Asianet Suvarna News Asianet Suvarna News

ಬೇರೊಬ್ಬಳು ಬಾಲಿವುಡ್ ನಾಯಕಿಗೆ ಕೊಕ್ ಕೊಡಿಸಿ ಅನಿಮಲ್ 'ಗೀತಾಂಜಲಿ'ಯಾದ್ರಾ ರಶ್ಮಿಕಾ ಮಂದಣ್ಣ!

ಅನಿಮಲ್ ಚಿತ್ರವು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​' ಸಿನಿಮಾವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ.

Animal movie first choice is not Rashmika Mandanna says Sandeep Reddy Vanga srb
Author
First Published Dec 24, 2023, 6:12 PM IST

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಜೋಡಿಯ 'ಅನಿಮಲ್' ಚಿತ್ರವು ಬಿಡುಗಡೆಯಾಗಿ ರೂ. 500 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಗೆಲುವು ದಾಖಲಿಸಿದೆ. ಈ ಚಿತ್ರದಲ್ಲಿ ನಟಿ Rashmika Mandanna ಅವರ 'ಗೀತಾಂಜಲಿ' ಪಾತ್ರವು ಬಹಳಷ್ಟು ಮೆಚ್ಚುಗೆ ಗಳಿಸಿದೆ. ಗೀತಾಂಜಲಿ ಪಾತ್ರಕ್ಕೆ ನಟಿ ರಶ್ಮಿಕಾ ಹೇಳಿ ಮಾಡಿಸಿದಷ್ಟು ಹೊಂದಾಣಿಕೆ ಆಗಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಸ್ವತಃ ರಶ್ಮಿಕಾಗೆ ಕೂಡ ಗೀತಾಂಜಲಿ ಪಾತ್ರ ಮಾಡಿರುವ ಬಗ್ಗೆ ಹೆಮ್ಮೆಯಿದೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. 

ಇದೀಗ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ Animal ಚಿತ್ರದ ನಿರ್ದೇಶಕರಾದ ಸಂದೀಪ್​ ರೆಡ್ಡಿ ವಂಗಾ (Sandeep reddy Vanga) ಅವರು ಪಾತ್ರವರ್ಗದ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. 'ಅನಿಮಲ್' ಸಿನಿಮಾ  ಶೂಟಿಂಗ್​ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ರಶ್ಮಿಕಾ ಅಲ್ಲ, ಬೇರೊಬ್ಬ ನಟಿ ನಮ್ಮ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ಅವರಲ್ಲಿ ನನಗೆ ಗೀತಾಂಜಲಿ (Geethanjali) ಪಾತ್ರ ಕಾಣಿಸಲಿಲ್ಲ' ಎಂದಿದ್ದಾರೆ. ಈ ಕಾರಣಕ್ಕೆ ನಾನು ತುಂಬಾ ಯೋಚಿಸಿ ನಟಿಯನ್ನು ಬದಲಾಯಿಸುವ ನಿರ್ಧಾರ ಮಾಡಿದೆ. ಆಗ ಸಿಕ್ಕಿದ್ದು ನಟಿ ರಶ್ಮಿಕಾ ಮಂದಣ್ಣ' ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗಾ. 

ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!

ಮೂಲ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ ಎನಿಸಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಬೇಡಿಕೆಯ ಕಲಾವಿದೆಯಾಗಿ ಬೆಳೆದಿದ್ದಾರೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಒಂದಕ್ಕಿಂತ ಮತ್ತೊಂದು ಉತ್ತಮವಾದ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ. ಇದರಿಂದ ಅವರ ಖ್ಯಾತಿ ದಿನದಿನಕ್ಕೂ ಹೆಚ್ಚಾಗಿದೆ. ಇತ್ತೀಚೆಗೆ ತೆರೆಕಂಡ 'ಅನಿಮಲ್​' (Animal) ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 

ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್‌ ರಿಯಾಕ್ಷನ್ ನೋಡಿ!

ಅನಿಮಲ್ ಚಿತ್ರವು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್​' ಸಿನಿಮಾವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. 'ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಮತ್ತು ಸಂಭಾಷಣೆಗಳು ಈ ಚಿತ್ರದಲ್ಲಿ ಇವೆ' ಎಂಬುದು ಹಲವರ ವಾದ. ವಾದವಿವಾದಗಳು ಏನೇ ಇದ್ದರೂ, ಸಿನಿಮಾದ ಗಳಿಕೆಗೆ ತೊಂದರೆ ಆಗಿಲ್ಲ. ಈ ಸಿನಿಮಾದ ಪಾತ್ರವರ್ಗದ ಆಯ್ಕೆ ಬಗ್ಗೆ ಸಂದೀಪ್​ ರೆಡ್ಡಿ ವಂಗಾ ಅವರು ಈಗ ಮಾಹಿತಿ ಹಂಚಿಕೊಂಡಿದ್ದಾರೆ.

ಕೈ ಖಾಲಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ; ದಿ ಕಾಶ್ಮೀರ್ ಫೈಲ್ಸ್‌ ವಿವಾದಕ್ಕೆ ಸಿಕ್ಕ ಬಹುಮಾನವೇ?

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್​ ರೆಡ್ಡಿ ವಂಗಾ ಅವರು ನಟಿ ಪರಿಣೀತಿ ಚೋಪ್ರಾ (Parineeti Chopra) ಬಗ್ಗೆ ಮಾತನಾಡಿದ್ದಾರೆ. 'ಅನಿಮಲ್​ ಸಿನಿಮಾದ ಶೂಟಿಂಗ್​ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ಪರಿಣೀತಿ ಚೋಪ್ರಾ ಈ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ತಪ್ಪು ನನ್ನದೇ. ಅದಕ್ಕಾಗಿ ಅವರಿಗೆ ನಾನು ಕ್ಷಮೆ ಕೇಳಿದ್ದೇನೆ. ಅವರಲ್ಲಿ ನನಗೆ ಗೀತಾಂಜಲಿ ಪಾತ್ರ ಕಾಣಿಸಲಿಲ್ಲ. ಕೆಲವರಿಗೆ ಕೆಲವು ಪಾತ್ರಗಳು ಸೂಕ್ತ ಆಗುವುದಿಲ್ಲ' ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗಾ. 

ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..!

'ನನಗೆ ಆಡಿಷನ್​ ಮಾಡುವುದರಲ್ಲಿ ನಂಬಿಕೆ ಇಲ್ಲ. ಆ ಕ್ಷಣಕ್ಕೆ ನನಗೆ ಅನಿಸಿದ್ದನ್ನು ಮಾಡುತ್ತೇನೆ. ಮೊದಲಿಂದಲೂ ನನಗೆ ಪರಿಣೀತ ಚೋಪ್ರಾ ನಟನೆ ಇಷ್ಟ ಆಗಿತ್ತು. ಅವರ ಜೊತೆ ಸಿನಿಮಾ ಮಾಡಲು ನಾನು ಬಯಸಿದ್ದೆ. 'ಕಬೀರ್​ ಸಿಂಗ್​' ಸಿನಿಮಾಗೂ ಅವರೇ ನಾಯಕಿ ಆಗಬೇಕಿತ್ತು, ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ನಾನು ಅವರ ಬಳಿ ಕ್ಷಮೆ ಕೇಳಿದೆ. 'ಸಿನಿಮಾಗಿಂತಲೂ ದೊಡ್ಡದು ಯಾವುದೂ ಇಲ್ಲ, ಹಾಗಾಗಿ ನಾನು ನನ್ನ ಅನಿಮಲ್​ ಚಿತ್ರಕ್ಕೆ ಬೇರೆ ನಟಿಯನ್ನುಆಯ್ಕೆ ಮಾಡಿಕೊಳ್ಳುತ್ತೇನೆ' ಎಂದೆ. ಅವರಿಗೆ ಆಗ ಬೇಸರ ಆಯಿತು, ಆದರೆ ಆಮೇಲೆ ನನ್ನನ್ನು ಅರ್ಥ ಮಾಡಿಕೊಂಡರು' ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗಾ.

Follow Us:
Download App:
  • android
  • ios