MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ರಾಜಮೌಳಿ ವಾರಣಾಸಿ' ಸಿನಿಮಾದ ಬಿಗ್ ಸೀಕ್ರೆಟ್ ಕೊನೆಗೂ ರಿವೀಲ್.. ಎಷ್ಟು ದಿನ ಅಂತ ಮುಚ್ಚಿಡೋದಕ್ಕೆ ಆಗುತ್ತೆ?

'ರಾಜಮೌಳಿ ವಾರಣಾಸಿ' ಸಿನಿಮಾದ ಬಿಗ್ ಸೀಕ್ರೆಟ್ ಕೊನೆಗೂ ರಿವೀಲ್.. ಎಷ್ಟು ದಿನ ಅಂತ ಮುಚ್ಚಿಡೋದಕ್ಕೆ ಆಗುತ್ತೆ?

ಟಾಲಿವುಡ್ ಸೇರಿದಂತೆ, ಈ ಎರಡು ಭಾಗದಲ್ಲಿ ಸಿನಿಮಾ ತರುವ ಕ್ರೇಜ್ ಅದೆಷ್ಟಿದೆ ಅಂದರೆ ಈಗಲೂ ಅನೇಕರು ಪ್ಯಾನ್ ಇಂಡಿಯಾ (Pan India) ಅಂತ ಎರಡು ಭಾಗದಲ್ಲಿಯೇ ಮಾಡ್ತಿದ್ದಾರೆ. ಅಷ್ಟೇ ಏಕೆ, ಯಶ್ ನಟನೆಯ ಕನ್ನಡದ ಕೆಜಿಎಫ್, ರಿಷನ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ' ಕೂಡ ಎರಡು ಪಾರ್ಟ್‌ಗಳಲ್ಲಿ ಬಂದಿತ್ತು.

2 Min read
Author : Shriram Bhat
Published : Feb 04 2026, 01:39 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : mahesh babu priyanka chopra instagram

ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಹಾಗು ಟಾಲಿವುಡ್‌ ಪ್ರಿನ್ಸ್ ಮಹೇಶ್ ಬಾಬು (Mahesh Babu) ಅಭಿನಯದ ವಾರಣಾಸಿ ಎಷ್ಟು ಭಾಗದಲ್ಲಿ ಬರುತ್ತದೆ? ಒಂದ ಭಾಗದಲ್ಲೋ ಅಥವಾ ಎರಡು ಭಾಗದಲ್ಲೋ ಅನ್ನುವ ಪ್ರಶ್ನೆ ಇತ್ತು. ಈ ಹಿಂದಿನ ರಾಜಮೌಳಿ ನಿರ್ದೇಶನದ ಚಿತ್ರ 'ಬಾಹುಬಲಿ' ಎರಡು ಭಾಗದಲ್ಲಿಯೇ ಬಂದಿತ್ತು. ಈ ಚಿತ್ರ ಬಂದ್ಮಲೆ ದಕ್ಷಿಣದಲ್ಲಿ ಎರಡು ಭಾಗದ ಟ್ರೆಂಡ್ ಹುಟ್ಟಿಕೊಂಡಿತ್ತು.

26
Image Credit : Asianet News

ಟಾಲಿವುಡ್ ಸೇರಿದಂತೆ, ಈ ಎರಡು ಭಾಗದಲ್ಲಿ ಸಿನಿಮಾ ತರುವ ಕ್ರೇಜ್ ಅದೆಷ್ಟಿದೆ ಅಂದರೆ ಈಗಲೂ ಅನೇಕರು ಪ್ಯಾನ್ ಇಂಡಿಯಾ (Pan India) ಅಂತ ಎರಡು ಭಾಗದಲ್ಲಿಯೇ ಸಿನಿಮಾ ಮಾಡ್ತಿದ್ದಾರೆ. ಅಷ್ಟೇ ಏಕೆ, ಯಶ್ ನಟನೆಯ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್, ರಿಷನ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ' ಕೂಡ ಎರಡು ಪಾರ್ಟ್‌ಗಳಲ್ಲಿ ಬಂದಿತ್ತು. ಆದರೆ, ಈ ಒಂದು ಐಡಿಯಾವನ್ನ ದೊಡ್ಡಮಟ್ಟಕ್ಕೆ ಪರಿಚಯಿಸಿದ್ದ ರಾಜಮೌಳಿ ಅವರೇ ಈಗ ಈ ಟ್ರೆಂಟ್ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

