'ನಾಗಿನ್'​ ಧಾರಾವಾಹಿ ಖ್ಯಾತಿಯ ನಟಿ ಊರ್ವಶಿ ಕಾರು ಅಪಘಾತ

ನಾಗಿನ್​, ಕಸೌಟಿ ಜಿಂದಗೀ ಕಿ ಸೇರಿದಂತೆ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟಿ ಊರ್ವಶಿ ಧೋಲಾಕಿಯಾ ಅವರ ಕಾರು ಅಪಘಾತವಾಗಿದೆ. ಎಲ್ಲಿ, ಹೇಗೆ?
 

Urvashi Dholakia meets car accident in Mumbai school bus hit the actress,

ಹಿಂದಿಯ ಪ್ರಸಿದ್ಧ ಕಿರುತೆರೆ ಧಾರಾವಾಹಿಗಳಾದ ನಾಗಿನ್​, ಕಸೌಟಿ ಜಿಂದಕೀ ಕಾ, ಚಂದ್ರಕಾಂತಾ, ದೇಖ್​ ಭಾಯಿ ದೇಖ್​ (Dekh Bai dekh) ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾಗಿರುವ ನಟಿ ಊರ್ವಶಿ ಧೋಲಾಕಿಯಾ ಕುರಿತು ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ.  ಅವರು ಕಾರಿನಲ್ಲಿ ಹೋಗುತ್ತಿರುವಾಗ ಶಾಲಾ ಬಸ್ ಅವರ ಕಾರಿಗೆ ಹಿಂದಿನಿಂದ ಡಿಕ್ಕಿ (accident) ಹೊಡೆದಿದೆ!  ಕಾರು ಮತ್ತು ಶಾಲಾ ಬಸ್​ ಮುಖಾಮುಖಿ ಡಿಕ್ಕಿಯಾಗಿದ್ದರೂ ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಈ ಕುರಿತು ಖುದ್ದು ನಟಿ ಹೇಳಿಕೊಂಡಿದ್ದಾರೆ. 'ಅಪಘಾತ  ಸಾಕಷ್ಟು ಭೀಕರವಾಗಿತ್ತು.  ಆದರೆ ದೇವರ ದಯೆಯಿಂದ  ಯಾವುದೇ ಗಂಭೀರ ಗಾಯಗಳಾಗಿಲ್ಲ. ಆತಂಕ ಪಡುವ ಅಗತ್ಯವಿಲ್ಲ. ಕೆಲವು ದಿನಗಳ ಕಾಲ ವಿಶ್ರಾಂತಿ (rest) ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ' ಎಂದಿದ್ದಾರೆ.

ಶಾಲಾ ಬಸ್ ಚಾಲಕನದ್ದೇ (school bus) ತಪ್ಪು ಎನ್ನಲಾಗುತ್ತಿದ್ದು, ಸದ್ಯ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಮುಂಬೈನ ಮೀರಾ ರೋಡ್‌ನಲ್ಲಿರುವ ಫಿಲ್ಮ್ ಸ್ಟುಡಿಯೋಗೆ ಶೂಟಿಂಗ್‌ಗಾಗಿ ಕಾರಿನಲ್ಲಿ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕಾಶಿಮಿರಾದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಅವರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.  ಅಪಘಾತದಲ್ಲಿ ಊರ್ವಶಿ ಧೋಲಾಕಿಯಾ (Urvashi Dholakia) ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಅದೇ ವೇಳೆ ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳು ಹಾಗೂ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶಾಲಾ ಬಸ್ ಚಾಲಕನ ವಿರುದ್ಧ ಊರ್ವಶಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕೇವಲ ಅಪಘಾತ, ಏನೂ ಮಾಡಲು ಆಗುವುದಿಲ್ಲ ಎಂದು ನಟಿ ಹೇಳಿದ್ದಾರೆ.

Prabhas ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​, ಎಲ್ಲಾ ಶೂಟಿಂಗ್​ ಕ್ಯಾನ್ಸಲ್​!

