Asianet Suvarna News Asianet Suvarna News

ಮಾಜಿ ಪತ್ನಿ ಮನೆಯಿಂದ ಹೊರಹಾಕಿದ್ಲು, ಫುಟ್‌ಪಾತ್‌ಲ್ಲಿ ಮಲಗ್ತಿದ್ದೆ; ಕಷ್ಟದ ದಿನ ನೆನೆದ ಅನುರಾಗ್ ಕಶ್ಯಪ್

ಮಾಜಿ ಪತ್ನಿ ಮನೆಯಿಂದ ಹೊರಹಾಕಿದ್ಲು, ಫುಟ್‌ಪಾತ್‌ಲ್ಲಿ ಮಲಗ್ತಿದ್ದೆ ಎಂದು ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.   

Anurag Kashyap recalls when ex-wife kicked him out because of his drinking sgk
Author
First Published Feb 1, 2023, 5:10 PM IST

ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲೊಂದು ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಅನುರಾಗ್ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. 1993ರಲ್ಲಿ ಮುಂಬೈಗೆ ಬಂದ ಅನುರಾಗ್ ತನ್ನ ಹೋರಾಟದ ದಿನಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಫುತ್ ಪಾತ್‌ನಲ್ಲಿ ಮಲಗುತ್ತಿದ್ದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಈ 30 ವರ್ಷಗಳಲ್ಲಿ ಎಷ್ಟು ಬದಲಾಗಿದೆ ಎಂದು ಹೇಳಿದರು. ಮುಂಬೈನ ಪ್ರತಿ ಬೀದಿ, ಮೂಲೆಮೂಲೆಯಲ್ಲೂ ಒಂದೊಂದು ಕಥೆ ಇದೆ ಎಂದು ಹೇಳಿದರು. 

ಜುಹುವಿನ ಸರ್ಕಲ್ ಬಳಿ ಯಾವುದೇ ಸಿಗ್ನಲ್ ಇರಲಿಲ್ಲ. ಅಲ್ಲಿ ಮಲಗುತ್ತಿದ್ದೆವು. ಆದರೆ ಕೆಲವೊಮ್ಮೆ ಅಲ್ಲಿಂದನೂ ಓಡಿಸುತ್ತಿದ್ದರು. ಬಳಿಕ ವರ್ಸೋವ ಲಿಂಕ್ ರೋಡ್ ನಲ್ಲಿ ಮಗಲುತ್ತಿದ್ದೆವು. ಅಲ್ಲಿ ದೊಡ್ಡ ಫುಟ್ ಪಾತ್ ಇತ್ತು. ಸಾಲಾಗಿ ಎಲ್ಲರೂ ಮಲಗುತ್ತಿದ್ದರು. ಆದರೆ ಅಲ್ಲಿ ಮಲಗಲು 6 ರೂಪಾಯಿ ಕೊಡಬೇಕಿತ್ತು' ಎಂದು ಹೇಳಿದ್ದಾರೆ. ಮೊದಲ ಸಿನಿಮಾ ಪಾಂಚ್ ಪ್ರಾರಂಭದಲ್ಲಿ ಸ್ಥಗಿತವಾಯಿತು. ಬಳಿಕ ತುಂಬಾ ತೊಂದರೆಗೆ ಸಿಲುಕಿದೆ. ಬಳಿಕ ಬಂದ ಸಿನಿಮಾ ಕೂಡ ಕಷ್ಟದಲ್ಲಿ ಸಿಲುಕಿತು ಎಂದು ಹೇಳಿದರು.

ಸುಶಾಂತ್ ಸಿಂಗ್ ಜೊತೆ ಮಾತನಾಡಲು ನಾನು ನಿರಾಕರಿಸಿದ್ದೆ; ನಿರ್ದೇಶಕ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ

'ನಾನು ಕೋಣೆಯಲ್ಲಿ ಲಾಕ್ ಮಾಡಿಕೊಂಡು ಕುಡಿಯುತ್ತಿದೆ. ಕುಡಿತ ವಿಪರೀತವಾಯಿತು. ಸುಮಾರು ಒಂದೂವರೆ ವರ್ಷ ಕುಡಿದೆ. ಆರತಿ (ಮಾಜಿ ಪತ್ನಿ) ನನ್ನನ್ನು ಮನೆಯಿಂದ ಹೊರಹಾಕಿದಳು. ಆಗ ನನ್ನ ಮಗಳಿಗೆ ಕೇವಲ 6 ವರ್ಷ. ಅದು ತುಂಬಾ ಕ,್ಟದ ಸಮಯವಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ. ಪಾಂಚ್ ಸಿನಿಮಾ ಸ್ಥಗಿತ ಗೊಂಡಿತು.  ಬ್ಲ್ಯಾಕ್ ಫ್ರೈಡೇ ಕೂಡ ನಿಂತು ಹೋಯ್ತು. ನಾನು ಕುಡಿಯುತ್ತಿದ್ದೆ, ಈ ಎಲ್ಲದರ ವಿರುದ್ಧ ಹೋರಾಡುತ್ತಿದ್ದೆ. ಅದು ತುಂಬಾ ಕೆಟ್ಟ ಸಮಯವಾಗಿತ್ತು. ಉದ್ಯಮದ ಮೇಲೆ ಕೋಪ ತರಿಸಿತು' ಎಂದು ಹೇಳಿದ್ದಾರೆ. 

RRR ನಿರ್ದೇಶಕ ರಾಜಮೌಳಿಯನ್ನು ಕದಿಯಬಹುದು; ಕಳವಳ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್

ಆದರೆ ಅನುರಾಗ್ ಮತ್ತೆ ಪುಟಿದೆದ್ದರು. ಗ್ಯಾಂಗ್ಸ್ ಆಫ್ ವಾಸ್ಸೆಪುರ್ ಎರಡು ಭಾಗಗಳ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಅನುರಾಗ್ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿತು. ಅವರು ತಮ್ಮ ಚಲನಚಿತ್ರಗಳಲ್ಲಿ ಬಾಲಿವುಡ್‌ನ ಕೆಲವು ಪ್ರಮುಖ ನಟರನ್ನು ಪರಿಚಯಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಮತ್ತು ಭಾರತದ ಮೊದಲ ನೆಟ್‌ಫ್ಲಿಕ್ಸ್ ಸರಣಿಯಾದ ಸೇಕ್ರೆಡ್ ಗೇಮ್ಸ್ ನ ಸಹ-ನಿರ್ದೇಶಕರಾಗಿದ್ದಾರೆ. ಸದ್ಯ ಅನುರಾಗ್ ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್ ಮೂಲಕ ಮತ್ತೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ರಿಲೀಸ್ ಆಗುತ್ತಿದೆ. 

Follow Us:
Download App:
  • android
  • ios