ಡಾ ವಿಷ್ಣುವರ್ಧನ್ ಬೋರ್ಡ್ ರಿಪೇರಿ: ನಟ ಅನಿರುದ್ಧ ಪೋಸ್ಟ್ ವೈರಲ್!
ನಟ ಅನಿರುದ್ಧ ಜತ್ಕರ್ ಅವರು ಇಂತಹ ಸಾಮಾಜಿಕ ಕಳಕಳಿ ಕೆಲಸವನ್ನು ಈ ಮೊದಲು ಕೂಡ ಹಲವಾರು ಬಾರಿ ಮಾಡಿದ್ದಾರೆ. ತಾವು ಕಂಡ ಯಾವುದೋ ಜಾಗದಲ್ಲಿ ಹೆಚ್ಚು ಕಸ ಕಂಡುಬಂದರೆ ಅದಕ್ಕೊಂದು ಪೋಸ್ಟ್ ಮಾಡುತ್ತಾರೆ. ಸಂಬಂಧಪಟ್ಟವರ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ.

ಸ್ಯಾಂಡಲ್‌ವುಡ್ ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರ ಇಟ್ಟಿರುವ ರಸ್ತೆಯೊಂದರಲ್ಲಿ, ರಸ್ತೆ ಬದಿ ಹಾಕಿರುವ 'ಡಾ ವಿಷ್ಣುವರ್ಧನ್ ರಸ್ತೆ' ಎಂಬ ಬೋರ್ಡ್, ಸ್ಟಾಂಡ್‌ನಿಂದ ಕೆಳಗೆ ಬಿದ್ದಿದೆ. ಬೋರ್ಡ್ ಕೆಳಗೆ ಬಿದ್ದು ಹಲವು ದಿನಗಳಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಅದನ್ನು ರಿಪೇರಿ ಮಾಡಿಲ್ಲ. ರಸ್ತೆಯಲ್ಲಿ ಓಡಾಡುವ ಜನರೆಲ್ಲರೂ ಈ ಬಿದ್ದಿರುವ ಬೋರ್ಡ್ ನೋಡುತ್ತ ಓಡಾಡುತ್ತಿದ್ದು ನಟ ವಿಷ್ಣುವರ್ಧನ್ ಅಭಿಮಾನಿಗಳು ಮುಜುಗರ ಪಡುವಂತಾಗಿದೆ.
ನಟ ಹಾಗೂ ವಿಷ್ಣುವರ್ಧನ್ ಅಳಿಯ ಅರವಿಂದ್ ಜತ್ಕರ್, ಈ ಸಂಗತಿಯನ್ನು ತಮ್ಮ ಸೋಷಿಯಲ್ ಮೀಡಿಯಾ 'ಇನ್‌ಸ್ಟಾಗ್ರಾಂ' ಪೇಜಿನಲ್ಲಿ ಪೋಸ್ಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. 'ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ರಸ್ತೆ, ಪ್ರಿಯ ಕೃಷ್ಣ ಹಾಲ್, ಕೆಂಗೇರಿ' ಎಂದು ಪೋಸ್ಟ್‌ನಲ್ಲಿ ಸ್ಥಳವನ್ನು ಸಹ ನಮೂದಿಸಲಾಗಿದ್ದು, ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳುವರೋ ಎಂಬುದನ್ನು ಕಾದು ನೋಡಬೇಕಿದೆ!
ನಾನು ಬದುಕಿದ್ದರೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ; ಇಲ್ಲದಿದ್ದರೆ ಜೈ ಹಿಂದ್: ಸಲ್ಮಾನ್ ಖಾನ್!
ನಟ ಅನಿರುದ್ಧ ಜತ್ಕರ್ ಅವರು ಇಂತಹ ಸಾಮಾಜಿಕ ಕಳಕಳಿ ಕೆಲಸವನ್ನು ಈ ಮೊದಲು ಕೂಡ ಹಲವಾರು ಬಾರಿ ಮಾಡಿದ್ದಾರೆ. ತಾವು ಕಂಡ ಯಾವುದೋ ಜಾಗದಲ್ಲಿ ಹೆಚ್ಚು ಕಸ ಕಂಡುಬಂದರೆ ಅದಕ್ಕೊಂದು ಪೋಸ್ಟ್ ಮಾಡುತ್ತಾರೆ. ಸಂಬಂಧಪಟ್ಟವರ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಹಲವಾರು ಬಾರಿ ಅವರು ತಮ್ಮ ಇಂತಹ ಪ್ರಯತ್ನದಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಇದೀಗ ಅವರು ಮಾಡಿರುವ ಪೋಸ್ಟ್ ತಮ್ಮ ಮಾವ, ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಹೆಸರಿನ ಬೋರ್ಡ್ ಬಗ್ಗೆ ಇದ್ದು, ಈ ಸಂಗತಿ ಮುಂದೇನಾಗುವುದು ಎಂಬುದನ್ನು ಕಾದು ನೋಡಬೇಕಿದೆ.
ರಣವೀರ್ ಸಿಂಗ್ ಜತೆ 'ಬಿಗ್ ಬಾಸ್' ಅರವಿಂದ್ ಕೆಪಿ ಫೋಟೋ; ಏನಿದು ಹೊಸ ಸೆನ್ಸೇಷನ್!
ಅಂದಹಾಗೆ, ನಟ ಅರವಿಂದ್ ಜತ್ಕರ್ ಸ್ಯಾಂಟಲ್‌ವುಡ್‌ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಅನಿರುದ್ಧ ನಟಿಸಿದ್ದ 'ಜೊತೆಜೊತೆಯಲಿ ' ಸೀರಿಯಲ್ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ಮೂಡಿಬಂದಿದ್ದು, ಕೆಲವು ತಿಂಗಳುಗಳ ಹಿಂದಷ್ಟೇ ಅಂತ್ಯ ಕಂಡಿದೆ. ಚಿಟ್ಟೆ ಚಿತ್ರದ ಮೂಲಕ ಅನಿರುದ್ಧ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಪರಿಚಿತಗೊಂಡು ಪ್ರಖ್ಯಾತಿ ಪಡೆದುಕೊಂಡಿದ್ದರೆ, ಜೊತೆಜೊತೆಯಲಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನ-ಮನೆ ಮುಟ್ಟಿದ್ದಾರೆ. ವಿಷ್ಣುವರ್ಧನ್ ಸಮಾಧಿಗೆ ಸಂಬಂಧಪಟ್ಟ ಸಂಗತಿಗಳಲ್ಲಿ ಸಹ ನಟ ಅನಿರುದ್ಧರ ಹಾಜರಿ ಮತ್ತು ಕಾರ್ಯವೈಖರಿ ಸುದ್ದಿಯಾಗಿದೆ.