ವಿವಾಹೇತರ ಸಂಬಂಧ ಕಥಾವಸ್ತುವಿನ ಈ ಸಿನಿಮಾಗಳನ್ನು ಮಿಸ್ ಮಾಡ್ಬೇಡಿ!
ದೀಪಿಕಾ ಪಡುಕೋಣೆ (Deepika Padukone) ನಟಿಸಿರುವ 'ಗೆಹ್ರಾಯಿಯಾ' (Gehraiyaan) ಸಿನಿಮಾ ಅಂದರೆ ಫೆಬ್ರವರಿ 11 ರಂದು ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ (Siddhant Chaturved), ಅನನ್ಯ ಪಾಂಡೆ (Ananya Panday), ಮತ್ತು ಧೈರ್ಯ ಕರ್ವಾ (Ananya Panday) ಮುಖ್ಯ ಪಾತ್ರದಲ್ಲಿದ್ದಾರೆ. ಈ ಸಿನಿಮಾ ವಿವಾಹೇತರ ಸಂಬಂಧ ಮತ್ತು ದಾಂಪತ್ಯ ದ್ರೋಹ ವಿಷಯದ ಕಥಾಹಂದರವನ್ನು ಹೊಂದಿದೆ. ಇದೇ ಕಥಾವಸ್ತುವನ್ನು ಹೊಂದಿರುವ ಕೆಲವು ಅತ್ಯುತ್ತಮ ಬಾಲಿವುಡ್ ಸಿನಿಮಾಗಳು ಬಗ್ಗೆ ಮಾಹಿತಿ ಇಲ್ಲಿವೆ.
ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ, ಮತ್ತು ಧೈರ್ಯ ಕರ್ವಾ ಒಳಗೊಂಡ ಬಾಲಿವುಡ್ ಚಿತ್ರ 'ಗೆಹ್ರಾಯಿಯಾ' ಫೆಬ್ರವರಿ 11 ರಂದು ಬಿಡುಗಡೆಯಾಗಿದೆ. ಟ್ರೈಲರ್ ಮೂಲಕವೇ ಚಿತ್ರದ ಕಥೆ ಮೋಸದ ಬಗ್ಗೆ ಎಂದು ತಿಳಿದುಬಂದಿದೆ. ಈ ಸಿನಿಮಾವು ದಾಂಪತ್ಯ ದ್ರೋಹವನ್ನು ಕೇಂದ್ರೀಕರಿಸಿದ ಸಂಕೀರ್ಣ ಸಂಬಂಧದ ಸುತ್ತ ಸುತ್ತುತ್ತದೆ.
ಹಿಂದೆ ಹಿಂದಿ ಚಿತ್ರಗಳಲ್ಲಿ, ನಾವು 'ಹ್ಯಾಪಿ ಎಂಡಿಂಗ್' ಮತ್ತು 'ಹ್ಯಾಪಿ-ಎವರ್-ಆಫ್ಟರ್' ಎಂಡಿಂಗ್‌ಗಳನ್ನು ನೋಡಿದ್ದೇವೆ, ಆದರೆ ನಿಜ ಜೀವನದಲ್ಲಿ ಇದು ಯಾವಾಗಲೂ ಸಾಧ್ಯವಿಲ್ಲ. ಗೆಹ್ರಾಯಿಯಾ ಮನುಷ್ಯರ ಭಾವನೆಗಳು ಮತ್ತು ಬಯಕೆಗಳ ಸಂಕೀರ್ಣತೆಯ ಉದಾಹರಣೆಯನ್ನು ನೋಡಬಹುದಾದ ಸಿನಿಮಾ ಇದಾಗಿದೆ
'ಗೆಹ್ರಾಯಿಯಾ' ಬಾಲಿವುಡ್‌ನಲ್ಲಿ ದಾಂಪತ್ಯ ದ್ರೋಹ ಮತ್ತು ವಿವಾಹೇತರ ಸಂಬಂಧವನ್ನು ತೋರಿಸುವ ಮೊದಲ ಚಿತ್ರವಲ್ಲ. ಇದೇ ಕಥಾವಸ್ತುವನ್ನು ಹೊಂದಿರುವ ಸಿನಿಮಾಗಳ ಇನ್ನೂ ಕೆಲವು ಉದಾಹರಣೆಗಳು ಇಲ್ಲಿವೆ. ಈ ಸಿನಿಮಾಗಳನ್ನು ತಪ್ಪದೇ ನೋಡಿ.
ಸಿಲ್ಸಿಲಾ:
ಈ ಹಿಟ್ ಚಿತ್ರ ರೇಖಾ, ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರನ್ನು ಒಳಗೊಂಡಿತ್ತು. ಈ ಯಶ್ ಚೋಪ್ರಾ ಅವರ ರೋಮ್ಯಾನ್ಸ್ ಡ್ರಾಮಾ ವಿವಾಹಿತ ವ್ಯಕ್ತಿ ಅಮಿತಾಭ್ ಬಚ್ಚನ್ ಮತ್ತು ಅವರ ಹಿಂದಿನ ಪ್ರೀತಿಯ ಚಾಂದಿನಿಯ ನಡುವಿನ ವಿವಾಹೇತರ ಸಂಬಂಧವನ್ನು ಹೊಂದಿದೆ. ಈ ಚಲನಚಿತ್ರವು ಆ ಕಾಲದ ಅತ್ಯಂತ ಪ್ರಸಿದ್ಧ ಚಲನಚಿತ್ರಗಳಲ್ಲಿ ಒಂದಾಯಿತು ಮತ್ತು ಅದರ ಹಾಡುಗಳು ಸಹ ಬ್ಲಾಕ್ಬಸ್ಟರ್ ಆಗಿದ್ದವು.
ಕಭಿ ಅಲ್ವಿದಾ ನಾ ಕೆಹನಾ:
ಚಿತ್ರದಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಮತ್ತು ಪ್ರೀತಿ ಜಿಂಟಾ ನಟಿಸಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಕಭಿ ಅಲ್ವಿದಾ ನಾ ಕೆಹನಾ ಚಿತ್ರವು ವಿವಾಹೇತರ ಸಂಬಂಧಗಳು ಮತ್ತು ಸಂತೋಷದ ದಾಂಪತ್ಯದ ಅನಿಸಿಕೆಗಳ ಬಗ್ಗೆಯ ಸಿನಿಮಾವಾಗಿತ್ತು.
ಬಿವಿ ನಂ.1:
ಸಲ್ಮಾನ್ ಖಾನ್, ಕರಿಷ್ಮಾ ಕಪೂರ್ ಮತ್ತು ಸುಶ್ಮಿತಾ ಸೇನ್ ಅವರು ಮುಖ್ಯ ಪಾತ್ರದಲ್ಲಿರುವ ಡೇವಿಡ್ ಧವನ್ ನಿರ್ದೇಶಿಸಿದ ರೋಮ್ಯಾಂಟಿಕ್ ಕಾಮಿಡಿ ಬಿವಿ ನಂ.1. ಸಲ್ಮಾನ್ ಮತ್ತು ಪತ್ನಿ ಕರಿಷ್ಮಾ ದಂಪತಿಗಳ ಸಂತೋಷದ ಜೀವನ ಮತ್ತು ಮಾಡೆಲ್ (ಸುಶ್ಮಿತಾ ಸೇನ್) ಅವರ ಜೀವನದಲ್ಲಿ ಬಂದಾಗ ಎಲ್ಲವೂ ಬದಲಾಗುತ್ತದೆ.
ಮರ್ಡರ್:
ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್ ಮತ್ತು ಅಶ್ಮಿತ್ ಪಟೇಲ್ ಇದ್ದಾರೆ. ಹಾಲಿವುಡ್‌ನ 'ಅನ್‌ಫೈತ್‌ಫುಲ್' ಸಿನಿಮಾದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ನಿರ್ಮಿಸಲಾಗಿದೆ. ಚಲನಚಿತ್ರ ನಿರ್ಮಾಪಕ ಅನುರಾಗ್ ಬಸು ಮರ್ಡರ್ ಅನ್ನು ನಿರ್ದೇಶಿಸಿದರು ಮತ್ತು ಇದು ಬಾಕ್ಸ್ ಆಫೀಸ್ ಹಿಟ್ ಆಗಿತ್ತು.
ಹಸೀನ್ ದಿಲ್ರುಬಾ:
ಚಿತ್ರವು ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ತಾಪ್ಸಿ ಪನ್ನು, ಹರ್ಷವರ್ಧನ್ ಮತ್ತು ವಿಕ್ರಾಂತ್ ಮಾಸ್ಸೆ ಕಾಣಿಸಿಕೊಂಡಿದ್ದಾರೆ. ಹಸೀನ್ ದಿಲ್ರುಬಾ 2021 ರಲ್ಲಿ OTT ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಕಥೆಯು ರಾಣಿ (ತಾಪ್ಸೀ) ಅವರ ಪತಿ ರಿಷಬ್ (ವಿಕ್ರಾಂತ್) ಸೋದರಸಂಬಂಧಿ ನೀಲ್ (ಹರ್ಷವರ್ಧನ್) ಜೊತೆ ಪ್ರೀತಿಯಲ್ಲಿ ಬೀಳುವ ಕಥೆಯಾಗಿದೆ.