ಬಾಲಿವುಡ್ (Bollywood)ನ ಹೊಸ ಚಿತ್ರ ‘ಗೆಹ್ರೈಯಾನ್’(Gehraiyaan) ಸದ್ಯ ಎಲ್ಲೆಡೆ ಸುದ್ದಿಯಲ್ಲಿದೆ. ಹಾಟ್ ಲುಕ್, ಬೋಲ್ಡ್ ಸೀನ್, ಲಿಪ್ ಲಾಕ್, ರೋಮ್ಯಾಂಟಿಕ್ ಸೀನ್‌ಗಳಿಂದ ಚಿತ್ರದ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗ್ತಿದೆ. ಬೆಂಗಳೂರಿಗರಂತೂ ದೀಪಿಕಾ ಫಿಲ್ಮ್ ನೋಡೋದೆ ಇಲ್ಲ ಅಂತಿದ್ದಾರೆ.
ಬಾಲಿವುಡ್ ಚಿತ್ರ ‘ಗೆಹ್ರೈಯಾನ್’ (Gehraiyaan) ಬಿಡುಗಡೆಗೂ ಮೊದಲೇ ಟ್ರೈಲರ್‌ನಿಂದ ಸಾಕಷ್ಟು ಸುದ್ದಿಯಾಗಿತ್ತು. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಅಭಿನಯದ ಚಿತ್ರ ಸಾಕಷ್ಟು ಬೋಲ್ಡ್ ಸೀನ್‌ಗಳನ್ನು ಒಳಗೊಂಡಿದ್ದು, ಚಿತ್ರ ಬಿಡುಗಡೆಯ ನಂತರವೂ ಸುದ್ದಿಯಾಗ್ತಿದೆ. ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ (Hotlook), ಬಿಕಿನಿ, ಲಿಪ್ ಲಾಕ್ ಮೊದಲಾದ ದೃಶ್ಯಗಳು ವೈರಲ್ ಆಗಿವೆ. ದೀಪಿಕಾ ಅಭಿಯನದ ಗೆಹ್ರೈಯಾನ್ ಕೆಟ್ಟ ಮತ್ತು ಅಶ್ಲೀಲ ಸಿನಿಮಾ ಎಂದು ಹಲವರು ಟೀಕಿಸಿದ್ದಾರೆ. ‘ಗೆಹ್ರೈಯಾನ್’ ಅಕ್ರಮ ಸಂಬಂಧಗಳ ಕುರಿತಾಗಿರುವ ಸಿನಿಮಾವಾಗಿದ್ದು, ಈ ಸಿನಿಮಾ ಕೊಡುವ ಸಂದೇಶವೇನು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಬೆಂಗಳೂರಿಗರಂತೂ ದೀಪಿಕಾ ಪಡುಕೋಣೆ ಸಿನಿಮಾವನ್ನು ನೋಡೋದೆ ಇಲ್ಲಪ್ಪಾ ಅಂತಿದ್ದಾರೆ.
ಬಾಲಿವುಡ್ (Bollywood)ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಹಿಂದೆಂದೂ ಕಾಣಿಸಿಕೊಂಡಿರದಷ್ಟು ಬೋಲ್ಡ್ ಅವತಾರದಲ್ಲಿ ‘ಗೆಹ್ರೈಯಾನ್’ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ಹಲವು ವರ್ಷಗಳ ಬಳಿಕ ದೀಪಿಕಾ ಬಿಕಿನಿಯನ್ನು ಕೂಡಾ ಧರಿಸಿದ್ದಾರೆ. ಅಷ್ಟೇ ಅಲ್ಲ ಸಂಪೂರ್ಣ ಚಿತ್ರದಲ್ಲಿ ಕಡಿಮೆ ಬಟ್ಟೆ ಮಾತ್ರ ಇದೆ. ಲಿಪ್ ಲಾಕ್, ರೋಮ್ಯಾಂಟಿಕ್ ಸೀನ್‌ಗಳು ಹೆಚ್ಚಾಗಿವೆ ಎಂಬ ಟೀಕೆ ಕೇಳಿ ಬರ್ತಿದೆ.
