ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರ್ಯನ್ ಖಾನ್ ಶಾರುಖ್ ಪುತ್ರನಿಗೆ ಮತ್ತೊಂದು ದಿನ ಜೈಲು ವಾಸ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಮುಂಬೈ(ಅ.26): ಬಾಲಿವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರೋಪ, ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇದರ ನಡುವೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಜಾಮೀನು ಒದಗಿಸಲು ಘಟಾನುಘಟಿ ವಕೀಲರು ಕಣಕ್ಕಿಳಿದಿದ್ದಾರೆ. ಆದರೆ ಜಾಮೀನು ನಿರೀಕ್ಷೆಯಲ್ಲಿ ಶಾರುಖ್ ಖಾನ್ ಕುಟುಂಬಕ್ಕೆ ಮತ್ತೆ ನಿರಾಸೆಯಾಗಿದೆ. ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ನಾಳೆಗೆ(ಅ.27) ಮುಂಬೈ ಕೋರ್ಟ್ ಮುಂದೂಡಿದೆ.

ಮುಕುಲ್ ರೋಹಟಗಿ-ಸತೀಶ್ ಮನೇಶಿಂದೆ: ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಡುತ್ತಿರುವ ಲಾಯರ್ಸ್!

ಬಾಂಷೆ ಸೆಷನ್ ಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿದ ಕಾರಣ ಇದೀಗ ಆರ್ಯನ್ ಖಾನ್ ಮತ್ತೆ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆಯಬೇಕಾಗಿದೆ. ಜಾಮೀನು ಸಿಗದೆ ಜೈಲಿನಲ್ಲಿ ಕಳೆಯಬೇಕಾದ ಆರ್ಯನ್ ಖಾನ್‌‌ಗೆ ಜೈಲು ವಾಸ ಅಂತ್ಯಗೊಳಿಸಲು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಮುಂಬೈ ಸೆಷನ್ ಕೋರ್ಟ್‌ಗೆ ಹಾಜರಾಗಿದ್ದರು. ರೋಹ್ಟಗಿ ವಾದ ಆಲಿಸಿದ ಸೆಷನ್ ಕೋರ್ಟ್, ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಡ್ರಗ್ಸ್ ಸಂಕಟ..ದಕ್ಷಿಣ ಭಾರತದ ಬಹುದೊಡ್ಡ ಅವಕಾಶ ಕಳಕೊಂಡ ಅನನ್ಯಾ!

ಗೆಳೆಯ ಪ್ರತೀಕ್ ಗಾಬಾ ಆರ್ಯನ್ ಖಾನ್ ಹಾಗೂ ಇತರರನ್ನು ಕ್ರ್ಯೂಸ್ ಹಡಗಿನಲ್ಲಿ ಆಯೋಜಿಸಿದ್ದ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಆಹ್ವಾನದ ಮೇರೆ ಆರ್ಯನ್ ಖಾನ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಅಲ್ಲಿ ನಡೆಯುತ್ತಿರುವ ಡ್ರಗ್ಸ್ ವ್ಯವಹಾರದ ಮಾಹಿತಿ ಆರ್ಯನ್‌ಗೆ ಇರಲಿಲ್ಲ. ಇನ್ನುNCB ಅಧಿಕಾರಿಗಳು ದಾಳಿ ಮಾಡಿ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ದಾಳಿ ವೇಳೆ ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ. ಇಷ್ಟೇ ಅಲ್ಲ ಆರ್ಯನ್ ಖಾನ್ ವೈದ್ಯಕೀಯ ಪರೀಕ್ಷೆಯನ್ನು ನಡೆಸಿಲ್ಲ. ಹೀಗಾಗಿ ಜಾಮೀನು ನಿರಾಕರಿಸಲು ಯಾವುದೇ ಆಧಾರಗಳಿಲ್ಲ ಎಂದು ಮುಕುಲ್ ರೋಹ್ಟಗಿ ವಾದಿಸಿದ್ದಾರೆ.

ಜೈಲಲ್ಲಿ ಏನು ಮಾಡುತ್ತಿದ್ದಾನೆ ಆರ್ಯನ್‌? ಜೈಲರ್‌ ಹೇಳಿದ್ದಿಷ್ಟು!

ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 27ರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ ಎಂದು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಹೇಳಿದ್ದಾರೆ. ಇತ್ತ ಜಾಮೀನು ನಿರೀಕ್ಷೆಯಲ್ಲಿದ್ದ ಆರ್ಯನ್ ಖಾನ್ ತೀವ್ರ ನಿರಾಸೆಗೊಂಡಿದ್ದು, ಮತ್ತೆ ಜೈಲನಲ್ಲೇ ಕಳೆಯಬೇಕಾಗಿದೆ.ಇದೀಗ ಆರ್ಯನ್ ಖಾನ್ ಬಿಡುಗಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಯತ್ತಿದೆ.

Scroll to load tweet…
Scroll to load tweet…