ಶೂಟಿಂಗ್​ ವೇಳೆ ಅವಘಡ: ಆರೋಗ್ಯದ ಮಾಹಿತಿ ನೀಡಿದ ಅಮಿತಾಭ್​ ಬಚ್ಚನ್

'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ಅಮಿತಾಭ್​ ಬಚ್ಚನ್​ ಆರೋಗ್ಯ ಈಗ ಹೇಗಿದೆ? ಖುದ್ದು ನಟ ಕೊಟ್ಟಿದ್ದಾರೆ ಮಾಹಿತಿ...
 

Amitabh Bachchan to resume work soon despite inconvenience

ಬಾಲಿವುಡ್ ಬಿಗ್​ ಬಿ ಅಮಿತಾಭ್ ಬಚ್ಚನ್ (Amitabh Bachchan) ಇದೇ 6ರಂದು ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಸದ್ಯ ಪ್ರಭಾಸ್ ಮತ್ತು ದೀಪಿಕಾ ನಟನೆಯ 'ಪ್ರಾಜೆಕ್ಟ್ ಕೆ' (Projeck K) ಸಿನಿಮಾದ ನಿಮಿತ್ತ ಹೈದರಾಬಾದ್ ನಲ್ಲಿ ಶೂಟಿಂಗ್​ನಲ್ಲಿ  ಅಮಿತಾಭ್  ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಮಿತಾಭ್ ಹೈದರಾಬಾದ್‌ನಿಂದ ಮುಂಬೈಗೆ ತೆರಳಿದ್ದು ಜಲ್ಸಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ, 'ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದಲ್ಲಿ, ಆಕ್ಷನ್ ಶಾಟ್ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ, ಹೈದರಾಬಾದ್‌ನಲ್ಲಿ. ಮನೆಗೆ ಹಿಂತಿರುಗಿದ್ದೇನೆ. ಸ್ಟ್ರಾಪಿಂಗ್ ಮಾಡಲಾಗಿದೆ ಸದ್ಯ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ' ಎಂದು ಬರೆದುಕೊಂಡಿದ್ದರು. ನಂತರ ಅವರು ತಮ್ಮ ಆರೋಗ್ಯದ ಕುರಿತು ಅಪ್​ಡೇಟ್​  (Update) ಕೊಟ್ಟಿದ್ದರು. ತಮ್ಮ  ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದ ಅವರು,  ಗಾಯದ ಬಗ್ಗೆ ತಿಳಿದ ನಂತರ ಅಭಿಮಾನಿಗಳು ತೋರಿಸಿದ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞರಾಗಿರುವುದಾಗಿ ಹೇಳಿದ್ದರು. "ನಾನು ಕ್ರಮೇಣ ಪ್ರಗತಿ ಹೊಂದುತ್ತಿದ್ದೇನೆ. ಯಾರೂ ಆತಂಕ ಪ ಡುವ ಅಗತ್ಯವಿಲ್ಲ. ಸ್ವಲ್ಪ  ಸಮಯ ತೆಗೆದುಕೊಳ್ಳುತ್ತದೆ.  ವೈದ್ಯರು ಮಾಡಿರುವ ಶಿಫಾರಸುಗಳನ್ನು ನಾನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇನೆ. ಸದ್ಯ ಎಲ್ಲಾ ಕೆಲಸಗಳನ್ನೂ ಸ್ಥಗಿತಗೊಳಿಸಿದ್ದೇನೆ' ಎಂದಿದ್ದರು.  

ಇದೀಗ ಪುನಃ ಬಿಗ್​​ ಬಿ ಅವರು ತಮ್ಮ ಆರೋಗ್ಯದ ಕುರಿತು ಮಾಹಿತಿ ಶೇರ್​ ಮಾಡಿಕೊಂಡಿದ್ದು, ಕೆಲಸವನ್ನು ಪುನರಾರಂಭಿಸುವ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಈಗ  ಗಾಯ ಸಂಪೂರ್ಣ ಮಾಗಿಲ್ಲವಾದರೂ  ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕೆಲಸವನ್ನು ಪುನರಾರಂಭಿಸುವ ಉತ್ಸಾಹವನ್ನು ಹಂಚಿಕೊಂಡ ಅವರು, ಅದಕ್ಕಿಂತ ದೊಡ್ಡ ಸಂತೋಷವಿಲ್ಲ ಎಂದಿರುವ ಅಮಿತಾಭ್​, ತಮ್ಮ  ಕೆಲಸದ ವೇಳಾಪಟ್ಟಿ (Time Table) ಸಿದ್ಧವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. 

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

ಅವರು  ತಮ್ಮ ಬ್ಲಾಗ್‌ನಲ್ಲಿ ಹೀಗೆ ಬರೆದಿದ್ದಾರೆ,  ಹಾನಿಗೊಳಗಾದ ದೇಹದ ಅನಾನುಕೂಲತೆಯ ಹೊರತಾಗಿಯೂ ಅದನ್ನು ಸರಿಪಡಿಸಲು ಬಯಕೆ ಮತ್ತು ಪ್ರಯತ್ನ ಇರಬೇಕು. ಅದನ್ನು ನಾನು ಮಾಡುತ್ತಿದ್ದೇನೆ.  ಹಿತೈಷಿಗಳ ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.   ಕೆಲಸದ ವೇಳಾಪಟ್ಟಿಗಳನ್ನು ಮಾಡಲಾಗಿದೆ ಮತ್ತು ಚಾರ್ಟ್‌ಗಳನ್ನು ತುಂಬುತ್ತಿದ್ದೇನೆ.  ಕೆಲಸಕ್ಕಿಂತ ಉತ್ತಮ ಕಾಲಕ್ಷೇಪವಿಲ್ಲ. ಪಕ್ಕೆಲುಬು ಇನ್ನೂ ನೋವಿನ ಸ್ಥಿತಿಯಲ್ಲಿಯೇ ಇದೆ. ಆದರೆ ಇದಕ್ಕೆ ಪರಿಹಾರವೆಂದರೆ ನಾನು ಕೆಲಸ ಮಾಡುವುದು ಎಂದಿದ್ದಾರೆ. 'ಪ್ರಪಂಚದ ಶ್ರೇಷ್ಠರ ಸ್ಫೂರ್ತಿದಾಯಕ ಕಥೆಗಳನ್ನು ನೋಡುತ್ತಿದ್ದು, ಅದನ್ನು ಅನುಸರಿಸುತ್ತಿದ್ದೇನೆ. ಆದ್ದರಿಂದ ಎಲ್ಲಾ ನೋವಿನ ನಡುವೆ ನಾನು ಕೆಲಸ ನಿರ್ವಹಿಸಬೇಕಿದೆ ಎಂದಿದ್ದಾರೆ.
 
ಇನ್ನು 'ಪ್ರಾಜೆಕ್ಟ್ ಕೆ' ಕುರಿತು ಹೇಳುವುದಾದರೆ, ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ದೀಪಿಕಾ ಮತ್ತು ಬಿಗ್ ಬಿ ಜೊತೆ ಪ್ರಭಾಸ್ (Prabhas) ಅವರ ಮೊದಲ ಚಿತ್ರವಾಗಿದೆ. ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ 'ಪ್ರಾಜೆಕ್ಟ್ ಕೆ', ದೀಪಿಕಾ ಅವರ ತೆಲುಗು ಚಲನಚಿತ್ರ ಚೊಚ್ಚಲ ಮತ್ತು ಪ್ರಭಾಸ್ ಅವರ ಮೊದಲ ಚಲನಚಿತ್ರವಾಗಿದೆ. ಈ ಸಿನಿಮಾದಿಂದ ಒಂದು ಪೋಸ್ಟರ್ ಬಿಟ್ಟರೇ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಚಿತ್ರವು ಜನವರಿ 12, 2024 ರಂದು ಥಿಯೇಟರ್‌ಗಳಿಗೆ ಬರಲಿದೆ. ನಾಗ್ ಅಶ್ವಿನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಮಿತಾಭ್ ಕಳೆದ 5 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅಮಿತಾಭ್ ಅವರಿಗೆ ಅನೇಕರು ಟ್ವೀಟ್ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.  

Amitabh Bachchan: ಫಿಲ್ಮ್​ ಟಾಕೀಸ್​ನಲ್ಲಿ ಅಮಿತಾಭ್​ ಪ್ಯಾಂಟ್​ ಒಳಗೆ ಇಲಿ ಹೊಕ್ಕಾಗ....
 

Latest Videos
Follow Us:
Download App:
  • android
  • ios