ಅಮಿತಾಭ್ ಬಚ್ಚನ್ ಸ್ವತಃ ಇನ್ನೂ ಉತ್ತರ ಕೊಟ್ಟಿಲ್ಲ. ಆದರೆ ಕೆಲವು ನೆಟ್ಟಿಗರ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಿತ್ ಜೇಸ್ರಾನಿ ವಿಡಿಯೋಗೆ ನೆಟ್ಟಿಗರಲ್ಲಿ ಒಬ್ಬರು, 'ನೀವು ಎಂದಾದರೂ ಅವರ ಮನೆಗೆ ಸಕ್ಕರೆ ಕೇಳಲು ಹೋಗಿ, ನೆರೆಹೊರೆಯವರು ಭೇಟಿಯಾಗುವುದು ಹಾಗೆಯೇ!' ಎಂದು ಕಾಮೆಂಟ್ ಮಾಡಿದ್ದಾರೆ.

ಆ ವ್ಯಕ್ತಿಯ ಪೋಸ್ಟ್ ವೈರಲ್!

ಬಾಲಿವುಡ್ ದಂತಕತೆ ಎಂಬಂತಿರುವ ಮಹಾನ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಪ್ರತಿ ಭಾನುವಾರ ತಮ್ಮ ಮುಂಬೈನ 'ಜಲ್ಸಾ' ಬಂಗಲೆಯ ಹೊರಗೆ ನಿಂತು ಅಭಿಮಾನಿಗಳಿಗೆ ದರ್ಶನ ನೀಡುವುದು ಕಳೆದ 45 ವರ್ಷಗಳಿಂದ ನಡೆದುಬಂದಿರುವ ಸಂಪ್ರದಾಯ. ಈ ದೃಶ್ಯವನ್ನು ಸಾವಿರಾರು ಅಭಿಮಾನಿಗಳು ರಸ್ತೆಯಲ್ಲಿ ನಿಂತು ನೋಡುತ್ತಾರೆ. ಅದೇನೂ ಹೊಸ ಸಂಗತಿಯಲ್ಲ. ಆದರೆ, ಅಮಿತಾಭ್ ಬಚ್ಚನ್ ಈ 'ದರ್ಶನ'ದ ಕುರಿತು ಇತ್ತೀಚೆಗೆ ಹೊಸ ಸಂಗತಿಯೊಂದು ಸಖತ್ ವೈರಲ್ ಆಗಿದೆ. ಈ ವಿಡಿಯೋ ಆ ದೃಶ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ತೋರಿಸಿದೆ. ಅದು ಬಿಗ್ ಬಿ ಅವರ ನೆರೆಮನೆಯ ಕಿಟಕಿಯಿಂದ ಕಂಡ ನೋಟ!

ಈ ವೈರಲ್ ಸ್ಟೋರಿ ಹೀರೋ ‘ನಿರ್ಮಿತ್ ಜೇಸ್ರಾನಿ’

ಹೌದು, ಈ ವೈರಲ್ ಸ್ಟೋರಿ ಹೀರೋ 'ನಿರ್ಮಿತ್ ಜೇಸ್ರಾನಿ (Nirmit Jesrani)'.. ಅಮಿತಾಬ್ ಬಚ್ಚನ್ ಅವರ ಬಂಗಲೆಯ ಪಕ್ಕದ ಕಟ್ಟಡದಲ್ಲೇ ವಾಸಿಸುವ ನಿರ್ಮಿತ್ ಜೇಸ್ತಾನಿ ಎಂಬ ಯುವಕ ಈಗ ಇಂಟರ್ನೆಟ್ ಲೋಕದಲ್ಲಿ ಸಖತ್ ಸೆನ್ಸೆಷನ್ ಆಗಿದ್ದಾರೆ. ಅಮಿತಾಭ್ ಬಚ್ಚನ್ ಅವರು ಅಭಿಮಾನಿಗಳಿಗೆ ಕೈ ಬೀಸುವಾಗ, ಅವರ ಹಿಂದಿನ ಕಟ್ಟಡದ ಕಿಟಕಿಯಲ್ಲಿ ಒಬ್ಬ ಯುವಕ ಕೈ ಮುಗಿದು ನಿಂತಿರುವುದು ಅನೇಕ ವಿಡಿಯೋಗಳಲ್ಲಿ ಕಂಡುಬಂದಿತ್ತು. ಅವನೀಗ ಸಖತ್ ವೈರಲ್ ಸ್ಟೋರಿಯ ಕೇಂದ್ರಬಿಂದು ಆಗಿದ್ದಾನೆ.

