Asianet Suvarna News Asianet Suvarna News

ಕೈ ಖಾಲಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ; ದಿ ಕಾಶ್ಮೀರ್ ಫೈಲ್ಸ್‌ ವಿವಾದಕ್ಕೆ ಸಿಕ್ಕ ಬಹುಮಾನವೇ?

ಹಿಂದು-ಮುಸ್ಲಿಂ ಪರ-ವಿರೋಧದ ಅಲೆಯ ನಡುವೆ ನಟಿ ಸಾಯಿಉ ಪಲ್ಲವಿ 'ಗೋ ಕಳ್ಳರು ಎಂದು ಯಾವುದೋ ಒಂದು ಸಮುದಾಯದವರನ್ನು ಹಿಡಿದು ಹೊಡೆಯುವುದೂ ಕೂಡ ಭಯೋತ್ಪಾದನೆಯೇ ಆಗುತ್ತದೆ' ಎಂದು ಹೇಳಿಕೆ ಕೊಟ್ಟಿದ್ದರು.

Malayalam actress Sai Pallavi did not act any new projects now after Gargi srb
Author
First Published Dec 24, 2023, 3:57 PM IST

ಮಲಯಾಳಂ ಮೂಲದ ಬಹುಭಾಷಾ ನಟಿ ಸಾಯಿ ಪಲ್ಲವಿ ನೇಪಥ್ಯಕ್ಕೆ ಸರಿದಿದ್ದಾರೆ ಎನ್ನಬಹುದೇ ಎಂಬಂತಾಗಿದೆ. ಗಾರ್ಗಿ ಸಿನಿಮಾ ಬಳಿಕ ನಟಿ ಸಾಯಿ ಪಲ್ಲವಿ ನಟಿಸಿರುವ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹೊಸ ಚಿತ್ರದ ಘೋಷಣೆ ಕೂಡ ಆಗಿಲ್ಲ. ಗಾರ್ಗಿ ಕೂಡ ಸಕ್ಸಸ್ ದಾಖಲಿಸಲಿಲ್ಲ. ಈ ಎಲ್ಲ ಕಾರಣಗಳಿಂದ ನಟಿ ಸಾಯಿ ಪಲ್ಲವಿ ಮತ್ತೆ ನಟಿಸುವುದಿಲ್ಲವೇ? ಮದುವೆ ಆಗಲಿದ್ದಾರಾ? ಯಾಕೆ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಗಿದೆ. ಅದಕ್ಕೆ ನಿಖರ ಉತ್ತರ ಸಾಯಿ ಪಲ್ಲವಿ ಬಳಿ ಮಾತ್ರ ಇರಬಹುದು. 

ಆದರೆ, ಯಾಕೆ ಸಾಯಿ ಪಲ್ಲವಿ ಸಿನಿಮಾ ಕೆರಿಯರ್ ಹೀಗಾಯ್ತು ಎಂದು ವಿಚಾರಿಸ ಹೊರಟರೆ ಅದಕ್ಕೆ ಆಕೆಯೇ ಕಾರಣ ಎನ್ನಬೇಕಾಗುತ್ತದೆ. 'ದಿ ಕಾಶ್ಮೀರಿ ಫೈಲ್ಸ್' ಚಿತ್ರ ಬಿಡುಗಡೆಯಾಗಿ ಈ ಚಿತ್ರದ ಬಗ್ಗೆ ಲೈಫ್ಟಿಸ್ಟ್‌ ಮತ್ತು ರೈಟಿಸ್ಟ್‌ ವಿಂಗ್ಸ್‌ಗಳ ಮಧ್ಯೆ ಜೋರಾಗಿ ವಾದ-ವಿವಾದಗಳು ನಡೆಯುತ್ತಿರುವ ಹೊತ್ತಲ್ಲಿ ನಟಿ ಸಾಯಿ ಪಲ್ಲವಿ ಹೇಳರುವ ಅದೊಂದು ಮಾತು ಅವರ ವೃತ್ತಿ ಜೀವನ ಮುಗಿಸುವ ಹಂತಕ್ಕೆ ಹೋಯ್ತಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಹಾಗಿದ್ದರೆ ಅಂದು ನಟಿ ಸಾಯಿ ಪಲ್ಲವಿ ಹೇಳಿದ್ದೇನು? 

ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್‌ ರಿಯಾಕ್ಷನ್ ನೋಡಿ!

ಹಿಂದು-ಮುಸ್ಲಿಂ ಪರ-ವಿರೋಧದ ಅಲೆಯ ನಡುವೆ ನಟಿ ಸಾಯಿಉ ಪಲ್ಲವಿ 'ಗೋ ಕಳ್ಳರು ಎಂದು ಯಾವುದೋ ಒಂದು ಸಮುದಾಯದವರನ್ನು ಹಿಡಿದು ಹೊಡೆಯುವುದೂ ಕೂಡ ಭಯೋತ್ಪಾದನೆಯೇ ಆಗುತ್ತದೆ' ಎಂದು ಹೇಳಿಕೆ ಕೊಟ್ಟಿದ್ದರು. ಏನೂ ಅಪರಾಧ ಮಾಡದ ಲಕ್ಷಾಂತರ ಹಿಂದೂ ಪಂಡಿತರನ್ನು ಹೊಡೆದೋಡಿಸಿದ ಘಟನೆಯನ್ನು ಗೋಕಳ್ಳರೊಂದಿಗೆ ಹೋಲಿಕೆ ಮಾಡಿ ನ್ಯಾಯಾಧೀಶರಂತೆ ಮಾತನಾಡಿದ್ದ ನಟಿ ಸಾಯಿ ಪಲ್ಲವಿ ಬಗ್ಗೆ ಅಂದು ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಘಟನೆ ಪರಿಣಾಮ ಎಂಬಂತೆ ಇಂದು ಸಾಯಿ ಪಲ್ಲವಿ ಸಿನಿಮಾ ಇಲ್ಲದೇ ಖಾಲಿ ಕೈಯಲ್ಲಿ ಕುಳಿತುಕೊಳ್ಳುವಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. 

ಸಲಾರ್ ಮುಂದೆ ಮಂಡಿಯೂರಿದ ಶಾರುಖ್ ಖಾನ್ ಡಂಕಿ; ಸೌತ್ ಸಿನಿಮಾ ಹವಾ ನೋಡಿ ಕಂಗೆಟ್ಟ ಬಾಲಿವುಡ್!

ಕಾರಣ, ಅದೋ ಇದೋ ಬೇರೇನೋ ಗೊತ್ತಿಲ್ಲ, ಆದರೆ ನಟಿ ಸಾಯಿ ಪಲ್ಲವಿ ಅಕೌಂಟ್‌ನಲ್ಲಿ ಸದ್ಯ ಯಾವುದೇ ಸಿನಿಮಾ ಇಲ್ಲ ಎಂಬ ಮಾತಂತೂ ಸತ್ಯ ಎನ್ನಬಹುದು. ಅವರೇ ಸಹಿ ಹಾಕುತ್ತಿಲ್ಲವೋ ಅಥವಾ ಅವರಿಗೆ ಯಾರೂ ಪ್ರಾಜೆಕ್ಟ್‌ ಆಫರ್ ಮಾಡುತ್ತಿಲ್ಲವೋ, ಒಟ್ಟಿನಲ್ಲಿ ನಟಿ ಸಾಯಿ ಪಲ್ಲವಿ ಅಭಿಮಾನಿಗಳು ಕಾಯುತ್ತಿರುವುದಷ್ಟೇ ಬಂತು, ಸದ್ಯಕ್ಕೆ ಆಕೆಯ ಸಿನಿಮಾಗಳಂತೂ ಬರುತ್ತಿಲ್ಲ. ಮುಂದೇನು ಎಂಬುದನ್ನು ಕಾದು ನೋಡಬೇಕಷ್ಟೇ!

ಮುಂಬೈನಲ್ಲಿ ಹೊಟೆಲ್ ವೇಟರ್ ಆಗಿದ್ದವನ ಮಗ ಬಾಲಿವುಡ್ ನಿರ್ಮಾಪಕ, ಸ್ಟಾರ್ ಡೈರೆಕ್ಟರ್!

Follow Us:
Download App:
  • android
  • ios