Asianet Suvarna News Asianet Suvarna News

ರಶ್ಮಿಕಾ ಮಾತೃಭಾಷೆ ತೆಲುಗಾ? ಕನ್ನಡನಾ? :ಟ್ರೋಲರ್ಸ್‌ಗಳೇ ಇಲ್ಲಿ ನೋಡಿ...

ಬಾಲಿವುಡ್ ಸೂಪರ್ ಸ್ಟಾರ್‌ ರಣ್‌ಬೀರ್ ಕಪೂರ್ ಹಾಗೂ  ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಮ್ಮ ಬಹು ನಿರೀಕ್ಷಿತ ಎನಿಮಲ್‌ ಸಿನಿಮಾದ ಪ್ರಮೋಷನ್‌ನಲ್ಲಿದ್ದು, ಈ ವೇಳೆ ನಟಿ ಬಾಲಿವುಡ್ ನಟನಿಗೆ ತೆಲುಗು ಹಾಗೂ ಕನ್ನಡ ಭಾಷೆಯನ್ನು ಹೇಳಿಕೊಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. 

Animal Movie promotion which is Rashmikas mother tongue Telugu or Kannada Trollers Look Here akb
Author
First Published Nov 22, 2023, 4:37 PM IST

ಬಾಲಿವುಡ್ ಸೂಪರ್ ಸ್ಟಾರ್‌ ರಣ್‌ಬೀರ್ ಕಪೂರ್ ಹಾಗೂ  ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಮ್ಮ ಬಹು ನಿರೀಕ್ಷಿತ ಎನಿಮಲ್‌ ಸಿನಿಮಾದ ಪ್ರಮೋಷನ್‌ನಲ್ಲಿದ್ದು, ಈ ವೇಳೆ ನಟಿ ಬಾಲಿವುಡ್ ನಟನಿಗೆ ತೆಲುಗು ಹಾಗೂ ಕನ್ನಡ ಭಾಷೆಯನ್ನು ಹೇಳಿಕೊಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಎನಿಮಲ್ ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರವಿದ್ದು, ಚಿತ್ರತಂಡ ಎಲ್ಲೆಡೆ ಪ್ರಮೋಷನ್‌ನಲ್ಲಿ ತೊಡಗಿದೆ. ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಚಿತ್ರ ತಂಡ ಪ್ರಮೋಷನ್‌ನಲ್ಲಿ ತೊಡಗಿದೆ. 

ಈ ನಡುವೆ ಕನ್ನಡವನ್ನು ಸದಾ ನಿರ್ಲಕ್ಷಿಸುತ್ತಿರುವ ಕಾರಣಕ್ಕೆ ಸದಾ ಟ್ರೋಲ್ ಆಗುವ ಕನ್ನಡ ಮೂಲದ ನ್ಯಾಷನಲ್ ಕ್ರಶ್ ಎಂದೆಲ್ಲಾ ಖ್ಯಾತಿ ಗಳಿಸಿರುವ ರಶ್ಮಿಕಾ ಮಂದಣ್ಣ ಈಗ ರಣ್‌ಬೀರ್ ಕಪೂರ್‌ಗೆ ತೆಲುಗು ಹೇಳಿಕೊಟ್ಟಿದ್ದಾರೆ. ಸಿನಿಮಾ ಪ್ರಮೋಷನ್‌ ವೇಳೆ ಈ ಜೋಡಿ ಪಪಾರಾಜಿಗಳಿಗೆ ಎದುರಾಗಿದ್ದು, ಈ ವೇಳೆ ಫೋಟೋಗ್ರಾಫರ್ ಒಬ್ಬರು ಹೇಗಿದ್ದೀರಿ ಎಂದು ತೆಲುಗಿನಲ್ಲಿ ಮಾತನಡಿಸುತ್ತಾರೆ. ಈ ವೇಳೆ ಚೆನ್ನಾಗಿದ್ದೇನೆ ನೀವು ಹೇಗಿದ್ದಿರಿ ಎಂದು ರಶ್ಮಿಕಾ ಅವರನ್ನು ಮರು ಪ್ರಶ್ನಿಸಿ ಮುಂದೆ ಸಾಗಿದ್ದಾರೆ. ಈ ವೇಳೆ ರಶ್ಮಿಕಾಗೆ ರಣ್ಬೀರ್‌ಗೆ ತೆಲುಗು ಕಲಿಸುವಂತೆ ಫೋಟೋಗ್ರಾಫರ್‌ಗಳು ಕೇಳಿಕೊಂಡಿದ್ದು, ಈ ವೇಳೆ ರಣ್‌ಬೀರ್ ಯಾಕಾಗಿ ಎಂದು ಕೇಳುತ್ತಾರೆ. ಆಗ ಇದು ರಶ್ಮಿಕಾ ಮಾತೃಭಾಷೆ ಎಂದು ಅವರು ಹೇಳುತ್ತಾರೆ. ಆದರೆ ರಶ್ಮಿಕಾ ಮಾತ್ರ ಇದು ತನ್ನ ಮಾತೃಭಾಷೆ ಅಲ್ಲ ಎಂದು ಹೇಳದೇ ಸುಮ್ಮನೇ ಮುಂದೆ ಸಾಗುತ್ತಾರೆ. ಅಲ್ಲದೇ ರಣ್‌ಬೀರ್‌ಗೆ ತೆಲುಗಿನಲ್ಲಿಯೇ ನೀವು ಚೆನ್ನಾಗಿದ್ದೀರಾ (ಮೀರೂ ಬಾಗುನ್ನರಾ) ಎಂದು ಕೇಳುವುದನ್ನು ಹೇಳಿ ಕೊಡುತ್ತಾರೆ. 

