Asianet Suvarna News Asianet Suvarna News

'ಬೇಷರಂ ರಂಗ್'​ಗೆ ಮೌನ ಮುರಿದ ಪ್ರಧಾನಿ: ನಿರ್ದೇಶಕ ಅನುರಾಗ್​ ಕಶ್ಯಪ್ ಕುಹಕ

ಸಿನಿಮಾಗಳು ಹಾಗೂ ಬಾಲಿವುಡ್ ತಾರೆಯರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸಲಹೆಗೆ ನಿರ್ದೇಶಕ  ಅನುರಾಗ್​ ಕಶ್ಯಪ್​ ನೀಡಿದ ಹೇಳಿಕೆ ಏನು?
 

Anurag Kashyap gave reaction on Narendra Modi statement on politicians unnecessary comment on movies
Author
First Published Jan 20, 2023, 4:12 PM IST

ಬಾಲಿವುಡ್ ಇಂಡಸ್ಟ್ರಿ ಮಾತ್ರವಲ್ಲದೇ ಬೇರೆ ಬೇರೆ ಚಿತ್ರಗಳಿಗೂ ಸಂಬಂಧಿಸಿದಂತೆ ಬಾಯ್ಕಾಟ್  (Boycitt) ಟ್ರೆಂಡ್ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಚಿತ್ರದ ತಾರೆಯರು, ಕಥೆ, ಹಾಡುಗಳು ಸೇರಿದಂತೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಬಹಿಷ್ಕರಿಸುವಂತೆ ಆಗಾಗ್ಗೆ ಬೇಡಿಕೆ ಇದೆ. ಇತ್ತೀಚೆಗೆ ಬಾಯ್ಕಾಟ್​ ಬಿಸಿ ಅನುಭವಿಸುತ್ತಿರುವುದು  ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್​ ಚಿತ್ರ. ಈ ಚಿತ್ರದಲ್ಲಿನ ಬೇಷರಂ ರಂಗ್​ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಬಹುತೇಕ ತಮ್ಮ ಎಲ್ಲಾ ಅಂಗಾಂಗಗಳು ಕಾಣಿಸುವಂತೆ ಬಿಕಿನಿ ಧರಿಸಿ ಬೇಷರಂ ರಂಗ್​ ಎಂದು ಹಾಡಿರುವುದರಿಂದ ಪಠಾಣ್​ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದು ಚಿತ್ರದ ಬೈಕಾಟ್​ ಟ್ರೆಂಡ್​ ಶುರುವಾಗಿದ್ದು ಈಗ ಹಳೆಯ ಮಾತು. ನಂತರ ಕೇಸರಿ ಬಿಕಿನಿ (Bikini) ಬದಲು ದೀಪಿಕಾ ಕೇಸರಿ ಲುಂಗಿ ತೊಟ್ಟಿದ್ದೂ ಆಗಿದೆ. ಆದರೆ ಬೈಕಾಟ್​ ಟ್ರೆಂಡ್​ ಮಾತ್ರ ಮುಂದುವರಿದಿದೆ.

ಅದರಲ್ಲಿಯೂ ಹೆಚ್ಚಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳಿಂದಲೇ ಈ ಬೈಕಾಟ್​ ಬಿಸಿ ಶುರುವಾಗಿದ್ದು. ಬೇಷರಂ ರಂಗ್​ ಬಗ್ಗೆ ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ ಮುಖಂಡರು ಮುಂತಾದವರು ಕೂಡ ಕಿಡಿ ಕಾರಿದ್ದಾರೆ. ಈ ವಿವಾದ ಹೆಚ್ಚುತ್ತಲೇ ಪ್ರಧಾನಿ ನರೇಂದ್ರ  ಮೋದಿಯವರು, ಸಿನಿಮಾಗಳು ಹಾಗೂ ಬಾಲಿವುಡ್ (Bollywood) ತಾರೆಯರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಈ ರೀತಿ ಯಾರಾದರೂ ಬೈಕಾಟ್​ ಮಾಡುತ್ತಾರೆ. ಅದು ಇಡೀ ದಿನ ಟಿವಿಯಲ್ಲಿ ಪ್ರಸಾರವಾಗುತ್ತದೆ. ನಂತರ ಸುಮ್ಮನೇ ಪ್ರತಿಕಾರ ಶುರುವಾಗುತ್ತದೆ ಎಂದಿರುವ ಪ್ರಧಾನಿ, ಹೀಗೆಲ್ಲಾ ಬೈಕಾಟ್​ ಮಾಡಬೇಡಿ ಎಂದಿದ್ದಾರೆ.

