ನಾನು ಪ್ರೈವೇಟ್ ವ್ಯಕ್ತಿ ಆಕೆ ಏನ್ ಬೇಕಿದ್ದರೂ ಮಾಡುತ್ತಾಳೆ; ಸೆಕ್ಸ್ ಬುಕ್ ಬರೆದ ಆಯುಷ್ಮಾನ್ ಖುರಾನಾ ಪತ್ನಿ!
'The 7 Sins of Being a Mother' ಬುಕ್ ಬರೆದ ನಟ ಆಯುಷ್ಮಾನ್ ಖುರಾನಾ ಪತ್ನಿ. ನಾನು ಬುಕ್ ಓದಿಲ್ಲ ಎಂದ ನಟ....
ಬಾಲಿವುಡ್ (Bollywood) ಚಿತ್ರರಂಗದಲ್ಲಿ ಅತಿ ಹೆಚ್ಚು ಕಥೆ ಕೇಳಿ ಕಡಿಮೆ ಸಿನಿಮಾ ಮಾಡುವ ನಟ ಆಯುಷ್ಮಾನ್ ಖುರಾನಾ (Ayushmann Khurrana) ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್‌ನ ಮಿಕ್ಸ್ ಮಾಡುವುದಿಲ್ಲ. ಸಿನಿಮಾ ಬಿಟ್ಟು ಬೇರೆ ಏನೂ ಮಾತನಾಡದ ನಟ ಈಗ ಪತ್ನಿ ಬರೆದಿರುವ ಪುಸ್ತಕದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಈ ಪುಸ್ತಕ ಸೆಕ್ಸ್ ಲೈಫ್ ಮತ್ತು ಜೀವನದ ಜರ್ನಿ ಹೇಗಿರಲಿದೆ ಎಂದು ಸಂಪೂರ್ಣವಾಗಿ ವಿವರಿಸಿದ್ದಾರೆ.
ಆಯುಷ್ಮಾನ್ ಹೇಳಿಕೆ:
'ನಾನು ತುಂಬಾನೇ ಪ್ರೈವೇಟ್ ವ್ಯಕ್ತಿ. ಪುಸ್ತಕ ಓದುವವರಿಗೆ ಈ ಬುಕ್ ಎಂಟರ್‌ಟೈನಿಂಗ್ ಆಗಿರುತ್ತದೆ ಆದರೆ ನಾನಿನ್ನೂ ಬುಕ್ ಓದಿಲ್ಲ ಅಲ್ಲದೆ ನನಗೆ ಪ್ರೈವೇಟ್ ಲೈಫ್ ತುಂಬಾನೇ ಇಷ್ಟ. ವ್ಯಕ್ತಿತ್ವದಲ್ಲಿ ನಾವಿಬ್ಬರೂ ತುಂಬಾನೇ ವಿಭಿನ್ನವಾಗಿದ್ದೀವಿ ಅನ್ನೋದು ಈ ವಿಚಾರದಿಂದ. ಬುಕ್ ಬಗ್ಗೆ ಸಂಪೂರ್ಣ ಮಾಹಿತಿ ನನಗಿಲ್ಲ ಆದರೆ ಆಕೆಗೆ ಏನ್ ಬೇಕಿದ್ದರೂ ಮಾಡುತ್ತಾಳೆ ಆದರೆ ನಾನು ಎಲ್ಲಾ ಯೋಚನೆ ಮಾಡಿ ಮಾಡುತ್ತೀನಿ' ಎಂದು ಆಯುಷ್ಮಾನ್ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸ್ಕೂಲ್ ದಿನಗಳಿಂದ ಆಯುಷ್ಮಾನ್ ಮತ್ತು ತಾಹಿರಾ ಸ್ನೇಹಿತರಾಗಿದ್ದು 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮಕ್ಕಳಿದ್ದಾರೆ- 10 ವರ್ಷದ ಪುತ್ರ ವೀರಾಜ್‌ವೀರ್ ಮತ್ತು 8 ವರ್ಷದ ಪುತ್ರಿ ವರುಷ್ಕಾ. ತಹಿರಾ ತಮ್ಮ ಬುಕ್ ಪ್ರಚಾರದ ವೇಳೆ ಆಯುಷ್ಮಾನ್ ಜೊತೆ ಸೆಕ್ಸ್ ಲೈಫ್ ಹೇಗಿದೆ ಎಂದು ರಿವೀಲ್ ಮಾಡಿದ್ದಾರೆ. ವರ್ಕೌಟ್ ರೀತಿಯಲ್ಲಿ ಸೆಕ್ಸ್ ಲೈಫ್‌ನ ರೇಟ್ ಮಾಡಿ ಎಂದು ಶೆಲ್ಪಾ ಶೆಟ್ಟಿ ಕೇಳಿದಾಗ 'Even a quickie, in our case, costs a lot of calories' ಎಂದು ತಾಹಿರಾ ಹೇಳಿದ್ದಾರೆ.
