ಕೂದಲು ಸೌಂದರ್ಯಕ್ಕೆ ಪ್ರಮುಖ. ಆದರೆ ನೈಸರ್ಗಿಕ ಸೌಂದರ್ಯವನ್ನು ಮೀರಿಸುವ ಕೃತಕ ವಿಧಾನಗಳಿಗೆ ಜನರು ಆಕರ್ಷಿತರಾಗುತ್ತಾರೆ. ಅಕ್ಕಿ ತೊಳೆದ ನೀರು ಕೂದಲು ಉದುರುವಿಕೆ ತಡೆಯಲು, ಚರ್ಮದ ಆರೋಗ್ಯಕ್ಕೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯಕ. ಇದನ್ನು ಕೂದಲು ಮತ್ತು ಚರ್ಮದ ಆರೈಕೆಗೆ ಬಳಸಬಹುದು.

ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಬಹುದೊಡ್ಡದಿದೆ. ಇದೇ ಕಾರಣಕ್ಕಾಗಿಯೇ ಹಿಂದೆಲ್ಲಾ ಗಂಡ ಸತ್ತ ಬಳಿಕ, ಹೆಣ್ಣಿನ ಕೂದಲನ್ನು ಬೋಳಿಸುವ ಪದ್ಧತಿ ಇತ್ತು. ಈಗಲೂ ಕೆಲವು ಕಡೆಗಳಲ್ಲಿ ಈ ಅನಿಷ್ಠ ಪದ್ಧತಿ ಚಾಲ್ತಿಯಲ್ಲಿ ಇದೆ. ಗಂಡ ಸತ್ತ ಮೇಲೆ ಹೆಣ್ಣು ಚೆನ್ನಾಗಿ ಕಾಣಿಸಬಾರದು, ಬೇರೆಯವರು ಆಕೆಯ ಬಳಿ ಸೆಳೆಯಬಾರದು ಎನ್ನುವ ಕಾರಣದಿಂದ ಹೀಗೆ ಮಾಡುವುದು. ಇದರ ಅರ್ಥ ತಲೆಗೂದಲು ಸೌಂದರ್ಯದಲ್ಲಿ ಅಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತದೆ. ಇದೇ ಕಾರಣಕ್ಕೆ ಕೂದಲಿನ ಅಲಂಕಾರಕ್ಕಾಗಿಯೇ ಈಗ ದೊಡ್ಡ ದೊಡ್ಡ ಷೋರೂಮ್​ಗಳೇ ತೆರೆಯಲಾಗುತ್ತಿದೆ. ನೂರಾರು ಬಗೆಯ ಸ್ಟೈಲ್​ಗಳೂ ಇವೆ. ಹಾಗೆಂದು ಇದು ಹೆಣ್ಣಿಗೆ ಮಾತ್ರವಲ್ಲ, ಗಂಡಸರೂ ಕೂದಲಿನ ಅಲಂಕಾರದಲ್ಲಿ ಒಂದು ಹೆಜ್ಜೆ ಮುಂದಕ್ಕೇ ಇದ್ದಾರೆ. ವಿಭಿನ್ನ ರೀತಿಯ ಹೇರ್​ಸ್ಟೈಲ್​ಗಳು ಈಗ ಕಾಣಸಿಗುತ್ತವೆ.

ಇದೇ ಕಾರಣಕ್ಕೆ ಕೂದಲಿಗಾಗಿಯೇ ವಿಭಿನ್ನ ರೀತಿಯ ಶ್ಯಾಂಪೂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಜೊತೆಗೆ ಮುಖದ ಅಂದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳಂತೂ ಹೇಳುವುದೇ ಬೇಡ ಬಿಡಿ. ಜನರಿಗೆ ಸುಲಭದಲ್ಲಿ ಮರುಳು ಮಾಡಲು ಹಾಗೂ ಅವರನ್ನು ಪ್ರಚೋದಿಸುವ ಸಲುವಾಗಿ ನಟಿಯರನ್ನು ಬಳಸಿಕೊಳ್ಳಲಾಗುತ್ತಿದೆ. 2-3 ರೂಪಾಯಿಗಳ ಸ್ಯಾಷೆ ಬಳಕೆಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುತ್ತಾರೆ ಎಂದರೆ ಅದು ಹೇಗಿರುತ್ತದೆ ಎನ್ನುವ ವಿವೇಚನೆಯೂ ಇಲ್ಲದೇ ಕೋಟ್ಯಂತರ ಮಂದಿ ತಮ್ಮ ಇಷ್ಟದ ನಟ-ನಟಿಯರು ಬಳಸುವ ಶ್ಯಾಂಪೂ, ಬ್ಯೂಟಿ ಕ್ರೀಂಗಳ ಮೊರೆ ಹೋಗುವುದು ಇದೆ. ಕೆಲವು ದಿನಗಳ ಹಿಂದಷ್ಟೇ ನಟಿ ಆಲಿಯಾ ಭಟ್​ ಅವರ ಬೋಳುತಲೆಯ ಅಸಲಿ ರೂಪವೊಂದನ್ನು ಕ್ಯಾಮೆರಾಮನ್​ ಒಬ್ಬರು ಗುಟ್ಟಾಗಿ ಕ್ಲಿಕ್ಕಿಸಿದ್ದರು. ಗ್ಲೋ ಗ್ಲೋ ಎಂದು ಬರುವ ನಟಿ ಯಾಮಿ ಗೌತಮ್​ಗೆ ಸ್ಕಿನ್​ ಅಲರ್ಜಿ ಇರುವುದೂ ಬಯಲಾಗಿತ್ತು.

ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್​ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ

ಹಾಗಿದ್ದರೆ ದಟ್ಟ ಕೂದಲು, ಮುಖದ ಸೌಂದರ್ಯ ನೈಸರ್ಗಿಕವಾಗಿ ಸಾಧ್ಯವಿಲ್ಲವೆ ಎಂದು ಕೇಳಬಹುದು. ಹೊಟ್ಟಿನ ಸಮಸ್ಯೆಯಿಂದಲೂ ಕೂದಲು ಉದುರುವುದು ಉಂಟು. ಇನ್ನು ದೇಹದಲ್ಲಿ ಕೆಲವು ಸಮಸ್ಯೆಗಳು, ನೀರಿನ ಸಮಸ್ಯೆ ಎಲ್ಲವೂ ಕೂದಲು ಉದುರುವುದಕ್ಕೆ ಕಾರಣ ಆದರೂ, ಅಕ್ಕಿ ತೊಳೆದ ನೀರನ್ನು ಈಗ ಹೇಳಿದ ರೀತಿಯಲ್ಲಿ ಕೂದಲನ್ನು ತೊಳೆಯುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಅಸಲಿಗೆ ಚೀನಾದಲ್ಲಿ ಈ ಒಂದು ಪದ್ಧತಿಯನ್ನು ಅಳವಡಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ. ಅಕ್ಕಿ ತೊಳೆದ ನೀರಿನಲ್ಲಿ ವಿಟಮಿನ್‌ಗಳಲ್ಲಿ ಹೆಚ್ಚು ಸಮೃದ್ಧವಾಗಿರುವ ಕಾರಣ ಇದು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ, ಇದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ. ಅಕ್ಕಿ ತೊಳೆದ ನೀರು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಕಾರಣ, ಚರ್ಮದ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಅಕ್ಕಿ ನೀರಿನಲ್ಲಿ ಇನೋಸಿಟಾಲ್ ಎಂಬ ಒಂದು ರೀತಿಯ ಕಾರ್ಬೋಹೈಡ್ರೇಟ್ ಇದ್ದು, ಇದು ಕೂದಲಿನ ಹಾನಿಯನ್ನು ತಡೆಯುತ್ತದೆ ಮತ್ತು ಮೃದುವಾಗಿರುತ್ತದೆ. 