Related Articles

Related image1
ಪ್ರಿಯಾಂಕಾ ಚೋಪ್ರಾ ಬೇಡಿಕೆಗೆ ಅಸ್ತು ಎಂದ ರಾಜಮೌಳಿ; ಮಹೇಶ್ ಬಾಬುಗೆ ಭಾರೀ ಸಂಕಷ್ಟ, ಅಳೋದೊಂದೇ ಬಾಕಿ!
Related image2
ಫೆ. 26ಕ್ಕೇ ಮದುವೆ ಪಕ್ಕಾ.. ಕೊನೆಗೂ ಏರ್‌ಪೋರ್ಟ್‌ನಲ್ಲಿ ಗುಟ್ಟು ರಟ್ಟುಮಾಡಿದ ರಶ್ಮಿಕಾ ಮಂದಣ್ಣ!
36
Image Credit : jiohotstar

ಹೌದು, ಸಿಕ್ಕ ಮಾಹಿತಿ ಪ್ರಕಾರ, ಎಸ್‌ಎಸ್ ರಾಜಮೌಳಿ ಅವರ ನಿರ್ದೇಶನದ ಮುಂಬರುವ 'ವಾರಣಾಸಿ' ಚಿತ್ರವು 7 ಏಪ್ರಿಲ್, 2027ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಬಗ್ಗೆ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಇದೆ. ರಾಜಮೌಳಿ ಅವರ ಸಿನಿಮಾ ಅಂತಲೇ ಈ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ, ಮಹೇಶ್ ಬಾಬು ಸಿನಿಮಾ ಬೇರೆ. ಪ್ರಿಯಾಕಾ ಚೋಪ್ರಾ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎಲ್ಲ ಅಂಶಗಳಿ ಸೇರಿ, ವಾರಣಾಸಿ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿದೆ.

46
Image Credit : jiohotstar

ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ನಟನೆ, ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾ ಬರೋಬ್ಬರಿ 1000 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ. ಆದರೆ ಈ ಚಿತ್ರವು ಎಷ್ಟು ಭಾಗದಲ್ಲಿ ಬರಲಿದೆ ಎಂಬುದಕ್ಕೆ ಇಲ್ಲಿಯವರೆಗೂ ಉತ್ತರ ಇರಲಿಲ್ಲ. ಆದರೆ ಈಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ.

56
Image Credit : jiohotstar

ರಾಜಮೌಳಿ ಅವರು ಎರಡು ಭಾಗದಲ್ಲಿಯೇ ಅತಿ ದೊಡ್ಡ ಚಿತ್ರದ ಕಥೆ ಹೇಳಿದ್ದರು. ಎರಡು ಭಾಗದಲ್ಲಿ ಸಿನಿಮಾ ಮಾಡೋದು ಅಷ್ಟು ಸುಲಭವೇನೂ ಅಲ್ಲ. ಆದರೆ, ಬಾಹುಬಲಿ ಚಿತ್ರದಲ್ಲಿ ಆ ಪ್ರಯೋಗ ಮಾಡಿದ್ದರು. ಅದರಲ್ಲಿ ಗೆದ್ದು ಮನೆಮಾತಾಗಿದ್ದರು. ಆದರೆ, ಮುಂಬರುವ ವಾರಣಾಸಿ ಚಿತ್ರದಲ್ಲಿ ಅವರು ಈ ಐಡಿಯಾ ಕೈ ಬಿಟ್ಟಿದ್ದಾರೆ. ಏನೇ ಅದರೂ ಸರಿ, ಒಂದೇ ಭಾಗದಲ್ಲಿಯೇ ಇಡೀ ಕಥೆ ಹೇಳಿ ಮುಗಿಸುವ ಪ್ಲಾನ್ ಮಾಡಿದ್ದಾರೆ. ಹಾಗಾಗಿಯೆ ವಾರಣಾಸಿ ಚಿತ್ರ ಎರಡಲ್ಲ, ಒಂದೇ ಭಾಗದಲ್ಲಿ ರಿಲೀಸ್ ಆಗುತ್ತದೆ. ಆದರೆ, ಈ ಚಿತ್ರದ ರನ್ ಟೈಂ 3 ಗಂಟೆ ಇರಲಿದೆ ಎನ್ನಲಾಗಿದೆ.

