ರಾಮಾಯಣ ಸಿನಿಮಾ ತೆರೆಗೆ ಬರಲು ಕಾಲಾವಕಾಶವಿದ್ದರೂ, ಅಮೆರಿಕದ ಸಿನಿಮಾಕಾನ್‌ನಲ್ಲಿ ನಡೆದ ಒಂದು ಖಾಸಗಿ ಪ್ರದರ್ಶನ ಈಗ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ವೇಳೆ ಮಾತನ್ನಾಡಿರೋ ಯಶ್, ರಾಮಾಯಣ ಸಿನಿಮಾ ಹಾಗೂ ತಮ್ಮ ರಾಮಾಯಣ ಪಾತ್ರದ ಬಗ್ಗೆ ಹೇಳಿದ್ದಾರೆ. ಅದೇನು ಅಂತ ಇಲ್ಲಿದೆ ನೋಡಿ..
ರಾಮಾಯಣದ ಬಗ್ಗೆ ಯಶ್ ಹೇಳಿದ್ದೇನು?
ಸದ್ಯಕ್ಕೆ ಭಾರತೀಯ ಚಿತ್ರರಂಗದ ಅತಿದೊಡ್ಡ ಟಾಕಿಂಗ್ ನ್ಯೂಸ್ ಎಂದರೆ ಅದು ಬಾಲಿವುಡ್‌ನ 'ರಾಮಾಯಣ' (Ramayana Movie) ಸಿನಿಮಾ. ಇಡೀ ಭಾರತವೇ ಕಾತರದಿಂದ ಕಾಯುತ್ತಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದಲ್ಲಿ 'ಕೆಜಿಎಪ್' ಸಿನಿಮಾದ ಮೂಲಕ ಪ್ರಪಂಚಕ್ಕೇ ಚಿರಪರಿಚಿತರಾಗಿರುವ ನಟ ಯಶ್ (Rocking Star Yash) ಅವರು ರಾವಣ ಪಾತ್ರದಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸ್ಪೆಷಲ್ ಶೋ 'ಸಿನಿಮಾಕಾನ್' ಅಮೆರಿಕಾದಲ್ಲಿ ನಡೆದು ಸಿಕ್ಕಾಪಟ್ಟೆ ಕ್ರೇಜ್ ಹಾಗೂ ನಿರೀಕ್ಷೆ ಸೃಷ್ಟಿಸಿದೆ. ಅಲ್ಲಿ ನಟ ಯಶ್ ಆಡಿರೋ ಮಾತುಗಳು ಇದೀಗ ಸಖತ್ ವೈರಲ್ ಆಗಿವೆ.
ರಾಮಾಯಣ ಸಿನಿಮಾ ತೆರೆಗೆ ಬರಲು ಕಾಲಾವಕಾಶವಿದ್ದರೂ, ಅಮೆರಿಕದ ಸಿನಿಮಾಕಾನ್‌ನಲ್ಲಿ ನಡೆದ ಒಂದು ಖಾಸಗಿ ಪ್ರದರ್ಶನ ಈಗ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ವೇಳೆ ಮಾತನ್ನಾಡಿರೋ ಯಶ್, ರಾಮಾಯಣ ಸಿನಿಮಾ ಹಾಗೂ ತಮ್ಮ ರಾಮಾಯಣ ಪಾತ್ರದ ಬಗ್ಗೆ ಹೇಳಿದ್ದಾರೆ. ಅದೇನು ಗೊತ್ತಾ?
ರಾವಣನದು ತುಂಬಾ ಸಂಕೀರ್ಣ ಸ್ವಭಾವ. ಅವನು ಕೆಟ್ಟ ಮನುಷ್ಯ ಅಲ್ವಾ? ಹೌದು, ರಾವಣ ಪಕ್ಕಾ ಕೆಟ್ಟ ವ್ಯಕ್ತಿ, ಬ್ಯಾಡ್ ಗಾಯ್ ಓನ್ಲಿ.. ಅವನು ಅಸಾಮಾನ್ಯ ಕೆಟ್ಟವನಾಗಿರೋ ಕಾರಣಕ್ಕೇನೇ ಅವನನ್ನು ಮುಗಿಸಲು ಮಹಾವಿಷ್ಣು ರಾಮನ ಅವತಾರ ಪಡೆದು ಬರಬೇಕಾಯ್ತು. ರಾವಣ ಅದೆಷ್ಟು ಪವರ್‌ಫುಲ್ ಅಗಿದ್ದ ಅಂದ್ರೆ, ಅವನು ತನ್ನ ಸುತ್ತಮುತ್ತಲಿನ ಮೂರು ರಾಜ್ಯಗಳನ್ನು ಹಾಳು ಮಾಡಿದ್ದ, ಅವರನ್ನು ಮನಸ್ಸಿಗೆ ಬಂದಂತೆ ಹಿಂಸಿಸುತ್ತಿದ್ದ..
ಎನಿಥಿಂಗ್ ಟೂ ಮಚ್ ಈಸ್ ಟೂ ಬ್ಯಾಡ್
'ನಾನು ಸಿನಿಮಾ ಬಿಡುಗಡೆಗಿಂತ ಮುಂಚೆ ಕಥೆಯ ಎಲ್ಲವನ್ನೂ ಇಲ್ಲಿ ರಿವೀಲ್ ಮಾಡಲು ಸಾಧ್ಯವಿಲ್ಲ. ಆದರೆ, ಒಂದು ಮಾತಂತೂ ಸತ್ಯ- ಮೂಲ ರಾಮಾಯಣದಲ್ಲಿ ರಾವಣನ ಪಾತ್ರವನ್ನು ಹೇಗೆ ಹೇಳಲಾಗಿದೆ ಎಂದರೆ, 'ಎನಿಥಿಂಗ್ ಟೂ ಮಚ್ ಈಸ್ ಟೂ ಬ್ಯಾಡ್ (ಯಾವುದೇ ಆದರೂ ಅತಿಯಾದರೆ ಅದು ಕೆಟ್ಟದ್ದು)' ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್.

ಏನಿದು 20 ನಿಮಿಷಗಳ ಮ್ಯಾಜಿಕ್?
ಅಮೆರಿಕಾದ 'ಸಿನಿಮಾಕಾನ್'ನಲ್ಲಿ ಆಯ್ದ ಪ್ರೇಕ್ಷಕರಿಗಾಗಿ ಚಿತ್ರದ ಕೇವಲ 20 ನಿಮಿಷಗಳ ವಿಶೇಷ ತುಣುಕನ್ನು ಪ್ರದರ್ಶಿಸಲಾಯಿತು. ಈ ದೃಶ್ಯಗಳನ್ನು ಕಂಡವರು ಅಕ್ಷರಶಃ ದಂಗಾಗಿದ್ದಾರೆ! "ಇದು ಕೇವಲ ಪೌರಾಣಿಕ ಕಥೆಯಲ್ಲ, ಇದೊಂದು ಅದ್ಭುತ ಫ್ಯಾಂಟಸಿ ಲೋಕ" ಎಂದು ಪ್ರೇಕ್ಷಕರು ಉದ್ಗರಿಸಿದ್ದಾರೆ. ಈ ತುಣುಕುಗಳು ಎಷ್ಟು ಭವ್ಯವಾಗಿವೆ ಎಂದರೆ, ಈ ಚಿತ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ 'ಆಸ್ಕರ್' ಪ್ರಶಸ್ತಿಯನ್ನೇ ಗುರಿಯಾಗಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ವಾರ್ನರ್ ಬ್ರದರ್ಸ್‌ನಂತಹ ದೈತ್ಯ ಸಂಸ್ಥೆಯು ಈ ಚಿತ್ರದ ಜಾಗತಿಕ ವಿತರಣೆಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದ್ದು, ಇದು ರಾಮನ ಕಥೆಯನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸಲಿದೆ.
ನಟರ ದಂಡು.. ಸ್ಟಾರ್‌ಗಳ ಅಬ್ಬರ!
