ಪರೇಶ್ ರಾವಲ್ ನಂತರ ನಟಿ ಅನು ಅಗರ್‌ವಾಲ್ ಸ್ವಮೂತ್ರ ಸೇವನೆಯ ಪ್ರಯೋಜನಗಳನ್ನು ಪ್ರತಿಪಾದಿಸಿದ್ದಾರೆ. ಹಠಯೋಗದಲ್ಲಿ 'ಆಮ್ರೋಲಿ' ಎಂದು ಉಲ್ಲೇಖಿತ ಈ ಪದ್ಧತಿಯು ಆರೋಗ್ಯ ಮತ್ತು ಸೌಂದರ್ಯಕ್ಕೆ ಉತ್ತಮ ಎಂದು ಅವರು ಹೇಳಿದ್ದಾರೆ. ವಿಜ್ಞಾನಕ್ಕಿಂತ ಯೋಗದ ಪರಂಪರೆ ಪ್ರಾಚೀನ ಎಂದು ವಾದಿಸಿದ ಅವರು, ಸ್ವಾನುಭವದಿಂದ ಇದರ ಲಾಭಗಳನ್ನು ಪಡೆದಿದ್ದಾಗಿ ತಿಳಿಸಿದ್ದಾರೆ.
ಗೋಮೂತ್ರ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇದಾಗಲೇ ಹಲವಾರು ಸಂಶೋಧನೆಗಳು ಸಾಬೀತು ಮಾಡಿವೆ. ಆದರೆ ಈಗ ಕೆಲವು ದಿನಗಳಿಂದ ಸ್ವಮೂತ್ರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದಾಗಲೇ ಬಾಲಿವುಡ್ ನಟ ಪರೇಶ್ ರಾವಲ್ ತಾವು ತಮ್ಮದೇ ಮೂತ್ರವನ್ನು ಕುಡಿಯುವ ಮೂಲಕ ಹೇಗೆ ಗಂಭೀರ ಕಾಯಿಲೆಗಳನ್ನು ಗುಣಮಖ ಮಾಡಿಕೊಂಡೆ ಎಂದು ಹೇಳಿದ್ದರು. ಮೊಣಕಾಲಿನ ನೋವು ಕೂಡ ಶಮನವಾಯಿತು ಎಂದಿದ್ದರು. ಆದರೆ ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಲೇ ಪರ- ವಿರೋಧದ ಚರ್ಚೆ ಶುರುವಾಯಿತು. ಹಲವರು ನಟನ ಮಾತಿಗೆ ಟ್ರೋಲ್ ಕೂಡ ಮಾಡಿದರು. ಈ ಬಗ್ಗೆ ಸಾಕಷ್ಟು ಮೀಮ್ಸ್ಗಳೂ ಬರುತ್ತಿವೆ.
ಆದರೆ, ಈಗ ಬಾಲಿವುಡ್ ನಟಿ ಅನು ಅಗರ್‌ವಾಲ್ ಅವರು ಕೂಡ ಸ್ವಮೂತ್ರ ಕುಡಿಯುತ್ತಿರುವ ಬಗ್ಗೆ ಮಾತನತಾಡಿದ್ದಾರೆ. ಆಶಿಖಿ, ಖಳನಾಯಿಕಾ ಮುಂತಾದ ಚಿತ್ರಗಳಿಂದ ಫೇಮಸ್ ಆಗಿರೋ ನಟಿ ಅನು ಅಗರ್‌ವಾಲ್ ಅವರು, ಸ್ವಮೂತ್ರದ ಬಗ್ಗೆ ಮಾತನಾಡುತ್ತಲೇ ಅದನ್ನು ಹೇಗೆ ಕುಡಿಯಬೇಕು ಎನ್ನುವುದನ್ನು ತಿಳಿಸಿದ್ದಾರೆ. ನಾನು ಕೂಡ ಮೂತ್ರ ಕುಡಿದಿರುವೆ. ಅದು ಅಮೃತಕ್ಕೆ ಸಮಾನ. ಹಠ ಯೋಗದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ, ಇದನ್ನು ಆಮ್ರೋಲಿ ಎನ್ನುತ್ತಾರೆ ಎಂದು ನಟಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರಿಗೆ ಪರೇಶ್ ರಾವಲ್ ಅವರ ವಿವಾದದ ಬಗ್ಗೆ ಕೇಳಿದಾಗ, ವಿವಾದ ಮಾಡುತ್ತಿರುವಲ್ಲಿ ಅರ್ಥವಿಲ್ಲ. ಇದು ಸತ್ಯವಾದ ಮಾತು. ಸ್ವಮೂತ್ರ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎಂದಿದ್ದಾರೆ. ಆದರೆ ಅನೇಕ ಮಂದಿಗೆ ಇದು ಗೊತ್ತಿಲ್ಲ. ಅದೇನು ಅಜ್ಞಾನವೋ ಅಥವಾ ಮಾಹಿತಿ ಕೊರತೆಯೋ ಗೊತ್ತಿಲ್ಲ. ಮೂತ್ರ ಕುಡಿಯುವುದು ಹಠ ಯೋಗದಲ್ಲಿ ತಿಳಿಸಲಾಗಿದೆ. ನಾನು ಅದನ್ನು ಸ್ವತಃ ಅಭ್ಯಾಸ ಮಾಡಿದ್ದೇನೆ. ನಾನು ಪ್ರಯತ್ನಿಸಿದ್ದೇನೆ. ಅದು ಅಮೃತಕ್ಕೆ ಸಮಾನ ಎಂದಿದ್ದಾರೆ ನಟಿ.
Rice Water Benefits: ಕೂದಲಿಗೆ ಶ್ಯಾಂಪೂ, ಮುಖಕ್ಕೆ ಬ್ಯೂಟಿ ಕ್ರೀಂ ಬಿಟ್ಟಾಕಿ: ಅಕ್ಕಿ ನೀರು ಹೀಗೆ ಉಪಯೋಗಿಸಿ ನೋಡಿ ಕಮಾಲ್
ಮೂತ್ರ ಕುಡಿಯುವುದು ಎಂದರೆ ಸಂಪೂರ್ಣ ಕುಡಿಯುವುದು ಎನ್ನುವ ಅರ್ಥವಲ್ಲ. ನಿರ್ದಿಷ್ಟ ಭಾಗವನ್ನು ಕುಡಿಯಬೇಕು. ಆರಂಭದಲ್ಲಿ ಮಾಡುವ ಮೂತ್ರದ ಬಳಿಕ ಮಧ್ಯದಲ್ಲಿ ಬರುವ ಮೂತ್ರ ಶ್ರೇಷ್ಠವಾದದ್ದು. ಅದನ್ನು ಅಮೃತ ಎನ್ನುತ್ತಾರೆ ಎಂದಿರುವ ನಟಿ, ಆ್ಯಂಟಿ ಏಜಿಂಗ್ಗೆ ಇದು ತುಂಬಾ ಸಹಾಯಕಾರಿ ಎಂದಿದ್ದಾರೆ. ವಯಸ್ಸಾಗದಂತೆ ಅದು ತಡೆಯುತ್ತದೆ. ಚರ್ಮ ಸುಕ್ಕಾಗುವುದಿಲ್ಲ. ಉತ್ತಮವಾದ ಜೀವನಕ್ಕೂ ಅದು ಅನುಕೂಲಕರ. ನಾನು ವೈಯಕ್ತಿಯವಾಗಿ ಅದರ ಅನುಭವ ಪಡೆದಿದ್ದೇನೆ’ ಎಂದಿದ್ದಾರೆ ನಟಿ.
ಆದರೆ ಇದನ್ನು ವಿಜ್ಞಾನ ಒಪ್ಪುತ್ತದೆಯಾ ಎಂದು ಸಂದರ್ಶಕ ಕೇಳಿದಾಗ, ವಿಜ್ಞಾನಕ್ಕೆ 200 ವರ್ಷ, ಆದರೆ ನಮ್ಮ ಯೋಗಕ್ಕೆ ಸಹಸ್ರಾರು ವರ್ಷಗಳ ಪುರಾವೆ ಇದೆ. ಯಾವುದನ್ನು ನಂಬಬೇಕು ಎನ್ನುವುದನ್ನು ನಾವು ನೋಡಬೇಕು. ಯಾರ ಮಾತು ಕೇಳಬೇಕು ಎನ್ನುವುದು ನಮಗೆ ಅರಿವಿದೆ. ಹಠ ಯೋಗದಲ್ಲಿಯೇ ಈ ಬಗ್ಗೆ ಹೇಳಿರುವುದರಿಂದ ಸ್ವಮೂತ್ರದ ಕಲ್ಪನೆ ತುಂಬಾ ಒಳ್ಳೆಯದು ಎಂದಿದ್ದಾರೆ. 1969ರಲ್ಲಿ ಜನಿಸಿರುವ ಅನು ಅಗರ್‌ವಾಲ್ ಅವರಿಗೆ ಈಗ 55 ವರ್ಷ ವಯಸ್ಸು. ಇವರು ಆಶಿಖಿ ಮತ್ತು ಖಲನಾಯಿಕಾದಿಂದ ಫೇಮಸ್ ಆಗಿದ್ದರೂ, ದಿ ಕ್ಲೌಡ್ ಡೋರ್ ಮತ್ತು ತಿರುಡಾ ತಿರುಡಾದಲ್ಲಿನ ನಟನೆಯಿಂದ ಮನೆಮಾತಾದವರು. ನಂತರ ನಟನೆಯನ್ನು ತೊರೆದು ಈಗ ಕರ್ಮಯೋಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. 1997 ರಲ್ಲಿ ಬಿಹಾರ ಯೋಗ ಶಾಲೆಗೆ ಸೇರಿಕೊಂಡಿದ್ದಾರೆ. 2001ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.
ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ


