ನಾನು ಬದುಕಿದ್ದರೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ; ಇಲ್ಲದಿದ್ದರೆ ಜೈ ಹಿಂದ್: ಸಲ್ಮಾನ್ ಖಾನ್!
ಹಿಂದೊಮ್ಮೆ ಬಾಲಿವುಡ್ 'ಬ್ಯಾಡ್ ಬಾಯ್' ಅಪಖ್ಯಾತಿ ಹೊಂದಿದ್ದ ಸಲ್ಮಾನ್ ಖಾನ್, ಅದನ್ನಿನ್ನೂ ಮರೆತಿಲ್ಲ ಎನ್ನಬಹುದು. ಕಾರಣ, ಈ 'ಟೈಗರ್ 3' ಟೀಸರ್‌ನಲ್ಲಿ ಅವರು ಹೇಳಿರುವ ಡೈಲಾನ್‌ನಲ್ಲಿ ಈ ಅಂಶ ಕಾಣುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದ ಕಥೆಯೇನು ಎಂಬುದನ್ನು ಸೂಕ್ಷ್ಮವಾಗಿ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಹೇಳಲಾಗಿದೆ.

ಸಲ್ಮಾನ್ ಖಾನ್ ನಾಯಕತ್ವದ 'ಟೈಗರ್ 3' ಚಿತ್ರದ ಬಹುನಿರೀಕ್ಷಿತ 'ಟೀಸರ್' ಬಿಡುಗಡೆಯಾಗಿದೆ. ರಿಲೀಸ್ ಆಗಿದ್ದಷ್ಟೇ ಅಲ್ಲ, 'ಟೈಗರ್ 3' ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ನಾಯಕಿಯಾಗಿ ನಟಿ ಕತ್ರಿನಾ ಕೈಫ್ ನಟಿಸಿದ್ದು, ಚಿತ್ರವು ದೀಪಾವಳಿ ಟೈಮ್‌ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಮನಿಶ್ ಶರ್ಮಾ ನಿರ್ದೇಶನದಲ್ಲಿ ಟೈಗರ್ 3' ಚಿತ್ರವು ಸಿದ್ಧವಾಗಿದ್ದು, ಚಿತ್ರದ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಮನೆ ಮಾಡಿದೆ. ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಸಲ್ಮಾನಾ ಖಾನ್ ಟೈಗರ್ 3 ಚಿತ್ರವನ್ನು 'ಯಶ್ ರಾಜ್ ಫಿಲ್ಮ್' ಸಂಸ್ಥೆ ನಿರ್ಮಾಣ ಮಾಡಿದ್ದು ಚಿತ್ರಕ್ಕೆ ಸಾಕಷ್ಟು ಬಂಡವಾಳ ಹೂಡಲಾಗಿದೆ. ಚಿತ್ರದ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಅದ್ದೂರಿಯಾಗಿದ್ದು, ಅದನ್ನು ಟೀಸರ್‌ನಲ್ಲಿ ಕೂಡ ಕಾಣಬಹುದು. 'ಯಶ್ ರಾಜ್ ಫಿಲ್ಮ್ಸ್' ಸಂಸ್ಥೆ ನಿರ್ಮಾನದ ಸಿನಿಮಾ ಇದ್ದಾಗಿರುವ ಕಾರಣಕ್ಕೆ, ಈ ಸಂಸ್ಥೆಯ ಸಂಸ್ಥಾಪಕ ಯಶ್ ರಾಜ್ ಜನ್ಮದಿನವೇ (ಸೆಪ್ಟೆಂಬರ್ 27) ಕ್ಕೇ 'ಟೈಗರ್ 3' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.
ಹಿಂದೊಮ್ಮೆ ಬಾಲಿವುಡ್ 'ಬ್ಯಾಡ್ ಬಾಯ್' ಅಪಖ್ಯಾತಿ ಹೊಂದಿದ್ದ ಸಲ್ಮಾನ್ ಖಾನ್, ಅದನ್ನಿನ್ನೂ ಮರೆತಿಲ್ಲ ಎನ್ನಬಹುದು. ಕಾರಣ, ಈ ಟೀಸರ್‌ನಲ್ಲಿ ಅವರು ಹೇಳಿರುವ ಡೈಲಾಗ್ ನಲ್ಲಿ ಈ ಅಂಶ ಕಾಣುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದ ಕಥೆಯೇನು ಎಂಬುದನ್ನು ಸೂಕ್ಷ್ಮವಾಗಿ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಹೇಳಲಾಗಿದೆ ಎಂಬ ಮಾತು ಎಲ್ಲ ಕಡೆಯಲ್ಲಿ ಕೇಳಿ ಬರುತ್ತಿದೆ.
ಸಲ್ಮಾನ್ ಖಾನ್ ಪಾತ್ರ 'ಟೈಗರ್' ತನ್ನ ರೋಲ್ ಏನು ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸ್ವದೇಶದ ವಿರುದ್ಧ ತಿರುಗಿ ಬಿದ್ದಿದೆ ಎನ್ನಲಾಗುತ್ತಿದೆ. ಬದುಕಿದ್ದರೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ; ಇಲ್ಲದಿದ್ದರೆ ಜೈ ಹಿಂದ್ . ಎಲ್ಲಿಯವರೆಗೆ ಟೈಗರ್ ಸಾಯುವುದಿಲ್ಲವೋ ಅಲ್ಲಿಯವರೆಗೂ ಸೋಲೋದಿಲ್ಲ' ಎಂಬ ಡೈಲಾಗ್' ಟೀಸರ್‌ನಲ್ಲಿ ಬಹಳಷ್ಟು ಸೌಂಡ್ ಮಾಡುತ್ತಿದೆ. ಈ ಮಾಸ್ ಡೈಲಾಗ್ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾಸ್ ಎನಿಸಿದ್ದು, ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಒಂದು ಸಲವೂ ಕಟ್ ಮಾಡದೆ ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಪ್ರೇಮ್ ಪುತ್ರಿ; ಫೋಟೋ ವೈರಲ್!
ಈ ಮೋದಲು ಸಲ್ಮಾನ್ ನಟನೆಯ 'ಏಕ್ ಥಾ ಟೈಗರ್' ಹಾಗೂ 'ಟೈಗರ್ ಜಿಂದಾ ಹೈ' ಸಿನಿಮಾಗಳು ತೆರೆಗೆ ಬಂದಿವೆ. ಈ ಟೈಗರ್ 3 ಚಿತ್ರವು ಈ ಮೊದಲು ಬಂದಿದ್ದ ಆ ಚಿತ್ರಗಳ ಮುಂದುವರಿದ ಭಾಗ ಎಂಬ ಮಾತು ಚಾಲ್ತಿಯಲ್ಲಿದೆ. ಟೈಗರ್ 3 ಚಿತ್ರದ ಕಥೆಯನ್ನೇ ಟೀಸರ್‌ನಲ್ಲಿ ಹೇಳಲಾಗಿದ್ದು, ಇದು ಹೊಸ ಪ್ರಯತ್ನ ಎನ್ನಲಾಗುತ್ತಿದೆ. ' 20 ವರ್ಷ ನಾನು ನಟನಾಗಿ ಭಾರತಕ್ಕೆ ಕೆಲಸ ಮಾಡಿದ್ದೇನೆ. ಬದಲಾಗಿ ನಾನು ಏನನ್ನೂ ಕೇಳಿಲ್ಲ. ಆದರೆ ಇಂದು ಕೇಳುತ್ತಿದ್ದೇನೆ. ಟೈಗರ್ ಒಬ್ಬ ದೇಶದ್ರೋಹಿ, ಈ ದೇಶದ ಶತ್ರು ಎನ್ನಲಾಗುತ್ತಿದೆ. 20 ವರ್ಷಗಳ ಸೇವೆಯ ಬಳಿಕವೂ ನಾನು ಭಾರತದಿಂದ ಕ್ಯಾರೆಕ್ಟರ್ ಸರ್ಟಿಫಿಕೆಟ್ ಕೇಳುತ್ತಿದ್ದೇನೆ' ಎಂದಿರುವ ಡೈಲಾಗ್ ಭಾರೀ ಹೈಲೈಟ್ ಆಗುತ್ತಿದೆ.
ನಟಿಯ ಕುಟುಂಬದಿಂದ ಪ್ರೀತಿಸಿದ ನಟನನ್ನು ಕೊಲ್ಲುವ ಬೆದರಿಕೆ, ದೂರವಾದ ಸೂಪರ್‌ಸ್ಟಾರ್ ಜೋಡಿ!
ಟೈಗರ್ 3 ಟೀಸರ್ ತಮಿಳು, ತೆಲುಗು ಹಾಗೂ ಹಿಂದಿ `ಭಾಷೆಗಳಲ್ಲೂ ಬಿಡುಗಡೆ ಆಗಿದ್ದು, ಎಲ್ಲ ಕಡೆ ಭಾರೀ ಸೌಂಡ್ ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟೀಸರ್ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಟೀಸರ್ ದಾಖಲೆ ಬರೆಯುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು. ಇದು ಚಿತ್ರದ ಕುರಿತು ಭಾರೀ ನಿರೀಕ್ಷೆ ಮೂಡಲು ಸಹ ಕಾರಣವಾಗಿದೆ. ದೀಪಾವಳಿ ಟೈಮ್‌ಗೆ ಚಿತ್ರವು ಬಿಡುಗಡೆ ಆಗಲಿದ್ದು, ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಬೇಕಿದೆ!