Asianet Suvarna News Asianet Suvarna News

ನನಗೆ ಬೆಳಗ್ಗೆ ಶಿಫ್ಟ್ ಬೇಡ; ಪುತ್ರ ಆರ್ಯನ್ ಖಾನ್ ಮೊದಲ ಸಿನಿಮಾಗೆ ಶಾರುಖ್ ರಿಯಾಕ್ಷನ್ ವೈರಲ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಗನ ಮೊದಲ ಸಿನಿಮಾಗೆ ಶಾರುಖ್ ಕೊಟ್ಟ ರಿಪ್ಲೆ ವೈರಲ್ ಆಗಿದೆ. 

Shah Rukh Khan's Epic Reply As Son Aryan Announces 1st Project sgk
Author
First Published Dec 7, 2022, 12:45 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಮಾರಂಗದ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಆರ್ಯಾನ್ ಖಾನ್ ಯಾವಾಗ ಬಣ್ಣದ ಲೋಕಕ್ಕೆ ಬರ್ತಾರೆ ಎಂದು ಅಭಿಮಾನಿಗಳು ಸಹ ಕಾತರರಾಗಿದ್ದರು. ಕೊನೆಗೂ ಆರ್ಯನ್ ಖಾನ್ ಸಿನಿಮಾರಂಗದ ಎಂಟ್ರಿ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ಆರ್ಯನ್ ಖಾನ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿಲ್ಲ. ನಿರ್ದೇಶಕನಾಗಿ ಶಾರುಖ್ ಪುತ್ರ ಬಾಲಿವುಡ್ ಪ್ರವೇಶ ಮಾಡುತ್ತಿರುವುದು ವಿಶೇಷ. ಸಾಮಾನ್ಯವಾಗಿ ಸ್ಟಾರ್ ಕಲಾವಿದರ ಮಕ್ಕಳು ಹೀರೋ ಆಗಿ ಮಿಂಚಬೇಕು ಎನ್ನುವ ಕನಸು ಕಂಡಿರುತ್ತಾರೆ. ಆದರೆ ಶಾರುಕ್ ಪುತ್ರ ಹಾಗಲ್ಲ. ತಂತ್ರಜ್ಞನಾಗಿ ಸಿನಿಮಾರಂಗ ಪ್ರವೇಶ ಮಾಡುತ್ತಿದ್ದಾರೆ. 

ಅಂದಹಾಗೆ ಬಾಲಿವುಡ್ ಪ್ರವೇಶದ ಬಗ್ಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್  ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಈಗಾಗಲೇ ಸ್ಕ್ರಿಪ್ಕ್ಟ ಕೆಲಸ ಮುಗಿಸಿರುವ ಆರ್ಯನ್ ಆಕ್ಷನ್ ಕಟ್ ಹೇಳಲು ಕಾಯುತ್ತಿದ್ದೀನಿ ಎಂದು ಹೇಳಿದ್ದಾರೆ. ಈ ಮೂಲಕ ಆರ್ಯನ್ ನಿರ್ದೇಶಕನಾಗಿ ಬಿ ಟೌನ್ ಎಂಟ್ರಿ ಕೌಡುತ್ತಿರುವುದಾಗಿ ಹೇಳಿದ್ದಾರೆ. ಆರ್ಯನ್ ಖಾನ್ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಆರ್ಯನ್ ಖಾನ್ ಅವರ ತಂದೆ ಶಾರುಖ್ ಖಾನ್ ರೆಡ್ ಚಿಲ್ಲೀಸ್ ಮೂಲಕವೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆರ್ಯನ್ ಶೇರ್ ಮಾಡಿರುವ ಪೋಸ್ಟ್ ನಲ್ಲಿ ರೆಡ್ ಚಿಲ್ಲೀಸ್ ಕ್ಲಾಬ್ ಬೋರ್ಡ್ ಮತ್ತು ಸ್ಕ್ರಿಪ್ಟ್ ಇದೆ. ಫೋಟೋ ಶೇರ್ ಮಾಡಿ, 'ಸ್ಟ್ರಿಪ್ಟ್ ಬರೆದು ಮುಗಿತು. ಆಕ್ಷನ್‌ಗಾಗಿ ಕಾಯುತ್ತಿದ್ದೀನಿ' ಎಂದು ಹೇಳಿ ಕ್ಯಾಮರಾ ಇಮೋಜಿ ಶೇರ್ ಮಾಡಿದ್ದಾರೆ. ಅಂದರೆ ಆರ್ಯನ್ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿರುವುದು ಕನ್ಫರ್ಮ್ ಅಂತ ಆಯಿತು.