ಬಹಳಷ್ಟು ದಿನ 'ಈ ವಿಡಿಯೋಗಳಲ್ಲಿ ಅಮಿತಾಭ್ ಜಿ ಹಿಂದೆ ಇರುವ ಆ ವ್ಯಕ್ತಿ ಯಾರು?' ಎಂಬ ಕುತೂಹಲ ಅನೇಕರಲ್ಲಿ ಇತ್ತು. ಅದಕ್ಕೆ ಈಗ ಸ್ವತಃ ನಿರ್ಮಿತ್ ಅವರೇ ಉತ್ತರ ನೀಡಿದ್ದಾರೆ. 'ಅದು ಬೇರೆ ಯಾರೂ ಅಲ್ಲ, ನಾನೇ" ಎಂದು ಅವರು ಇನ್‌ಸ್ಟಾಗ್ರಾಮ್‌ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ ಮಾಡಿರೋ

ನಿರ್ಮಿತ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಬಿಗ್ ಬಿ ತಮ್ಮ ಅಭಿಮಾನಿಗಳಿಗೆ ಕೈ ಬೀಸುವ ದೃಶ್ಯವಿದೆ. ನಿರ್ಮಿತ್ ಅವರು ತಮ್ಮ ಮನೆಯ ಕಿಟಕಿಯಿಂದ ಈ ಸುಂದರ ಕ್ಷಣವನ್ನು ಕಣ್ಣುಂಬಿಕೊಳ್ಳುತ್ತಿರುವುದು ಸೆರೆಯಾಗಿದೆ. ಅವರು ತಮ್ಮ ಪೋಸ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ಧನ್ಯವಾದ ಅರ್ಪಿಸುತ್ತಾ ಹೀಗೆ ಬರೆದಿದ್ದಾರೆ:

ನನ್ನ ಉಪಸ್ಥಿತಿಯನ್ನು ಗುರುತಿಸುತ್ತೀರಿ

'ಅಮಿತಾಭ್ ಬಚ್ಚನ್ ಸರ್, ನಾನು ನಿಮ್ಮ ನೆರೆಮನೆಯವನು. ಪ್ರತಿ ಭಾನುವಾರ ನೀವು ನಿಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ ನಂತರ, ನನ್ನ ಕಡೆಗೆ ತಿರುಗಿ ಕೈ ಬೀಸುತ್ತೀರಿ.. ಅಲ್ಲಿ ನನ್ನ ಉಪಸ್ಥಿತಿಯನ್ನು ಗುರುತಿಸುತ್ತೀರಿ. ನಿಮ್ಮ ಈ ವಿನಮ್ರತೆ ಮತ್ತು ಪ್ರೀತಿ ನಿಜಕ್ಕೂ ದೊಡ್ಡದು. ಸರ್, ನಿಮ್ಮನ್ನು ಒಮ್ಮೆ ಭೇಟಿ ಮಾಡುವ ಅವಕಾಶ ಸಿಕ್ಕರೆ ನಾನು ಧನ್ಯನಾಗುತ್ತೇನೆ.,' ಎಂದು ಬರೆದುಕೊಂಡಿದ್ದಾರೆ.

ಅದಕ್ಕೆ ಅಮಿತಾಭ್ ಬಚ್ಚನ್ ಸ್ವತಃ ಇನ್ನೂ ಉತ್ತರ ಕೊಟ್ಟಿಲ್ಲ. ಆದರೆ ಕೆಲವು ನೆಟ್ಟಿಗರ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಿತ್ ಜೇಸ್ರಾನಿ ಅವರ ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಮತ್ತು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, 'ನೀವು ಎಂದಾದರೂ ಅವರ ಮನೆಗೆ ಸಕ್ಕರೆ ಕೇಳಲು ಹೋಗಿ, ನೆರೆಹೊರೆಯವರು ಭೇಟಿಯಾಗುವುದು ಹಾಗೆಯೇ!' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನೀವು ನಿಜಕ್ಕೂ ಅದೃಷ್ಟವಂತರು" ಎಂದು ಬರೆದಿದ್ದಾರೆ.

ಸದ್ಯ ಅಮಿತಾಭ್ ಬಚ್ಚನ್ ಅವರು ಮುಂಬೈನ ಜುಹು ಪ್ರದೇಶದಲ್ಲಿರುವ 'ಜಲ್ಸಾ' ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಸದ್ಯಕ್ಕೆ ಅಮಿತಾಭ್ ಬಚ್ಚನ್ ಅವರ ಕೈನಲ್ಲಿರುವ ಸಿನಿಮಾ ಪ್ರಾಜೆಕ್ಸ್‌ಗಳು ಎಂದರೆ, 'ಕಲ್ಕಿ 2898 AD' ಸೀಕ್ವೆಲ್ ಮತ್ತು 'ಸೆಕ್ಷನ್ 84' ಎಂಬ ಥಿಲ್ಲರ್ ಸಿನಿಮಾಗಳು. ಇನ್ನು ಕೆಲವು ಮಾತುಕತೆ ಹಂತದಲ್ಲಿವೆ ಎನ್ನಲಾಗಿದೆ.