ಚಿತ್ರರಂಗಕ್ಕೆ ಪುನಃ ಬರಸಿಡಿಲು​: ಶೂಟಿಂಗ್​ ವೇಳೆ ನಟ ವಿಜಯ್​ ಸ್ಥಿತಿ ಚಿಂತಾಜನಕ

ಪ್ರಧಾನಿ ನರೇಂದ್ರ ಮೋದಿ ಅವರ ಈ ಮಾತಿಗೆ ಹಲವಾರು ನಟ ನಟಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಓರ್ವ ಪ್ರಧಾನಿಯಾಗಿ ಸಿನಿಮಾದ ಬಗ್ಗೆ ಇಂಥ ಮಾತನಾಡುತ್ತಿರುವುದು ಒಳ್ಳೆಯ ನಡೆ ಎಂದು ಶ್ಲಾಘಿಸಿದ್ದಾರೆ. ಆದರೆ ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anuraj Kahyap) ಅವರು  ಕುಹಕವಾಡಿದ್ದಾರೆ. ತಮ್ಮ ನಿಷ್ಠುರ ಮಾತುಗಳಿಗೆ ಹೆಸರಾದ ಅನುರಾಗ್​ ಅವರು,  ‘ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅನುರಾಗ್​ ಕಶ್ಯಪ್​ ಅವರು, ‘ಪ್ರಧಾನಿ ನರೇಂದ್ರ ಮೋದಿ ಈ ಕೆಲಸವನ್ನು ನಾಲ್ಕು ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಈಗ ಹೇಳಿ ಏನು ಪ್ರಯೋಜನ’ ಎಂದು ವ್ಯಂಗ್ಯವಾಡಿದ್ದಾರೆ.

 'ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಬ್ಬತ್' ಚಿತ್ರದ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಹೇಳಿಕೆಯು ಬಾಲಿವುಡ್ ಅನ್ನು ಬಹಿಷ್ಕರಿಸುವವರ ಪರಿಣಾಮವನ್ನು ಕಡಿಮೆ ಮಾಡುತ್ತದೆಯೇ ಎಂಬ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಗ ಅವರು,  ಇಷ್ಟು ದೊಡ್ಡ ನಾಯಕ ಈ ಹಿಂದೆ ಯಾವತ್ತೂ ಹೇಳಿಕೆಯನ್ನೇ ನೀಡಲಿಲ್ಲ. ಇಂಥ ದೊಡ್ಡ ವ್ಯಕ್ತಿಯ  ಮಾತನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆ ನಿಜ. ಆದರೆ ಈಗ ಹೇಳಿ ಏನೂ ಪ್ರಯೋಜನವಿಲ್ಲ.   ನಾಲ್ಕು ವರ್ಷಗಳ ಹಿಂದೆಯೇ ಈ ಮಾತನ್ನು ಹೇಳಿದ್ದರೆ ಪರಿಣಾಮ ಆಗುತ್ತಿತ್ತೇನೋ.  ಈಗ ಇಂಥ ಮಾತು  ಯಾವುದೇ ಪರಿಣಾಮ ಬೀರುವುದಿಲ್ಲ. ಈಗ ವಿಷಯಗಳು ಕೈ ಮೀರಿ ಹೋಗಿವೆ. ಈಗ ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ಹೇಳುವಾಗ ಹೇಳಿದ್ದರೆ ಕೇಳುತ್ತಿದ್ದರೇನೋ. ಈಗ ಪೂರ್ವಗ್ರಹದಿಂದ ದ್ವೇಷ ಬಲವಾಗಿದೆ. ಅದು ಇನ್ನಷ್ಟು ಸ್ಟ್ರಾಂಗ್​ ಆಗಿದೆ. ಈಗ ಹೇಳಿ ಏನೂ ಪ್ರಯೋಜನ ಇಲ್ಲ ಎಂದಿದ್ದಾರೆ.

ಈಗ ಬೈಕಾಟ್​ ಮಾಡುತ್ತಿರುವುದು ಅವರ ಸ್ವಂತ ಜನರೇ. ಈಗ ಏನಿದ್ದರೂ  ಅವರ ಸ್ವಂತ ಜನರನ್ನು ನಿಯಂತ್ರಿಸಬೇಕು. ಉಳಿದವರಿಗೆ ಏನೂ ಹೇಳಲು ಆಗುವುದಿಲ್ಲ.  ವಿಷಯಗಳು ಈಗ ಕೈ ಮೀರಿ ಹೋಗಿವೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ಜನಸಮೂಹ ನಿಯಂತ್ರಣದಲ್ಲಿಲ್ಲ. ಅದೇ ಅವರ ಶಕ್ತಿಯಾಗಿ ಮಾರ್ಪಟ್ಟಿದೆ’’ ಎಂದು ಅನುರಾಗ್ ಕಶ್ಯಪ್ ಕಿಡಿ (Angry) ಕಾರಿದ್ದಾರೆ.

ಅಂದಹಾಗೆ,  ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಬಾಲಿವುಡ್’ ಟ್ರೆಂಡ್ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹಾಯವನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೋರಿದ್ದರು. ಇದಾದ ಎರಡು ವಾರಗಳ ನಂತರ ಸಿನಿಮಾಗಳ ಬಗ್ಗೆ ಟೀಕೆ ಮಾಡದಂತೆ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದರು. ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಾಯಕರ ಹೆಸರನ್ನು ಹೇಳದೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಚಲನಚಿತ್ರಗಳ ಬಗ್ಗೆ ಅನಗತ್ಯ ಕಾಮೆಂಟ್‌ಗಳನ್ನು ತಪ್ಪಿಸಬೇಕು ಎಂದು ಹೇಳಿದರು. ಆದಷ್ಟು ಇಂತಹ ಸಮಸ್ಯೆಗಳಿಂದ ದೂರವಿರುವುದು ಒಳಿತು ಎಂದು ಪ್ರಧಾನಿ ಸಲಹೆ ನೀಡಿದ್ದರು.  ಇಂತಹ ಕಾಮೆಂಟ್‌ಗಳು ಅಭಿವೃದ್ಧಿ ಕಾರ್ಯಸೂಚಿಗೆ ಹಿನ್ನಡೆಯಾಗುತ್ತವೆ ಎಂದಿದ್ದರು.

'ಕೆಜಿಎಫ್​ 2'ಗೆ ಠಕ್ಕರ್​ ಕೊಟ್ಟ 'ಪಠಾಣ್'​: ಬೈಕಾಟ್​ ಬಿಸಿ ನಡುವೆಯೇ ಮಾಡಿತು ದಾಖಲೆ!

ಈ ಹಿಂದೆ ಕೂಡ, ಆಮಿರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’, ಅಕ್ಷಯ್ ಕುಮಾರ್ (Akshay kumar) ನಟನೆಯ ‘ರಕ್ಷಾ ಬಂಧನ್’, ಅನುರಾಗ್ ಕಶ್ಯಪ್ ನಿರ್ದೇಶನದ ‘ದೊಬಾರಾ’, ವಿಜಯ್ ದೇವರಕೊಂಡ ನಟಿಸಿದ್ದ ‘ಲೈಗರ್’, ರಣ್‌ಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ: ಪಾರ್ಟ್ 1   ಶಿವ’ ಚಿತ್ರಗಳು ಬಾಯ್ಕಾಟ್ ಬಿಸಿ ಅನುಭವಿಸಿದ್ದವು. 
 

Follow Us:
Download App:
  • android
  • ios