Asianet Suvarna News Asianet Suvarna News

ಅರೆರೆ... ಅನಿಲ್ ಕಪೂರ್‌ಗೆ ಇದೇನಾಯ್ತು? ಎಲ್ಲಾ ಪೋಸ್ಟ್‌ ಡಿಲೀಟ್‌- ಇದೇನಿದು ಡ್ಯಾಡ್‌ ಎಂದ ಸೋನಂ!

ಬಾಲಿವುಡ್‌ ನಟ ಅನಿಲ್ ಕಪೂರ್‌ಗೆ ಇದೇನಾಯ್ತು? ಎಲ್ಲಾ ಪೋಸ್ಟ್‌ ಡಿಲೀಟ್‌- ಇದೇನಿದು ಡ್ಯಾಡ್‌ ಎಂದ ಸೋನಂ. ಆಗಿದ್ದೇನು? 
 

Anil Kapoor deletes all his Instagram posts, or Sonam Kapoor reacts suc
Author
First Published Oct 20, 2023, 9:03 PM IST

ಬಾಲಿವುಡ್ ನಟ ಅನಿಲ್ ಕಪೂರ್ ಶುಕ್ರವಾರ ತಮ್ಮ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಅಳಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಫೋಟೋ ಮತ್ತು ವೀಡಿಯೋ ಹಂಚಿಕೆ ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟ, ಆಗಾಗ್ಗೆ ತಮ್ಮ ಫಾಲೋವರ್ಸ್‌ ಮತ್ತು  ಅಭಿಮಾನಿಗಳನ್ನು ತಮ್ಮ ವೈಯಕ್ತಿಕ ಜೀವನದ ಮಾಹಿತಿ ನೀಡುತ್ತಿರುತ್ತಾರೆ.  ತಮ್ಮ ಕೆಲಸಕ್ಕೆ ಸಂಬಂಧಿಸಿದ ನವೀಕರಣಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಏಕಾಏಕಿ  ನಟ ತಮ್ಮ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನೋ ಪೋಸ್ಟ್‌ ಎಂದು ಕಾಣಿಸುತ್ತಿದೆ. ವಾಸ್ತವವಾಗಿ, ಅವರ  ಮಗಳು ಸೋನಮ್ ಕಪೂರ್ ಅವರು ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದಾಗಲೇ ವಿಷಯ ಬೆಳಕಿಗೆ ಬಂದಿದೆ.

ತಮ್ಮ ತಂದೆಯ ಇನ್‌ಸ್ಟಾಗ್ರಾಮ್‌ನ ಎಲ್ಲಾ ಪೋಸ್ಟ್‌ಗಳು ಡಿಲೀಟ್‌ ಮಾಡಿರುವ ಬಗ್ಗೆ ಅಚ್ಚರಿಗೊಂಡಿದ್ದಾರೆ. ಅದರ ಸ್ಕ್ರೀನ್‌ಷಾಟ್‌ ಅನ್ನು ಸೋನಂ ಕಪೂರ್‌ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್‌ ಮಾಡಿಕೊಂಡಿದ್ದು, Dad....? ಎಂದು ಇದೇನಿದು ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ.  ಕೆಲವು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದರೆ, ಕೆಲವರು ಖಾತೆ ಹ್ಯಾಕ್ ಮಾಡಿರಬಹುದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇವೆಲ್ಲಾ ಪ್ರಚಾರದ ಗಿಮಿಕ್ ಎಂದು ಹೇಳುತ್ತಿದ್ದಾರೆ.  ಸ್ವಲ್ಪ ಸಮಯದೊಳಗೆ, '#WhereIsAnilKapoor' ಸಹ X ನಲ್ಲಿ ಟ್ರೆಂಡಿಂಗ್ ಪ್ರಾರಂಭವಾಗಿದೆ.

ಐಶ್ವರ್ಯಾರನ್ನು ಜಯಾ ಹೊಗಳ್ತಿದ್ದಂತೆಯೇ ನಾದಿನಿ ಶ್ವೇತಾ ಬಚ್ಚನ್‌ಗೆ ಇದೇನಾಯ್ತು? ಹಳೆಯ ವಿಡಿಯೋ ವೈರಲ್‌!
 
ಇನ್ನು ಅನಿಲ್‌ ಕಪೂರ್‌ ಅವರ ಕೆಲಸದ ಬಗ್ಗೆ ಹೇಳುವುದಾದರೆ ಅವರು,  ಮುಂದಿನ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಡಿಸೆಂಬರ್ 2023 ರಲ್ಲಿ ದೊಡ್ಡ ಪರದೆಯ ಮೇಲೆ ಬರಲು ಸಿದ್ಧವಾಗಿದೆ. ಇದರ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅವರೊಂದಿಗೆ ಫೈಟರ್‌ನಲ್ಲಿಯೂ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 2024ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಅನಿಲ್ ಕಪೂರ್ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಹಲವಾರು ದಶಕಗಳ ಕಾಲ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ "ಮಿಸ್ಟರ್ ಇಂಡಿಯಾ, ತೇಜಾಬ್, ಬೀಟಾ, ರಾಮ್ ಲಖನ್, ತಾಲ್, ಸ್ಲಮ್‌ಡಾಗ್ ಮಿಲಿಯನೇರ್, ನಾಯಕ್, ಮತ್ತು ದಿಲ್ ದಢಕನೇ ದೋ ಸೇರಿವೆ.

ಇತ್ತೀಚೆಗೆ ಅನಿಲ್ ಕಪೂರ್ ಅವರಿಗೆ ಹೈಕೋರ್ಟ್‌  ವ್ಯಕ್ತಿತ್ವದ ಹಕ್ಕುಗಳಿಗೆ ರಕ್ಷಣೆ ನೀಡಿತ್ತು.  ನಟ ತಮ್ಮ ಹೆಸರು, ಧ್ವನಿ, ಸಹಿ ಮತ್ತು ಚಿತ್ರದ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾಣಿಜ್ಯ ಉದ್ದೇಶಗಳಿಗಾಗಿ   ವೇದಿಕೆಗಳು ಅನಿಲ್ ಕಪೂರ್ ಅವರ ಹೆಸರು, ಧ್ವನಿ, ಚಿತ್ರ ಅಥವಾ ಸಂಭಾಷಣೆಯನ್ನು ಕಾನೂನುಬಾಹಿರವಾಗಿ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಕೋರ್ಟ್‌ ಆದೇಶಿಸಿತ್ತು. ಇವರ ಮಿಸ್ಟರ್‌ ಇಂಡಿಯಾ ಚಿತ್ರದ ಧ್ವನಿ ಹಾಗೂ ಇವರ ಅತಿ ಪ್ರಸಿದ್ಧ ಝಕಾಸ್‌ ಎನ್ನುವ ಡೈಲಾಗ್‌ ಬಳಕೆ ಮಾಡಿಕೊಂಡು ಅನೇಕರು ತಮ್ಮ ಧ್ವನಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅನಿಲ್‌ಕಪೂರ್‌ ಕೋರ್ಟ್‌‌ಗೆ ತಿಳಿಸಿದ್ದರು. 

ಕನ್ನಡದಲ್ಲಿ ನಟಿಸಿರೋ ನಟಿಗೆ ಹಿಂದಿ ಬಿಗ್‌ಬಾಸ್‌ನಲ್ಲಿ ಈ ಪರಿ ದುಡ್ಡಾ? ಹೆಚ್ಚು ಸಂಭಾವನೆ ಪಡೆಯೋದು ಇವ್ರೇ...
 

Follow Us:
Download App:
  • android
  • ios