Asianet Suvarna News Asianet Suvarna News

Azan loudspeakers ಭಾರತದಲ್ಲಿ ಅಜಾನ್ ಶಬ್ದ ನಿಷೇಧಿಸಿ, ಹಿರಿಯ ಗಾಯಕಿ ಅನುರಾಧ ಪಡುವಾಳ್ ಆಗ್ರಹ!

  • ಅಜಾನ್ ಅತೀಯಾದ ಶಬ್ದ ನಿಷೇಧಿಸಲು ಹಿಂದೂ ಸಂಘಟನೆಗಳ ಹೋರಾಟ
  • ಅಜಾನ್ ನಿಷೇಧಕ್ಕೆ ಬಾಲಿವುಡ್ ಗಾಯಕಿ ಅನುರಾಧ ಪಡುವಾಳ್ ಒತ್ತಾಯ
  • ಮುಸ್ಲಿಮ್ ರಾಷ್ಟ್ರಗಳಲ್ಲಿ ಅತೀಯಾದ ಅಜಾನ ಬ್ಯಾನ್, ಇಲ್ಲೂ ನಿಷೇಧಿಸಿ
  • ಮಕ್ಕಳಿಗೆ ಭಾರತೀಯ ಸಂಸ್ಕೃತಿ ತಿಳಿಸಿಕೊಡುವ ಅಗತ್ಯವಿದೆ ಎಂದು ಗಾಯಕಿ
Anuradha Paudwal demand ban on loudspeakers for Azaan childrens hould know our religion and culture ckm
Author
Bengaluru, First Published Apr 7, 2022, 4:14 PM IST

ಮುಂಬೈ(ಏ.07): ಅಜಾನ್ ಅತೀಯಾದ ಶಬ್ಧ ನಿಷೇಧಿಸಿ ಎಂದು ಹಿಂದೂಪರ ಸಂಘಟನೆಗಳ ಹೋರಾಟ ಜೋರಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಹಲವು ನಗರ ಹಾಗೂ ರಾಜ್ಯಗಳಲ್ಲಿ ಪೊಲೀಸ್ ಮಹಾ ನಿರ್ದೇಶಕರು ಅತೀಯದ ಶಬ್ದ ಕೇಂದ್ರಗಳಿಗೆ ನೋಟಿಸ್ ನೀಡಿದ್ದಾರೆ. ಇದೀಗ ಈ ಹೋರಾಟಕ್ಕೆ ಬಾಲಿವುಡ್ ಹಿರಿಯ ಗಾಯಕಿ ಅನುರಾಧ ಪಡುವಾಳ್ ಧನಿಗೂಡಿಸಿದ್ದಾರೆ.

ಭಾರತದಲ್ಲಿ ಅಜಾನ್‌ನಿಂದ ಅತೀಯಾದ ಶಬ್ದ ಕಿರಿಕಿರಿಯಾಗುತ್ತಿದೆ. ಕೋರ್ಟ್ ಆದೇಶ ಪಾಲಿಸಿ ಎಂದು ಹಿಂದೂ ಸಂಘಟನೆಗಳು ಹೋರಾಟ ಮಾಡುತ್ತಿದೆ. ಇದಕ್ಕೆ ಹಲವು ನಾಯಕರು ಬೆಂಬಲ ಸೂಚಿಸಿದ್ದಾರೆ. ಇದೀಗ ಅನುರಾಧ ಪಡುವಾಳ್ ಕೂಡ ಅಜಾನ್ ನಿಷೇಧಕ್ಕೆ ಆಗ್ರಹಿಸಿದ್ದಾರೆ. ನಾನು ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಹಲವು ರಾಷ್ಟ್ರಗಳನ್ನು ಸುತ್ತಿದ್ದೇನೆ. ನಾನು ಭೇಟಿಕೊಟ್ಟ ಮುಸ್ಲಿಮ್ ರಾಷ್ಟ್ರಗಳಲ್ಲಿ ಎಲ್ಲೂ ಅಜಾನ್ ಶಬ್ದ ಕೇಳಿಸಿಲ್ಲ. ಎಲ್ಲವೂ ಶಾಂತಿಯುತವಾಗಿದೆ. ಆದರೆ ಭಾರತದಲ್ಲಿ ಅತೀಯಾದ ಅಜಾನ್ ಶಬ್ದವಿದೆ. ಇದನ್ನು ನಿಷೇಧಿಸುವ ಅಗತ್ಯವಿದೆ ಎಂದು ಅನುರಾಧ ಪಡುವಾಳ್ ಹೇಳಿದ್ದಾರೆ.

ಮುಂಬೈನಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಬಿಜೆಪಿ ಆಗ್ರಹ!

ನಾನು ಯಾವುದೇ ಧರ್ಮದ ವಿರುದ್ಧವಲ್ಲ. ಮುಸ್ಲಿಮರು ಮಸೀದಿಗಳಲ್ಲಿ ಅಜಾನ್ ಶಬ್ದ ಅತಿಯಾಗಿ ಇಡುವುದರಿಂದ ಇತರರಿಗೆ ಸಮಸ್ಯೆಯಾಗಲಿದೆ. ಇತರ ಧರ್ಮದವರೂ ಇದೇ ರೀತಿ ಸ್ಪರ್ಧೆಗಿಳಿದರೆ ಎಲ್ಲರ ನೆಮ್ಮದಿ ಹಾಳಾಗಲಿದೆ. ಹೀಗಾಗಿ ಈ ಕುರಿತು ಕೋರ್ಟ್ ಆದೇಶ ಪಾಲನೆಯಾಗಬೇಕು. ಭಾರತದಲ್ಲಿ ಅಜಾನ್ ಶಬ್ಧವನ್ನು ಉದ್ದೇಶ ಪೂರ್ವಕವಾಗಿ ಏರಿಸಲಾಗಿದೆ ಎಂದು ಅನುರಾಧ ಹೇಳಿದ್ದಾರೆ.

ನಾನು ಭೇಟಿ ಮಾಡಿದ ಮಧ್ಯಪ್ರಾಚ್ಯ ಮುಸ್ಲಿಮ್ ದೇಶಗಳಲ್ಲಿ ಅಜಾನ್ ಬ್ಯಾನ್ ಮಾಡಲಾಗಿದೆ. ಅಲ್ಲಿ ಶಾಂತಿ ಕದಡುವ ಹಾಗೂ ಅತೀಯಾದ ಶಬ್ದ ಮಾಲಿನ್ಯ ಮಾಡುವ ಯಾವುದೇ ವಿಚಾರಕ್ಕೂ ಅವಕಾಶವಿಲ್ಲ. ಆದರೆ ಭಾರತದಲ್ಲಿ ನಿಯಮ ಪಾಲಿಸುತ್ತಿಲ್ಲ. ಇದೀಗ ಹಿಂದೂ ಸಂಘಟನಗಳು ಹುನುಮಾನ್ ಚಾಲಿಸಾ ಹಾಕಿದರೆ ಸೌಹಾರ್ಧತೆ ಹಾಳಾಗಲಿದೆ. ಹೀಗಾಗಿ ಅಜಾನ್ ನಿಷೇಧಿಸುವುದು ಉತ್ತಮ ಎಂದು ಅನುರಾಧ ಹೇಳಿದ್ದಾರೆ.

ರಾಜ್ಯದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿರ್ಬಂಧ.. ಮಹತ್ವದ ಸುತ್ತೋಲೆ

ಇದೇ ವೇಳೆ ಭಾರತದ ಯುವ ಪೀಳಿಗಿಗೆ ನಮ್ಮ ಸಂಸ್ಕ್ರೃತಿಯನ್ನು ತಿಳಿಸುವ ಅಗತ್ಯವಿದೆ. ಭಾರತದ ನೈಜ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಕುರಿತು ಇಂದಿನ ಮಕ್ಕಳಿಗೆ ತಿಳಿದಿಲ್ಲ. ಅದನ್ನು ತಿಳಿಸುವ ಉಳಿಸುವ ಕೆಲಸ ಆಗಬೇಕು.ಚಿಕ್ಕಂದಿನಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕೃತಿ ಕಲಿಸಬೇಕು. ಭಾರತೀಯ ಪರಂಪರೆ ತಿಳಿಸಬೇಕು. ಹಾಗಾದಲ್ಲಿ ಮಾತ್ರ ಭಾರತ ಭಾರತವಾಗಿ ಉಳಿಯಲಿದೆ ಎಂದು ಅನುರಾಧ ಪಡುವಾಳ್ ಹೇಳಿದ್ದಾರೆ.

ಮಕ್ಕಳಿಗೆ ವೇದಗಳು, ಪುರಾಣ ಸೇರಿದಂತೆ ಹಲವು ಮಹತ್ ಕಾವ್ಯಗಳ ಅರಿವು ಇರಬೇಕು. ಇದನ್ನು ತಿಳಿಸಿಕೊಡುವ ಕೆಲಸ ಆಗಬೇಕು. ಎಂದು ಅನುರಾಧ ಪಡುವಾಳ್ ಹೇಳಿದ್ದಾರೆ. ಅಜಾನ್ ವಿರುದ್ಧ ಅನುರಾಧ ಪಡುವಾಳ್‌ಗು ಮೊದಲೇ ಅಂದರೆ 2017ರಲ್ಲಿ ಗಾಯಕ ಸೋನೊ ನಿಗಮ್ ಆಕ್ಷೇಪ ವ್ಯಕ್ತಪಡಿಸಿದ್ದರು. ಅಜಾನ್ ಅತೀಯ ಶಬ್ದ ನಿಷೇಧಿಸುವಂತೆ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು. ಅಂದು ಇದು ಭಾರಿ ವಿವಾದ ಸೃಷ್ಟಿಸಿತ್ತು. ಇಷ್ಟೇ ಅಲ್ಲ ಸೋನ ನಿಗಮ್ ವಿರುದ್ಧ ಮುಸ್ಲಿಮ್ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿತ್ತು. ಇನ್ನು ಹಲವು ಬುದ್ದಿಜೀವಿಗಳು ಸೋನೊ ನಿಗಮ್ ವಿರುದ್ಧ ಹೇಳಿಕೆ ನೀಡಿದ್ದರು.

ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕಗಳ ನಿಷೇಧ ತೆರೆವುಗೊಳಿಸಲು ಆಗ್ರಹ
ಪ್ರಾರ್ಥನಾ ಸ್ಥಳಗಳಾದ ದೇವಸ್ಥಾನ, ಮಸ್ಜೀದಿ ಹಾಗೂ ಚಚ್‌ರ್‍ಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ನಿಯಮ ಹಿಂಪಡೆಯಬೇಕು ಎಂದು ಆಗ್ರಹಿಸಿ ಗದಗ-ಬೆಟಗೇರಿ ಅಂಜುಮ-ಎ-ಇಸ್ಲಾಂ ಸಂಸ್ಥೆ, ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Follow Us:
Download App:
  • android
  • ios