Relationship Tips: 'ಗೆಹ್ರೈಯಾನ್' ಸಿನಿಮಾ ನೋಡಿ, ದಾಂಪತ್ಯದಲ್ಲಿ ಈ ತಪ್ಪು ಮಾಡಬೇಡಿ !
ದೀಪಿಕಾ ಪಡುಕೋಣೆ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಕೆರಿಯರ್ ಆರಂಭಿಸಿದ್ದು, ಶಾರೂಕ್ ಖಾನ್ ಜತೆ ನಟಿಸಿದ ಈ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ಆ ನಂತರ ಕಾಕ್‌ಟೇಲ್, ಯೇ ಜವಾನಿ ಹೇ ದಿವಾನಿ, ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ರಾಮ್‌ಲೀಲಾ, ಬಾಜೀರಾವ್ ಮಸ್ತಾನಿ, ಪದ್ಮಾವತ್, ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದು ಎಲ್ಲವೂ ಜನಮೆಚ್ಚುಗೆ ಗಳಿಸಿದ್ದವು. ಆದರೆ ‘ಗೆಹ್ರೈಯಾನ್’ ಸಿನಿಮಾದ ಬಗ್ಗೆ ಮೆಚ್ಚುಗೆಗಿಂತ ಜಾಸ್ತಿ ಟೀಕೆಯೇ ವ್ಯಕ್ತಿಯಾಗಿದೆ. ಅದರಲ್ಲೂ ಬೆಂಗಳೂರು ಮೂಲದ ದೀಪಿಕಾ ಪಡುಕೋಣೆ ಅಕ್ರಮ ಸಂಬಂಧ (Relationship)ದ ಬಗ್ಗೆಯಿರುವ ಚಿತ್ರದಲ್ಲಿ ನಟಿಸಿರೋದಕ್ಕೆ ಬೆಂಗಳೂರಿಗರು ಗರಂ ಆಗಿದ್ದಾರೆ. ನಾವು ದೀಪಿಕಾ ಸಿನಿಮಾ ನೋಡಲ್ಲ ಅಂತಿದ್ದಾರೆ.
‘ಗೆಹ್ರೈಯಾನ್’ ಸಿನಿಮಾದಿಂದ ತಪ್ಪು ಸಂದೇಶ ಎಂದ ಭಾಸ್ಕರ್ ರಾವ್
‘ಗೆಹ್ರೈಯಾನ್’ ಸಿನಿಮಾದ ಬಗ್ಗೆ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ‘ಗೆಹ್ರೈಯಾನ್’ ಚಿತ್ರವನ್ನು ವೀಕ್ಷಿಸಲು ಆರಂಭಿಸಿ, 20 ನಿಮಿಷಗಳ ನಂತರ ನಾನು ಚಿತ್ರವನ್ನು ವೀಕ್ಷಿಸುವುದನ್ನು ನಿಲ್ಲಿಸಿದೆ. ಜೀವನದ ಮೌಲ್ಯಗಳನ್ನು ಈ ಚಿತ್ರದಲ್ಲಿ ಅವಮಾನಿಸಲಾಗಿದೆ ಎಂದು ನನಗೆ ಅನಿಸಿತು. ನಾನು ದೀಪಿಕಾ ಪಡುಕೋಣೆ ಅವರ ಅಭಿಮಾನಿ. ಅವರು ನಮ್ಮ ಬೆಂಗಳೂರಿನ ಹುಡುಗಿ. ಸಾಧಕಿ ಮತ್ತು ಧೈರ್ಯಶಾಲಿ ಹೆಣ್ಣುಮಗಳು. ಲಕ್ಷಾಂತರ ಯುವತಿಯರು ದೀಪಿಕಾ ಪಡುಕೋಣೆಯನ್ನು ಇಷ್ಟಪಡುತ್ತಾರೆ. ಅವರನ್ನು ಆರಾಧಿಸುತ್ತಾರೆ. ಆದರೆ, ಸಿನಿಮಾದಲ್ಲಿ ವಿವಾಹೇತರ ಸಂಬಂಧದ ಬಗ್ಗೆಯಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ನಾನು ಹಳೆಯ ಕಾಲದವನಾ ?' ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ವಿವಾಹೇತರ ಸಂಬಂಧ ಕಥಾವಸ್ತುವಿನ ಈ ಸಿನಿಮಾಗಳನ್ನು ಮಿಸ್ ಮಾಡ್ಬೇಡಿ!
