ಹಂದಿ ಮಾಂಸದ ಜೊತೆ ಟೈಟ್, ಸೌದಿಯಲ್ಲಿ ಅರೆಸ್ಟ್​​ ಘಟನೆ ಬಿಚ್ಚಿಟ್ಟ ಅನುರಾಗ್​ ಕಶ್ಯಪ್​!

ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಹಿಂದಿನ ಕಥೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ವಿಪರೀತ ಕುಡಿದು ಹಂದಿ ಮಾಂಸದ ಜೊತೆ ಸೌದಿಯಲ್ಲಿ ಸಿಕ್ಕಿಬಿದ್ದ ಘಟನೆ ಹೇಳಿಕೊಂಡಿದ್ದಾರೆ.
 

Anurag Kashyap spoke about being arrested for arriving drunk in Saudi

ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಸದಾ  ಒಂದಲ್ಲೊಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಇವರು ಬಾಲಿವುಡ್‌ನ ಇತರ ನಿರ್ದೇಶಕರಿಗೆ ಬಹಳ ಭಿನ್ನ ಎನಿಸಿಕೊಳ್ಳುತ್ತಾರೆ. ಈ ಹಿಂದೆ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದರು.  'ಆಲ್‌ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಾರ್ಥ ಸರಣಿ ಸಂದರ್ಶನಗಳನ್ನು ಅನುರಾಗ್ ನೀಡುತ್ತಿದ್ದು, ಅದರಲ್ಲಿ ಅವರು ತಮ್ಮ ಹಿಂದಿನ ಅನುಭವಗಳನ್ನು (experience) ತೆರೆದಿಡುತ್ತಿದ್ದಾರೆ. ಮುಂಬೈನ ಪ್ರತಿ ಬೀದಿ, ಮೂಲೆಮೂಲೆಯಲ್ಲೂ ಒಂದೊಂದು ಕಥೆ ಇದೆ ಎಂದು ಹೇಳಿದ್ದ ಅವರು, 1993ರಲ್ಲಿ ಮುಂಬೈಗೆ (Mumbai) ಬಂದ ಸಮಯದರ ಕುರಿತು ಮಾತನಾಡಿದ್ದ ಅನುರಾಗ್, ಫುಟ್​ಪಾಥ್​ನಲ್ಲಿ ಮಲಗುತ್ತಿದ್ದ ದಿನಗಳ ಬಗ್ಗೆ ಹೇಳಿಕೊಂಡರು. ನಂತರ  30 ವರ್ಷಗಳಲ್ಲಿ ಎಷ್ಟು ಬದಲಾಗಿದೆ ಎಂಬುದನ್ನು ತಿಳಿಸಿದ್ದರು. 

ಇದೀಗ ಅವರು, ಕುತೂಹಲದ ವಿಷಯವೊಂದನ್ನು ಶೇರ್​ ಮಾಡಿದ್ದಾರೆ. ಅದು ಸೌದಿ ಅರೆಬಿಯಾನಲ್ಲಿ  ಪೊಲೀಸರಿಂದ ಸಿಕ್ಕಿಬಿದ್ದ ಕಥೆ ಹೇಳಿದ್ದಾರೆ. ಕುಡಿದು ಫುಲ್​ ಟೈಟ್​ ಆಗಿ ಹಂದಿ ಮಾಂಸದ (Pork) ಜೊತೆ ಸಿಕ್ಕಿಬಿದ್ದಿದ್ದ ಭಯಾನಕ ಘಟನೆಯನ್ನು ಅವರು ಹೇಳಿಕೊಂಡಿದ್ದಾರೆ. 'ನಾನು ಕೋಣೆಯಲ್ಲಿ ಲಾಕ್ ಮಾಡಿಕೊಂಡು ಕುಡಿಯುತ್ತಿದೆ. ಕುಡಿತ ವಿಪರೀತವಾಯಿತು. ಸುಮಾರು ಒಂದೂವರೆ ವರ್ಷ ಕುಡಿದೆ. ಆರತಿ (ಮಾಜಿ ಪತ್ನಿ) ನನ್ನನ್ನು ಮನೆಯಿಂದ ಹೊರಹಾಕಿದಳು. ಆಗ ನನ್ನ ಮಗಳಿಗೆ (Daughter) ಕೇವಲ 6 ವರ್ಷ. ಅದು ತುಂಬಾ ಕೆಟ್ಟ ಸಮಯವಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ' ಎಂದು ಹೇಳಿಕೊಂಡಿದ್ದ ಅನುರಾಗ್​ ಕಶ್ಯಪ್​ ಅವರು ಈಗ ಅದೇ ಕುಡಿತದಿಂದಲೇ ಹೇಗೆ ಪೊಲೀಸರ ಕೈಗೆ ಸಿಕ್ಕಿಬಿದ್ದೆ ಎಂಬುದನ್ನು ತಿಳಿಸಿದ್ದಾರೆ. 

