Asianet Suvarna News Asianet Suvarna News

ಪಠಾಣ್ ಜೊತೆ ಫ್ಲರ್ಟ್ ಮಾಡ್ತಿರುವ ಪೂಜಾ; ಬ್ಯಾಕ್‌ಲೆಸ್‌ ಲೆಹಂಗಾದಲ್ಲಿ ಮಿಂಚಿದ ಈ 'ಡ್ರೀಮ್ ಗರ್ಲ್' ಯಾರು?

ಪಠಾಣ್ ಜೊತೆ ಫ್ಲರ್ಟ್ ಮಾಡುತ್ತಿರುವ ಪೂಜಾ ವಿಡಿಯೋ ವೈರಲ್ ಆಗಿದೆ. ಪೂಜಾ ಯಾರು ಅಂತ ಗೊತ್ತಾದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. 

Ayushmann Khurrana in backless lehenga talks with Pathaan, Dream Girl 2 Teaser viral sgk
Author
First Published Feb 14, 2023, 12:59 PM IST | Last Updated Feb 14, 2023, 1:42 PM IST

ಪಠಾಣ್ ಆಗಿ ಶಾರುಖ್ ಖಾನ್ ಸೂಪರ್ ಸಕ್ಸಸ್ ಕಂಡಿದ್ದಾರೆ. ಪಠಾಣ್ ಜೊತೆ ಈಗ ಪೂಜಾ ಫ್ಲರ್ಟ್ ಮಾಡುತ್ತಿದ್ದಾರೆ. ಈ ಡ್ರೀಮ್ ಗರ್ಲ್ ಪೂಜಾ ಯಾರು ಅಂತ ಯೋಚಿಸುತ್ತಿದ್ದೀರಾ? ಅದು ಮತ್ಯಾರು ಅಲ್ಲ ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನ. ಹೌದು, ಆಯುಷ್ಮಾನ್ ಖುರಾನ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಅಭಿಮಾನಿಗ ಹೃದಯ ಗೆದ್ದಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆಯುಷ್ಮಾನ್ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ನಟಿಸುವ ಆಯುಷ್ಮಾನ್ ರೊಮ್ಯಾಂಟಿಕ್, ಕ್ರೈಮ್, ಕಾಮಿಡಿ ಎಲ್ಲಾ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅಯುಷ್ಮಾನ್ ಡ್ರೀಪ್ ಗರ್ಲ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

ಆಯುಷ್ಮಾನ್ ಖುರಾನ ಡ್ರೀಮ್ ಗರ್ಲ್ 2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಈ ಸಿನಿಮಾದ ಪುಟ್ಟ ಟೀಸರ್ ಶೇರ್ ಮಾಡಿದ್ದಾರೆ. ಟೀಸರ್ ನಲ್ಲಿ ಪೂಜಾ, ಪಠಾಣ್ ಜೊತೆ ಫ್ಲರ್ಟ್ ಮಾಡುವ ದೃಶ್ಯವಿದೆ. ನೃತ್ಯ ಮಾಡುವ ಮೊದಲು ಪಠಾಣ್‌ಗೆ ಫೋನ್ ಮಾಡಿ ಮಾತನಾಡುವ ಪೂಜಾ ದೃಶ್ಯ ಕುತೂಹಲ ಹೆಚ್ಚಿಸಿದೆ. ಅಷ್ಟಕ್ಕೂ ಪೂಜಾ ಆಗಿ ಕಾಣಿಸಿಕೊಂಡಿದ್ದು  ಆಯುಷ್ಮಾನ್. ಇದು ಆಯುಷ್ಮಾನ್ ಎನ್ನುವುದು ಬಹುತೇಕರಿಗೆ ಗೊತ್ತೇ ಆಗಲ್ಲ. ಅಷ್ಟರ ಮಟ್ಟಿಗೆ ಪೂಜಾ ಆಗಿ ಬದಲಾಗಿದ್ದಾರೆ ಅಯುಷ್ಮಾನ್. 

Ayushmann Khurrana 25 ಕೋಟಿಯಿಂದ 15 ಕೋಟಿಗೆ ಸಂಬಳ ಇಳಿಸಿಕೊಂಡ ನಟ; ಕಾರಣ ಕೇಳಿ ಶಾಕ್ ಆಗ್ಬೇಡಿ

ಡ್ರೀಮ್ ಗರ್ಲ್-2ನಲ್ಲಿ  ಅಯುಷ್ಮಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಮ್ ಮತ್ತು ಪೂಜಾ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಪಾತ್ರದಲ್ಲಿ ಅಯುಷ್ಮಾನ್ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಲೆಹಂಗಾ ಧರಿಸಿ ಹೆಜ್ಜೆ ಹಾಕಿದ್ದಾರೆ. ಪುಟ್ಟ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯದಲ್ಲೇ ಸಂಪೂರ್ಣ ವಿಡಿಯೋ ಶೇರ್ ಮಾಡುವುದಾಗಿ ಅಯುಷ್ಮಾನ್ ಹೇಳಿದ್ದಾರೆ. 

ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಬಂದಿದೆ. ಅಯುಷ್ಮಾನ್ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ, ಬಾಲಿವುಡ್ ನಾಯಕಿಯರಿಗೆ ವಿಶ್ರಾಂತಿ ನೀಡುತ್ತಿದ್ದೀರಿ ನೀವು ಎಂದು ಹೇಳುತ್ತಿದ್ದಾರೆ. ನಟಿ ಆಸಿನ್ ನೋಡಿದ ಹಾಗೆ ಆಯಿತು ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.

ನಾನು ಪ್ರೈವೇಟ್‌ ವ್ಯಕ್ತಿ ಆಕೆ ಏನ್ ಬೇಕಿದ್ದರೂ ಮಾಡುತ್ತಾಳೆ; ಸೆಕ್ಸ್‌ ಬುಕ್‌ ಬರೆದ ಆಯುಷ್ಮಾನ್ ಖುರಾನಾ ಪತ್ನಿ!

ಡ್ರೀಮ್ ಗರ್ಲ್ 2ನಲ್ಲಿ ಆಯುಷ್ಮಾನ್ ಜೊತೆ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಪರೇಶ್ ರಾವಲ್ , ರಾಜ್ಪಾಲ್ ಯಾದವ್, ವಿಜಯ್ ರಾಜ್, ಅನ್ನು ಕಪೂರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ರಾಜ್ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಡ್ರೀಮ್ ಗರ್ಲ್ ಮೊದಲ ಭಾಗಕ್ಕಿಂತ 2ನೇ ಭಾಗ ಹೆಚ್ಚು ಮನರಂಜನೆಯಾಗಿರುತ್ತದೆ ಎಂದು ಸಿನಿಮಾತಂಡ ಹೇಳಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಡ್ರೀಮ್ ಗರ್ಲ್ ಸಿನಿಮಾ 2019ರಲ್ಲಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಡ್ರೀಮ್ ಗರ್ಲ್ 2 ಮೂಲಲಕ ಮತ್ತೊಮ್ಮೆ ಪ್ರೇಕ್ಷರನ್ನು ರಂಜಿಸಲು ಅಯುಷ್ಮಾನ್ ಸಜ್ಜಾಗಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈನಲ್ಲಿ ತೆರೆಗೆ ಬರುತ್ತಿದೆ. 

Latest Videos
Follow Us:
Download App:
  • android
  • ios