Joyland: ಪಾಕ್​ನಲ್ಲಿ ಬ್ಯಾನ್​ ಆದ ಈ ಸಿನಿಮಾ ಭಾರತದಲ್ಲಿ ರಿಲೀಸ್​!

ಪಾಕಿಸ್ತಾನದ ಚಿತ್ರವಾಗಿರುವ ಜಾಯ್​ಲ್ಯಾಂಡ್​ ಪಾಕ್​ನಲ್ಲಿ ಬ್ಯಾನ್​ ಆಗಿದ್ದರೂ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಹಾಗಿದ್ದರೆ ಏನಿದರ ಸ್ಟೋರಿ?
 

Banned in Pakistan Joyland movie is releasing in India

ಕರಾಚಿ: ಭಾರತದ ಚಿತ್ರಗಳನ್ನು ಪಾಕಿಸ್ತಾನದಲ್ಲಿ ನಿಷೇಧಿಸಿ ವರ್ಷಗಳೇ ಗತಿಸಿವೆ. 2019ರಿಂದ ಈ ನಿಯಮ ಜಾರಿಗೆ ಬಂದಿದೆ.  2019ರಲ್ಲಿ ಅಂದಿನ ಪಾಕ್​ ಸರ್ಕಾರ ಬಾಲಿವುಡ್​ (Bollywood) ಚಿತ್ರಕ್ಕೆ ನಿಷೇಧ ವಿಧಿಸಿದೆ. ಸೆನ್ಸಾರ್ ಮಂಡಳಿಯಿಂದ ಸೂಕ್ತ ಪ್ರಮಾಣಪತ್ರ (Certificate) ಸಿಗದ ಹೊರತು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಯಾವುದೇ ಸಿನಿಮಾವನ್ನು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಪ್ರದರ್ಶನ ಮಾಡುವಂತಿಲ್ಲ. ಅಲ್ಲಿ ಏನಿದ್ದರೂ ಸ್ಥಳೀಯ ಚಿತ್ರ ಮತ್ತು ಹಾಲಿವುಡ್ (Hollywood)​ ಚಿತ್ರಗಳ ಪ್ರದರ್ಶನವಾಗುತ್ತದೆಯಷ್ಟೇ. ಆದರೆ ಇದರ ಹೊರತಾಗಿಯೂ  ಬೇರೆಲ್ಲಾ ಚಿತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದ ಪಾಕಿಸ್ತಾನಿಗಳು ಪಠಾಣ್​ ಚಿತ್ರ ನೋಡಲು ಹಾತೊರೆಯುತ್ತ  ಅದನ್ನು ಅಕ್ರಮವಾಗಿ ನೋಡಿ ಸೆನ್ಸಾರ್​ ಮಂಡಳಿಯಿಂದ ಎಚ್ಚರಿಕೆ ಹಾಕಿಸಿಕೊಂಡಿರುವುದು ಒಂದೆಡೆಯಾಗಿದೆ. ಆದರೆ ಇದೀಗ ಕುತೂಹಲವೆಂದರೆ, ಪಾಕಿಸ್ತಾನದಲ್ಲಿಯೇ ಬ್ಯಾನ್​ ಆಗಿದ್ದ ಚಿತ್ರವೊಂದು ಭಾರತದಲ್ಲಿ ಬಿಡುಗಡೆಯಾಗಲಿದೆ!

