Asianet Suvarna News Asianet Suvarna News

ಹಾವೆಂದರೆ ನನಗೆ ಸ್ವರ್ಗ ಎಂದ ನಟಿ ಅನನ್ಯಾ ಪಾಂಡೆ ಹೆಬ್ಬಾವಿನ ಜೊತೆ ಪೋಸ್​: ಫ್ಯಾನ್ಸ್​ ಶಾಕ್​!

ಹಾವೆಂದರೆ ನನಗೆ ಸ್ವರ್ಗ:  ಬಾಲಿವುಡ್​ ಬ್ಯೂಟಿ ಅನನ್ಯಾ ಪಾಂಡೆ ಫೋಟೋ ನೋಡಿ ಫ್ಯಾನ್ಸ್​ ಶಾಕ್​! 
 

Ananya Pandays Definition Of Heaven Is Puppies And Snakes fans shock suc
Author
First Published Nov 19, 2023, 6:01 PM IST

ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು.  ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್​ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ.  ಕರಣ್ ಜೋಹರ್ ಸೇರಿದಂತೆ ಹಲವು ಗಾಡ್​ಫಾದರ್​ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. ಇವರು ಸದ್ಯ ಅವರು ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಸಂಬಂಧದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.   ಇಬ್ಬರೂ ಇತ್ತೀಚೆಗೆ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಆದಿತ್ಯ ಮತ್ತು ಅನನ್ಯಾ ಇಬ್ಬರೂ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರು. ಇದರ  ವಿಡಿಯೋ  ಹೊರಬಿದ್ದಿದ್ದು, ಇಬ್ಬರೂ  ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ.  ಈಚೆಗೆ ಇವರು  ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ನಟಿಸಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯ ಅದೃಷ್ಟ ಪರೀಕ್ಷೆಯಲ್ಲೂ ಅನನ್ಯಾ ಪಾಂಡೆ ಫೇಲ್ ಆಗಿದ್ದು, ಬೋಲ್ಡ್​ ಫೋಟೋಶೂಟ್​ ಮಾಡಿಸುತ್ತಾ, ಫೇಮಸ್​ ಆಗುತ್ತಿದ್ದಾರೆ.

ಮೊನ್ನೆಯಷ್ಟೇ  ಅನನ್ಯಾ ಹೊಸದೊಂದು ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ. ದೀಪಾವಳಿ ಅಥವಾ ಮಹಾರಾಷ್ಟ್ರದಲ್ಲಿ ಕರೆಯಲಾಗುವ ದಂತೇರಸ್ ಹಬ್ಬಕ್ಕೆ ಮನೆಯ ಗೃಹ ಪ್ರವೇಶವನ್ನೂ ಮಾಡಿದ್ದಾರೆ. ನನ್ನ ಹೊಸ ಮನೆ. ನನ್ನ ಹೊಸ ಪ್ರಾರಂಭಕ್ಕೆ ನಿಮ್ಮ ಪ್ರೀತಿ ಮತ್ತು ಧನಾತ್ಮಕ ಹಾರೈಕೆಗಳು ಬೇಕು. ಎಲ್ಲರಿಗೂ ದಂತೇರಸ್ ಹಬ್ಬದ ಶುಭಾಶಯಗಳು ಎನ್ನುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಮನೆಯ ಪರಿಚಯ ಮಾಡಿಸಿದ್ದರು. 

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ನಟಿ, ಆಗಾಗ್ಗೆ ತಮ್ಮ ಬೋಲ್ಡ್​ ಫೋಟೋಶೂಟ್​ಗಳನ್ನು ಶೇರ್​ ಮಾಡಿ ಹಲವು ಬಾರಿ ಟ್ರೋಲ್​ಗೆ ಒಳಗಾಗುವುದೂ ಇದೆ. ಅದೇನೇ ಇದ್ದರೂ, ಇದೀಗ ಫ್ಯಾನ್ಸ್​ ಶಾಕ್​ ಆಗುವಂಥ ಫೋಟೋ ಶೇರ್​ ಮಾಡಿದ್ದಾರೆ.  ಹಾವಿನ ಜೊತೆ ಫೋಟೋಗೆ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ತಮಗೆ ಹಾವು ಮತ್ತು ನಾಯಿ ಮರಿಗಳೆಂದರೆ ತುಂಬಾ ಇಷ್ಟ ಎಂದು ಬರೆದುಕೊಂಡಿರುವ ನಟಿ ಯಾವುದೇ ಭಯವಿಲ್ಲದೇ ಹಾವುಗಳೊಂದಿಗೆ ಪೋಸ್​ ಕೊಟ್ಟಿದ್ದಾರೆ. ಸ್ವರ್ಗದ ನನ್ನ ವ್ಯಾಖ್ಯಾನ ಎಂದರೆ ನಾಯಿಮರಿಗಳು ಮತ್ತು ಹಾವುಗಳು .. ನನ್ನ ಎರಡು ನೆಚ್ಚಿನ ಪ್ರಾಣಿಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್​, ಸ್ವಲ್ಪ ಹೆಚ್ಚೂ ಕಮ್ಮಿ ಆದ್ರೂ ಹಾವುಗಳಿಂದ ನೀವೇ ಸ್ವರ್ಗಕ್ಕೆ ಹೋಗಬೇಕಾಗತ್ತೆ ಎಚ್ಚರ ಎಂದಿದ್ದಾರೆ. 

ಅಂದಹಾಗೆ ಅನನ್ಯಾ ಅವರು, ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಅನನ್ಯಾ ಪಾಂಡೆ ಬಾಲಿವುಡ್​ ಪ್ರವೇಶಿಸಿದವರು.  ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನನ್ಯಾ ನಟಿಸಿರುವ ಆರು ಸಿನಿಮಾಗಳು ಈ ವರೆಗೆ ಬಿಡುಗಡೆ ಆಗಿವೆ. ಅದರಲ್ಲಿ ತೆಲುಗಿನ ‘ಲೈಗರ್’ ಸಹ ಒಂದು. ಪ್ರಸ್ತುತ ಮೂರು ಹಿಂದಿ ಸಿನಿಮಾಗಳಲ್ಲಿ ಅನನ್ಯಾ ನಟಿಸುತ್ತಿದ್ದಾರೆ. ಒಂದು ಒಟಿಟಿ ಶೋನಲ್ಲಿಯೂ ಅನನ್ಯಾ ಕಾಣಿಸಿಕೊಳ್ಳಲಿದ್ದಾರೆ.

ಈ ವಾರದ ಬಿಗ್​ಬಾಸ್​ ಡಬಲ್​ ಎಲಿಮಿನೇಷನ್​ನಲ್ಲಿ ಹೊರಹೋಗಿರೋ ಇನ್ನೋರ್ವ ಸ್ಪರ್ಧಿ ಎಂದ್ರೆ...

Follow Us:
Download App:
  • android
  • ios