ಬಾಲಿವುಡ್‌ ನಟ ರಣ್‌ಬೀರ್ ಕಪೂರ್ ತಮ್ಮ ಅನಿಮಲ್ ಸಿನಿಮಾದ ಪ್ರಮೋಷನ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಇಂಡಿಯನ್ ಐಡಲ್ ಸೀಸನ್ 14 ಕಾರ್ಯಕ್ರಮಕ್ಕೆ ಸಹ ನಟಿ ರಶ್ಮಿಕಾ ಜೊತೆ ಆಗಮಿಸಿದ ರಣ್‌ಬೀರ್‌ಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು.

ಬಾಲಿವುಡ್‌ ನಟ ರಣ್‌ಬೀರ್ ಕಪೂರ್ ತಮ್ಮ ಅನಿಮಲ್ ಸಿನಿಮಾದ ಪ್ರಮೋಷನ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಇಂಡಿಯನ್ ಐಡಲ್ ಸೀಸನ್ 14 ಕಾರ್ಯಕ್ರಮಕ್ಕೆ ಸಹ ನಟಿ ರಶ್ಮಿಕಾ ಜೊತೆ ಆಗಮಿಸಿದ ರಣ್‌ಬೀರ್‌ಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು. ಎಂದೂ ಎದುರು ಸಿಕ್ಕಾಗ ಮನ ಬಿಚ್ಚಿ ಮಾತನಾಡದ ಹೆಣ್ಣು ಕೊಟ್ಟ ಮಾವ, ಅಲ್ಲಿ ಅಳಿಯ ರಣ್ಬೀರ್ ಅವರನ್ನು ಹಾಡಿ ಹೊಗಳಿದ್ದರು. ನಟಿ, ಪತ್ನಿ ಆಲಿಯಾ ಭಟ್ ತಂದೆ ಮಹೇಶ್ ಭಟ್ ತನ್ನ ಮುದ್ದಿನ ಮಗಳ ಗಂಡನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು, ಇದನ್ನು ನೋಡಿದ ರಣ್‌ಬೀರ್ ಕೂಡ ಭಾವುಕರಾಗಿದ್ದಾರೆ. 

ಅನಿಮಲ್ ಸಿನಿಮಾ ಪ್ರಮೋಷನ್‌ಗಾಗಿ (Animal Movie Promotion) ಹಿಂದಿಯ ಸಂಗೀತಾ ರಿಯಾಲಿಟಿ ಶೋ ಇಂಡಿಯನ್ ಐಡಲ್‌ಗೆ (Indian Idol) ಬಂದ ರಣ್ಬೀರ್‌ಗೆ ಪತ್ನಿ ಅಲಿಯಾ ಭಟ್ ತಂದೆ ಮಹೇಶ್ ಭಟ್ ವಿಶೇಷ ವೀಡಿಯೋವೊಂದನ್ನು ಕಳುಹಿಸಿದ್ದರು. ಟಿವಿ ಚಾನೆಲ್‌ ಅವರು ಅಲ್ಲಿ ಆ ವೀಡಿಯೋವನ್ನು ರಣ್‌ಬೀರ್‌ಗಾಗಿ ಪ್ರಸಾರ ಮಾಡಿದ್ದು, ಇದರಲ್ಲಿ ಮಹೇಶ್ ಭಟ್ (Mahesh Bhat), ಬಾಲಿವುಡ್ ಸೂಪರ್ ಸ್ಟಾರ್ ಆಗಿರುವ ತಮ್ಮ ಅಳಿಯ ರಣ್‌ಬೀರ್ ಬಗ್ಗೆ ಮಾತನಾಡಿದ್ದಾರೆ. 

ರಶ್ಮಿಕಾ ಮಾತೃಭಾಷೆ ತೆಲುಗಾ? ಕನ್ನಡನಾ? :ಟ್ರೋಲರ್ಸ್‌ಗಳೇ ಇಲ್ಲಿ ನೋಡಿ...

