Asianet Suvarna News Asianet Suvarna News

ಕನ್ನಡದಲ್ಲಿ ನಟಿಸಿರೋ ನಟಿಗೆ ಹಿಂದಿ ಬಿಗ್‌ಬಾಸ್‌ನಲ್ಲಿ ಈ ಪರಿ ದುಡ್ಡಾ? ಹೆಚ್ಚು ಸಂಭಾವನೆ ಪಡೆಯೋದು ಇವ್ರೇ...

ಕನ್ನಡದಲ್ಲಿ ನಟಿಸಿರುವ ನಟಿಯೊಬ್ಬರಿಗೆ ಹಿಂದಿಯ ಬಿಗ್‌ಬಾಸ್‌ನಲ್ಲಿ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ. ಯಾರೀಕೆ? 
 

Meet highest paid contestant of Bigg Boss 17 Kannada actress Mannara Chopra
Author
First Published Oct 19, 2023, 4:18 PM IST

ಈಗ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಬಿಗ್‌ಬಾಸ್‌ ಕಾವು ಏರುತ್ತಿದೆ. ಇಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ದಿನದ ಲೆಕ್ಕದಲ್ಲಿ ಸಂಭಾವನೆ ಸಿಗುತ್ತದೆ. ಕೆಲವರಿಗೆ ಸಿಗುವ ಸಂಭಾವಣೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ. ಸ್ಪರ್ಧಿಗಳ ಅರ್ಹತೆ, ಅವರಿಗೆ ಇರುವ ಪ್ರಚಾರಪ್ರಿಯತೆ ಇವುಗಳ ಆಧಾರದ ಮೇಲೆ ಸಂಭಾವನೆಯನ್ನು ನೀಡಲಾಗುತ್ತಿದೆ. ಇದೀಗ ಹಿಂದಿಯಲ್ಲಿ ಬಿಗ್ ಬಾಸ್ ಸೀಸನ್ 17 ಶುರುವಾಗಿದೆ.  ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ.  ಜನಪ್ರಿಯ ಟಿವಿ ತಾರೆ ಅಂಕಿತಾ ಲೋಖಂಡೆ ಕೂಡ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದು, ಅವರು ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಮನೆ ಪ್ರವೇಶಿಸಿದ್ದಾರೆ. ಅಂಕಿತಾ ಲೋಖಂಡೆ ಬಿಗ್ ಬಾಸ್ 17 ರ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಎಂದು ಕೆಲವು ವರದಿಗಳು ಹೇಳಿಕೊಂಡಿವೆ. ಆದರೆ ಇದು ನಿಜವಲ್ಲ.

ಕುತೂಹಲದ ಅಂಶವೆಂದರೆ, ಈ ಷೋನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವವರು ಓರ್ವ ಬಹುಭಾಷಾ ನಟಿ. ಈಕೆ ಕನ್ನಡದಲ್ಲಿಯೂ ನಟಿಸಿದ್ದಾರೆ. ಮಾತ್ರವಲ್ಲದೇ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಎನಿಸಿಕೊಂಡಿರೋ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಕೂಡ. ಹೌದು. ಇವರೇ ಮನ್ನಾರಾ ಚೋಪ್ರಾ. ಇವರೇ ಬಿಗ್ ಬಾಸ್‌ನಲ್ಲಿ  ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಮನ್ನಾರಾ ಚೋಪ್ರಾ ಕಾರ್ಯಕ್ರಮದಿಂದ ಪ್ರತಿ ವಾರ 15 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಜತೆ ಸದ್ಯ ಹಾಲಿವುಡ್‌ನಲ್ಲೂ ಬಿಜಿಯಿರುವ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಮನ್ನಾರಾ ಚೋಪ್ರಾ ಕನ್ನಡದಲ್ಲಿಯೂ ನಟಿಸಿದ್ದಾರೆ. ಇದು 2017ರಲ್ಲಿ ಬಿಡುಗಡೆಯಾದ  ‘ರೋಗ್’ ಚಿತ್ರ.
 

ಬಿಗ್‌ಬಾಸ್‌ ಮನೆಯಲ್ಲಿ ಮದ್ವೆ, ಹೊರಗೆ ಬಂದಾಗ ಡಿವೋರ್ಸ್‌: ನಟಿ ಸಾರಾ ಮಾಜಿ ಪತಿಗೀಗ 3ನೇ ಮದ್ವೆ!

