ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!
20 ವರ್ಷದ ಹಳೇ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ 70 ವರ್ಷದ ತಾಯಿ ಕೂರಿಸಿಕೊಂಡು ದೇಶ ಸುತ್ತಾಡಿಸಿದ ರೋಚಕ ಕತೆ ಇದೀಗ ಭಾರಿ ಸಂಚಲನ ಮೂಡಿಸಿದೆ. ಮೈಸೂರಿಗನ ಈ ಸಾಹಸಕ್ಕೆ ಇದೀಗ ಮಹೀಂದ್ರ ಕಾರು ಮಾಲೀಕ ಫಿದಾ ಆಗಿದ್ದಾರೆ. ಇಷ್ಟೇ ಅಲ್ಲ ಭರ್ಜರಿ ಗಿಫ್ಟ್ ಕೂಡ ನೀಡುಲು ಮುಂದಾಗಿದ್ದಾರೆ. ಮೈಸೂರಿಗನ ತಾಯಿ ಸಂಕಲ್ಪ ಯಾತ್ರೆ ವಿವರ ಇಲ್ಲಿದೆ.
ಮೈಸೂರು(ಅ.23): ಜೀವನದಲ್ಲಿ ಒಮ್ಮೆಯಾದರೂ ಪ್ರವಾಸ ಹೋಗಬೇಕು, ಕುಟುಂಬದ ಜೊತೆ ಒಂದಷ್ಟು ಸಮಯ ಹಾಯಾಗಿ ಕಳೆಯಬೇಕು ಅನ್ನೋದು ಅದೆಷ್ಟೇ ತಾಯಂದಿರ ಕನಸಾಗಿರುತ್ತೆ. ಆದರೆ ಬಹುತೇಕ ತಾಯಂದಿರ ಆಸೆ, ಕನಸುಗಳನು ಮನೆಯ ಗೋಡೆ ದಾಟುವುದಿಲ್ಲ. ಹೀಗೆ ಕೂಡು ಕುಟುಂಬದಲ್ಲಿ ಮನೆ ಬಿಟ್ಟ ಬೇರೆ ಪ್ರಪಂಚ ನೋಡದ ತನ್ನ ತಾಯಿಯನ್ನು ಭಾರತ ಸುತ್ತಾಡಿಸುತ್ತಿರುವ ಮೈಸೂರಿಗನ ರೋಚಕ ಕತೆ ಇದೀಗ ಭಾರಿ ಸಂಚಲನ ಸಷ್ಟಿಸಿದೆ. ಇಷ್ಟೇ ಅಲ್ಲ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಹದಲ್ಲಿ ಸಿಕ್ಕಿಬಿದ್ದ ಜಾಗ್ವಾರ್, ರಸ್ತೆ ದಾಟಿದ ಬೊಲೆರೋ: ಮಹೀಂದ್ರಾ ಟ್ವೀಟ್ ವೈರಲ್!
ಮೈಸೂರಿನವರಾದ ಡಿ ಕೃಷ್ಣಕುಮಾರ್ ತನ್ನ 70 ವರ್ಷದ ತಾಯಿ ಚೂಡಾರತ್ನರನ್ನು ಸ್ಕೂಟರ್‌ನಲ್ಲಿ ಇಡೀ ಭಾರತವನ್ನು ಸುತ್ತಾಡಿಸಿದ್ದಾರೆ. ಹಳೇ ಬಜಾಜ್ ಚೇತಕ್ ಸ್ಕೂಟರ್ ಮೂಲಕ ತಾಯಿ, ಮಗ ಬರೋಬ್ಬರಿ 48,100 ಕಿ.ಮೀ ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ: ಉದಯಪುರ ಮಹಾರಾಜನಿಗೆ ಮಹೀಂದ್ರ ಥಾರ್ ಗಿಫ್ಟ್ ನೀಡಿದ ಆನಂದ್!