ಭಾಸ್ಕರ್ ರಾವ್ ಅವರ ಟ್ವೀಟ್‌ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಪೂರ್ತಿ ಚಿತ್ರವನ್ನು ವೀಕ್ಷಿಸಬೇಕು. ಸಂಪೂರ್ಣ ಚಿತ್ರವನ್ನು ಉತ್ತಮವಾಗಿ ತಯಾರು ಮಾಡಲಾಗಿದೆ ಮತ್ತು ದೀಪಿಕಾ ಪಡುಕೋಣೆ ಅವರ ಪರ್ಫಾಮೆನ್ಸ್ ಚೆನ್ನಾಗಿದೆ’ ಎಂದು ಕಿರಣ್ ಮಜುಮ್ದಾರ್ ರಿ ಟ್ವೀಟ್ ಮಾಡಿದ್ದಾರೆ.
ಶಕುನ್ ಬಾತ್ರ ನಿರ್ದೇಶನದ ‘ಗೆಹ್ರೈಯಾನ್’ ಸಿನಿಮಾ ಇವತ್ತಿನ ದಿನಗಳಲ್ಲಿ ಸಂಬಂಧಗಳು ಎಷ್ಟು ಗೊಂದಲಮಯವಾಗಿರುತ್ತದೆ. ಮದುವೆಯೆಂಬ ಸಂಬಂಧ ಎಷ್ಟು ಬಲಹೀನವಾಗುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಕಸವನ್ನು ಮಾರಾಟ ಮಾಡಬೇಡಿ ಎಂದ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಯಾವುದೇ ವಿಚಾರವಾಗಿರಲಿ ಅದರ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿ ವಿವಾದಕ್ಕೆ ಕಾರಣವಾಗುತ್ತಾರೆ. ಹಲವು ಬಾರಿ ಕಂಗನಾ ಹೇಳಿಕೆಗಳು ಭಾರೀ ಚರ್ಚೆಗೆ ಕಾರಣವಾಗುತ್ತವೆ. ‘ಗೆಹ್ರೈಯಾನ್’ ಚಿತ್ರದ ಬಗ್ಗೆಯೂ ಕ್ವೀನ್ ನಟಿ ನೀಡಿರುವ ಕಾಮೆಂಟ್ ಎಲ್ಲೆಡೆ ಚರ್ಚೆಗೆ ಕಾರಣವಾಗ್ತಿದೆ. ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ‘ಗೆಹ್ರೈಯಾನ್’ ಸಿನಿಮಾದ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ‘ನಾನು ಕೂಡಾ ಈ ಕಾಲದವಳೇ, ಇಂಥಹಾ ರೋಮ್ಯಾನ್ಸ್ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಸಹಸ್ರಮಾನದ ಸಿನಿಮಾ. ಈ ಕಾಲದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂದು ಉಲ್ಲೇಖ ಮಾಡುತ್ತಾ ಕಸವನ್ನು ಮಾರಾಟ ಮಾಡಬೇಡಿ’ ಎಂದು ಕಟುವಾಗಿ ಟೀಕಿಸಿದ್ದಾರೆ.
ಅಷ್ಟೇ ಅಲ್ಲ, ಎಷ್ಟು ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಮೈಮಾಟ ಪ್ರದರ್ಶಿಸಿದರೂ ಕೆಟ್ಟ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಒಂದು ಕೆಟ್ಟ ಸಿನಿಮಾ, ಕೆಟ್ಟ ಸಿನಿಮಾವೇ ಆಗಿರುತ್ತದೆ ಎಂದು 'ತಲೈವಿ' ನಟಿ ಹೇಳಿದ್ದಾರೆ.
