ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ದಂಪತಿ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದು ವಿಡಿಯೋ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ಅನುಷ್ಕಾ ಶರ್ಮಾ ಮತ್ತು ಟೀ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ದಂಪತಿ ಇತ್ತೀಚೆಗೆ ಹೆಚ್ಚಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ರಿಷಿಕೇಶ, ವೃಂದಾವನ ಅಂತ ಟೆಂಪಲ್ ರನ್ ಮಾಡುತ್ತಿರುವ ಸ್ಟಾರ್ ಜೋಡಿ ಇದೀಗ ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೂ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನುಷ್ಕಾ ಮತ್ತು ವಿರಾಟ್ ಇಬ್ಬರೂ ದೇವರ ಮುಂದೆ ಕುಳಿತು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು ಸ್ಟಾರ್ ದಂಪತಿಗೆ ದೇವರು ಒಳ್ಳೆದು ಮಾಡಲಿ ಎಂದು ಹಾರೈಸುತ್ತಿದ್ದಾರೆ.

ಅನುಷ್ಕಾ ಶರ್ಮಾ ಪಿಂಕ್ ಬಣ್ಣದ ಸೀರೆ ಧರಿಸಿದ್ದಾರೆ. ವಿರಾಟ್ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಇಬ್ಬರೂ ಮುಂದೆ ಕುಳಿತ್ತಿದ್ದರೆ ಹಿಂದೆ ಉಳಿದ ಭಕ್ತಾದಿಗಳು ಕುಳಿತ್ತಿದ್ದಾರೆ. ಇತ್ತೀಚೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆ ಮೂರನೇ ಟೆಸ್ಟ್ ಮ್ಯಾಚ್ ಇಂದೋರ್​ನಲ್ಲಿ ನಡೆಯಿತು. ಇಂದೋರ್ ಹಾಗೂ ಉಜ್ಜಯಿನಿ ಇರೋದು ಮಧ್ಯಪ್ರದೇಶದಲ್ಲಿ. ಹೀಗಾಗಿ, ಕೊಹ್ಲಿ ಅವರು ಅನುಷ್ಕಾ ಜೊತೆ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಅನುಷ್ಕಾ, ನಾವು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ. ಮಹಾಕಾಳೇಶ್ವರ ದೇವಸ್ಥಾನದಲ್ಲಿ ಉತ್ತಮ ದರ್ಶನ ಆಯಿತು' ಎಂದು ಅನುಷ್ಕಾ ಶರ್ಮಾ ಹೇಳಿದರು.

Scroll to load tweet…

Anushka Sharma: ತಾಯಿಯಾಗಿ ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ಪತ್ನಿಯನ್ನು ಹೊಗಳಿದ ವಿರಾಟ್ ಕೊಹ್ಲಿ

ಅನುಷ್ಕಾ ತ್ಯಾಗ ದೊಡ್ಡದು 

'ಕಳೆದ ಎರಡು ವರ್ಷಗಳಲ್ಲಿ ಹಲವು ಘಟನೆಗಳು ನಡೆದೆವು. ನಾವು ಮಗುವನ್ನು ಪಡೆದೆವು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗ ದೊಡ್ಡದು. ಅನುಷ್ಕಾ ನೋಡಿದಾಗ ನನ್ನಲ್ಲಿರುವ ಸಮಸ್ಯೆಗಳು ಏನೂ ಅಲ್ಲ ಎಂದೆನಿಸುತ್ತದೆ. ನೀವು ಹೇಗಿದ್ದೀರೋ ಹಾಗೆ ನಿಮ್ಮ ಕುಟುಂಬ ಒಪ್ಪಿಕೊಳ್ಳುತ್ತದೆ ಎಂದಾದರೆ ಅವರಿಂದ ಅದಕ್ಕಿಂತ ಹೆಚ್ಚಿನದ್ದನ್ನು ನೀವು ನಿರೀಕ್ಷಿಸಬಾರದು’ ಎಂದು ವಿರಾಟ್​ ಕೊಹ್ಲಿ ಪತ್ನಿ ಬಗ್ಗೆ ಹೇಳಿದ್ದರು. 

'ವಿರಾಟ್ ಕೊಹ್ಲಿ' ಜತೆ ಲಿಪ್‌ಲಾಕ್‌ ಮಾಡಿದ ಸುಂದರ ಯುವತಿ; ಕೇಸ್‌ ದಾಖಲಿಸಲು ಅನುಷ್ಕಾ ಶರ್ಮಾಗೆ ನೆಟ್ಟಿಗರ ಸಲಹೆ..!

‘ಅನುಷ್ಕಾ ನನಗೆ ದೊಡ್ಡ ಸ್ಫೂರ್ತಿ. ನನ್ನ ಜೀವನದಲ್ಲಿ ನಾನು ಬೇರೆಯದೇ ದೃಷ್ಟಿಕೋನ ಹೊಂದಿದ್ದೆ. ಆದರೆ ಒಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದರೆ ನಿಮ್ಮೊಳಗಯೇ ಬದಲಾವಣೆ ಆರಂಭವಾಗುತ್ತದೆ. ಜೀವನದ ಬಗ್ಗೆ ಅನುಷ್ಕಾ ದೃಷ್ಟಿಕೋನ ಭಿನ್ನವಾಗಿದೆ. ವಿಷಯಗಳನ್ನು ಒಪ್ಪಿಕೊಳ್ಳಲು ನಾನು ಅವಳಿಂದ ಕಲಿತೆ’ ಎಂದು ವಿರಾಟ್ ಪತ್ನಿಯನ್ನು ಹಾಡಿ ಹೊಗಳಿದ್ದರು.