ಡಿ ಕೃಷ್ಣಕುಮಾರ್ ಬೆಂಗಳೂರಿನಲ್ಲಿ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಿಢೀರ್ ಕೃಷ್ಣ ಕುಮಾರ್ ತಂದೆ ನಿಧನರಾದರು. ತಂದೆ ನಿಧನರಾದ ಬಳಿಕ ಕಾರ್ಪೋರೇಟ್ ಕೆಲಸದಲ್ಲಿ ಮುಂದುವರಿದ ಕುಮಾರ್, ಒಂದು ದಿನ ಪುಣ್ಯ ಕ್ಷೇತ್ರ ಯಾವುದಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ತಾಯಿ ಮೈಸೂರಿನಲ್ಲಿದ್ದರೂ ಪಕ್ಕದಲ್ಲಿರುವ ಬೇಲೂರು, ಹಳೇಬೀಡು ನೋಡಿಲ್ಲ ಎಂದಿದ್ದಾರೆ. ಅಂದೇ ತಾಯಿಯನ್ನು ಇಡೀ ದೇಶ ಸುತ್ತಾಡಿಸೋ ಶಪಥ ಮಾಡಿದ್ದಾರೆ.
ಇದನ್ನೂ ಓದಿ: ಅಪರೂಪದ ಫೋಟೋಗೆ ಕ್ಯಾಪ್ಶನ್ ಸ್ಪರ್ಧೆ; ಉತ್ತರಕ್ಕೆ ಸುಸ್ತಾದ ಮಹೀಂದ್ರ!
ಕೃಷ್ಣ ಕುಮಾರ್ 20 ವರ್ಷದ ಹಿಂದೆ ನೀಡಿದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ತಾಯಿಯನ್ನು ಕೂರಿಸಿಕೊಂಡು ಕೃಷ್ಣಕುಮಾರ್ ತಾಯಿ ಸಂಕಲ್ಪ ಯಾತ್ರೆ ಆರಂಭಗೊಂಡಿತು. ಜನವರಿ 16, 2018ರಲ್ಲಿ ತಾಯಿ ಸಂಕಲ್ಪ ಯಾತ್ರೆ ಶುರುವಾಯಿತು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ, ತೆಲಂಗಾಣ, ಮಹರಾಷ್ಟ್ರ, ಒಡಿಶಾ, ಬಿಹಾರ್, ಪಶ್ಚಿಮ ಬಂಗಾಳ, ಅಸ್ಸಾಂ, ಮಿಜೋರಾಂ, ಗೋವಾ, ಚತ್ತೀಸ್‌ಗಡ, ಮೆಘಾಲಯ, ಅರುಣಾಚಲ ಪ್ರದೇಶ ಸೇರಿದಂತೆ ಸಂಪೂರ್ಣ ಭಾರತ ಸುತ್ತಾಡಿದ್ದಾರೆ.
ಇದನ್ನೂ ಓದಿ: ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !
ಭಾರತ ಮಾತ್ರವಲ್ಲ ಇದೇ ಸ್ಕೂಟರ್‌ನಲ್ಲಿ ವಿದೇಶಕ್ಕೂ ತೆರಳಿದ್ದಾರೆ. ನೇಪಾಳ, ಭೂತಾನ ಹಾಗೂ ಮಯನ್ಮಾರ್‌ಗೂ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ತಾಯಿ ಮಗನ ಸ್ಕೂಟರ್ ಯಾತ್ರೆಯನನ್ನು ಮನೋಜ್ ಕಮಾರ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ತಕ್ಷಣವೇ ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ರಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಾರು ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕಾರು ಗಿಫ್ಟ್ ಕೇಳಿದ ಅಭಿಮಾನಿ; ಮಹೀಂದ್ರ ಉತ್ತರಕ್ಕೆ ಕಕ್ಕಾಬಿಕ್ಕಿ!
ತಾಯಿ ಮಗನ ಕತೆ ಕೇಳಿ ಪುಳಕಿತನಾಗಿದ್ದೇನೆ. ತಾಯಿ ಮೇಲಿನ ಪ್ರೀತಿ ಹಾಗೂ ದೇಶದ ಪ್ರೀತಿಗೆ ಮನಸೋತಿದ್ದೇನೆ. ಈ ವಿಡಿಯೋ ಶೇರ್ ಮಾಡಿರುವುದಕ್ಕೆ ಧನ್ಯವಾದ. ನನಗೆ ಇವರ ವಿಳಾಸ ತಿಳಿಸಿದರೆ, ನಾನು ವೈಯುಕ್ತಿವಾಗಿ ಮಹೀಂದ್ರ KUV 100 NXT ಕಾರನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇನೆ. ಇದರಿಂದ ಮುಂದಿನ ಪ್ರವಾಸದಲ್ಲಿ ಕೃಷ್ಣಕುಮಾರ್ ತನ್ನ ತಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ನೆರವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ ಆನಂದ್ ಮಹೀಂದ್ರಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: