Asianet Suvarna News Asianet Suvarna News

ರಣಬೀರ್ ಕಪೂರ್ ಜೊತೆ ಲಿಪ್‌ಲಾಕ್‌ ಮಾಡಿದ ರಶ್ಮಿಕಾ, ನಟನಿಂದ ಇಷ್ಟೆಲ್ಲಾ ಹೊಸ ವಿಷ್ಯ ಕಲಿತುಕೊಂಡ್ರಂತೆ!

ರಣಬೀರ್‌ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್‌' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಮೂವಿಯಲ್ಲಿ  ರಣಬೀರ್ ಕಪೂರ್ ಜೊತೆ ರಶ್ಮಿಕಾ ಲಿಪ್‌ಲಾಕ್‌ ಮಾಡಿದ್ದು ವೈರಲ್ ಆಗಿತ್ತು. ಸದ್ಯ ರಣಬೀರ್ ಕಪೂರ್ ಜೊತೆ ಇಂಟಿಮೇಟ್ ಸೀನ್ ಮಾಡಿರುವುದರ ಜೊತೆಗೆ ಅವರಿಂದ ಹಲವಾರು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದಾಗಿ ಈ ನ್ಯಾಷನಲ್ ಕ್ರಶ್‌ ಹೇಳಿಕೊಂಡಿದ್ದಾರೆ. 

Actress Rashmika Mandanna Says She learnt all these new things from Animal Co star Ranbir Kapoor Vin
Author
First Published Nov 24, 2023, 11:22 AM IST

ರಣಬೀರ್‌ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್‌' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಕ್ಯೂರಿಯಾಸಿಟಿ ಹೆಚ್ಚಿದೆ. ಚಿತ್ರದಲ್ಲಿ ರಶ್ಮಿಕಾ ನಟ ರಣಬೀರ್ ಜೊತೆ ಲಿಪ್‌ಲಾಕ್ ಮಾಡಿ ಸುದ್ದಿಯಾಗಿದ್ದರು. ಈಗ ಚಿತ್ರದ ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ನಟಿ 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಇಂಟಿಮೇಟ್ ಸೀನ್ ಮಾಡಿರುವುದರ ಜೊತೆಗೆ ಅವರಿಂದ ಹಲವಾರು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 

'ಅನಿಮಲ್‌' ಚಿತ್ರದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮದ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ, 'ರಣಬೀರ್ ಜೊತೆ ನಟಿಸುವಾಗ ಹಲವಾರು ಹೊಸ ವಿಚಾರಗಳನ್ನು ಕಲಿತುಕೊಂಡೆ. ಯಾವುದೇ ಸೀನ್ ಮಾಡುವ ಮೊದಲು ಅವರು ಮತ್ತೆ ಮತ್ತೆ ರಿಹರ್ಸಲ್ ಮಾಡೋಣವೆಂದು ಹೇಳುತ್ತಿದ್ದರು. ಇದು ಸಾಕಷ್ಟು  ಹೊಸ ವಿಚಾರಗಳನ್ನು ಕಲಿಯಲು ಮತ್ತು ಇಬ್ಬರ ನಡುವಿವ ಕೆಮೆಸ್ಟ್ರಿ ಅತ್ಯುತ್ತಮವಾಗಿ ಬರಲು ಕಾರಣವಾಯಿತು' ಎಂದಿದ್ದಾರೆ. ಮಾತ್ರವಲ್ಲ 'ರಣಬೀರ್‌ ಕಪೂರ್ ನೀಡಿದ ಸಲಹೆಗಳಿಂದಾಗಿಯೇ ಇಬ್ಬರ ನಡುವಿನ ಸೀನ್‌ಗಳು ಅಷ್ಟು ನ್ಯಾಚುರಲ್ ಆಗಿ ಬಂದಿದೆ' ಎಂದು ತಿಳಿಸಿದ್ದಾರೆ.

Rashmika Mandanna: ರಣಬೀರ್‌ ಜೊತೆ ಲಿಪ್‌ ಲಾಕ್‌ ಮಾಡಲು ಪ್ರತ್ಯೇಕ ಚಾರ್ಜ್ ಮಾಡಿದ ಕಿರಿಕ್ ಬೆಡಗಿ, ಸಂಭಾವನೆ ಎಷ್ಟು?

