Asianet Suvarna News Asianet Suvarna News

2023ರಲ್ಲಿ ನಟ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಕಾಡಲಿದೆ; ಭವಿಷ್ಯ ನುಡಿದ ಜ್ಯೋತಿಷಿ ವೇಣುಸ್ವಾಮಿ

ವೈರಲ್ ಆಗುತ್ತಿದೆ ನಟ ಪ್ರಭಾಸ್‌ 2023ರ ಭವಿಷ್ಯ. ವೇಣುಸ್ವಾಮಿ ಹೇಳುವುದೆಲ್ಲಾ ನಿಜವಾಗಿದೆ ಎನ್ನುತ್ತಾರೆ ನೆಟ್ಟಿಗರು....

Astrolger Venu swamy predicts actro Prabhas health updates of 2023 vcs
Author
First Published Dec 31, 2022, 3:26 PM IST

ಪ್ರತಿಯೊಬ್ಬರು ಹೊಸ ವರ್ಷ ಆರಂಭವಾಗುತ್ತಿದ್ದಂತೆ ತಮ್ಮ ಇಡೀ ವರ್ಷ ಹೇಗಿರಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಥವಾ ಟಿವಿ ಚಾನೆಲ್‌ಗಳ ಮುಂದೆ ಕುಳಿತುಕೊಂಡು ಕೇಳಿಸಿಕೊಳ್ಳುತ್ತಾರೆ. ಸಿನಿಮಾ ಸೆಲೆಬ್ರಿಟಿಗಳ ವಿಚಾರದಲ್ಲಿ ಹಾಗಿರುವುದಿಲ್ಲ, ವರ್ಷ ಆರಂಭವಾಗುವ ಮುನ್ನ ಅವರ ವೃತ್ತಿ ಜೀವನ, ಮದುವೆ, ಹಣ ಮತ್ತು ಆರೋಗ್ಯದ ಬಗ್ಗೆ ಜ್ಯೋತಿಷಿಗಳು ಚರ್ಚೆ ಮಾಡುತ್ತಾರೆ. ಸಾವಿರಾರು ಮಂದಿ ಮಾಡುತ್ತಾರೆ ಅಂತ ನಿರ್ಲಕ್ಷ್ಯ ಮಾಡಬಹುದು ಆದರೆ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಮಾತನ್ನು ಸೀರಿಯಸ್‌ ಅಗಿ ಪರಿಗಣಿಸುತ್ತಾರೆ. 

ಹೌದು! ಅನೇಕ ಸ್ಟಾರ್ ನಟ-ನಟಿಯರ ಜೀವನದ ಬಗ್ಗೆ ವೇಣುಸ್ವಾಮಿ ನುಡಿದಿರುವ ಭವಿಷ್ಯ ಸತ್ಯವಾಗಿದೆ. ಈಗ ಟಾಲಿವುಡ್ ಸ್ಟಾರ್ ಪ್ರಭಾಸ್‌ ಬಗ್ಗೆನೂ ಹೇಳಿದ್ದಾರೆ. ಪ್ರಭಾಸ್ ಆರೋಗ್ಯದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. 'ಪ್ರಭಾಸ್‌ಗೆ ಈ ವರ್ಷ ಸಾಕಷ್ಟ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಸದ್ಯಕ್ಕೆ ಶನಿ, ಗುರು ಸ್ಥಾನ ಬದಲಾಗುತ್ತಿರುವುದರಿಂದ ಪ್ರಭಾಸ್ ಜಾತಕದಲ್ಲಿ ಸಮಸ್ಯೆ ಕಾಣಿಸುತ್ತದೆ. ಪ್ರಭಾಸ್‌ದು ವೃಶ್ಚಿಕ ರಾಶಿ, ಅಷ್ಟಾರ್ಥಕ ಶನಿ ಒಂದು ಕಡೆ, ಅಷ್ಟಮ ಗುರು ಮತ್ತೊಂದು ಕಡೆ, ಷಷ್ಠಮ ಗುರು ಮತ್ತೊಂದು ಕಡೆ ಇರುವುದರಿಂದ ಪ್ರಭಾಸ್ ಸಮಸ್ಯೆ ಎದುರಿಸುವ ಸಾಧ್ಯತೆಗಳಿದೆ' ಎಂದು ವೇಣುಸ್ವಾಮಿ ಹೇಳಿದ್ದಾರೆ. 

Astrolger Venu swamy predicts actro Prabhas health updates of 2023 vcs

'ಪ್ರಭಾಸ್‌ ದೊಡ್ಡ ಸಮಸ್ಯೆ ಏನು ಅಂದರೆ ಆತ ಜಾತಕ ನಂಬುವುದಿಲ್ಲ. ಆತ ಜಾತಕವನ್ನೇ ನಂಬದೇ ಮಾಡಿದ ಜಾತಕದ ಸಿನಿಮಾ (ರಾಧೆಶ್ಯಾಮ) ಫ್ಲಾಪ್ ಆಯಿತ್ತು. ದೇವರ ಮೇಲೆ ಜಾತಕದ ಮೇಲೆ ನಂಬಿಕೆ ಇರಬೇಕು. ಇಲ್ಲದೆ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ರಾಜ ಮನೆತನದವರಿಗೆ ದೇವರು ಜಾತಕದ ಬಗ್ಗೆ ಬಹಳ ನಂಬಿಕೆ ಇರುತ್ತದೆ.ಆದರೆ ಪ್ರಭಾಸ್ ನಂಬುವುದಿಲ್ಲ. ಇದರಿಂದ ಮತ್ಯಾರಿಗೂ ಸಮಸ್ಯೆ ಇಲ್ಲ ಅದು ಅವರಿಎ ಹಾಗೂ ಅವರನ್ನು ನಂಬಿಕೊಂಡಿರುವವರಿಗೆ ಸಮಸ್ಯೆ ಆಗಬಹುದು. 2023ರಲ್ಲೂ ಸಂಕಷ್ಟ ತಪ್ಪಿದ್ದಲ್ಲ' ಎಂದಿದ್ದಾರೆ ವೇಣುಸ್ವಾಮಿ.