ಅಂದಹಾಗೆ ನಟಿ,  ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚು ಫೇಮಸ್​. 1987ರಲ್ಲಿ ಟಿವಿ ಜಗತ್ತಿಗೆ ಕಾಲಿಸಿದ ಊರ್ವಶಿ, ಶ್ರೀಕಂಠ್​ ಧಾರಾವಾಹಿಯಲ್ಲಿ ನಟಿಸಿದರು. ನಂತರ 1993ರಲ್ಲಿ ದೇಖ್​ ಭಾಯಿ ದೇಶ್​, 1995ರಲ್ಲಿ ಜಮಾನಾ ಬದಲ್​ ಗಯಾ, 1997ರಲ್ಲಿ ವಕ್ತ್​ ಕೀ ರಫ್ತಾರ್​, 2001ರಲ್ಲಿ ಶಕ್ತಿಮಾನ್​, ಘರ್​ ಏಕ್​ ಮಂದಿರ್​, ಮೆಹಂದಿ ತೇರೆ ನಾಮ್​ ಕಿ, ಕಭೀ ಸೌತನ್​, ಕಭೀ ಸಹೇಲಿ, ಕಸೌಟಿ ಜಿಂದಗೀ ಕೆ, (Kasouti zindagi ke) 2003ರಲ್ಲಿ ತುಮ ಬಿನ್​ ಜಾವೂ ಕಹಾ, ಕಹಾನಿ ತೇರಿ ಮೇರಿ, ಕಹೀ ತೋ ಹೋಗಾ, 2008ರಲ್ಲಿ ಕಾಮಿಡಿ ಸರ್ಕಸ್​ ಸೇರಿದಂತೆ 2022ರ ನಾಗಿನ್​ 6ವರೆಗೆ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಆದರೆ ಇವರು  ಟಿವಿ ಜಗತ್ತಿನಲ್ಲಿ,  ಕೊಮೊಲಿಕಾ ಎಂದು ಪ್ರಸಿದ್ಧರಾಗಿದ್ದಾರೆ. ಅವರು ಏಕ್ತಾ ಕಪೂರ್ ಅವರ ಶೋ ಕಸೌಟಿ ಜಿಂದಗಿ ಕಿಯಲ್ಲಿ ಈ ಪಾತ್ರವನ್ನು ನಿರ್ವಹಿಸಿದರು. ಈಗಲೂ ಪ್ರತಿ ಮನೆಯಲ್ಲೂ ಈ ಹೆಸರಿನಿಂದಲೇ ಪರಿಚಿತರು. ಸಲ್ಮಾನ್ ಖಾನ್ ಅವರ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ಹಿಂದಿಯ ಬಿಗ್ ಬಾಸ್‌ನಲ್ಲಿ ಕೂಡ ಊರ್ವಶಿ ಧೋಲಾಕಿಯಾ  ಭಾಗವಹಿಸಿದ್ದರು. ಘರ್ ಏಕ್ ಮಂದಿರ್, ಕಭಿ ಸೌತಾನ್ ಕಭಿ ಸಹೇಲಿಯಲ್ಲಿ ಅತ್ಯುತ್ತಮ  ಅಭಿನಯ ಮಾಡಿ  ಸಾರ್ವತ್ರಿಕ ಮೆಚ್ಚುಗೆ ಮತ್ತು ಪ್ರಶಸ್ತಿಗಳ ಯಶಸ್ಸಗಳನ್ನು ಸಹ ಗಳಿಸಿದರು. ಸಹೇಲಿ ಮತ್ತು ಕಸೌಟಿ ಜಿಂದಗಿ ಕೇ ಧಾರಾವಾಹಿ ಇವರ ಬದುಕನ್ನು ಬದಲಿಸಿದ ಧಾರಾವಾಹಿಗಳು (Serial) ಅದರಲ್ಲಿಯೂ ಕಸೌಟಿ ಜಿಂದಗಿ ಕಿಯಲ್ಲಿ ಕೊಮೊಲಿಕಾ ಎಂಬ ಪಾತ್ರ ಮಾಡಿ ಸಕತ್​ ಫೇಮಸ್​ ಆದರು. 

ಊರ್ವಶಿ ಅವರ  ಹೆಸರಿನಲ್ಲಿ 6 ಟ್ರೋಫಿಗಳಿವೆ. ಊರ್ವಶಿ ತನ್ನ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕಾಗಿ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಇವರು ಕೇವಲ 16 ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. 17 ನೇ ವಯಸ್ಸಿನಲ್ಲಿ ಅವಳಿ ಗಂಡುಮಕ್ಕಳ ತಾಯಿಯಾಗಿದ್ದಾರೆ.  ಮದುವೆಯಾದ 2 ವರ್ಷಗಳ ನಂತರವೇ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇದಾದ ನಂತರ ಅವರು ಮರುಮದುವೆಯಾಗಲಿಲ್ಲ.  ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದರು. 1978ರಲ್ಲಿ ಹುಟ್ಟಿರುವ ಊರ್ವಶಿ ಅವರ ತಂದೆ ಪಂಜಾಬಿ, ತಾಯಿ ಗುಜರಾತಿ. ಅವರಿಗೆ ಈಗ 45 ವರ್ಷ ವಯಸ್ಸು. 

Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

Latest Videos
Follow Us:
Download App:
  • android
  • ios