Asianet Suvarna News Asianet Suvarna News

ಔರಂಗಜೇಬ್ ಸೋತು ಮೋದಿ ಗೆದ್ರು; ಸಾಮವೇದ ಉರ್ದು ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಇಕ್ಬಾಲ್ ದುರಾನಿ ಹೇಳಿಕೆ

ಔರಂಗಜೇಬ್ ಸೋತು ಮೋದಿ ಗೆದ್ರು ಎಂದು ಸಾಮವೇದ ಉರ್ದು ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಇಕ್ಬಾಲ್ ದುರಾನಿ ಹೇಳಿಕೆದ್ದಾರೆ.

Aurangzeb Lost Today, Modi Win says Filmmaker Iqbal Durrani in Event of Launches Urdu Translation Of Samaveda sgk
Author
First Published Mar 21, 2023, 3:59 PM IST

ಬಾಲಿವುಡ್ ಖ್ಯಾತ ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕ ಇಕ್ಬಾಲ್ ದುರಾನಿ ಅವರ ಹಿಂದಿ ಮತ್ತು ಉರ್ದು ಭಾಷೆಯ ಭಾರತೀಯ ಪ್ರಾಚೀನ ಗ್ರಂಥವಾದ ಸಾಮವೇದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಶುಕ್ರವಾರ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೊಹಮ್ ಭಾಗವತ್ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಇಕ್ಬಾಲ್ ದುರಾನಿ 'ಈ ಮಹಾಕಾವ್ಯದ ಭಾಷಾಂತರದಿಂದ ಸುಮಾರು 6 ವರ್ಷಗಳ ಕಾಲ ಕೆಲಸವಿಲ್ಲದೆ ಇರುವಂತಾಯಿತು' ಎಂದು ಹೇಳಿದ್ದಾರೆ. ಪ್ರಪಂಚದ ಅತ್ಯಂತ ಹಳೆಯ ಸಂಸ್ಕೃತ ಗ್ರಂಥವಾದ ಸಾಮವೇದವನ್ನು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದಿಸಿದ್ದಾರೆ. 

ಬಿಹಾರ ಮೂಲದ ಇಕ್ಬಾಲ್ ದುರಾನಿ, ಹಮ್ ತುಮ್ ದುಷ್ಮನ್ ದುಷ್ಮನ್, ಗಾಂಧಿ ಸೆ ಪೆಹ್ಲೆ ಗಾಂಧಿ, ಹಿಂದೂಸ್ತಾನ್, ದುಕಾನ್, ಮಿಟ್ಟಿ, ಬೇತಾಜ್ ಬಾದ್‌ಶಾ, ಖುದ್ದಾರ್, ಪರ್ದೇಸಿ, ಧರ್ತಿಪುತ್ರ, ನಯಾ ಜಹೇರ್ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಪ್ರಪಂಚದ ಅತ್ಯಂತ ಹಳೆಯ ಸಂಸ್ಕೃತ ಗ್ರಂಥವನ್ನು ಅನುವಾದಿಸುವಾಗ ಎದುರಾದ ಸವಾಲುಗಳನ್ನು ಬಹಿರಂಗ ಪಡಿಸಿದ್ದಾರೆ. 'ನನಗೆ ಯಾವುದೇ ಆದಾಯದ ಮೂಲ ವಿರಲಿಲ್ಲ. ಆದರೂ ನಾನು ಬದುಕಿದ್ದೀನಿ. ನನ್ನ ಕುಟುಂಬವನ್ನು ಮುಂಬೈನಲ್ಲಿ ಇರಿಸಿದ್ದೀನಿ. ಇದು ತುಂಬಾ ಕಷ್ಟ ಎಂದು ನನಗೆ ಗೊತ್ತಿತ್ತು. ನಾನು ನಡುವೆ ಕೋಟಿ ರೂಪಾಯಿಗಳನ್ನು ಗಳಿಸಿಬಹುದಿತ್ತು ಆದರೆ ಬಿಟ್ಟು ಕೊಡುವುದು ಕಷ್ಟವಾಗಿತ್ತು' ಎಂದು ಹೇಳಿದ್ದಾರೆ. ಸಾಮವೇದ ಗ್ರಂಥ ಸುಮಾರು ಕ್ರಿ.ಪೂ 1500 ಮತ್ತು 1200 ಅವಧಿಯಲ್ಲಿ ಬರೆಯಲಾದ ಸಂಸ್ಕೃತ ಶ್ಲೋಕಗಳ ಪುಸ್ತಕವಾಗಿದೆ.

