ಈ ಬಾರಿ ಇದಾಗಲೇ ಈಶಾನಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹೋಗಿದ್ದು, ಡಬಲ್​ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಹೋದ ಇನ್ನೋರ್ವ ಸ್ಪರ್ಧಿಯ ಹೆಸರೂ ತಿಳಿದು ಬಂದಿದೆ. 

ಬಿಗ್​ಬಾಸ್​ ಶುರುವಾಗಿ ಒಂದೂವರೆ ತಿಂಗಳಾಗಿದೆ. ಇದೀಗ ಕುತೂಹಲದ ಘಟಕ್ಕೆ ಬಿಗ್​ಬಾಸ್​ ಕಾಲಿಟ್ಟಿದೆ. ಮನೆಯಲ್ಲಿ ಗ್ರೂಪಿಸಂ ಹೆಚ್ಚಾಗುತ್ತದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಇದೇ ವೇಳೆ ದೊಡ್ಮನೆಯಿಂದ ಹೊರಕ್ಕೆ ಹೋಗುವವರ ಪಟ್ಟಿಯ ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ. ಒಂದೆಡೆ ವರ್ತೂರು ಸಂತೋಷ್​ ಹುಲಿಯುಗುರು ಕೇಸ್​ನಲ್ಲಿ ಜಾಮೀನು ಪಡೆದು ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟಿದ್ದರೆ, ಇನ್ನೋರ್ವ ಸ್ಪರ್ಧಿ ತನಿಷಾ ವಿರುದ್ಧ ಈಗ ಎಫ್​ಐಆರ್​ ದಾಖಲಾಗಿದೆ. ತನಿಷಾ ನೀಡಿದ ಹೇಳಿಕೆಯೊಂದರಿಂದ ಅಟ್ರಾಸಿಟಿ ಕೇಸ್​ ದಾಖಲಾಗಿದೆ. ಅತಿ ಹೆಚ್ಚು ಅಂಕ ಪಡೆದಿದ್ದರೂ ತಾವು ಮನೆಯಿಂದ ಹೊರಕ್ಕೆ ಹೋಗುವುದಾಗಿ ಹೇಳಿ ವರ್ತೂರು ಸಂತೋಷ್​ ಇದಾಗಲೇ ಹೈಡ್ರಾಮಾ ಮಾಡಿರುವ ಘಟನೆಯೂ ನಡೆದಿದೆ. ಇವೆಲ್ಲವುಗಳ ಮಧ್ಯೆ ಈ ವಾರ ನಾಮಿನೇಟ್​ ಆಗುವವರು ಯಾರು? ಅವರಲ್ಲಿ ನಿಜವಾಗಿಯೂ ಹೊರಕ್ಕೆ ಹೋಗುವವರು ಯಾರು ಎಂಬ ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ.

ಬಿಗ್‌ಬಾಸ್ ಮನೆಯಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿದೆ. ಲೆಕ್ಕಾಚಾರಗಳು ಜೋರಾಗುತ್ತಿದೆ. ಮನೆಗೆ ಹೊಸ ಕ್ಯಾಪ್ಟನ್ ಆಗಿ ಕಾರ್ತಿಕ್ ಮಹೇಶ್ ಆಯ್ಕೆಯಾದ ಬೆನ್ನಲ್ಲೇ ಸ್ಪರ್ಧೆ ಬಿರುಸುಗೊಂಡಿದೆ. ಈ ಬೆಳವಣಿಗೆ ನಡುವೆ ಈ ವಾರ ಡಬಲ್ ಎಲಿನಿಮೇಷನ್ ಶಾಕ್ ಎದುರಾಗಿದೆ. ಇಬ್ಬರು ಮನೆಯಿಂದ ಹೊರಹೋಗುತ್ತಿದ್ದಾರೆ. ಈ ಪೈಕಿ ಸ್ಪರ್ಧಿ ಇಶಾನಿಯ 10ನೇ ಆವೃತ್ತಿ ಬಿಗ್‌ಬಾಸ್ ಪಯಣ ಅಂತ್ಯಗೊಂಡಿದೆ. ಕಳೆದ ವಾರ ವರ್ತೂರ್ ಸಂತೋಷ್‌ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ ಈ ವಾರ ಎರಡೆರಡು ಎಲಿಮಿಷೇನ್ ನಡೆಯುತ್ತಿದೆ. ಈಗಾಗಲೇ ಈಶಾನಿ ಅವರು 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್‌ನಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೋಗಿದ್ದಾರೆ. ಶನಿವಾರದ ಎಪಿಸೋಡ್ ಕೊನೆಯಲ್ಲಿ, ಕಿಚ್ಚ ಸುದೀಪ್, ‘ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಸುದೀಪ್ ಮಾತಿನ ಬೆನ್ನಲ್ಲೇ ಇಶಾನಿ ಎದ್ದು ನಿಂತುಕೊಂಡಿದ್ದರು. 

ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

ಇಶಾನಿ ಎದ್ದು ನಿಂತ ಬೆನ್ನಲ್ಲೇ, ನಿಮ್ಮ ಬಿಗ್‌ಬಾಸ್ ಪಯಣ ಇಂದಿಗೆ ಮುಗಿಯುತ್ತಿದೆ. ಶುಭವಾಗಲಿ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಆದರೆ ಇದೀಗ ಮನೆಯಿಂದ ಹೊರಕ್ಕೆ ಹೋಗುವ ಇನ್ನೋರ್ವ ಸ್ಪರ್ಧಿ ಯಾರು ಎಂಬ ಬಗ್ಗೆ ಇಂದು ಅಂದರೆ ಭಾನುವಾರ ರಾತ್ರಿಯ ಎಪಿಸೋಡ್​ನಲ್ಲಿ ತಿಳಿದುಬರಲಿದೆ. ಇನ್ನು ಸದ್ಯದ ಮಟ್ಟಿಗೆ ಸೀಕ್ರೇಟ್​ ಆಗಿ ಇಡಲಾಗಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸುದೀಪ್​ ಅವರು, ಸ್ನೇಹಿತ್​ ಬಳಿ, ನೀವು ಲೆಟರ್​ಗೋಸ್ಕಿಸರ ನೀತು ಬಳಿ ಒಂದು ಮಾತು ಕೊಟ್ಟಿದ್ದೀರಿ. ಅದೇನೆಂದರೆ, ನಿಮ್ಮ ಜೊತೆ ನಾನು ಇರುತ್ತೇನೆ ಎಂದು. ಇದಾಗಲೇ ನೀತು ಎಲಿಮಿನೇಷನ್​ ಲಿಸ್ಟ್​ನಲ್ಲಿ ಇದ್ದಾರೆ. ಒಂದು ವೇಳೆ ಅವರು ಎಲಿಮಿನೇಟ್​ ಆದರೆ ನೀವೂ ಹೊರಕ್ಕೆ ಹೋಗುತ್ತೀರಾ ಎಂದರು. ಅದಕ್ಕೆ ಸ್ನೇಹಿತ್​ ಇಲ್ಲ ಎಂದರು. ಆಗ ಸುದೀಪ್​, ಮಾತು ಕೊಡುವ ಮೊದಲು ಯೋಚನೆ ಮಾಡಬೇಕು ಎಂದರು. ಅದೇ ವೇಳೆ ಡಬಲ್​ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಕ್ಕೆ ಹೋಗುತ್ತಿರುವ ಇನ್ನೋರ್ವ ಸ್ಪರ್ಧಿ ಎಂದರೆ... ಎನ್ನುವಲ್ಲಿಯೇ ಪ್ರೊಮೋ ಸ್ಟಾಪ್​ ಆಗಿದೆ.

ಆದರೆ ಇನ್ನೋರ್ವ ಸ್ಪರ್ಧಿ ಭಾಗ್ಯಶ್ರೀ ಎಂದು ಹೇಳಲಾಗುತ್ತಿದೆ. ಭಾಗ್ಯಶ್ರೀ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಭಾಗ್ಯಶ್ರೀ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಬಗ್ಗೆ ಇಂದು ಅಧಿಕೃತವಾಗಿ ಗೊತ್ತಾಗಲಿದೆ ಎಂಬ ಸುದ್ದಿಯಿದೆ. ಭಾಗ್ಯಶ್ರೀ ಅವರು ಕೆಲ ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿದ್ದರು, ಆದರೆ ಬಿಗ್ ಬಾಸ್ ಮನೆಗೆ ಬೇಕಾದಂತಹ ಆಟವನ್ನು ಆಡಲು ಅವರು ಹಿಂದುಳಿದ ಕಾರಣ ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಭಾಗ್ಯಶ್ರೀ ಅವರು ಗಾಸಿಪ್ ಮಾಡ್ತಾರೆ, ಮನೆಯ ವಾತಾವರಣ ಹಾಳು ಮಾಡ್ತಾರೆ ಅಂತ ಮೈಕಲ್ ಒಮ್ಮೆ ಹೇಳಿದ್ದೂ ಇದೆ. 

ಜೈಲು ಸೇರಿದ ಬಿಗ್​ಬಾಸ್​ ಸ್ಪರ್ಧಿ ತನಿಷಾ: ಮನೆಯವರ ಬಳಿ ಕ್ಷಮೆ ಕೋರಿ ಕಣ್ಣೀರು- ವಿಡಿಯೋ ವೈರಲ್

View post on Instagram