ಒಪ್ಪಿಗೆ ಇಲ್ಲದೆ ಫೋಟೋ ಶೇರ್; ಪ್ರತಿಷ್ಠಿತ ಪೂಮಾ ಸಂಸ್ಥೆ ವಿರುದ್ಧ ನಟಿ ಅನುಷ್ಕಾ ಶರ್ಮಾ ಕಿಡಿ
ಅನುಮತಿ ಇಲ್ಲದೆ ಫೋಟೋ ಬಳಸಿಕೊಂಡ ಪ್ರತಿಷ್ಠಿತ ಪೂಮಾ ಸಂಸ್ಥೆ ವಿರುದ್ಧ ನಟಿ ಅನುಷ್ಕಾ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮದುವೆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಮಗಳ ಆರೈಕೆಯಲ್ಲಿರುವ ಅನುಷ್ಕಾಗೆ ಬೇಡಿಕೆ ಇನ್ನೂ ಕಡಿಮೆ ಆಗಿಲ್ಲ. ಸದ್ಯ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಿರುವ ಅನುಷ್ಕಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಅನೇಕ ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮದೇ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಈ ಮಧ್ಯೆ ಅನುಷ್ಕಾ ಶರ್ಮಾ ಅವರು ಪ್ರತಿಷ್ಠಿತ ಪೂಮಾ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ಪೂಮಾ ಸಂಸ್ಥೆ ಫೋಟೋ ಬಳಸಿಕೊಂಡಿದ್ದಕ್ಕೆ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಂದಹಾಗೆ ಅನುಷ್ಕಾ ಶರ್ಮಾ ಪತಿ, ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪೂಮ ಬ್ರ್ಯಾಂಡ್ ಸಂಸ್ಥೆ ಜೊತೆ ಉತ್ತಮ ಸಂಬಂದ ಹೊಂದಿದ್ದಾರೆ. ಅಲ್ಲದೇ ಪೂಮಾ ಬ್ರ್ಯಾಂಡ್‌ಗೆ ಅಂಬಾಸಿಡರ್ ಕೂಡ ಆಗಿದ್ದಾರೆ. ಹಾಗಾಗಿ ಅವರು ಪೂಮಾ ಸಂಸ್ಥೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರಮೋಷನ್ ಮಾಡುತ್ತಲೇ ಇರುತ್ತಾರೆ. ಆದರೆ ಅನುಷ್ಕಾ ಶರ್ಮಾ ಅವರಿಗೂ ಮತ್ತು ಪೂಮಾ ಸಂಸ್ಥೆ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಹೀಗಿದ್ದರೂ ಕೂಡ ಪೂಮಾ ಸಂಸ್ಥೆ ಪ್ರಮೋಷನ್ಗೆ ಅನುಷ್ಕಾ ಶರ್ಮಾ ಅವರ ಫೋಟೋ ಬಳಕೆ ಮಾಡಿಕೊಂಡಿದೆ. ಅನುಷ್ಕಾ ಶರ್ಮಾ ಪೂಮಾ ಬಟ್ಟೆ ಧರಿಸಿದ್ದ ಫೋಟೋವವನ್ನು ಬಳಸಿಕೊಂಡು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದರು. ತಕ್ಷಣ ಅನುಷ್ಕಾ ಸ್ಟ್ರೀನ್ ತೆಗೆದು ಶೇರ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ, ಫೋಟೋ ತೆಗೆಯುವಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪೂಮಾ ಸಂಸ್ಥೆಯ ಪೋಸ್ಟ್‌ನ ಸ್ಕ್ರೀನ್ಶಾಟ್ ಶೇರ್ ಮಾಡಿ ಅನುಷ್ಕಾ ಶರ್ಮಾ, ‘ಹೇ ಪೂಮಾ ಇಂಡಿಯಾ, ನೀವು ಪ್ರಮೋಷನ್ಗೋಸ್ಕರ ನನ್ನ ಫೋಟೋ ಬಳಕೆ ಮಾಡುತ್ತೀರಿ ಎಂದರೆ ಅದಕ್ಕೆ ಒಪ್ಪಿಗೆ ಪಡೆಯಬೇಕು. ಏಕೆಂದರೆ ನಾನು ನಿಮ್ಮ ಸಂಸ್ಥೆಯ ರಾಯಭಾರಿ ಅಲ್ಲ. ಈ ಫೋಟೋವನ್ನು ದಯವಿಟ್ಟು ತೆಗೆಯಿರಿ' ಎಂದು ಅನುಷ್ಕಾ ಹೇಳಿದ್ದಾರೆ.
Wedding Anniversary; 'ಮೈ ಲವ್' ಎಂದು ಪತಿ ವಿರಾಟ್‌ಗೆ ಅನುಷ್ಕಾ ವಿಶ್, ಅಪರೂಪದ ಫೋಟೋ ವೈರಲ್
ಅನುಷ್ಕಾ ಶರ್ಮಾ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪೂಮಾ ಇಂಡಿಯಾ ಕೂಡ ಪ್ರತಿಕ್ರಿಯೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಪೂಮಾ, ಹೇ ಅನುಷ್ಕಾ ಶರ್ಮಾ. ನಾವು ನಿಮ್ಮನ್ನು ಬೇಗ ಸಂಪರ್ಕಿಸಬೇಕಿತ್ತು. ಇದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾ?' ಎಂದು ಕೇಳಿದ್ದಾರೆ. ಪೂಮಾ ಶೇರ್ ಮಾಡಿದ್ದ ಪೋಸ್ಟ್‌ನ ಸ್ಟ್ರೀನ್ ಶಾಟ್ ಶೇರ್ ಮಾಡಿದ್ದಾರೆ ಅನುಷ್ಕಾ.
ಅಂದಹಾಗೆ ಅನುಷ್ಕಾ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಪೋಸ್ಟ್ ಮಾಡಿದ್ದಾರೆ. ಇದು ಕೂಡ ಪ್ರಚಾರದ ಸ್ಟಂಟ್ ಎಂದು ಹೇಳುತ್ತಿದ್ದಾರೆ. ಅನುಷ್ಕಾ ಕೂಡ ಪೂಮಾ ಸಂಸ್ಥೆಯ ರಾಯಭಾರಿಯಾಗಲು ಹೀಗೆಲ್ಲ ಮಾಡಿದ್ದಾರೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅನುಷ್ಕಾ ಪರ ಮಾತನಾಡಿದ್ದಾರೆ. ಅನುಮತಿ ಇಲ್ಲದೆ ಫೋಟೋ ಬಳಕೆ ಮಾಡಿದ್ದು ತಪ್ಪು ಎಂದು ಹೇಳುತ್ತಿದ್ದಾರೆ.
ರೆಟ್ರೋ ಲುಕ್‌ನಲ್ಲಿ ಮಿಂಚಿದ ನಟಿ ಅನುಷ್ಕಾ ಶರ್ಮಾ; ಫೋಟೋ ವೈರಲ್
ಅನುಷ್ಕಾ ಶರ್ಮಾ ವಿಚಾರಕ್ಕೆ ಬರುವುದಾರೆ ಕೊನೆಯದಾಗಿ ಅನುಷ್ಕಾ, ಶಾರುಖ್ ಖಾನ್ ಜೊತೆ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ವಿರಾಟ್ ಕೊಹ್ಲಿ ಜೊತೆ ಹಸೆಮಣೆ ಏರಿದ ಅನುಷ್ಕಾ ಸಿನಿಮಾದಿಂದ ಬ್ರೇಕ್ ತೆರೆದುಕೊಂಡರು. ಬಳಿಕ ಹೆಣ್ಮು ಮಗುವಿಗೆ ಜನ್ಮ ನೀಡಿದರು. ಇದೀಗ ಮತ್ತೆ ಸಿನಿಮಾಗೆ ವಾಪಾಸ್ ಆಗಿರುವ ಅನುಷ್ಕಾ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟ್ ಲೆಜೆಂಡ್ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಚಕ್ದಾ ಎಕ್ಸ್‌ಪ್ರೆಸ್ ಎಂದು ಹೆಸರಡಲಾಗಿದ.