ಅಮಿತಾಭ್ ಬಚ್ಚನ್ ಅವರು 'ಕೌನ್ ಬನೇಗಾ ಕರೋಡ್‌ಪತಿ' ಶೂಟಿಂಗ್ ಮಾಡುವಾಗ ಟಿಬಿ ರೋಗದಿಂದ ಬಳಲುತ್ತಿದ್ದರು. ಹಸಿವಾಗದಿರುವುದು ಮತ್ತು ದೌರ್ಬಲ್ಯದಿಂದ ಬಳಲುತ್ತಿದ್ದ ಅವರು, ಪರೀಕ್ಷೆ ಮಾಡಿಸಿದಾಗ ಟಿಬಿ ಇರುವುದು ದೃಢಪಟ್ಟಿತು. ನೋವು ನಿವಾರಕಗಳನ್ನು ತೆಗೆದುಕೊಂಡು ಶೂಟಿಂಗ್ ಮುಂದುವರೆಸಿದರು. ಟಿಬಿ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದರು. ಎಬಿಸಿಎಲ್ ನಷ್ಟದ ನಂತರ ಕೆಬಿಸಿ ಅವರ ವೃತ್ತಿಜೀವನಕ್ಕೆ ತಿರುವು ನೀಡಿತು.
'ಕೌನ್ ಬನೇಗಾ ಕರೋಡ್‌ಪತಿ' ಟಿವಿಯ ಅತಿ ದೊಡ್ಡ ಜನಪ್ರಿಯ ಶೋಗಳಲ್ಲಿ ಒಂದು. ಈ ಶೋ ಅನ್ನು ಅಮಿತಾಭ್ ಬಚ್ಚನ್ ಹಲವು ವರ್ಷಗಳಿಂದ ನಡೆಸಿಕೊಡುತ್ತಿದ್ದಾರೆ. ಆದ್ರೆ, ಈ ಶೋನ ಶೂಟಿಂಗ್ ಮಾಡುವಾಗ ಅಮಿತಾಭ್ ಬಚ್ಚನ್ ಅವರಿಗೆ ಒಂದು ದೊಡ್ಡ ಕಾಯಿಲೆ ಬಂದಿತ್ತು. ಈ ವಿಷಯವನ್ನು ಬಿಗ್ ಬಿ ಅವರೇ ಸ್ವತಃ ಹೇಳಿಕೊಂಡಿದ್ದಾರೆ.
ಹಲವು ವರ್ಷಗಳ ಹಿಂದೆ ಅಮಿತಾಭ್ ಬಚ್ಚನ್ ಅವರು ಈ ಶೋನ ಶೂಟಿಂಗ್ ಮಾಡುತ್ತಿದ್ದಾಗ, ಅವರಿಗೆ ಹಸಿವಾಗುವುದು ನಿಂತು ಹೋಗಿತ್ತು. ಇದರಿಂದ ಅವರು ತುಂಬಾನೇ ವೀಕ್ ಆದ್ರು. ಆಮೇಲೆ ಡಾಕ್ಟರ್ ಹತ್ರ ತೋರಿಸಿದಾಗ, ಅವರಿಗೆ ಟಿಬಿ ಅಂತ ಗೊತ್ತಾಯ್ತು. ಈ ಬಗ್ಗೆ ಹೇಳುವಾಗ ಅಮಿತಾಭ್ ಬಚ್ಚನ್, ವರ್ಷಗಳ ಹಿಂದೆ ನನಗೂ ಟಿಬಿ ಬಂದಿತ್ತು. ನಾನು ಈ ಬಗ್ಗೆ ಯಾವತ್ತೂ ಮಾತಾಡಿರಲಿಲ್ಲ ಆದ್ರೆ ಈ ಕಾಯಿಲೆ ನನಗೇ ಬರಬಹುದು ಅಂದ್ರೆ, ಯಾರಿಗಾದ್ರೂ ಬರಬಹುದು. ಆ ಟೈಮಲ್ಲಿ ನಾನು ತುಂಬಾನೇ ವೀಕ್ ಆಗಿದ್ದೆ. ನನಗೆ ಹಸಿವಾಗ್ತಿರಲಿಲ್ಲ. ಆಮೇಲೆ ಬ್ಲಡ್ ಟೆಸ್ಟ್ ಮಾಡಿದಾಗ ನನಗೆ ಟಿಬಿ ಇರೋದು ಗೊತ್ತಾಯ್ತು. ಒಂದು ವರ್ಷ ಟ್ರೀಟ್ಮೆಂಟ್ ತಗೊಂಡೆ' ಅಂದ್ರು.
ಕೆಬಿಸಿಯಲ್ಲಿ ಹೆಂಡತಿ ನಂಬರ್ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್!