ಸಿನಿಮಾ ಕೆಲಸ ಮತ್ತು ಪುಸ್ತಕ ಬರೆಯುವುದು ಎರಡೂ ಕೆಲಸ ಒಟ್ಟಿಗೆ ಮಾಡಲು ಸಾಧ್ಯವಾಗದ ಕಾರಣ ಸಿನಿಮಾದಿಂದ ಬ್ರೇಕ್ ಪಡೆಯಬೇಕಾಯಿತು ಎಂದು ಹೇಳಿದ್ದಾರೆ. 'ನಾನು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೆ, ಕೆಲಸ ಮಾಡುವಾಗ ಈ ಪುಸ್ತಕವನ್ನು ಭಾಷಾಂತರಿಸಲು ತುಂಬಾ ಕಷ್ಟಕರವಾಗಿತ್ತು. ಎರಡನೆಯದಾಗಿ, ನಾನು ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ ಮತ್ತು ಮುಸಲ್ಮಾನನಾಗಿದ್ದೆ, ನನ್ನ ಭಾಷಾಂತರ ಕಾರ್ಯಕ್ಕೆ ಹಲವು ವಿಷಯಗಳು ಅಡ್ಡಿಯಾದವು. ಸಾಮವೇದವನ್ನು ಭಾಷಾಂತರಿಸುವುದು ಮರಳಿನ ನದಿಯಲ್ಲಿ ಈಜಿದಂತೆ' ಎಂದು ಸವಾಲುಗಳ ಬಗ್ಗೆ ವಿವರಿಸಿದರು. 

Chaitra Navratri 2023: 9 ದಿನಗಳ ಕಾಲ ಉಪವಾಸ ಇರುವ ಪ್ರಧಾನಿ ಮೋದಿ!

400 ವರ್ಷಗಳ ಹಿಂದೆ ಮೊಘಲ್ ದೊರೆ ದಾರಾ ಶಿಕೋಹ್ ಉಪನಿಷತ್ ಅನ್ನು ಭಾಷಾಂತರಿಸಿದರು ಮತ್ತು ಅವರು ವೇದಗಳನ್ನು ಭಾಷಾಂತರಿಸಲು ಬಯಸಿದ್ದರು. ಆದರೆ ಅವರ ಸಹೋದರ ಔರಂಗಜೇಬ್ ಅವರನ್ನು ಯುದ್ಧದಲ್ಲಿ ಸಾಯಿಸಿದರು. ಇಂದು ಪ್ರಧಾನಿ ಮೋದಿಯವರ ಆಡಳಿತದಲ್ಲಿ ಅವರ ಕನಸನ್ನು ನನಸು ಮಾಡಿದ್ದೇನೆ. ಔರಂಗಜೇಬ್ ಸೋತು, ಮೋದಿ ಗೆದ್ದರು' ಎಂದು ಹೇಳಿದರು.

ಶೀಘ್ರದಲ್ಲೇ ಇದರ ಡಿಜಿಟಲ್ ಆವೃತ್ತಿಯನ್ನು ಪ್ರಾರಂಭಿಸಲು ಯೋಜಿಸುತ್ತಿರುವುದಾಗಿ ಬಹಿರಂಗ ಪಡಿಸಿದರು.  ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಸಾಮವೇದವು ಅವರ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೂಲಕ ಎಲ್ಲರಿಗೂ ತಲುಪುವಂತಾಗಬೇಕು ಎಂಬುದು ಇದರ ಉದ್ದೇಶ. ಈ ಪುಸ್ತಕವನ್ನು ರಾಷ್ಟ್ರೀಯ ಏಕತೆಯ ಗೀತೆ ಎಂದು ಕರೆದರು. 

ಬುದ್ಧನ ಶ್ರೀಗಂಧದ ಪ್ರತಿಮೆಯನ್ನು ಜಪಾನ್‌ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ!

ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ದ್ವೇಷ ಹರಡುತ್ತಿದೆ, ಇತಿಹಾಸ ಅಳಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತೆಗೆ ಪ್ರೀತಿಯ ಗೀತೆ ಬರೆಯಲು ನಿರ್ಧರಿಸಿದೆ. ವೇದವೇ ಮೂಲ ಗ್ರಂಥ ಎಂಬುದನ್ನು ಎಲ್ಲರೂ ತಿಳಿದು ಓದಬೇಕು ಎಂದರು. ನಮ್ಮ ವಿಭಜನೆಯು ಧರ್ಮದ ಆಧಾರದ ಮೇಲೆ ಇರಬಾರದು ಕಾರ್ಯಗಳ ಆಧಾರದ ಮೇಲೆ ಇರಬೇಕು ಎಂದು ಅವರು ಅಭಿಪ್ರಾಯ ಪಟ್ಟರು. 

Follow Us:
Download App:
  • android
  • ios