Asianet Suvarna News Asianet Suvarna News

ಬುದ್ಧನ ಶ್ರೀಗಂಧದ ಪ್ರತಿಮೆಯನ್ನು ಜಪಾನ್‌ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ!

ಶ್ರೀಗಂಧದಲ್ಲಿ ಕೆತ್ತಿ ಹಾಗೂ ಕದಂಬಮರದ ಬಾಕ್ಸ್‌ನಲ್ಲಿ ಇರಿಸಲಾಗಿದ್ದು ಆಕರ್ಷಕ ಬುದ್ಧನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಜಪಾನ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕದಂಬ ಮರವನ್ನು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಮರ ಎಂದು ಹೇಳಲಾಗುತ್ತದೆ.

PM Modi presented precious sandalwood statue of Buddha to Japanese Prime Minister Kishida san
Author
First Published Mar 20, 2023, 5:58 PM IST

ನವದೆಹಲಿ (ಮಾ.20): ಭಾರತ ಪ್ರವಾಸಕ್ಕೆ ಆಗಮಿಸಿದ ಜಪಾನ್‌ ಪ್ರಧಾನಿ ಫ್ಯುಮಿಯೋ ಕಿಶಿದಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಶ್ರೀಗಂಧದಿಂದ ಕೆತ್ತಲಾದ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಡೀ ಬುದ್ಧನ ಪ್ರತಿಮೆಯ ಕೈಗಳಿಂದಲೇ ಕೆತ್ತಲಾಗಿದೆ. ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ನೈಸರ್ಗಿಕ ದೃಶ್ಯಗಳ ಲಕ್ಷಣಗಳು ಕುಶಲಕರ್ಮಿಗಳ ಅದ್ಭುತ ಕಲಾತ್ಮಕತೆಯನ್ನು ಸಂಕೇತಿಸುತ್ತವೆ. ಬುದ್ಧನು ಬೋಧಿ ಮರದ ಕೆಳಗೆ ಧ್ಯಾನದಲ್ಲಿ ಕುಳಿತಿದ್ದು, ಅವರು ಜ್ಞಾನೋದಯವನ್ನು ಪಡೆದಾಗ ಅವರು ಇದ್ದ ಭಂಗಿಯನ್ನು ಇದು ಚಿತ್ರಿಸಿದೆ.  ಕದಂಬಾ ಮರದಿಂದ ಮಾಡಿದ ಜಾಲಿ ಪೆಟ್ಟಿಗೆಯಲ್ಲಿ ಬುದ್ಧನ ಪ್ರತಿಮೆಯನ್ನು ಕಿಶಿದಾ ಅವರಿಗೆ ನೀಡಲಾಗಿದೆ. ಕದಂಬ ವುಡ್ ಅನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಕದಮ್‌ವುಡ್‌ ಪೆಟ್ಟಿಗೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಸಾಂಪ್ರದಾಯಿಕ ಕಲಾವಿದರು ಕೈಯಿಂದ ಕೆತ್ತಿದ್ದಾರೆ. ಪಕ್ಷಿಗಳು, ಪ್ರಾಣಿಗಳು ಮತ್ತು ಅನೇಕ ನೈಸರ್ಗಿಕ ದೃಶ್ಯಗಳು ಪೆಟ್ಟಿಗೆಯಲ್ಲಿ ಅದ್ಭುತವಾಗಿ ಕೆತ್ತನೆ ಮಾಡಲಾಗಿದೆ.

ಶ್ರೀಗಂಧದ ಮರವು ಭಾರತದ ಶ್ರೇಷ್ಠ ಮರವಾಗಿದ್ದು,  ಇದು ಶತಮಾನಗಳಿಂದ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಇದನ್ನು ವಿಶ್ವದ ಅತ್ಯಮೂಲ್ಯ ಮತ್ತು ಅಮೂಲ್ಯವಾದ ಮರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರತೀಯ ಶ್ರೀಗಂಧದ ಮರವು ಆಯುರ್ವೇದದಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಇದು ಔಷಧೀಯ ಮತ್ತು ಆಧ್ಯಾತ್ಮಿಕ ಉಪಯೋಗಗಳನ್ನು ಸಹ ಹೊಂದಿದೆ. ವಿಗ್ರಹಗಳನ್ನು ತಯಾರಿಸಲು ಮತ್ತು ದೇವಾಲಯಗಳು ಅಥವಾ ಧಾರ್ಮಿಕ ಸ್ಥಳಗಳನ್ನು ಕೆತ್ತಲು ಶ್ರೀಗಂಧವನ್ನು ಅನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ. ಕರ್ನಾಟಕದ ವಿವಿಧ ರಾಜವಂಶಗಳ ಕಾಲದಿಂದ ಸೊಗಸಾದ ಶ್ರೀಗಂಧದ ಮರದ ಕೆತ್ತನೆಗಳನ್ನು ಇಂದಿಗೂ ಕಾಣಬಹುದು.

‘ಏ ಮೋದಿ ಏನಪ್ಪಾ ನಿಂದು ಅಂಧಾ ದರ್ಬಾರ್‌?’ ವಿಶ್ವನಾಥ್

ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೋಮವಾರ ಭಾರತಕ್ಕೆ ಆಗಮಿಸಿದರು. ಅವರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಭಾರತಕ್ಕೆ ಆಗಮಿಸಿದ ಜಪಾನ್‌ನ ಪ್ರಧಾನ ಮಂತ್ರಿಯನ್ನು ನವದೆಹಲಿಯ ಹೈದರಾಬಾದ್ ಹೌಸ್ ಹೊರಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದಾರೆ. ಇದರ ನಂತರ ಇಬ್ಬರು ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಈ ಸಮಯದಲ್ಲಿ, ಭಾರತ ಮತ್ತು ಜಪಾನ್ ನಡುವೆ ಒಟ್ಟಿಗೆ ಶಸ್ತ್ರಾಸ್ತ್ರಗಳನ್ನು ನಿರ್ಮಾಣ ಮಾಡುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು. ಪಿಎಂ ಮೋದಿ ಅವರು ಉಡುಗೊರೆಯನ್ನು ನೀಡುವ ಮೂಲಕ ಭಾರತಕ್ಕೆ ಬಂದ ಅತಿಥಿಯನ್ನು ಸ್ವಾಗತಿಸಿದರು.

ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ನಮೋ ಜಪ ಮಾಡ್ತಿದೆ: ಮಧ್ಯಪ್ರದೇಶ ಸಿಎಂ ಶಿವರಾಜ ಸಿಂಗ್‌ ಚವ್ಹಾಣ

ಜಿ 7 ನಾಯಕರ ಶೃಂಗಸಭೆ ಮೇ ತಿಂಗಳಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ ನಡೆಯಲಿದೆ. ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿದಾ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ 20 ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಕಿಶಿದಾ ಭಾರತಕ್ಕೆ ಮತ್ತೆ ಬರಲಿದ್ದಾರೆ.

Follow Us:
Download App:
  • android
  • ios