ಈ ಸಿನಿಮಾದ ಕಾಸ್ಟಿಂಗ್ ಕೇಳಿದರೆ ಸಾಕು, ಎಂಥವರಿಗಾದರೂ ರೋಮಾಂಚನವಾಗುತ್ತದೆ. ರಾಮನಾಗಿ ರಣಬೀರ್ ಕಪೂರ್: ಶಾಂತ ಸೌಮ್ಯ ಸ್ವಭಾವದ ರಾಮನ ಪಾತ್ರಕ್ಕೆ ರಣಬೀರ್ ಸಜ್ಜಾಗಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ: ತನ್ನ ಅದ್ಭುತ ನಟನೆಯಿಂದಲೇ ಹೆಸರಾದ ಸಾಯಿ ಪಲ್ಲವಿ ಸೀತೆಯಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಹನುಮಂತನಾಗಿ ಸನ್ನಿ ಡಿಯೋಲ್: 'ಗದ್ದರ್' ಖ್ಯಾತಿಯ ಸನ್ನಿ ಡಿಯೋಲ್ ತಮ್ಮ ಬಲಶಾಲಿ ವ್ಯಕ್ತಿತ್ವದ ಮೂಲಕ ಹನುಮಂತನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ: ಕಿರುತೆರೆಯ ಜನಪ್ರಿಯ ನಟ ರವಿ ದುಬೆ ಇಲ್ಲಿ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಎಲ್ಲಕ್ಕಿಂತ ಮುಖ್ಯವಾಗಿ... ನಮ್ಮ 'ರಾಕಿಂಗ್ ಸ್ಟಾರ್' ಯಶ್!
ಕನ್ನಡಿಗರ ಹೆಮ್ಮೆ, ಕೆಜಿಎಫ್ ಖ್ಯಾತಿಯ ಯಶ್ ಈ ಚಿತ್ರದಲ್ಲಿ ಲಂಕೇಶ್ವರ 'ರಾವಣ'ನಾಗಿ ಅಬ್ಬರಿಸಲಿದ್ದಾರೆ. ರಾಮನ ಎದುರು ಅಷ್ಟೇ ಬಲಿಷ್ಠವಾದ ಪ್ರತಿರೋಧ ತೋರಲು ಯಶ್ ಸಜ್ಜಾಗುತ್ತಿರುವುದು ಭಾರತೀಯ ಸಿನೆಮಾದ ಇತಿಹಾಸದಲ್ಲೇ ಒಂದು ದೊಡ್ಡ ಸೆಣಸಾಟಕ್ಕೆ ವೇದಿಕೆ ಕಲ್ಪಿಸಲಿದೆ. ರಾವಣನ ಪಾತ್ರಕ್ಕೆ ಯಶ್ ಅವರ ಖದರ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
4,000 ಕೋಟಿ ರೂಪಾಯಿಗಳ ಬಜೆಟ್!
ಇದು ಸುಮ್ಮನೆ ಮಾತಿಲ್ಲ, ದಾಖಲೆಯ ಬಜೆಟ್! ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಈ ಸಾಹಸಗಾಥೆ ನಿರ್ಮಾಣವಾಗುತ್ತಿದೆ. ಎರಡು ಭಾಗಗಳಲ್ಲಿ ಬರಲಿರುವ ಈ ಚಿತ್ರವು 2026 ಮತ್ತು 2027ರ ದೀಪಾವಳಿ ಹಬ್ಬಕ್ಕೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ.
ಒಟ್ಟಿನಲ್ಲಿ, ನಿತೇಶ್ ತಿವಾರಿ ಅವರ ಈ 'ರಾಮಾಯಣ' ಕೇವಲ ಸಿನಿಮಾ ಆಗಿ ಉಳಿಯದೆ, ಭಾರತೀಯ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ತೋರಿಸುವ ಒಂದು ಭವ್ಯ ಕಿಟಕಿ ಆಗಲಿದೆ ಎಂಬುದರಲ್ಲಿ ಸಂಶಯವಿಲ್ಲ. ಆ 20 ನಿಮಿಷಗಳ ಝಲಕ್ ನೋಡಿದವರು ಕೊಟ್ಟಿರುವ ಪಾಸಿಟಿವ್ ರಿಯಾಕ್ಷನ್ ಈಗ ಭಾರತೀಯ ಸಿನಿರಂಗದ ಆತ್ಮವಿಶ್ವಾಸವನ್ನು ದುಪ್ಪಟ್ಟು ಮಾಡಿದೆ!