ನಿಜ.  ಪಾಕಿಸ್ತಾನದಲ್ಲಿ ನಿಷೇಧವಾಗಿರುವ ಚಿತ್ರವೊಂದು ಸದ್ಯದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಆ ಚಿತ್ರದ ಹೆಸರು ಜಾಯ್‌ಲ್ಯಾಂಡ್ (Joyland). ಕಳೆದ ನವೆಂಬರ್ 18 ರಂದು ಪಾಕಿಸ್ತಾನದಾದ್ಯಂತ ಈ ಚಿತ್ರ ಬಿಡುಗಡೆ ಆಗಬೇಕಿತ್ತು.  ನಟ ಸೈಮ್ ಸಾದಿಕ್ (Saim Sadik) ಅವರೇ ಬರೆದು ನಿರ್ದೇಶಿಸಿದ ಜಾಯ್​ಲ್ಯಾಂಡ್​​ ಸಿನಿಮಾ ಇದಾಗಿದೆ. ಆದರೆ ಚಿತ್ರ ಬಿಡುಗಡೆಯ ದಿನಾಂಕ ಅನೌನ್ಸ್​ ಆಗುತ್ತಿದ್ದಂತೆಯೇ  ಪಾಕಿಸ್ತಾನದ (Pakistan) ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬಿಡುಗಡೆ ದಿನಾಂಕಕ್ಕೂ ಒಂದು ವಾರ ಮುಂಚಿತವಾಗಿ ನಿಷೇಧಿಸಿತ್ತು. ಕುತೂಹಲ ಎಂದರೆ  ಈ ಚಿತ್ರವು ಕೆಲವು ಸಿನಿಮೋತ್ಸವಗಳಲ್ಲಿ ಕೂಡ ಪ್ರದರ್ಶನ ಕಂಡು ಪ್ರಶಂಸೆ ಗಳಿಸಿತ್ತು. ಮಾತ್ರವಲ್ಲದೇ  ಚಿತ್ರ ಆಸ್ಕರ್‌ ಅವಾರ್ಡ್​​ಗೆ (0scar award) ಪಾಕಿಸ್ತಾನದಿಂದ ಅಧಿಕೃತವಾಗಿ ಆಯ್ಕೆಯೂ  ಆಗಿತ್ತು. ಆದಾಗ್ಯೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಸಿನಿಮಾವನ್ನು ನಿಷೇಧಿಸಿತ್ತು. 

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು

ಇದಕ್ಕೆ ಕಾರಣ, ಈ ಚಿತ್ರದ ಕಥಾವಸ್ತು ಏನೆಂದರೆ ಯುವಕನೊಬ್ಬ ಮಂಗಳಮುಖಿಯೊಂದಿಗೆ  ಪ್ರೀತಿಯಲ್ಲಿ ಬೀಳುವುದು.  ಮಂಗಳಮುಖಿಯರ ಜೀವನ, ಸಮಾಜದಲ್ಲಿ ಅವರೆಡೆಗಿನ ತಿರಸ್ಕಾರ ಭಾವ, ಅವರ ಜೀವನ, ಅವರ ಭಾವನೆಗಳನ್ನು ಸಿನಿಮಾದಲ್ಲಿ (Cinema) ಅನಾವರಣ ಮಾಡಲಾಗಿದೆ. ಕುಟುಂಬವೊಂದು ಗಂಡು ಸಂತಾನಕ್ಕಾಗಿ ಕಾಯುತ್ತಿರುತ್ತದೆ. ಕೊನೆಗೆ ಆ ಕುಟುಂಬದಲ್ಲೊಂದು ಗಂಡು ಸಂತಾನ ಆಗುತ್ತದೆ. ಆತ ಬೆಳೆದು ಯುವನಾದಾಗ ಮಹಿಳೆಯೊಬ್ಬಳ ಮೇಲೆ ಆತನಿಗೆ ಪ್ರೀತಿ ಆಗುತ್ತದೆ. ಆದರೆ ಆಕೆ ಮಂಗಳಮುಖಿ ಆಗಿರುತ್ತಾಳೆ. ಆಕೆ ಹಾಗೂ ಆತ ಒಂದಾಗುತ್ತಾರಾ? ಅವರ ಪ್ರೀತಿಗೆ ಎದುರಾಗುವ ಅಡ್ಡಿ-ಆತಂಕ. ಅವರ ಪ್ರೀತಿಯನ್ನು ಸಮಾಜ ನೋಡುವ ರೀತಿ, ಮಂಗಳಮುಖಿಯ ಜೀವನ ಸೇರಿ ಇತರೆ ವಿಷಯಗಳ ಬಗ್ಗೆ ಸಿನಿಮಾ ತಿಳಿಸುತ್ತದೆ.

ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ 'ಜಾಯ್ ಲ್ಯಾಂಡ್' ಪ್ರೀಮಿಯರ್ (Primier) ಆಗಿತ್ತು. ಇದು ಕೇನ್ಸ್‌ನಲ್ಲಿ ಉತ್ತಮ ವಿಮರ್ಶೆಗಳನ್ನು ಪಡೆಯಿತು.  ಅದೇ ಸಮಯದಲ್ಲಿ, ಚಿತ್ರವು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತು.  ಈ ಚಿತ್ರವನ್ನು ಪಾಕಿಸ್ತಾನದ ಮೂಲಭೂತವಾದಿಗಳು  ತೀವ್ರವಾಗಿ ವಿರೋಧಿಸಿದರು. ವಿಮರ್ಶಕರು ಈ ಚಿತ್ರವನ್ನು ಹೊಗಳಿದ್ದರು.  ಚಿತ್ರವನ್ನು ಪಾಕಿಸ್ತಾನ ಸರ್ಕಾರವು ಆಸ್ಕರ್‌ನಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' ವಿಭಾಗದಲ್ಲಿ ನಾಮನಿರ್ದೇಶನಕ್ಕಾಗಿ (Nomination) ಕಳುಹಿಸಿತು.  ಚಿತ್ರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಈ ಚಿತ್ರದಲ್ಲಿ 'ಆಕ್ಷೇಪಾರ್ಹ' ವಿಷಯವನ್ನು ಉಲ್ಲೇಖಿಸಿ, ಪಾಕಿಸ್ತಾನದ ಮೂಲಭೂತವಾದಿಗಳು ಸಾಕಷ್ಟು ಗದ್ದಲವನ್ನು ಸೃಷ್ಟಿಸಿದ್ದರು. ಇದನ್ನು ನಿಷೇಧಿಸುವಂತೆ ಒತ್ತಾಯಿಸಿ ಹಲವು ಸಂಘಟನೆಗಳು ಚಿತ್ರಮಂದಿರದ ಹೊರಗೆ ಪ್ರತಿಭಟನೆ (Protest) ನಡೆಸಿದ್ದವು. ಅದೇ ಸಮಯದಲ್ಲಿ, ಸೆನ್ಸಾರ್ ಮಂಡಳಿಯ ಪ್ರಮಾಣೀಕರಣದ ಹೊರತಾಗಿಯೂ ಸರ್ಕಾರವು ಚಲನಚಿತ್ರವನ್ನು ನಿಷೇಧಿಸಿತ್ತು, ಆದರೆ ನ್ಯಾಯಾಲಯದ ಮಧ್ಯಪ್ರವೇಶದ ನಂತರ ಸರ್ಕಾರವು ನಿಷೇಧವನ್ನು ಹಿಂತೆಗೆದುಕೊಂಡಿತು. 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

ಅಲ್ಲಿ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ ಇದೀಗ  'ಜಾಯ್‌ಲ್ಯಾಂಡ್' ಇದೀಗ ಭಾರತದಲ್ಲಿ ಬಿಡುಗಡೆಯಾಗಲಿದೆ.   ಪಾಕಿಸ್ತಾನಿ ಚಿತ್ರ ನಿರ್ಮಾಪಕರು (producer) ಭಾರತದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಅವರು 'ಜಾಯ್‌ಲ್ಯಾಂಡ್ ಬಿಡುಗಡೆ ದಿನಾಂಕವನ್ನು ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ! ಎಂದಿರುವ ಅವರು,  ಪಾಕಿಸ್ತಾನಿ 'ಜಾಯ್‌ಲ್ಯಾಂಡ್' ಭಾರತದಲ್ಲಿ 10 ಮಾರ್ಚ್ 2023 ರಂದು ಬಿಡುಗಡೆಯಾಗಬಹುದು ಎಂದಿದ್ದಾರೆ. 
 
ಸಾನಿಯಾ ಸಯೀದ್ (Sania Sayeed) ಜೊತೆ ಅಲಿ ಜುನೇಜೊ, ಅಲೀನಾ ಖಾನ್, ರಸ್ತಿ ಫಾರೂಕ್, ಸಲ್ಮಾನ್ ಪಿರ್ಜಾದಾ ಮತ್ತು ಸೊಹೈಲ್ ಸಮೀರ್ ಸಿನಿಮಾದ ಮುಖ್ಯ ಪಾತ್ರಧಾರಿಗಳು. ಚಿತ್ರವನ್ನು ಅಪೂರ್ವ ಗುರು ಚರಣ್, ಸರ್ಮದ್ ಸುಲ್ತಾನ್ ಖೂಸಾತ್ ಮತ್ತು ಲಾರೆನ್ ಮನ್ ನಿರ್ಮಿಸಿದ್ದು, ಚಿತ್ರ ಈಗಾಗಲೇ ಕೆಲ ಚಿತ್ರೋತ್ಸವದಲ್ಲಿ ಭಾಗಿಯಾಗಿ ಪ್ರಶಸ್ತಿ ಮತ್ತು ಮೆಚ್ಚುಗೆ ಗಳಿಸಿದೆ.
 

Latest Videos
Follow Us:
Download App:
  • android
  • ios