ಅಬ್ಬಾ..! ಶಾರುಖ್ ಮನೆಯ ನಾಮಫಲಕ ಡೈಮಂಡ್‌ದಾ? ನೆಟ್ಟಿಗರ ಪ್ರಶ್ನೆಗೆ ಗೌರಿ ಖಾನ್ ಉತ್ತರ

 ಆರ್ಯನ್ ಖಾನ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅನೇಕರು ಕಾಮೆಂಟ್ ಮಾಡಿ ಆಲ್ ಬೆಸ್ಟ್ ಹೇಳುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಹ ಆರ್ಯನ್ ಗೆ ಶುಭಹಾರೈಸುತ್ತಿದ್ದಾರೆ. ಗೌರಿ ಖಾನ್ ಮತ್ತು ಶಾರುಖ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.  ಆರ್ಯಯನ್ ಖಾನ್ ತಾಯಿ ಗೌರಿ ಖಾನ್ ಪ್ರತಿಕ್ರಿಯೆ ನೀಡಿ,  'ನಾನು ನೋಡಲು ಕಾಯುತ್ತಿದ್ದೀನಿ' ಎಂದು ಹೇಳಿದ್ದಾರೆ. ಇನ್ನು ಶಾರುಖ್ ಖಾನ್ ಕೂಡ ಕಾಮೆಂಟ್ ಮಾಡಿದ್ದಾರೆ. 

' ವಾವ್..ಯೋಚನೆ, ನಂಬಿಕೆ, ಕನಸು ಕಾಣುವುದು ಆಯಿತು. ಈಗ ಧೈರ್ಯದ ಸಮಯ. ನಿನ್ನ ಮೊದಲ ಕೆಲಸಕ್ಕೆ ಶುಭ ಹಾರೈಸುತ್ತೇನೆ. ಇದು ಯಾವಾಗಲೂ ವಿಶೇಷವಾಗಿರಲಿದೆ' ಎಂದು ಹೇಳಿದರು. ಶಾರುಖ್ ಮತ್ತು ಆರ್ಯನ್ ಖಾನ್ ಮಾತು ಕತೆ ಇಲ್ಲಿಗೆ ಮುಗಿಯದೆ. ತಂದೆಯ ಮಾತಿಗೆ ಆರ್ಯನ್ ಖಾನ್, , 'ಧನ್ಯವಾದಗಳು, ಸೆಟ್‌ನಲ್ಲಿ ನಿಮ್ಮ ಸರ್ಪ್ರೈಸ್ ಭೇಟಿಗಳಿಗಾಗಿ ಎದುರು ನೋಡುತ್ತಿದ್ದೇನೆ' ಎಂದು ಹೇಳಿದರು. ಮಗನ ಮಾತಿಗೆ ಶಾರುಖ್ ಕೂಡ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ. 'ಹಾಗಾದರೆ ಮಧ್ಯಾಹ್ನದ ಶಿಫ್ಟ್ ಇದ್ದರೆ ಉತ್ತಮ. ಬೆಳಗ್ಗೆ ಶಿಫ್ಟ್ ಆಗಲ್ಲ' ಎಂದು ಮಗನ ಕಾಲೆಳೆದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Aryan Khan (@___aryan___)


ನಾನು ಮಕ್ಕಳನ್ನು ಬೆಳೆಸಿದ ರೀತಿ ನೋಡಿದ್ರೆ ನನ್ನ ಅಪ್ಪ-ಅಮ್ಮ ತುಂಬಾ ಹೆಮ್ಮೆ ಪಡುತ್ತಿದ್ರು; ಶಾರುಖ್ ಖಾನ್

ಆರ್ಯನ್ ಖಾನ್ ಕಳೆದ ಡ್ರಗ್ಸ್ ಪ್ರಕರಣದ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಆರ್ಯನ್ ಖಾನ್ ಅನೇಕ ದಿನಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಶಾರುಖ್ ಪುತ್ರನ ಡ್ರಗ್ಸ್ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಪ್ರಕರಣ ಬಳಿಕ ಆರ್ಯನ್ ಖಾನ್ ಸಿನಿಮಾ ಎಂಟ್ರಿ ಬಗ್ಗೆ ಚರ್ಚೆ ಪ್ರಾರಂಭವಾಗಿತ್ತು. ಇತ್ತೀಚಿಗಷ್ಟೆ ಸ್ಟೈಲಿಶ್ ಫೋಟೋ ಶೂಟ್ ಮೂಲಕ ಮಿಂಚಿದ್ದ ಆರ್ಯನ್ ಹೀರೋ ಆಗಿ ತೆರೆಮೇಲೆ ಮಿಂಚಲಿದ್ದಾರೆ ಎನ್ನಲಾಗಿತ್ತು. ಆದರೀಗ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದಹಾಗೆ ಆರ್ಯನ್ ಖಾನ್ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ, ಇನ್ನೂ ಹೆಚ್ಚಿನ ಮಾಹಿತಿ ಸದ್ಯದಲ್ಲೇ ರಿವೀಲ್ ಆಗಲಿದೆ.    


   

Follow Us:
Download App:
  • android
  • ios