ವೈರಲ್ ಆಗಿತ್ತು ರಣಬೀರ್ ಕಪೂರ್ ಜೊತೆಗಿನ ರಶ್ಮಿಕಾ ಕಿಸ್ಸಿಂಗ್ ಸೀನ್‌
ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅತ್ಯಂತ ಆಸಕ್ತಿದಾಯಕ ಚಿತ್ರ ಅನಿಮಲ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಉತ್ತಮ ಕ್ರೇಜ್ ಪಡೆಯುತ್ತಿದೆ. ಸೌತ್‌ನಲ್ಲಿ ಸದ್ದು ಮಾಡಿದ್ದ 'ಅರ್ಜುನ್ ರೆಡ್ಡಿ' ಸಿನಿಮಾವನ್ನು ಸಂದೀಪ್ ರೆಡ್ಡಿ ನಿರ್ದೇಶಿಸಿದ್ದರು.

'ಅನಿಮಲ್‌' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.  ಹಾಡಿನ ಮೊದಲ ಲಿರಿಕಲ್ ವೀಡಿಯೊದಲ್ಲಿ, ರಣಬೀರ್ ಕಪೂರ್ ಜೊತೆಗಿನ ರಶ್ಮಿಕಾ ಕಿಸ್ಸಿಂಗ್ ಸೀನ್‌ಗಳು ಹೆಚ್ಚು ವೈರಲ್ ಆಗಿತ್ತು. 

ತೆಲುಗಿನ ಕೆಲವೊಂದು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಖತ್‌ ಬೋಲ್ಡ್ ಆಗಿ ನಟಿಸಿದ್ದಾರೆ. ಆದರೆ ಅನಿಮಲ್‌ ಚಿತ್ರದಲ್ಲಿ ಇವೆಲ್ಲಕ್ಕಿಂತಲೂ ಸಖತ್ ಬೋಲ್ಡ್ ಆಗಿ ಲಿಪ್‌ಲಾಕ್ ಮಾಡಿದ್ದಾರೆ. ಸದ್ಯ ಆಕೆಗೂ ಬಾಲಿವುಡ್‌ನ ಗಾಳಿ ಬೀಸಿದಂತಿದೆ ಎಂದು ನೆಟ್ಟಿಗರು ಪಿಸುಗುಟ್ಟುತ್ತಿದ್ದಾರೆ. ಇನ್ನು ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಜೊತೆಗೆ ಅನಿಲ್ ಕಪೂರ್, ಬಾಬಿ ಡಿಯೋಲ್‌ ಮೊದಲಾದವರು ನಟಿಸಿದ್ದಾರೆ.

ಹೊಸ ವರ್ಷಕ್ಕೆ ರಕ್ತಸಿಕ್ತವಾಗಿ ಕಾಣಿಸಿಕೊಂಡ ರಣಬೀರ್ ಕಪೂರ್; ಕಿಲ್ಲರ್ ಲುಕ್ ವೈರಲ್

ರಣಬೀರ್ ಕಪೂರ್ ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ಇದೀಗ ಸಖತ್ ಮಾಸ್ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ರಣಬೀರ್ ಕಪೂರ್ ನಟನೆಯ ಎನಿಮಲ್ ಸಿನಿಮಾದ ಫಸ್ಟ್ ಲುಕ್ ವರ್ಷದ ಆರಂಭದಲ್ಲಿ ರಿವೀಲ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಕ್ತಸಿಕ್ತವಾಗಿದ್ದ ಲುಕ್‌ನಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದರು. ಸಿಗರೇಟ್ ಹಚ್ಚುತ್ತಾ ಬಗಲಲ್ಲಿ ರಕ್ತ ಮೆತ್ತಿದ ಕೊಡಲಿ ಹಿಡಿದು ನಿಂತಿದ್ದಾರೆ. ಭಯ ಹುಟ್ಟಿಸುವ ರಣಬೀರ್ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು.

Follow Us:
Download App:
  • android
  • ios