Asianet Suvarna News Asianet Suvarna News

ದೊಡ್ಮನೆಯಲ್ಲಿ ನಿಯಮ ಉಲ್ಲಂಘಿಸಿದ ಕಂಟೆಸ್ಟೆಂಟ್ಸ್‌, ಬಿಗ್‌ಬಾಸ್‌ನಿಂದ ಕಿಕ್‌ಔಟ್ ಆಗ್ತಾರಾ ಈ ಜೋಡಿ!

ಬಿಗ್‌ಬಾಸ್‌ ಕನ್ನಡದಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್‌ನ್ನು ಇತರ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ಶೋ ನಡೆಯುತ್ತಿದ್ದ ವೇಳೆಯಲ್ಲಿಯೇ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಸದ್ಯ ಇದೇ ರೀತಿ ಈ ಬಾರಿಯ ಬಿಗ್‌ಬಾಸ್‌ನಲ್ಲಿಯೂ ನಡೆಯೋ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಗ್‌ಬಾಸ್‌ ನಲ್ಲಿರೋ ಈ ಜೋಡಿ ಕಿಕ್‌ಔಟ್ ಆಗೋ ಸಾಧ್ಯತೆಯಿದೆ.

Ankita Lokhande, Vicky Jain to be thrown out Bigg Boss 17 house for violating rules Vin
Author
First Published Nov 3, 2023, 3:51 PM IST

ಭಾರತದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌. ಇಲ್ಲಿ ಫ್ರೆಂಡ್‌ಶಿಪ್‌, ಲವ್‌, ಆಪ್ತತೆ ಇರೋ ಹಾಗೆ ಎಲ್ಲವನ್ನೂ ಮೀರಿದ ದ್ವೇಷ, ಅಸೂಯೆ, ಜಗಳ ಕಿತ್ತಾಟ ಕೂಡಾ ನಡೆಯುತ್ತೆ. ರಿಯಾಲಿಟಿ ಶೋನ ಆರಂಭದ ದಿನಗಳಲ್ಲಿ ಕುಚಿಕು ದೋಸ್ತ್‌ನಂತಿರೋರು ದಿನ ಕಳೆದಂತೆ ಹಾವು-ಮುಂಗುಸಿಯಂತೆ ಕಿತ್ತಾಡೋದು ಇದೆ. ಟಾಸ್ಕ್‌, ಬಿಗ್‌ಬಾಸ್‌ ಮನೆಯ ಕೆಲಸ ವಿಚಾರಕ್ಕೂ ಸ್ಪರ್ಧಿಗಳು ಕಿತ್ತಾಡುತ್ತಾರೆ. ಇಂಥಾ ಸಂದರ್ಭದಲ್ಲಿ ಬಿಗ್‌ಬಾಸ್‌ ಅಂಥವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಶಿಸ್ತಿನಿಂದ ವರ್ತಿಸುವಂತೆ ಸೂಚಿಸುತ್ತಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿಯಾಗುವಂತೆಯೇ, ಕೆಲವೊಬ್ಬರು ಶೋ ಮಧ್ಯೆಯೇ ಮಾಡೋ ತಪ್ಪಿನಿಂದಾಗಿ ಕಿಕ್‌ಔಟ್‌ ಆಗೋದು ಇದೆ.

ಬಿಗ್‌ಬಾಸ್‌ ಕನ್ನಡದಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್‌ನ್ನು ಇತರ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ಶೋ ನಡೆಯುತ್ತಿದ್ದ ಸಮಯದಲ್ಲಿಯೇ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಸದ್ಯ ಇದೇ ರೀತಿ ಈ ಬಾರಿಯ ಬಿಗ್‌ಬಾಸ್‌ನಲ್ಲಿಯೂ ನಡೆಯೋ ಸಾಧ್ಯತೆ ಇದೆ. ಆದರೆ ಅದು ಬಿಗ್‌ಬಾಸ್‌ ಕನ್ನಡದಲ್ಲಿ ಅಲ್ಲ ಬದಲಿಗೆ ಬಿಗ್‌ಬಾಸ್‌ ಹಿಂದಿ ರಿಯಾಲಿಟಿ ಶೋನಲ್ಲಿ.

ಬಿಗ್‌ಬಾಸ್‌ ಮನೇಲಿ ಹಾಕಿದ ಬಟ್ಟೆ ರಿಪೀಟ್‌ ಮಾಡಲ್ವಂತೆ ಈ ನಟಿ, ಬರೋಬ್ಬರಿ 200 ಡ್ರೆಸ್ ಖರೀದಿಸಿದ ಸ್ಪರ್ಧಿ!

ಬಿಗ್‌ಬಾಸ್ ವಿಧಿಸಿದ್ದ ನಿಯಮ ಉಲ್ಲಂಘಿಸಿದ ಆರೋಪ
ರಿಯಾಲಿಟಿ ಶೋಗಳಿಗೆ ಅದರದ್ದೇ ಆದ ನಿಯಮವಿರುತ್ತದೆ. ಅದರಲ್ಲೂ ಬಿಗ್‌ಬಾಸ್‌ ಮನೆಗೆ ಹೋಗುವ ಸ್ಪರ್ಧಿಗಳು ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆದರೆ ಇಂಥಾ ನಿಯಮ (Rules)ವನ್ನು ಉಲ್ಲಂಘಿಸಿದ್ದಕ್ಕಾಗಿ ಹಿಂದಿ ಬಿಗ್‌ಬಾಸ್‌ನ ಇಬ್ಬರು ಸ್ಪರ್ಧಿಗಳು (Contestants) ಮನೆಯಿಂದ ಹೊರ ಹಾಕಲ್ಪಡುವ ಸಾಧ್ಯತೆಯಿದೆ.

ಹಿಂದಿಯ ಜನಪ್ರಿಯ ಟಿವಿ ನಟಿಯರಲ್ಲಿ ಒಬ್ಬರಾದ ಅಂಕಿತಾ ಲೋಖಂಡೆ ಅವರು ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ 17ರ ಮನೆಯೊಳಗಿದ್ದಾರೆ. ರೀಲ್‌ ಲೈಫ್‌ನಲ್ಲಿ ಸಖತ್ ಬಾಂಡಿಂಗ್ ಇರೋ ಜೋಡಿಯೆಂದು ಗುರುತಿಸಿಕೊಂಡಿದ್ದ ಈ ಕಪಲ್‌ ಬಿಗ್‌ಬಾಸ್ ಮನೆಯೊಳಗೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಯಲ್ಲೇ ಈ ಜೋಡಿ ಸಂಕಷ್ಟದಲ್ಲಿದ್ದು ಬಿಗ್ ಬಾಸ್ ಮನೆಯಿಂದ ಹೊರ ಹಾಕುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕನ್ನಡದಲ್ಲಿ ನಟಿಸಿರೋ ನಟಿಗೆ ಹಿಂದಿ ಬಿಗ್‌ಬಾಸ್‌ನಲ್ಲಿ ಈ ಪರಿ ದುಡ್ಡಾ? ಹೆಚ್ಚು ಸಂಭಾವನೆ ಪಡೆಯೋದು ಇವ್ರೇ...

ಬಿಗ್‌ಬಾಸ್ ಮನೆಗೆ ಬರೋ ಮುನ್ನ ಸಹ ಸ್ಪರ್ಧಿ ಜೊತೆ ಫೋನ್‌ನಲ್ಲಿ ಮಾತುಕತೆ
ಹೊಸ ಪ್ರೋಮೋದಲ್ಲಿ, ಸಲ್ಮಾನ್ ಖಾನ್ ಅವರು ಮನೆಯೊಳಗೆ ಪ್ರವೇಶಿಸುವ ಮೊದಲು ಸಹ ಸ್ಪರ್ಧಿ ನೀಲ್ ಭಟ್ ಅವರೊಂದಿಗೆ ರಹಸ್ಯ (Secret) ಫೋನ್ ಕರೆ ಕುರಿತು ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ವಿಕ್ಕಿ ಜೈನ್ ಅವರನ್ನು ಪ್ರಶ್ನಿಸುತ್ತಾರೆ. 'ನೀವು ಸಹಿ ಮಾಡಿದ ಒಪ್ಪಂದಗಳಲ್ಲಿ ಈ ಕಾರ್ಯಕ್ರಮದ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಿಮ್ಮಲ್ಲಿ ಎಷ್ಟು ಮಂದಿ ಒಪ್ಪಂದವನ್ನು ಸ್ಪಷ್ಟವಾಗಿ ಗೌರವಿಸಿದ್ದೀರಿ. ಮನೆ ಪ್ರವೇಶಿಸುವ ಮೊದಲು, ಯಾರು ಯಾರೊಂದಿಗೆ ಮಾತನಾಡಿದ್ದಾರೆ' ಎಂದು ಸಲ್ಮಾನ್ ಖಾನ್ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ವಿಕ್ಕಿ, 'ಸರ್, ನಾನು ಕಾರ್ಯಕ್ರಮಕ್ಕೆ ಪ್ರವೇಶಿಸುವ ಎರಡು ದಿನಗಳ ಮೊದಲು ನೀಲ್ ಅವರೊಂದಿಗೆ ಮಾತನಾಡಿದ್ದೆ' ಎನ್ನುತ್ತಾರೆ.

ಈ ಸಂದರ್ಭದಲ್ಲಿ ಸಲ್ಮಾನ್ ಖಾನ್‌, 'ಅಂಕಿತಾ, ವಿಕ್ಕಿ ನೀಲ್ ಜೊತೆ ಮಾತನಾಡಿದ್ದು ಗೊತ್ತಾ' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ನಟಿ. 'ಆ ಬಗ್ಗೆ ನಂತರ ತಿಳಿಯಿತು' ಎನ್ನುತ್ತಾರೆ. ಇದಕ್ಕೆ ಸಲ್ಮಾನ್ ಖಾನ್‌ 'ನೀವು ಮಾಡಿರುವ ತಪ್ಪಿಗಾಗಿ ನಿಮ್ಮಿಬ್ಬರನ್ನು ಬಿಗ್‌ಬಾಸ್‌ ಮನೆಯಿಂದ ಹೊರಹಾಕುವ ಅಥವಾ ಶೋನಲ್ಲಿ ನಿಮ್ಮ ಮುಂದಿನ ಭಾಗವಹಿಸುವಿಕೆಯನ್ನು ನಿಲ್ಲಿಸುವ ಹಕ್ಕಿದೆ' ಎಂದು ತಿಳಿಸುತ್ತಾರೆ. ಮುಂದಿನ ದಿನಗಳಲ್ಲಿ ಬಿಗ್‌ಬಾಸ್ ಈ ಜೋಡಿಯ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡ್ಬೇಕಿದೆ.

Follow Us:
Download App:
  • android
  • ios