ನವದೆಹಲಿ:[ಸೆ.22]: ದೇಶದ ದಿಗ್ಗಜ ಉದ್ಯಮಿ ಆನಂದ್ ಮಹೀಂದ್ರಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಆ್ಯಕ್ಟಿವ್ ಆಗಿರುತ್ತಾರೆ. ಅವರು ಮಾಡುವ ಟ್ವೀಟ್ ಗಳ ಹಲವರು ಗಮನ ಸೆಳೆಯುತ್ತವೆ. ಆದರೆ ಈ ಬಾರಿ ಅವರು ಟ್ವೀಟ್ ಮಾಡಿರುವ ವಿಡಿಯೋ ಒಂದು ಕಲ್ಲಿನಂತಹ ಮನಸ್ಸನ್ನೂ ಭಾವುಕರನ್ನಾಗಿಸುತ್ತದೆ. 

ಹೌದು ಆನಂದ್ ಮಹೀಂದ್ರಾ ಈ ಬಾರಿ ವಿಶೇಷ ಚೇತನ, ಪುಟ್ಟ ಮಗುವಿನ ವಿಡಿಯೋ ಒಂದನ್ನು ಟ್ವೀಟ್ ಮಾಡುತ್ತಾ 'ಇತ್ತೀಚೆಗಷ್ಟೇ ನಾನು ನನ್ನ ಮೊಮ್ಮಗನನ್ನು ನೋಡಿದ್ದೇನೆ. ಹೀಗಿರುವಾಗ ವಾಟ್ಸಾಪ್ ನಲ್ಲಿ ಬಂದ ಈ ವಿಡಿಯೋ ನೋಡಿ ನನಗೆ ಅಳು ತಡೆಯಲಾಗಲಿಲ್ಲ. ಜೀವನದಲ್ಲಿ ನ್ಯೂನ್ಯತೆ, ಸವಾಲುಗಳು, ಪ್ರತಿಫಲ ಇರುತ್ತದೆ. ಅದರೆ ನಾವದನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುವುದು ಎಲ್ಲವನ್ನೂ ನಿರ್ಧರಿಸುತ್ತದೆ. ಇಂತಹ ಫೋಟೋ ಹಾಗೂ ವಿಡಿಯೋಗಳು ನನ್ನನ್ನು ಸೋಲದಂತೆ ವಿಶ್ವಾಸ ತುಂಬುತ್ತವೆ' ಎಂದಿದ್ದಾರೆ.

ಕೈಗಳಿಲ್ಲ ಹೀಗಾಗಿ ಕಾಲುಗಳಿಂದಲೇ ಊಟ ತಿನ್ಬೇಕು...

ಆನಂದ್ ಮಹೀಂದ್ರಾ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಕೈಗಳಿಲ್ಲದ ವಿಶೇಷ ಚೇತನ ಮಗುವೊಂದು, ತನ್ನ ಕಾಲುಗಳ ಬೆರಳುಗಳ ನಡುವೆ ಚಮಚವಿಟ್ಟುಕೊಂಡು ಆಹಾರ ಸೇವಿಸುತ್ತದೆ. 17 ನಿಮಿಷಗಳ ಈ ವಿಡಿಯೋದಲ್ಲಿ ಮಗು ಆರಂಭದಲ್ಲಿ ತಿಂಡಿ ತಿನ್ನಲು ವಿಫಲವಾದರೂ, ಮತ್ತೆ ಮತ್ತೆ ಪ್ರಯತ್ನಿಸಿ ಯಶಸ್ವಿಯಾಗುತ್ತದೆ. 

ಆನಂದ್ ಮಹೀಂದ್ರಾ ಈ ವಿಡಿಯೋ ಶೇರ್ ಮಾಡಿಕೊಂಡ ಬೆನ್ನಲ್ಲೇ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಅಲ್ಲದೇ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಇಂತಹ ಇನ್ನೂ ಹಲವಾರು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.