Ayushmann Khurrana: ಎದೆ ಹಾಲು ಕುಡಿದ ಗಂಡನ ಕುರಿತು ಆಯುಷ್ಮಾನ್ ಪತ್ನಿ ಮಾತು: ಸೀಕ್ರೆಟ್ ಹೇಳಿದ ತಾಹಿರಾ
ಆಯುಷ್ಮಾನ್ ನಟನೆಯ ಅನೇಕ್ ಸಿನಿಮಾ ಮೇ 27ರಂದು ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಅನುಭವ್ ಸಿನ್ಹಾ ಡೈರೆಕ್ಷನ್ ಸಿನಿಮಾ ಇದಾಗಿದ್ದು, ಸೋಷಿಯಲ್ ಪೊಲಿಟಿಕಲ್ ಕಥೆಯಲ್ಲಿ ಆಯುಷ್ಮಾನ್‌ಗೆ ಆಂಡ್ರಿಯಾ ಕೆವಿಚುಸಾ ಜೋಡಿಯಾಗಿದ್ದಾರೆ. ಸಿನಿಮಾ ಅಭಿಮಾನಿಗಳ ನಿರೀಕ್ಷೆ ಮುಟ್ಟಿಲ್ಲವಾದರೂ ಬಾಕ್ಸ್ ಆಫೀಸ್‌ನಲ್ಲಿ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಆಯುಷ್ಮಾನ್ ಮಾತಿಗೆ ಭಾರಿ ಪ್ರಶಂಸೆ:
ರಾಷ್ಟ್ರಭಾಷಾ ಚರ್ಚೆಯ ನಡುವೆಯೇ ಬಾಲಿವುಡ್ ನಟ ಆಯುಷ್ಮಾನ್ ಖುರಾನ(Ayushmann Khurrana) ನಟನೆಯ ಅನೇಕ್ ಟ್ರೈಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಟ್ರೈಲರ್‌ನಲ್ಲಿ ಆಯುಷ್ಮಾನ್ ಖುರಾನ ಮತ್ತು ತೆಲಂಗಾಣ ವ್ಯಕ್ತಿಯ ಜೊತೆ ಮಾತನಾಡುತ್ತಿರುವ ದೃಶ್ಯವಿದೆ. ಆಯುಷ್ಮಾನ್ ತೆಲಂಗಾಣ ವ್ಯಕ್ತಿಯನ್ನು ಉತ್ತರ ಭಾರತೀಯರು ಎಂದು ಯಾಕೆ ಭಾವಿಸುತ್ತೀರಿ ಎಂದು ಕೇಳಿದರು. ಹಿಂದಿ ಸ್ಪಷ್ಟವಾಗಿರುವ ಕಾರಣದಿಂದ ಎಂದು ಹೇಳಿದರು. ಇದಕ್ಕೆ ಆಯುಷ್ಮಾನ್ ಪ್ರತಿಕ್ರಿಯೆ ನೀಡಿ ಹಾಗಾದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದವರು ಎಂದು ಹಿಂದಿ ನಿರ್ಧರಿಸುತ್ತದೆಯೇ ಎಂದು ಪ್ರಶ್ನಿಸಿದರು. ತೆಲಂಗಾಣ ವ್ಯಕ್ತಿ ನೋ ಎಂದು ಹೇಳಿದಾಗ. ಆಯುಷ್ಮಾನ್ ಹಾಗಾದರೇ ಇದು ಹಿಂದಿಯ ಬಗ್ಗೆ ಎಲ್ಲ ಎಂದಿದ್ದಾರೆ.
ಆಯುಷ್ಮಾನ್ ಖುರಾನಾ ಒಂದು ಸಿನಿಮಾಕ್ಕೆ ಎಷ್ಷು ಚಾರ್ಜ್ ಮಾಡುತ್ತಾರೆ ಗೊತ್ತಾ?
19 ಕೋಟಿಯ ಅಪಾರ್ಟ್‌ಮೆಂಟ್:
ನಟರಾದ ಆಯುಷ್ಮಾನ್ ಖುರಾನಾ ಮತ್ತು ಅವರ ಸಹೋದರ ಅಪರಶಕ್ತಿ ಖುರಾನಾ ಮುಂಬೈನ ಅದೇ ವಸತಿ ಸಂಕೀರ್ಣದಲ್ಲಿ ಕ್ರಮವಾಗಿ ಸುಮಾರು 19 ಕೋಟಿ ಮತ್ತು 7 ಕೋಟಿ ರೂಪಾಯಿಗಳಿಗೆ ಆಸ್ತಿಯನ್ನು ಖರೀದಿಸಿದ್ದಾರೆ. ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟ, ವಿಂಡ್ಸರ್ ಗ್ರಾಂಡೆ ರೆಸಿಡೆನ್ಸಸ್, ಲೋಖಂಡ್ವಾಲಾ ಕಾಂಪ್ಲೆಕ್ಸ್, ಅಂಧೇರಿ ವೆಸ್ಟ್‌ನಲ್ಲಿ 20 ನೇ ಮಹಡಿಯಲ್ಲಿ ಡೆವಲಪರ್ ವಿಂಡ್ಸರ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನಿಂದ 19.30 ಕೋಟಿ ರೂ.ಗೆ ಎರಡು ಘಟಕಗಳನ್ನು ಖರೀದಿಸಿದ್ದಾರೆ.