66
Image Credit : jiohotstar

ಹಾಗಿದ್ದರೆ ಯಾಕೆ ಒಂದೇ ಭಾಗ?

ರಾಜಮೌಳಿಯವರ ಪ್ರಕಾರ, ಈಗಾಗಲೇ ಪ್ರೇಕ್ಷಕರಿಗೆ ಎರಡು ಭಾಗದಲ್ಲಿ ಸಿನಿಮಾ ನೋಡುವ ಆಸಕ್ತಿ ಕಡಿಮೆ ಆಗಿದೆ. ಇತ್ತೀಚೆಗೆ ಎಲ್ಲರೂ ಎರಡು ಭಾಗದಲ್ಲಿ ಸಿನಿಮಾ ಮಾಡಿದ್ದಾರೆ. ಹಾಗಾಗಿಯೇ ಜನರಿಗೂ ಈ ಪಾರ್ಟ್-2 ಐಡಿಯಾ ಬೇಸರ ತಂದಿದೆ. ಸ್ವತಃ ರಾಜಮೌಳಿ ಅವರಿಗೂ ಈ ಪಾರ್ಟ್-2 ಐಡಿಯಾ ಬೇಸರ ತರಿಸಿದೆಯಂತೆ. ಅದಕ್ಕೇನೆ ವಾರಣಾಸಿ ಚಿತ್ರವನ್ನ ಒಂದೇ ಭಾಗದಲ್ಲಿ ಹೇಳಲಿದ್ದಾರಂತೆ ರಾಜಮೌಳಿ.

ಅಂದಹಾಗೆ, ಈ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ಜೋಡಿಯಾಗಿ, ಚಿತ್ರದ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ, ಖಡಕ್ ವಿಲನ್ ಅಗಿ ಪೃಥ್ವಿರಾಜ್ ಸುಕುಮಾರ್ ಇದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಎಸ್. ಎಸ್. ರಾಜಮೌಳಿ
ಪ್ರಿಯಾಂಕಾ ಚೋಪ್ರಾ
ಮಹೇಶ್ ಬಾಬು
ಮನರಂಜನಾ ಸುದ್ದಿ

Latest Videos
Recommended Stories
Recommended image1
ಫೆ. 26ಕ್ಕೇ ಮದುವೆ ಪಕ್ಕಾ.. ಕೊನೆಗೂ ಏರ್‌ಪೋರ್ಟ್‌ನಲ್ಲಿ ಗುಟ್ಟು ರಟ್ಟುಮಾಡಿದ ರಶ್ಮಿಕಾ ಮಂದಣ್ಣ!
Recommended image2
ಪ್ರಿಯಾಂಕಾ ಚೋಪ್ರಾ ಬೇಡಿಕೆಗೆ ಅಸ್ತು ಎಂದ ರಾಜಮೌಳಿ; ಮಹೇಶ್ ಬಾಬುಗೆ ಭಾರೀ ಸಂಕಷ್ಟ, ಅಳೋದೊಂದೇ ಬಾಕಿ!
Recommended image3
ಡಿ ಕಂಪನಿ ಅವಾಜ್: ಕಿಚ್ಚನಿಗೆ ಕೌಂಟರ್ ಕೊಟ್ರಾ ದರ್ಶನ್ ಶಿಷ್ಯ? ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರುವಾಯ್ತಾ ಯುದ್ಧ?
Related Stories
Recommended image1
ಪ್ರಿಯಾಂಕಾ ಚೋಪ್ರಾ ಬೇಡಿಕೆಗೆ ಅಸ್ತು ಎಂದ ರಾಜಮೌಳಿ; ಮಹೇಶ್ ಬಾಬುಗೆ ಭಾರೀ ಸಂಕಷ್ಟ, ಅಳೋದೊಂದೇ ಬಾಕಿ!
Recommended image2
ಫೆ. 26ಕ್ಕೇ ಮದುವೆ ಪಕ್ಕಾ.. ಕೊನೆಗೂ ಏರ್‌ಪೋರ್ಟ್‌ನಲ್ಲಿ ಗುಟ್ಟು ರಟ್ಟುಮಾಡಿದ ರಶ್ಮಿಕಾ ಮಂದಣ್ಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved