Asianet Suvarna News Asianet Suvarna News

ರಾಜ್ಯದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿರ್ಬಂಧ.. ಮಹತ್ವದ ಸುತ್ತೋಲೆ

ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಿಸಿದ ವಾಕ್ಫ್ ಬೋರ್ಡ್/  ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ಇಲ್ಲ/ ಧ್ವನಿವರ್ಧಕ ನಿಷೇಧಿಸುವಂತೆ ಮಹತ್ವದ ಆದೇಶ ನೀಡಿದ ಕರ್ನಾಟಕ ವಕ್ಫ್ ಬೋರ್ಡ್/ ಶಬ್ದಮಾಲಿನ್ಯ ಬಹುಮುಖ್ಯ ವಿಚಾರ

Loudspeaker rule not applicable to azan says Karnataka Wakf Board mah
Author
Bengaluru, First Published Mar 18, 2021, 6:40 PM IST | Last Updated Mar 18, 2021, 6:50 PM IST

ಬೆಂಗಳೂರು(ಮಾ. 18)  ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಕೆ ಮಾಡದಂತೆ ರಾಜ್ಯ ವಕ್ಫ್‌ ಬೋರ್ಡ್ ಸುತ್ತೋಲೆ ಹೊರಡಿಸಿದೆ. ಅಜಾನ್ ಗೆ ನಿರ್ಬಂಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ವಕ್ಫ್‌ ಬೋರ್ಡ್ ಅಡಿಯಲ್ಲಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ.

ಆದೇಶದ  ಜತೆಗೆ ಅಜಾನ್ ಗೆ ಯಾವುದೇ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.  ಶಬ್ದ ಮಾಲಿನ್ಯ ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀಳಲಿದೆ. ಆಸ್ಪತ್ರೆಗಳು, ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ  ವಲಯಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸುವುದು ಅಪರಾಧ.  ಉಳಿದ ಸಮಯಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಮನದಲ್ಲಿಟ್ಟು ಮೈಕ್‌ ಬಳಸಬೇಕು ಎಂದು ಸುತ್ತೋಲೆಯಲ್ಲಿ   ಹೇಳಲಾಗಿದೆ.

ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ; ಹೈಕೋರ್ಟ್ ಪಡೆದುಕೊಂಡ ಮಾಹಿತಿ ಏನು? 

ವಕ್ಫ್‌ ಬೋರ್ಡ್‌ ಹೊರಡಿಸಿರುವ ಸುತ್ತೋಲೆಯ ಪ್ರಮುಖ ಸೂಚನೆಗಳು

* ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು.
* ಧ್ವನಿವರ್ಧಕವನ್ನು ಅಝಾನ್‌ ಮತ್ತು ಸಾವು, ಸಮಾಧಿಯ ಸಮಯ, ಚಂದ್ರನನ್ನು ನೋಡುವುದು ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕು.
* ಯಾವುದೇ ಸಂದರ್ಭದಲ್ಲಿ ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಮಸೀದಿ, ದರ್ಗಾದ ಆವರಣದಲ್ಲಿ ಸುಡಬಾರದು.
* ಲಾತ್, ಜುಮಾ ಖುತ್ಬಾ, ಬಯಾನ್ಸ್ ಕಾರ್ಯಕ್ರಮಗಳಿಗೆ ಮಸೀದಿ ಅಥವಾ ದರ್ಗಾದ ಆವರಣದೊಳಗೆ ಇರುವ ಮೈಕ್‌ಗಳನ್ನು ಬಳಸಬೇಕು.

Latest Videos
Follow Us:
Download App:
  • android
  • ios