ರೋಗ್‌ ಚಿತ್ರವು ತೆಲಗು ಮತ್ತು ಕನ್ನಡದಲ್ಲಿ ಒಟ್ಟಿಗೇ ಬಿಡುಗಡೆಯಾಗಿತ್ತು. ಇದನ್ನು ಹೊರತುಪಡಿಸಿದರೆ ಮನ್ನಾರಾ,  ಹಿಂದಿಯಲ್ಲಿ ‘ಜಿದ್’, ತಮಿಳಿನಲ್ಲಿ ‘ಕಾವಲ್’, ತೆಲುಗಿನಲ್ಲಿ ‘ಜಕ್ಕನ್ನ’, ‘ಸೀತಾ’ ಚಿತ್ರಗಳಲ್ಲಿ ನಟಿಸಿದ್ದಾರೆ.  ಇವರು ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿದ್ದರು. ಇದಕ್ಕೆ ಕಾರಣ, ಅವರ ಚಿತ್ರವೊಂದರ ಪ್ರಚಾರದ ಸಂದರ್ಭದಲ್ಲಿ  ಚಿತ್ರದ ನಿರ್ದೇಶಕ ಎ.ಎಸ್. ರವಿಕುಮಾರ್ ಚೌಧರಿ, ಮನ್ನಾರಾ ಕೆನ್ನೆಗೆ ಮುತ್ತಿಟ್ಟಿದ್ದರಿಂದ ಆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿ, ಹಲವರು ನಿರ್ದೇಶಕನ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಖುದ್ದು ನಟಿಯೇ ಅದಕ್ಕೆ ಸ್ಪಷ್ಟನೆ ನೀಡಿ, ‘ನಿರ್ದೇಶಕರಿಗೆ ಸಿನಿಮಾದಲ್ಲಿ ನನ್ನ ಕೆಲಸ ಇಷ್ಟವಾಗಿದೆ ಅಂತನ್ನಿಸುತ್ತದೆ. ಪ್ರಚಾರದ ವೇಳೆ ತುಂಬ ಎಕ್ಸೈಟ್ ಆದ ಕಾರಣ ಹಾಗೆ ಮಾಡಿರಬಹುದು’ ಎಂದಿದ್ದರು.
 
ಇನ್ನು ಹಿಂದಿಯ ಬಿಗ್‌ಬಾಸ್‌ನ ಸಂಭಾವನೆ ಕುರಿತು ಹೇಳುವುದಾದರೆ,  ಸ್ಟ್ಯಾಂಡಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ವಾರಕ್ಕೆ 7-8 ಲಕ್ಷ ರೂಪಾಯಿ, ಅಂಕಿತಾ ಲೋಖಂಡೆ  ವಾರಕ್ಕೆ 12 ಲಕ್ಷ,  ಅವರ ಪತಿ ವಿಕ್ಕಿ ಜೈನ್ ವಾರಕ್ಕೆ 5 ಲಕ್ಷ, ಟಿವಿ ತಾರೆ ಐಶ್ವರ್ಯಾ ಶರ್ಮಾ ವಾರಕ್ಕೆ 12 ಲಕ್ಷ- ಪತಿ ನೀಲ್ ಭಟ್ ವಾರಕ್ಕೆ 7 ಲಕ್ಷ, ಉದರಿಯಾನ್ ಸ್ಟಾರ್ ಅಭಿಷೇಕ್ ಕುಮಾರ್ ವಾರಕ್ಕೆ 5 ಲಕ್ಷ ರೂಪಾಯಿ ಹಾಗೂ ಮಾಜಿ ಅಪರಾಧ ವರದಿಗಾರ ಜಿಗ್ನಾ ವೋರಾ ಕಾರ್ಯಕ್ರಮದಿಂದ ವಾರಕ್ಕೆ 7 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ತೆಲಗು ಬಿಗ್​ಬಾಸ್​ನಲ್ಲಿ ಕನ್ನಡದ ಕಂಪು! ಅಗ್ನಿಸಾಕ್ಷಿ ನಟಿ, ಸ್ಯಾಂಡಲ್​ವುಡ್​ ತಾರೆಯನ್ನು ಸಿಕ್ಕ ಅಪೂರ್ವ ಕ್ಷಣ...
 

Follow Us:
Download App:
  • android
  • ios