Asianet Suvarna News Asianet Suvarna News

ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..!

ನಟಿ ಮಾಲಾಶ್ರೀ ಮಂಡ್ಯಕ್ಕೆ ಯಾಕೆ ಹೋಗಿದ್ದರು ಎಂದರೆ, ಮಾಲಾಶ್ರೀ ಮಗಳು ಆರಾಧನಾ ಈ ಕಾಟೇರ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಆರಾಧನಾ ಅವರಿಗೆ ಇದು ಮೊಟ್ಟಮೊದಲ ಸಿನಿಮಾ. 

I feel jealous for Sumalatha with Ambareesh in my movie shooting spot says dream girl malashri srb
Author
First Published Dec 24, 2023, 4:48 PM IST

ಕನಸಿನ ರಾಣಿ ಖ್ಯಾತಿಯ ನಟಿ ಮಾಲಾಶ್ರೀ ಮಂಡ್ಯ ಈವೆಂಟ್‌ನಲ್ಲಿ ಮಾತನಾಡಿದ್ದಾರೆ. 'ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ನಂಗೆ ಹೊಟ್ಟೆಕಿಚ್ಚು ಆಗ್ತಿತ್ತು' ಎಂದಿದ್ದಾರೆ ನಟಿ ಮಾಲಾಶ್ರೀ. ಯಾಕೆ ಹಾಗಂದ್ರು, ಯಾವಾಗ ಅಂದ್ರು ಎಂದು ನೋಡಿದ್ರೆ ಅದು ಮಂಡ್ಯ ಈವೆಂಟ್‌ನಲ್ಲಿ, ಸ್ವತಃ ಸುಮಲತಾ ಎದುರಿನಲ್ಲೇ ಮಾಲಾಸ್ರೀ ಮೇಡಂ ಹೀಗೆಂದಿದ್ದಾರೆ. ಎಷ್ಟೇ ಆದರೂ ಮಾಲಾಶ್ರೀ 'ಕಿರಣ್ ಬೇಡಿ' ಅವರಂತೆ ಧೈರ್ಯವಂತೆ ಅಂತೀರಲ್ವಾ? 

ಹೌದು, ನಟಿ ಮಾಲಾಶ್ರೀ 'ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ನಂಗೆ ಹೊಟ್ಟೆಕಿಚ್ಚು ಆಗ್ತಿತ್ತು' ಎಂದಿದ್ದಾರೆ. ನಿನ್ನೆ ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರದ ಪ್ರೀ-ಈವೆಂಟ್ ಆಯೋಜಿಸಲಾಗಿತ್ತು. ಅದೆಷ್ಟೋ ಸಾವಿರ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದ ಜನಸಾಗರದ ಮಧ್ಯೆ ನಟ ದರ್ಶನ್ ಅಭಿನಯದ ಕಾಟೇರ ಚಿತ್ರದ ಕಾರ್ಯಕ್ರಮ ಬಿಡುಗಡೆಗೂ ಮುನ್ನ ಅದ್ದೂರಿಯಾಗಿ ನಡೆಯಿತು. ಈ ಫಂಕ್ಷನ್‌ನಲ್ಲಿ ನಟಿ ಮಾಲಾಶ್ರೀ, ಸುಮಲತಾ, ರಾಕ್‌ಲೈನ್ ವೆಂಕಟೇಶ್ ಮೊದಲಾವರು ಬಂದಿದ್ದರು. 

ಕೈ ಖಾಲಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ; ದಿ ಕಾಶ್ಮೀರ್ ಫೈಲ್ಸ್‌ ವಿವಾದಕ್ಕೆ ಸಿಕ್ಕ ಬಹುಮಾನವೇ?

ನಟಿ ಮಾಲಾಶ್ರೀ ಅಲ್ಲಿಗೆ ಯಾಕೆ ಹೋಗಿದ್ದರು ಎಂದರೆ, ಮಾಲಾಶ್ರೀ ಮಗಳು ಆರಾಧನಾ ಈ ಕಾಟೇರ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. Aradhana ಅವರಿಗೆ ಇದು ಮೊಟ್ಟಮೊದಲ ಸಿನಿಮಾ. ಸಹಜವಾಗಿಯೇ ಮಗಳ ಸಿನಿಮಾದ ಪ್ರಮೋಶನ್‌ಗೆ ಆರಾಧನಾ ಅಮ್ಮ ಮಾಲಾಶ್ರೀ ಹೋಗಿದ್ದರು. ವೇದಿಕೆಯ ಮೇಲೆ ಮಾತನಾಡಿದ Malashri, ಕಾಟೇರ ಸಿನಿಮಾ, ಮಗಳು ಆರಾಧನಾ, ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಎಲ್ಲರ ಬಗ್ಗೆ ಮಾತನಾಡಿದ್ದಾರೆ, ಜತೆಗೆ, ಮಂಡ್ಯಕ್ಕೆ ಹೋದವರು ಅಂಬರೀಷ್‌ ಅವರನ್ನು ಬಿಡುಲಾಗುತ್ತದೆಯೇ? 

ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್‌ ರಿಯಾಕ್ಷನ್ ನೋಡಿ!

ಮಾಲಾಶ್ರೀ ಅವರು ಮಂಡ್ಯದಲ್ಲಿ ಅಂಬರೀಷ್ ನೆನೆದು ಮಾತನಾಡುತ್ತ, 'ನಾನು ಅಂಬರೀಷ್ ಅವರ ಜತೆ ಹೃದಯ ಹಾಡಿತು ಸಿನಿಮಾದ ಶೂಟಿಂಂಗ್‌ನಲ್ಲಿ ಇದ್ದ ಸಮಯವದು. ಅಲ್ಲಿಗೆ ಅಂಬರೀಷ್ ಜತೆ ಅವರ ಹೆಂಡತಿ Sumalatha ಬಂದಿದ್ದರು. ನಾನು ಆ ಚಿತ್ರದ ಹೀರೋಯಿನ್ ಆಗಿದ್ದರೂ Ambareesh ಜತೆ ನಿಂತಿದ್ದ ಸುಮಲತಾ ಅವರೇ ನನಗೆ ಚೆನ್ನಾಗಿ ಕಾಣಿಸುತ್ತಿದ್ದರು. ಅವರಿಬ್ಬರ ಜೋಡಿ ನೋಡಿ ನನಗೆ ಹೊಟ್ಟೆಕಿಚ್ಚು ಮೂಡುತ್ತಿತ್ತು' ಎಂದು ಅಭಿಮಾನದಿಂದ ಹೇಳಿದ್ದಾರೆ. ಅಲ್ಲಿಯೇ ಇದ್ದ ಸುಮಲತಾ ಮಾಲಾಶ್ರೀ ಮಾತಿಗೆ ಮುಗುಳ್ನಕ್ಕು ಕೆನ್ನೆ ಕೆಂಪಗಾಗಿಸಿಕೊಂಡಿದ್ದಾರೆ. 

ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!

Follow Us:
Download App:
  • android
  • ios