆ' ಎಂದು ಮಾತನಾಡಿದ್ದಾರೆ.

2019ರಲ್ಲಿ ಸಹ ನಟಿ ಕಮಲ್‌ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿ ಕಾನೂನಿನ  ನಿಯಮದ ಪ್ರಕಾರ ನೋಟೀಸ್‌ ಕಳುಹಿಸಿದ್ದಾರೆ, ಇದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗದ ಕಾರಣ ಕೇಸ್‌ಗೆ ಫುಲ್‌ ಸ್ಟಾಪ್ ಹಾಕಲಾಗಿತ್ತು. 

ದಶಕಗಳಿಂದಲೂ ಮಾಲಿವುಡ್‌ ಚಿತ್ರರಂಗದಲ್ಲಿ ನಿರ್ದೇಶಕನಾಗಿರುವ ಕಮಲ್‌ ವಿರುದ್ಧ ಇದೇ ಮೊದಲ ಬಾರಿಗೆ ಆರೋಪ ಕೇಳಿ ಬರುತ್ತಿರುವುದು ಇದಕ್ಕೆ ಕಮಲ್‌ ಚಲಚಿತ್ರ ಅಕಾಡೆಮಿಯ ಮಾಜಿ ಮುಖ್ಯಸ್ಥರ ಕೈವಾಡವಿದೆ ಎಂದು ಹೇಳಿದ್ದಾರೆ. 'ಸೂಕ್ಷ್ಮವಾಗಿ ಗಮನಿಸಿದರೆ ಇದನ್ನೆಲ್ಲ ಚಲಚಿತ್ರ ಅಕಾಡಮಿ ಮಾಜಿ ಸದಸ್ಯರು ಮಾಡಿಸಿದ್ದಾರೆ. ಸಂಸ್ಥೆಯಲ್ಲಿ ಗೊಂದಲ ಸೃಷ್ಟಿಸಿದ ಕಾರಣ ಅವರು ರಾಜೀನಾಮೆ ನೀಡಿದ್ದರು  ಈಗ ಆ ಅವಮಾನಕ್ಕಾಗಿ ನನ್ನ ವಿರುದ್ಧ ಹೀಗೆ ಮಾಡಿಸುತ್ತಿದ್ದಾರೆ. ನನ್ನ ಬಳಿ ಯಾವುದೇ ಆಧಾರವಿಲ್ಲದ ಕಾರಣ ಕೇಸ್‌  ಸಾಬೀತು ಮಾಡಲು ಆಗಲಿಲ್ಲ' ಎಂದಿದ್ದಾರೆ. 

ಕೊನೆಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ 'Lust stories' ನಾಯಕಿ!

ಕಮಲ್‌ ನೀಡಿದ ಪ್ರತಿಯೊಂದು ಸ್ಪಷ್ಟನೆ ನಂತರ ಸಹ ನಟಿ ಯಾವುದೇ ಪ್ರತಿಕ್ರಿಯೇ ನೀಡಿಲ್ಲ ಹಾಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಸಹ ನಟಿಯಾರೆಂದು ಬಹಿರಂಗವಾಗದಿದ್ದರೂ ನೆಟ್ಟಿಗರು ಎಲ್ಲಿ ಮಾಯಾವಾದ್ರಿ ಎಂದು ಕೇಳುತ್ತಿದ್ದಾರೆ.