ಈ ಕಾಯಿಲೆ ಇದ್ದಾಗ ನೀವು ಕೂರ ಕೂಡದು, ಮಲಗಕೂಡದು. ನಾನು ಕೆಬಿಸಿ ಶೂಟಿಂಗ್ ಮಾಡುವಾಗ ದಿನಾ ಎಂಟು-ಹತ್ತು ಪೇನ್ ಕಿಲ್ಲರ್ ತಿಂದ್ಕೊಂಡು ಕೂರ್ತಿದ್ದೆ. ಆಮೇಲೆ ಟಿಬಿ ಕಾಯಿಲೆ ಬಗ್ಗೆ ಜನರಿಗೆ ತಿಳಿಸಬೇಕು ಅಂತ ತೀರ್ಮಾನ ಮಾಡಿದೆ. ನೀವು ಈ ಕಾಯಿಲೆಗೆ ಹೆದರುವ ಬದಲು, ಧೈರ್ಯವಾಗಿ ಎದುರಿಸಿ' ಅಂದ್ರು.
ಅಮಿತಾಭ್ ಬಚ್ಚನ್ ಅವರು ತುಂಬಾ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ ಮೇಲೆ ಒಂದು ಬಿಸಿನೆಸ್ ಶುರು ಮಾಡಿದ್ರು. ಅದಕ್ಕೆ ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ABCL) ಅಂತ ಹೆಸರಿಟ್ಟಿದ್ರು. ಆದ್ರೆ ಅದರಲ್ಲಿ ನಷ್ಟ ಆದ ಮೇಲೆ, ಅವರು ಕೆಬಿಸಿ ಆಫರ್ ಅನ್ನು ಒಪ್ಪಿಕೊಳ್ಳಬೇಕಾಯಿತು. ಆದ್ರೆ, ಈ ಶೋ ಜನರಿಗೆ ತುಂಬಾ ಇಷ್ಟ ಆಯ್ತು, ಹಾಗಾಗಿ ಇವತ್ತಿಗೂ ಇದು ಜನರ ಫೇವರಿಟ್ ಆಗಿದೆ.
ಕೌನ್ ಬನೇಗಾ ಕರೋಡಪತಿ ಹೊಸ ಹೋಸ್ಟ್ ಯಾರು? ಬಚ್ಚನ್ ಬದಲಿಗೆ ಬರುತ್ತಿರೋ ನಟಿ ಯಾರು?
ಇತ್ತಿಚೆಗೆ ಬಿಗ್‌ಬಿ 'ಕೌನ್ ಬನೇಗಾ ಕರೋಡ್‌ಪತಿ' ಶೋ ತೊರೆಯುವ ಸುಳಿವು ನೀಡುತ್ತಿದ್ದಂತೆ ಅವರ ಅಭಿಮಾನಿಗಳ ಹೃದಯ ಒಡೆದಿದೆ. ಒಂದು ವೇಳೆ ಅಮಿತಾಭ್ ಬಚ್ಚನ್ ಕೆಬಿಸಿ'ಯಿಂದ ಹೋದರೆ ಅವರ ಜಾಗಕ್ಕೆ ಯಾರು ಹೋಸ್ಟ್ ಆಗಿ ಬರಬಹುದು ಎಂದು ಜನರು ತಿಳಿಯಲು ಬಯಸುತ್ತಿದ್ದಾರೆ. ಬಿಗ್ ಬಿ ನಿಜವಾಗಿಯೂ ಕೌನ್ ಬನೇಗಾ ಕರೋಡ್‌ಪತಿ ತೊರೆಯುತ್ತಿದ್ದಾರೆಯೇ ಎಂಬುದರ ಬಗ್ಗೆ ಇನ್ನೂ ಯಾವುದೇ ಖಚಿತತೆಯಿಲ್ಲ. ಆದರೆ ಕಾರ್ಯಕ್ರಮದ ನಿರೂಪಕರಿಗಾಗಿ ಹೆಸರುಗಳು ಕೇಳಿಬರಲಾರಂಭಿಸಿವೆ. ಶಾರುಖ್, ಐಶ್ವರ್ಯಾ ರೈ ಸೇರಿ ಬಾಲಿವುಡ್‌ನ ಟಾಪ್ ನಟರ ಹೆಸರು ಇದೆ. ವಾಸ್ತವವಾಗಿ, ಕೆಬಿಸಿ 16 ರ ಇತ್ತೀಚಿನ ಸಂಚಿಕೆಯೊಂದರಲ್ಲಿ ಅಮಿತಾಭ್ ಬಚ್ಚನ್ ಕಾರ್ಯಕ್ರಮವನ್ನು ತೊರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ವೇಳೆ ಅವರು ಭಾವುಕರಾದರು. ತಾವು ಉತ್ತರಾಧಿಕಾರಿಯನ್ನು ಹುಡುಕುವಂತೆ ಚಾನೆಲ್‌ಗೆ ಹೇಳಿದ್ದಾಗಿ ತಿಳಿಸಿದ್ದರು.