ಆಲಿಯಾ, ನಾನು ಪವಾಡವೆಂದೇ ನಂಬುವ ಆಕೆ, ರಣ್‌ಬೀರ್ ಬಗ್ಗೆ ಅವರೊಬ್ಬ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ಹೇಳುತ್ತಾಳೆ. ಆದರೆ ನಾನು, ರಣ್‌ಬೀರ್‌ ಜಗತ್ತಿನ ಓರ್ವ ಉತ್ತಮ ಅಪ್ಪ ಎಂದು ನಂಬುತ್ತೇನೆ. ಆಕೆ ರಾಹಾಳನ್ನು(Raha) (ರಣ್‌ಬೀರ್ ಹಾಗೂ ಆಲಿಯಾ ಪುತ್ರಿ) ನೋಡುವಾಗ ಆತನ ಕಣ್ಣುಗಳನ್ನು ಆ ಸಮಯದಲ್ಲಿ ನೀವು ನೋಡಬೇಕೆಂದು ಬಯಸುತ್ತೇನೆ. ಆತನ ತಾಯಿ ನೀತು ಕಪೂರ್, ಆ ಸಂದರ್ಭದಲ್ಲಿ ಆತನನ್ನು ನೋಡಿ 'ಈ ರೀತಿ ಮಮತೆ ಪ್ರೀತಿಯನ್ನು ತಾಯಿ ತನ್ನ ಮಗುವಿನ ಮೇಲೆ ತೋರಿಸುತ್ತಾಳೆ. ಆದರೆ ರಣ್‌ಬೀರ್‌ ಇಲ್ಲಿ ಆ ರೀತಿ ತನ್ನ ಮಗಳನ್ನು ಪ್ರೀತಿ ಮಾಡುತ್ತಾನೆ. ' ಎಂದು ಹೇಳುತ್ತಾರೆ. ಇಂತಹ ಅಳಿಯನ್ನು ಪಡೆದಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಮಹೇಶ್ ಭಟ್ ಹೇಳಿಕೊಂಡಿದ್ದಾರೆ. 

ಈ ವೀಡಿಯೋ ನೋಡಿ ರಣ್‌ಬೀರ್ ಕಪೂರ್ (Ranbir Kapoor) ಕೂಡ ಭಾವುಕನಾಗಿದ್ದು, ತನ್ನ ಬಗ್ಗೆ ಅವರು ಈ ರೀತಿ ಮನಬಿಚ್ಚಿ ಮಾತನಾಡಿದ್ದು ಇದೇ ಮೊದಲು, ಅವರು ಯಾವತ್ತೂ ಈ ರೀತಿ ನನ್ನೊಂದಿಗೆ ಮಾತನಾಡಿಯೇ ಇಲ್ಲ, ಈ ವೀಡಿಯೋಗಾಗಿ ಇಂಡಿಯನ್ ಐಡಲ್ ಟೀಂಗೆ ಧನ್ಯವಾದ, ಮಾವನಿಂದ ನನಗೆ ಪಾಸ್‌ಮಾರ್ಕ್ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ರಣ್‌ ಬೀರ್ ಕಪೂರ್‌, ಕಾರ್ಯಕ್ರಮದ ಜಡ್ಜ್‌ ಆಗಿರುವ ಶ್ರೇಯಾ ಘೋಷಲ್, ಕುಮಾರ ಸಾನು, ವಿಶಾಲ್ ದಲ್ದಾನಿ ಜೊತೆ ಕುಳಿತಿದ್ದು, ವೀಡಿಯೋದಲ್ಲಿ ಮಾವ ತನ್ನ ಬಗ್ಗೆ ಮಾತನಾಡಿದ್ದು ನೋಡಿ ಅಚ್ಚರಿಯ ಜೊತೆ ಭಾವುಕರಾಗಿದ್ದಾರೆ ರಣ್ಬೀರ್. 

ರಣಬೀರ್ ಕಪೂರ್ ಜೊತೆ ಲಿಪ್‌ಲಾಕ್‌ ಮಾಡಿದ ರಶ್ಮಿಕಾ, ನಟನಿಂದ ಇಷ್ಟೆಲ್ಲಾ ಹೊಸ ವಿಷ್ಯ ಕಲಿತುಕೊಂಡ್ರಂತೆ!

ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ರಣ್‌ಬೀರ್ ಹಾಗೂ ಆಲಿಯಾ ಮದುವೆಯಾದ 7 ತಿಂಗಳಲ್ಲೇ ತಮ್ಮ ಮೊದಲ ಮಗು ರಾಹಾಗೆ ಪೋಷಕರಾಗಿದ್ದರು.! ಇದುವರೆಗೂ ಮಗುವಿನ ಮುಖವನ್ನು ಸಾರ್ವಜನಿಕರಿಗೆ ತೋರಿಸದ ಈ ಜೋಡಿ, ಇದೇ ತಿಂಗಳಲ್ಲಿ ಮಗುವಿನ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಣ್‌ಬೀರ್ ಕಪೂರ್ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದ್ದು, ಅಪರಾಧ ಕಥಾಹಂದರವನ್ನು ಹೊಂದಿರುವ ಅನಿಮಲ್ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗೆಯಾಗಿ ಸಿನಿಮಾದ ಬಗ್ಗೆ ಹೊಸ ಕ್ರೇಜ್ ಸೃಷ್ಟಿಸಿದೆ. ಬಿಡುಗಡೆಗೂ ಮೊದಲೇ ಒಂದು ಲಕ್ಷದ 11 ಸಾವಿರ ಸಿನಿಮಾ ಟಿಕೆಟ್‌ಗಳು ಸೇಲ್ ಆಗಿವೆ. ಹೀಗಾಗಿ ಅಡ್ವಾನ್ಸಡ್ ಬುಕ್ಕಿಂಗ್‌ನಿಂದಲೇ ಅನಿಮಲ್ ಸಿನಿಮಾ 3.4 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 

Scroll to load tweet…