ಸೌಂದರ್ಯಕ್ಕೆ ಅಕ್ಕಿ ನೀರು: 1 ಕಪ್ ಅಕ್ಕಿಯನ್ನು ನೀರಿನಿಂದ ತೊಳೆದು, ಅದಕ್ಕೆ 2 ಕಪ್ ನೀರು ಸೇರಿಸಿ ಅರ್ಧ ಗಂಟೆ ನೆನೆಸಿಡಬೇಕು. ಅದನ್ನು ಮಿಕ್ಸ್​ ಮಾಡಿ ನಂತರ ನೀರನ್ನು ಸ್ವಚ್ಚವಾದ ಪಾತ್ರೆಯಲ್ಲಿ ಸೋಸಬೇಕು. ಇದನ್ನು ಫ್ರಿಜ್​ನನಲ್ಲಿ 3 ರಿಂದ 4 ದಿನಗಳವರೆಗೆ ಸಂಗ್ರಹಿಸಬಹುದು. ಬಳಸುವ ಮೊದಲು ಅದನ್ನು ಶೇಕ್​ ಮಾಡಬೇಕು. 1: 3 ಅನುಪಾತದಲ್ಲಿ ನೀರಿನ ಜೊತೆ ಮಿಕ್ಸ್ ಮಾಡಿ ಮುಖವನ್ನು ತೊಳೆಯುತ್ತಿರಿ. ಇದು ತ್ವಚೆಯ ಆರೋಗ್ಯ ಕಾಪಾಡುವ ಜೊತೆಗೆ ನೈಸರ್ಗಿಕ ರೀತಿಯಲ್ಲಿ ಹೊಳಪು ನೀಡುತ್ತದೆ. ಚರ್ಮದ ಸಮಸ್ಯೆಗೂ ಅಕ್ಕಿ ನೀರು ರಾಮಬಾಣ. ಸ್ನಾನದ ನೀರಿಗೆ ಕೆಲವು ಕಪ್ ಅಕ್ಕಿ ನೀರನ್ನು ಸೇರಿಸಿ, ಮತ್ತು ನಿಮ್ಮ ದೇಹವನ್ನು 15 ರಿಂದ 20 ನಿಮಿಷಗಳ ಕಾಲ ಪ್ರತಿದಿನ ಎರಡು ಬಾರಿ ನೆನೆಸಿಡಿ. ಪರ್ಯಾಯವಾಗಿ, ನೀವು ಹತ್ತಿ ಚೆಂಡನ್ನು ತಂಪಾದ ಅಕ್ಕಿ ನೀರಿನಲ್ಲಿ ನೆನೆಸಿ ಮತ್ತು ಪೀಡಿತ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಸುಕೋಮಲವಾಗುತ್ತದೆ. ಅಕ್ಕಿಯನ್ನು ನೀರಿನಲ್ಲಿ ಕುದಿಸಿ, ಬೇಯಿಸಿದಾಗ ಸಿಗುವ ನೀರನ್ನು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಕುಡಿಯುವ ಮುನ್ನ ಸ್ವಲ್ಪ ಬಿಸಿ ಮಾಡಿ ಕುಡಿಯಬಹುದು. ಇದರಲ್ಲಿರುವ ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟುಗಳು ಮತ್ತು ಖನಿಜಗಳು ದೇಹದಲ್ಲಿ ಎಲೆಕ್ಟ್ರೋಲೈಟ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

Hema Malini's Beauty Secrets: ಹೇಮಾ ಮಾಲಿನಿ ಬ್ಯೂಟಿ ಹಿಂದಿರೋ ಕಡ್ಲೆಹಿಟ್ಟು, ನಿಂಬೆಹಣ್ಣಿನ ಸೀಕ್ರೆಟ್​ ಹೇಳಿದ ಪುತ್ರಿ ಇಶಾ!

ಇನ್ನು ಕೂದಲಿನ ವಿಷಯಕ್ಕೆ ಬರುವುದಾದರೆ, ನಿಮ್ಮ ಕೂದಲನ್ನು ರಾಸಾಯನಿಕ ಮುಕ್ತ ಶ್ಯಾಂಪೂವನ್ನು ಮೊದಲಿಗೆ ಲೇಪಿಸಿ. ಇದಕ್ಕೆ ಗಂಥಿಗೆ ಅಂಗಡಿಯಲ್ಲಿ ಸಿಗುವ ಅಂಟುವಾಳ ಕಾಯಿ, ಸೀಗೆಕಾಯಿ ಉಪಯೋಗಿಸುವುದು ಬೆಸ್ಟ್​. ಇದಾದ ಬಳಿಕ ಅಕ್ಕಿ ನೀರನ್ನು ನಿಮ್ಮ ಕೂದಲಿಗೆ ಸುರಿಯಿರಿ, ಬೆರಳ ತುದಿಯನ್ನು ಬಳಸಿ 10 ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ. ನೀರಿನಿಂದ ತೊಳೆಯಿರಿ. ಇದನ್ನು ವಾರದಲ್ಲಿ 2 ಅಥವಾ 3 ಬಾರಿ ಮಾಡಿ. ಅಕ್ಕಿ ನೀರನ್ನು 1: 3 ಅನುಪಾತದಲ್ಲಿ ನೀರಿನೊಂದಿಗೆ ಬೆರೆಸಿ. ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ ಈ ಮಿಶ್ರಣವನ್ನು ಬಳಸಿ.