ಸಲ್ಮಾನ್ ಖಾನ್ ಮದುವೆ ಆದ್ಮೇಲೆ ನಂದು; ಬಾಲಯ್ಯ ಪ್ರಶ್ನೆಗೆ ಪ್ರಭಾಸ್ ರಿಯಾಕ್ಷನ್ ವೈರಲ್

ಮದ್ವೆನೂ ಬೇಡ್ವಾ?

ದಿ ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್‌ ಪ್ರಭಾಸ್‌ 42 ವರ್ಷ ಆದರೂ ಮದುವೆ ಆಗಿಲ್ಲ ಅನ್ನೋ ಅಭಿಮಾನಿಗಳಿಗೆ ವೇಣುಸ್ವಾಮಿ ಆಗಸ್ಟ್ ತಿಂಗಳಿನಲ್ಲಿ ಉತ್ತರ ಕೊಟ್ಟಿದ್ದರು. 'ಲಕ್ಷದಲ್ಲಿ ಒಬ್ಬರಿಗೆ ಇಂತಹ ಜಾತಕ ಇರುತ್ತದೆ. ಸೂರ್ಯ ಚಂದ್ರ ಶುಕ್ರ ಬುಧ ಗ್ರಹಗಳ ಕಾಂಬಿನೇಷನ್‌ನಿಂದ ಪ್ರಭಾಸ್‌ಗೆ ರಾಜಯೋಗವಿದೆ.ಹಾಗಾಗಿ ಸಾಕಷ್ಟು ಖ್ಯಾತಿ ಗಳಿಸುತ್ತಾರೆ ಪ್ರಭಾಸ್. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರು ಬರುತ್ತದೆ ಆದರೆ ಮತ್ತೆರಡು ಗ್ರಹಗಳಿಂದ ಸಮಸ್ಯೆ ಎದುರಾಗುತ್ತದೆ.ನಾಲ್ಕು ಗ್ರಹದಿಂದ ರಾಜಯೋಗ ಸಿಕ್ಕರೂ ಗುರು-ಶನಿ ಗ್ರಹಗಳ ಕಾರಣದಿಂದ ಆ ರಾಜಯೋಗವನ್ನು ಅನುಭವಿಸಲು ಸಾಧ್ಯವಾಗದಂತೆ ಆಗುತ್ತದೆ. ಸಒಳ್ಳೆಯ ಯೋಗ ಬಂದಾಗಲೇ ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.ಕಿಡ್ನಿ, ಲಿವರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿ ಸಮಸ್ಯೆ ಪ್ರಭಾಸ್‌ಗೆ ಎದುರಾಗಲಿದೆ. ಪ್ರಭಾಸ್‌ ಜಾತಕದಲ್ಲಿ ಮದುವೆಗೆ ಸಂಬಂಧಿಸಿ ಸಮಸ್ಯೆ ಇದೆ' ಎಂದು ವೇಣುಸ್ವಾಮಿ ಹೇಳಿದ್ದಾರೆ.

 'ಮದುವೆ ಆಗದೇ ಇರುವುದು, ಮದುವೆ ತಡವಾಗುವುದು, ಅಥವಾ ಮದುವೆ ನಂತರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಮದುವೆ ನಂತರ ಗಂಡ-ಹೆಂಡತಿ ನಡುವೆ ಸಮಸ್ಯೆ ಶುರುವಾಗಬಹುದು. ಆರೋಗ್ಯ ಸಮಸ್ಯೆ ಮುಖ್ಯವಾಗಿ  ಕಾಡಬಹುದು' ಎಂದು ಮಾತನಾಡಿದ್ದಾರೆ.ಅರವಿಂದ್ ಸ್ವಾಮಿ ಇರಬಹುದು, ಉದಯ್ ಕಿರಣ್ ಇರಬಹುದು ಹೀಗೆ ಬಹಳಷ್ಟು ಜನ ಇದ್ದಾರೆ. ಪ್ರಭಾಸ್ ಅಂದರೆ  ಹುಡುಗರಿಗಿಂರ ಹುಡುಗಿಯರಿಗೆ ಹೆಚ್ಚು ಇಷ್ಟ. ಹಾಗಾಗಿ ಜಾತಕದಲ್ಲಿ ಈ ಸಮಸ್ಯೆ ಇರುತ್ತದೆ. ಪರಿಹಾರ ಮಾಡಿಸಿಕೊಂಡರೆ ಪ್ರಭಾಸ್‌ಗೆ ಒಳ್ಳೆಯದಾಗುತ್ತದೆ'ಎಂದು ಮಾತನಾಡಿದ್ದರು.

Follow Us:
Download App:
  • android
  • ios