ಮಾಜಿ ಪತ್ನಿ ಮನೆಯಿಂದ ಹೊರಹಾಕಿದ್ಲು, ಫುಟ್‌ಪಾತ್‌ಲ್ಲಿ ಮಲಗ್ತಿದ್ದೆ; ಕಷ್ಟದ ದಿನ ನೆನೆದ ಅನುರಾಗ್ ಕಶ್ಯಪ್

 ಅವರ ಮಾತಿನಲ್ಲಿಯೇ ಅದನ್ನು ಕೇಳಿ: 'ನಾನು ಡೆನ್‌ಮಾರ್ಕ್‌ಗೆ ಹೋಗಬೇಕಿತ್ತು. ಆದರೆ ಅಲ್ಲಿ ಜ್ವಾಲಾಮುಖಿ ಹೊಗೆ ಹೆಚ್ಚಾಗಿತ್ತು. ಇದೇ  ಕಾರಣಕ್ಕೆ ವಿಮಾನಗಳು ತಾತ್ಕಾಲಿಕ ಸ್ಥಗಿತಗೊಂಡಿದ್ದವು. ವಿಮಾನ ಹಾರಾಟ ವಿಳಂಬವಾಗಲಿದೆ ಎಂದು ಅನೌನ್ಸ್​ ಮಾಡಲಾಯಿತು. ನಾನು ಏರ್‌ಪೋರ್ಟ್‌ನಲ್ಲಿಯೇ (Airport) ಚೆನ್ನಾಗಿ ಕುಡಿದುಬಿಟ್ಟೆ. ಡೆನ್​ಮಾರ್ಕ್​ಗೆ ಹೋಗುವ ಕನೆಕ್ಟಿಂಗ್ ಫ್ಲೈಟ್ ಹತ್ತಿ ಸೌದಿ ಅರೇಬಿಯಾಕ್ಕೆ  ಹೋದೆ. ಅಲ್ಲಿ ಹುಚ್ಚನಂತೆ  ಓಡಾಡತೊಡಗಿದೆ. ಅದಾಗಲೇ ಫುಲ್​ ಟೈಟ್​ ಕೂಡ ಆಗಿದೆ. ಹೇಳಿಕೇಳಿ ಮುಸ್ಲಿಂ ಕಂಟ್ರಿ. (Muslim Country) ಹೇಳಬೇಕೆ? ಅಲ್ಲಿ ಕುಡಿಯುವುದು ಬ್ಯಾನ್​. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ನನ್ನ ಬಳಿ ಬೇರೆ ಹಂದಿ ಮಾಂಸದಿಂದ ಮಾಡಿದ ಆಹಾರ ಇದ್ದವು. ಸೌದಿಯಲ್ಲಿ ಕುಡಿಯುವುದನ್ನೇ ಅವರು ಸಹಿಸಲ್ಲ, ಇನ್ನು ಹಂದಿ ಮಾಂಸ... ದೇವರೇ... ಪೊಲೀಸರ ಕೈಗೆ ಸಿಕ್ಕಿಬಿದ್ದೆ' ಎಂದು ಆ ದಿನಗಳನ್ನು ನೆನೆಸಿಕೊಂಡಿದ್ದಾರೆ.

ನಂತರ ಏನಾಯಿತು ಎಂಬ ಬಗ್ಗೆ ವಿವರಿಸಿದ ಅವರು,  'ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲು ಶುರು ಹಚ್ಚಿಕೊಂಡರು. ಫೋನ್​ ತೆಗೆದು ಸಹಾಯಕ್ಕಾಗಿ ರೂನಿ ಸ್ಕ್ರೀವಾಲಾಗೆ ಮೆಸೇಜ್ ಮಾಡಿದೆ. ಇದರ ಮಧ್ಯೆಯೇ ಪೊಲೀಸರ ಪ್ರಶ್ನೆಗಳ ಸುರಿಮಳೆ ಆಗುತ್ತಲೇ ಇತ್ತು. ಕೊನೆಗೂ ನಾನು ಬಿಡುಗಡೆಗೊಂಡೆ. ಹಲವು ಪ್ರಶ್ನೋತ್ತರಗಳ ಬಳಿಕ ಕೊನೆಗೆ ನನ್ನನ್ನು ಮುಂದಿನ ಫ್ಲೈಟ್‌ನಲ್ಲಿ  ಕಳಿಸಿಕೊಟ್ಟರು. ಇದರೊಂದು ಬಹಳ ಭಯಾನಕ ಅನುಭವ' ಎಂದಿದ್ದಾರೆ. ' ಜುಹುವಿನ ಸರ್ಕಲ್ ಬಳಿ ಯಾವುದೇ ಸಿಗ್ನಲ್ (Signal) ಇರಲಿಲ್ಲ. ಅಲ್ಲಿ ಮಲಗುತ್ತಿದ್ದೆವು. ಆದರೆ ಕೆಲವೊಮ್ಮೆ ಅಲ್ಲಿಂದನೂ ಓಡಿಸುತ್ತಿದ್ದರು. ಬಳಿಕ ವರ್ಸೋವ ಲಿಂಕ್ ರೋಡ್​ನಲ್ಲಿ ಮಗಲುತ್ತಿದ್ದೆವು. ಅಲ್ಲಿ ದೊಡ್ಡ ಫುಟ್ ಪಾತ್ ಇತ್ತು. ಸಾಲಾಗಿ ಎಲ್ಲರೂ ಮಲಗುತ್ತಿದ್ದರು. ಆದರೆ ಅಲ್ಲಿ ಮಲಗಲು 6 ರೂಪಾಯಿ ಕೊಡಬೇಕಿತ್ತು' ಎಂದು ಹೇಳಿಕೊಂಡಿದ್ದ ಇವರು, ಈಗ ಸೌದಿ ಅರೇಬಿಯಾದಲ್ಲಿ (Soudi Arebia) ನಡೆದ ಭಯಂಕರ ಘಟನೆಯ ಮೆಲುಕು ಹಾಕಿದರು.

'ನಾಗಿನ್'​ ಧಾರಾವಾಹಿ ಖ್ಯಾತಿಯ ನಟಿ ಊರ್ವಶಿ ಕಾರು ಅಪಘಾತ
 

Latest Videos
Follow Us:
Download App:
  • android
  • ios