MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • Anushka Sharma: ತಾಯಿಯಾಗಿ ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ಪತ್ನಿಯನ್ನು ಹೊಗಳಿದ ವಿರಾಟ್ ಕೊಹ್ಲಿ

Anushka Sharma: ತಾಯಿಯಾಗಿ ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ಪತ್ನಿಯನ್ನು ಹೊಗಳಿದ ವಿರಾಟ್ ಕೊಹ್ಲಿ

ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ  (Virat Kohili) ಪತ್ನಿ ಅನುಷ್ಕಾ ಶರ್ಮಾ (Anushka Shrama ) ಬಗ್ಗೆ ಮಾತನಾಡಿದ್ದಾರೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಅವರು ತಾಯಿಯಾಗಿ ' ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ವಿರಾಣ್‌ ತಮ್ಮ ಮಡದಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. 

2 Min read
Suvarna News
Published : Mar 01 2023, 06:12 PM IST| Updated : Mar 01 2023, 06:38 PM IST
Share this Photo Gallery
  • FB
  • TW
  • Linkdin
  • Whatsapp
112

2021 ರಲ್ಲಿ ತಮ್ಮ ಮಗಳು ವಾಮಿಕಾ ಜನಿಸಿದ ನಂತರ ಕಳೆದ ಎರಡು ವರ್ಷಗಳಲ್ಲಿ ಅನುಷ್ಕಾ ಶರ್ಮಾ ತಾಯಿಯಾಗಿ ' ತುಂಬಾ ದೊಡ್ಡ ತ್ಯಾಗ  ಮಾಡಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

212

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು  ಕ್ರಿಕೆಟರ್‌ ವಿರಾಟ್ ಕೊಹ್ಲಿ ದಂಪತಿಗಳು  2021 ರಲ್ಲಿ ತಮ್ಮ ಮೊದಲ ಮಗಳು ವಾಮಿಕಾ ಅವರನ್ನು ಸ್ವಾಗತಿಸಿದರು. 

312

ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಪತ್ನಿ- ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ್ದಾರೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಅವರು ತಾಯಿಯಾಗಿ ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ವಿರಾಟ್ ಮಡದಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. 

412

ಅನುಷ್ಕಾ ತನ್ನ ಜೀವನವನ್ನು ಹೇಗೆ ಮುನ್ನಡೆಸಿದಳು ಎಂಬುದನ್ನು ನೋಡಿದರೆ ನನಗೆ ಏನೇ ಸಮಸ್ಯೆಗಳಿದ್ದರೂ ಅದೂ ಏನು ಅಲ್ಲ ಎಂದು ತನಗೆ ಅರಿವಾಯಿತು ಎಂದು ವಿರಾಟ್‌ ಹೇಳಿದರು. 

512

ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಅನುಷ್ಕಾ ಮತ್ತು ವಿರಾಟ್ 2017 ರಲ್ಲಿ ಇಟಲಿಯಲ್ಲಿ ಕ್ಲೋಸ್‌ ಸಮಾರಂಭದಲ್ಲಿ ವಿವಾಹವಾದರು. ಅವರು ಜನವರಿ 2021 ರಲ್ಲಿ ಮಗಳು ವಾಮಿಕಾ ಕೊಹ್ಲಿಯನ್ನು ಸ್ವಾಗತಿಸಿದರು. 

612

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರದ್ದು ಅನುರೂಪದ ಜೋಡಿ. ಇವರು ಮಗಳು ವಾಮಿಕಾ ಹುಟ್ಟಿ ವರ್ಷಗಳೇ ಆದರೂ ಇನ್ನೂ ಫೋಟೋ ರಿವೀಲ್ ಮಾಡಿಲ್ಲ. 

712

ಪತ್ನಿ ಮತ್ತು ಮಗಳೊಂದಿಗಿನ 'ಕಳೆದ ಎರಡು ವರ್ಷಗಳ' ಬಗ್ಗೆ ಮಾತನಾಡುತ್ತಾ, ವಿರಾಟ್ ನಿಜವಾಗಿಯೂ ಮುಖ್ಯವಾಗುವುದು 'ನಿಮ್ಮ ಕುಟುಂಬವು ನಿಮ್ಮನ್ನು ನೀವು ಇರುವ ಹಾಗೇ ಪ್ರೀತಿಸುತ್ತದೆ ಎಂಬುದು  ಎಂದು ಹೇಳಿದರು.

812

'ಕಳೆದ ಎರಡು ವರ್ಷಗಳಲ್ಲಿ  ನಾವು ನಮ್ಮ ಮಗುವನ್ನು ಹೊಂದಿದ್ದೇವೆ ಮತ್ತು ತಾಯಿಯಾಗಿ ಅವಳು ಮಾಡಿದ ತ್ಯಾಗವು ದೊಡ್ಡದಾಗಿದೆ. ಅವಳನ್ನು ನೋಡುವಾಗ, ನನ್ನಲ್ಲಿರುವ ಯಾವುದೇ ಸಮಸ್ಯೆಗಳು ಏನೂ ಅಲ್ಲ ಎಂದು ನಾನು ಅರಿತುಕೊಂಡೆ. ನಿಮ್ಮ ಕುಟುಂಬವು ನೀವು ಇರುವಂತೆ  ಪ್ರೀತಿಸುವವರೆಗೆ  ಹೆಚ್ಚು ನಿರೀಕ್ಷಿಸುವುದಿಲ್ಲ ಏಕೆಂದರೆ ಅದು ಮೂಲಭೂತ ಅವಶ್ಯಕತೆಯಾಗಿದೆ' ಎಂದು ವಿರಾಟ್ ತಮ್ಮ ಇತ್ತೀಚಿನ RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದರು.

912

ನೀವು ಸ್ಫೂರ್ತಿಗಾಗಿ ನೋಡಿದಾಗ, ಮನೆಯಿಂದ ಪ್ರಾರಂಭಿಸುತ್ತೀರಿ ಮತ್ತು, ನಿಸ್ಸಂಶಯವಾಗಿ, ಅನುಷ್ಕಾ ನನಗೆ ದೊಡ್ಡ ಸ್ಫೂರ್ತಿಯಾಗಿದ್ದಾಳೆ. ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ಆ ಬದಲಾವಣೆಗಳನ್ನು ತರಲು ಪ್ರಾರಂಭಿಸುತ್ತೀರಿ. ಜೀವನದೆಡೆಗೆ ಅವಳ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು ಎಂದು ಅನುಷ್ಕಾ ತನಗೆ ಹೇಗೆ ಸ್ಫೂರ್ತಿ ನೀಡುತ್ತಾರೆ ಎಂಬುದರ ಕುರಿತು ವಿರಾಟ್ ಮತ್ತಷ್ಟು ಮಾತನಾಡಿದರು.

1012

ವಿರಾಟ್ ಅವರು ತಮ್ಮ ವೃತ್ತಿಜೀವನದ ವಿರಾಮದ ಸಮಯದಲ್ಲಿ ಹತಾಶೆ ಮತ್ತು 'ಕಿರಿಕಿರಿ ವ್ಯಕ್ತಿಯಾಗಿದ್ದರು  ಎಂದು ಒಪ್ಪಿಕೊಂಡರು, ಇದು ಅವರ ಪತ್ನಿ ಅನುಷ್ಕಾ ಮತ್ತು ಪ್ರೀತಿಪಾತ್ರರಿಗೆ  ಅನ್ಯಾಯ ಮಾಡಿತು ಎಂದು ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು

1112

ರಬ್ ನೇ ಬನಾ ದಿ ಜೋಡಿ, ಪಿಕೆ, ಬ್ಯಾಂಡ್ ಬಾಜಾ ಬಾರಾತ್, ಸುಲ್ತಾನ್ ಮತ್ತು ಏ ದಿಲ್ ಹೈ ಮುಷ್ಕಿ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಅನುಷ್ಕಾ, ಶಾರುಖ್ ಖಾನ್ ಮತ್ತು ಕತ್ರಿನಾ ಜೊತೆಗೆ 2018 ರ ಚಲನಚಿತ್ರ ಝೀರೋದಲ್ಲಿ ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರು.  ಆಕೆಯ ಸಹೋದರ ಕರ್ಣೇಶ್ ಶರ್ಮಾ ನಿರ್ಮಿಸಿದ ನೆಟ್‌ಫ್ಲಿಕ್ಸ್ ಚಲನಚಿತ್ರ ಕ್ವಾಲಾ (2022) ದಲ್ಲಿ ಅವರು ಇತ್ತೀಚೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.  

1212
Vamika

Vamika

ಅನುಷ್ಕಾ ಮುಂದಿನ ದಿನಗಳಲ್ಲಿ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಮಗಳು ವಾಮಿಕಾ ಹುಟ್ಟಿದ ನಂತರ ಅವರ ಮೊದಲ ಯೋಜನೆಯಾಗಿದೆ. ಈ ಚಿತ್ರವು ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನವನ್ನು ಆಧರಿಸಿದೆ.

About the Author

SN
Suvarna News
ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ
ಬಾಲಿವುಡ್
ಕ್ರಿಕೆಟ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved