ಮುಂಬೈ(ಫೆ.02): ಆಟೋಮೊಬೈಲ್ ದಿಗ್ಗಜ ಆನಂದ್ ಮಹೀಂದ್ರ ಉತ್ತಮ ಕಾರ್ಯವನ್ನು ತಕ್ಷಣವೇ ಶ್ಲಾಘಿಸುತ್ತಾರೆ. ತಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಿದ್ದಾರೆ. ಇನ್ನು ಹಲವರಿಗೆ ನೆರವಾಗಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೆಲಸ ಆನಂದ್ ಮಹೀಂದ್ರ ಮೋಡಿ ಮಾಡಿದೆ. 

ಇದನ್ನೂ ಓದಿ: JNU ಹಿಂಸಾಚಾರ: ವೈರಲ್ ಆಯ್ತು ಆನಂದ್ ಮಹೀಂದ್ರಾ ಟ್ವೀಟ್!

ಆನಂದ್ ಮಹೀಂದ್ರ ಟ್ವೀಟ್ ಮೂಲಕ ಅಕ್ಷಯ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅಕ್ಷಯ್ ಕುಮಾರ್ ಇತ್ತೀಚೆಗೆ ಚೆನ್ನೈಗೆ ಭೇಟಿ ನೀಡಿ ಮಂಗಳಮುಖಿಯರಿಗಾಗಿ ಮನ ನಿರ್ಮಾಣಕ್ಕೆ 1.5 ಕೋಟಿ ರೂಪಾಯಿ ನೀಡಿದ್ದಾರೆ. ಚೆನ್ನೈನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ನಟ ಲಾರೆನ್ಸ್ ಅವರ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್‌ಗೆ ಹಣ ನೀಡಿದ್ದಾರೆ. 

 

ಇದನ್ನೂ ಓದಿ: ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ವಿಶೇಷ ಚೇತನ ಮಕ್ಕಳಿಗಾಗಿ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದೆ. ಇದೀಗ ಲಾರೆನ್ಸ್ ಟ್ರಸ್ಟ್ ಮಂಗಳಮುಖಿಯರಿಗಾಗಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಈ ವಿಚಾರ ಅರಿತ ಅಕ್ಷಯ್ ಕುಮಾರ್ ನೇರವಾಗಿ 1.5 ಕೋಟಿ ರೂಪಾಯಿ ನೀಡಿದ್ದಾರೆ. 

ಅಳು ತಡೆಯಲಾಗಲಿಲ್ಲ, ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ!

ಅಕ್ಷಯ್ ಕುಮಾರ್ ಈ ಕಾರ್ಯ ಆನಂದ್ ಮಹೀಂದ್ರ ಗಮನ ಸೆಳೆದಿದೆ. ಸೋಮವಾರ ಬೆಳಗ್ಗೆ ನನ್ನನ್ನು ಹುರಿದುಂಬಿಸುವ ವಿಚಾರ ಇದು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. 


 

ಅಕ್ಷಯ್ ಕುಮಾರ್ ಮುಂದಿನ ಚಿತ್ರದಲ್ಲಿ ಮಂಗಳಮುಖಿಯಾಗಿ ನಟನೆ ಮಾಡುತ್ತಿದ್ದಾರೆ. ಈಗಾಗಲೇ ಮಂಗಳಮುಖಿಯರ ಅಧ್ಯಯನದಲ್ಲಿ ತೊಡಗಿರುವ ಅಕ್ಷಯ್ ಕುಮಾರ್, ಇದೀಗ ಮನೆ ನಿರ್ಮಾಣಕ್ಕೆ ಕೋಟಿ ರೂಪಾಯಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.