ವಿರಾಟ್ ಕೊಹ್ಲಿ ಮೇಣದ ಪ್ರತಿಮೆಗೆ ಮುತ್ತಿಟ್ಟ ಮಹಿಳಾ ಅಭಿಮಾನಿಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಅನುಷ್ಕಾ ಶರ್ಮಾಗೆ ದೂರು ದಾಖಲಿಸಲು ನೆಟ್ಟಿಗರು ಸಲಹೆ 

ನವದೆಹಲಿ(ಫೆ.22): ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ವಿರಾಟ್ ಕೊಹ್ಲಿಗೆ ಕೇವಲ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಎಲ್ಲಾ ವಯೋಮಾನದ ಅಭಿಮಾನಿಗಳು ಇದ್ದಾರೆ. ವಿರಾಟ್‌ ಕೊಹ್ಲಿಗೆ ಪುರುಷರಷ್ಟೇ ಮಹಿಳಾ ಅಭಿಮಾನಿಗಳು ಇದ್ದಾರೆ. 

ವಿರಾಟ್ ಕೊಹ್ಲಿ ತಮ್ಮ ಬಹುಕಾಲದ ಗೆಳತಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದು, ಈ ಜೋಡಿಗೆ ವಮಿಕಾ ಎನ್ನುವ ಮುದ್ದಾದ ಮಗಳೂ ಇದ್ದಾಳೆ. ಕ್ರಿಕೆಟ್ ಜಗತ್ತಿನ ಚಿರಪರಿಚಿತ ಹೆಸರಾಗಿರುವ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಮೇಡಮ್ ಟುಸ್ಸಾಡ್ಸ್‌ನಲ್ಲಿ ಸ್ಥಾಪಿಸಲಾಗಿದೆ. ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಗೆ ಲಿಪ್‌ಲಾಕ್‌ ಮಾಡಿದ್ದಾಳೆ. ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ

ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಗೆ ಯುವತಿ ಮುತ್ತಿಟ್ಟಿರುವ ಸುಂದರ ವಿಡಿಯೋ ಸಾಕಷ್ಟು ವೈರಲ್ ಆಗಿದ್ದರೂ ಸಹಾ, ನೆಟ್ಟಿಗರು ಇದನ್ನು ಸಹಿಸಿಕೊಂಡಿಲ್ಲ. ಹಲವರು ಅನುಷ್ಕಾ ಶರ್ಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

'ಆತ ಅಪರಾಧ ಮಾಡಿಲ್ಲ, ಸುಮ್ಮನೆ ಬಿಟ್ಟುಬಿಡಿ': ಕೆ ಎಲ್ ರಾಹುಲ್ ಪರ ಹರ್ಭಜನ್ ಸಿಂಗ್ ದೂಸ್ರಾ..!

ಈ ಪ್ರೀತಿಗೆ ಏನೆಂದು ಕರೆಯಬೇಕು ಎಂದು ಯುವತಿ, ಮೇಣದ ಪ್ರತಿಮೆ ಕಿಸ್‌ ಮಾಡುತ್ತಿರುವ ವಿಡಿಯೋವೊಂದನ್ನು ನೆಟ್ಟಿಗರು ಶೇರ್ ಮಾಡಿದ್ದಾರೆ.

Scroll to load tweet…

ಓರ್ವ ನೆಟ್ಟಿಗ ಇದು ಅನುಷ್ಕಾ ಶರ್ಮಾ ಮೇಲಾಗುತ್ತಿರುವ ಶೋಷಣೆ. ಈ ಮಹಿಳೆಯ ಮೇಲೆ ಅನುಷ್ಕಾ ಶರ್ಮಾ, ದೂರು ದಾಖಲಿಸಬೇಕು. ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

Scroll to load tweet…

ಇನ್ನು ಮತ್ತೋರ್ವ ನೆಟ್ಟಿಗ, ಅನುಷ್ಕಾ ಏನಿದು? ಎಂದು ಪ್ರಶ್ನಿಸಿದ್ದಾರೆ.

Scroll to load tweet…

ಇನ್ನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬಗ್ಗೆ ಹೇಳುವುದಾದರೇ, ಈ ತಾರಾ ಜೋಡಿ ಸಾಕಷ್ಟು ವರ್ಷಗಳ ಡೇಟಿಂಗ್ ಬಳಿಕ 2017ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಅವರು ಹೊರಗಡೆ ಸುತ್ತಾಡುತ್ತಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇಂದೋರ್ ಟೆಸ್ಟ್‌ಗೆ ರೆಡಿಯಾಗುತ್ತಿರುವ ವಿರಾಟ್ ಕೊಹ್ಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಮೂರನೇ ಟೆಸ್ಟ್‌ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಮೂರನೇ ಏಕದಿನ ಪಂದ್ಯವು ಮಾರ್ಚ್‌ 01ರಂದು ಆರಂಭವಾಗಲಿದ್ದು, ಇಂದೋರ್‌ನ ಹೋಲ್ಕರ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿರುವ ವಿರಾಟ್ ಕೊಹ್ಲಿ, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.