Wedding Anniversary; 'ಮೈ ಲವ್' ಎಂದು ಪತಿ ವಿರಾಟ್‌ಗೆ ಅನುಷ್ಕಾ ವಿಶ್, ಅಪರೂಪದ ಫೋಟೋ ವೈರಲ್
ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ಆಟಗಾರ ವಿರಾಟ ಕೊಹ್ಲಿ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ಆಟಗಾರ ವಿರಾಟ ಕೊಹ್ಲಿ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸ್ಟಾರ್ ಜೋಡಿ ದಾಂಪತ್ಯಕ್ಕೆ ಕಾಲಿಟ್ಟು ಇಂದಿಗೆ (ಡಸೆಂಬರ್11) 5 ವರ್ಷಗಳಾಗಿದೆ. ಇಬ್ಬರದ್ದು ಸುಂದರ, ಸಂತಸದ ದಾಂಪತ್ಯ. ಈ ಸುಂದರ ದಿನವನ್ನು ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಶೇರ್ ಮಾಡಿದ್ದಾರೆ.
ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ಪ್ರೀತಿಯ ವಿಶ್ ಮಡಿದ್ದಾರೆ. ಮೈ ಲವ್ ಎಂದು ಬರೆದುಕೊಂಡಿರುವ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಅವರ ಜೊತೆಗಿನ ಫೋಟೋ ಶೇರ್ ಮಾಡಿ ಒಂದಿಷ್ಟು ವಿವರಣೆ ಕೂಡ ನೀಡಿದ್ದಾರೆ.
ಅನುಷ್ಕಾ ಹಿಂದೆ ನಿಂತಿರುವ ವಿರಾಟ್ ಅವರ ಎಡಿಟೆಡ್ ಫೋಟೋ ಶೇರ್ ಮಾಡಿ ಯಾವಾಗಲೂ ಬ್ಯಾಕ್ ಬೋನ್ ಆಗಿ ಜೊತೆಯಲ್ಲೇ ಇರುತ್ತೀರಿ ಎಂದು ಹೇಳಿದ್ದಾರೆ. ಮತ್ತೊಂದು ಫೋಟೋದಲ್ಲಿ ಅನುಷ್ಕಾ ಶರ್ಮಾ ಅವರ ಹೆರಿಗೆ ಸಮಯದಲ್ಲಿ ವಿರಾಟ್ ಕೊಹ್ಲಿ ಆಸ್ಪತ್ರೆಯಲ್ಲಿ ಮಲಗಿದ್ದ ಫೋಟೋವನ್ನು ಶೇರ್ ಮಾಡಿದ್ದಾರೆ. ಹೀಗೆ ಅನೇಕ ಫೋಟೋಗಳನ್ನು ಶೇರ್ ಮಾಡಿ ಪತಿಗೆ ಪ್ರೀತಿಯ ವಿಶ್ ಮಾಡಿದ್ದಾರೆ.
ಈ ಸುಂದರ ಫೋಟೋಗಳನ್ನು ಶೇರ್ ಮಾಡಲು ಈ ದಿನಕ್ಕಿಂತ ಉತ್ತಮವಾದ ದಿನ ಬೇರೆ ಇಲ್ಲ ಎಂದು ಹೇಳಿದ್ದಾರೆ. ಅನುಷ್ಕಾ ಫೋಟೋಗಳಿಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೈ ಲವ್ ಎಂದು ವಿರಾಟ್ ಕಾಮೆಂಟ್ ಮಾಡಿದ್ದಾರೆ.
ಮತ್ತೊಂದು ಕಾಮೆಂಟ್ ನಲ್ಲಿ, ನನ್ನ ಅತ್ಯುತ್ತಮ ಫೋಟೋಗಳು ನಿನ್ನ ಬಳಿ ಇವೆ ಎಂದು ಹೇಳಿದ್ದಾರೆ. ಇನ್ನೂ ವಿರಾಟ್ ಕೊಹ್ಲಿ ಕೂಡ ಸುಂದರ ಫೋಟೋ ಶೇರ್ ಮಾಡಿ ಪತ್ನಿಗೆ ಪ್ರೀತಿಯ ವಿಶ್ ಮಾಡಿದ್ದಾರೆ.
ಈ ಶಾಶ್ವತತೆಯ ಪ್ರಯಾಣಕ್ಕೆ 5 ವರ್ಷಗಳು. ನಿನ್ನನ್ನು ನೋಡಿದ ನಾನು ಎಷ್ಟು ಪುಣ್ಯವಂತ. ನಾನು ನಿನ್ನನ್ನು ಸಂಪಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ. ಅನುಷ್ಕಾ ಮತ್ತು ವಿರಾಟ್ ದಂಪತಿಗೆ ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.
2013 ರಲ್ಲಿ ಅನುಷ್ಕಾ ಮತ್ತು ವಿರಾಟ್ ಮೊದಲ ಬಾರಿಗೆ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಬಳಿಕ ಸ್ನೇಹಿತರಾಗಿ ನಂತರ ದಾಂಪತ್ಯಕ್ಕೆ ಕಾಲಿಟ್ಟರು. 2017ರಲ್ಲಿ ಇಬ್ಬರೂ ಹಸೆಮಣೆ ಏರಿದರು. 2021ರಲ್ಲಿ ವಿರಾಟ್ ಮತ್ತು ಅನುಷ್ಕಾ ದಂಪತಿ ಮೊದಲ ಮಗು ಸ್ವಾಗತಿಸಿದರು. ಮಗಳಿಗೆ ವಮಿಕಾ ಎಂದು ನಾಮಕರಣ ಮಾಡಿದರು.