ರಿವೀಲ್ ಆಯ್ತು ವಿಜಯ್-ರಶ್ಮಿಕಾ ಪ್ರೇಮ್‌ ಕಹಾನಿ..! ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ನಟ..!

ಇದೇ ವೇಳೆ ಫೋಟೋಗ್ರಾಫರ್ ಒಬ್ಬರು ಕನ್ನಡದಲ್ಲೂ ಏನಾದರೂ ಹೇಳಿ ಎಂದು ಕೇಳಿದ ನಂತರ ಎಲ್ಲರೂ ಚೆನ್ನಾಗಿದ್ದಿರಾ ಎಂದು ರಣ್ಬೀರ್‌ಗೆ ಹೇಳಿ ಕೊಡುತ್ತಾರೆ ಈ ರಶ್ಮಿಕಾ, ಕನ್ನಡದ ಮೇಲಿನ ರಶ್ಮಿಕಾ ನಿರ್ಲಕ್ಷ್ಯ ಇಲ್ಲೂ ಎದ್ದು ಕಾಣುತ್ತಿದೆ. ಬಹುಶಃ ಈ ವೀಡಿಯೋ ಕನ್ನಡ ಟ್ರೋಲರ್ಸ್‌ಗಳನ್ನು ಇನ್ನೂ ತಲುಪಿಲ್ಲ, ಒಂದು ವೇಳೆ ಕನ್ನಡ ಟ್ರೋಲರ್ಸ್ ಪಪಾರಾಜಿಗಳ ಈ ವೀಡಿಯೋ ನೋಡಿದ್ದಲ್ಲಿ ಮತ್ತೆ ರಶ್ಮಿಕಾ ಟ್ರೋಲ್ ಆಗೋದ್ರಲ್ಲಿ ಡೌಟೇ ಇಲ್ಲ.

ಇನ್ನೊಂದೆಡೆ ರಶ್ಮಿಕಾ ಮಂದಣ್ಣ ಅವರ ಸೈನ್ ಮಾರ್ಕ್‌ ಎನಿಸಿರುವ ಲಿಟ್ಲ್‌ ಹಾರ್ಟ್ ಪೋಸೊಂದನ್ನು ರಣ್‌ ಬೀರ್ ಕೂಡ ಪಪಾರಾಜಿಗಳಿಗೆ ಫೋಸ್ ನೀಡುವ ವೇಳೆ ಕೊಟ್ಟಿದ್ದು, ಈ ವೀಡಿಯೋ ಕೂಡ ಸಖತ್ ವೈರಲ್‌ ಆಗಿದ್ದು, ಇವರಿಬ್ಬರನ್ನು ಮಿಸ್ ನ್ಯಾಷನಲ್ ಕ್ರಶ್, ಮಿಸ್ಟರ್ ನ್ಯಾಷನಲ್ ಕ್ರಶ್ ಎಂದು ಪಪಾರಾಜಿ ಇನ್ಸ್ಟಾಗ್ರಾಮ್‌ನಲ್ಲಿ  ಹೇಳಿಕೊಂಡಿದೆ. ಇನ್ನು ರಶ್ಮಿಕಾಗೆ ಕನ್ನಡ ಹೊರತಾಗಿ ದಕ್ಷಿಣ ಭಾರತ ಮಾತ್ರವಲ್ಲದೇ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಈ ವೀಡಿಯೋಗಳಿಗೆ ಸಾವಿರಾರು ಜನ ಹಾರ್ಟ್ ಇಮೋಜಿಗಳ ಕಾಮೆಂಟ್ ಮಾಡಿದ್ದಾರೆ. ಆದರೆ ಕನ್ನಡ ಭಾಷೆಯ ನಿರ್ಲಕ್ಷ್ಯದ ಕಾರಣಕ್ಕಾಗಿ ಸದಾ ಕನ್ನಡಿಗರಿಂದ ದ್ವೇಷಕ್ಕೆ ಒಳಗಾಗುತ್ತಿದ್ದಾರೆ ಈ ನಟಿ

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಪೋಸ್‌ ಕೊಟ್ಟ ಹೀರೋಯಿನ್ಸ್: ಫ್ಯಾನ್ಸ್‌ಗಳಿಗೆ ಅತಿಹೆಚ್ಚು ಇಷ್ಟವಾದ ನಟಿ ಯಾರು!

ಈ ಪ್ರಮೋಷನ್ ವೇಳೆ ರಶ್ಮಿಕಾ ತಿಳಿ ಗುಲಾಬಿ ಬಣ್ಣದ ಎಂಬ್ರಾಯಿಡರಿ ಸಾರಿ ಜೊತೆ ಅದಕ್ಕೊಪ್ಪುವ ನೆಕ್ಲೇಸ್ ಧರಿಸಿದ್ದು, ರಣ್‌ಬೀರ್ ನೀಲಿ ಬಣ್ಣದ ಕೋಟ್ ಪ್ಯಾಂಟ್ ಧರಿಸಿದ್ದರು.  ಬಹು ನಿರೀಕ್ಷಿತ ಈ ಆನಿಮಲ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಹಾಗೂ ಅನಿಲ್ ಕಪೂರ್ ಕೂಡ  ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಅಪರಾಧ ಕಥಾವಸ್ತುವನ್ನು ಹೊಂದಿರುವ ಈ ಸಿನಿಮಾ ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. 

 

 

 

 

Follow Us:
Download App:
  • android
  • ios