Asianet Suvarna News Asianet Suvarna News

ಅಬ್ಬಬ್ಬಾ..'ಕಲ್ಕಿ 2898 AD' ಸಿನಿಮಾಗೆ ಬಿಗ್‌ಬಿ ಅಮಿತಾಬ್‌ ತಗೊಳ್ತಿರೋ ಸಂಭಾವನೆ ಇಷ್ಟೊಂದಾ?

ಸಿನಿಮಾರಂಗದಲ್ಲಿ ಮೂರು ದಶಕಗಳಿಂದ ಹೆಚ್ಚು ಸಮಯದಿಂದ ಅಭಿನಯಿಸಿಕೊಂಡು ಬಂದಿರೋ ಅಮಿತಾಬ್ ಬಚ್ಚನ್‌ ಹಲವಾರು ಸೂಪರ್‌ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಕಲ್ಕಿ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ಅಶ್ವಥಾಮನಾಗಿ ಅಭಿನಯಿಸಲಿರೋ ಅಮಿತಾಬ್‌ ತಗೊಳ್ತಿರೋ ಸಂಭಾವನೆ ಎಷ್ಟು ಗೊತ್ತಾ?

Amitabh Bachchan Charged 18 crore for His Role In The Much Anticipated Kalki 2898 AD Vin
Author
First Published Apr 23, 2024, 11:57 AM IST

'ಕಲ್ಕಿ 2898 AD' ಭಾರತೀಯ ಚಿತ್ರರಂಗದ ಹೈ ಬಜೆಟ್‌, ಮೋಸ್ಟ್ ಎಕ್ಸ್‌ಪೆಕ್ಟಿಂಗ್‌ ಸಿನಿಮಾ. ಸಲಾರ್ ಬಿಗ್ ಸಕ್ಸಸ್‌ನ ನಂತರ ಡಾರ್ಲಿಂಗ್ ಪ್ರಭಾಸ್ ಲೀಡ್ ರೋಲ್‌ನಲ್ಲಿ ಅಭಿನಯಿಸ್ತಿರೋ ಪ್ಯಾನ್ ವರ್ಲ್ಡ್ ಮೂವಿ. ನಾಗ್‌ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ಜೊತೆ ಕಮಲ್ ಹಾಸನ್ ಕೂಡ ಇದ್ದಾರೆ. ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸಹ ನಟಿಸಿದ್ದಾರೆ. ಆದ್ರೆ ಅವರೆಲ್ಲರಿಗೂ ದಿಗ್ಗಜ ನಟ ಬಿಗ್ ಬಿ ಅಮಿತಾ ಬಚ್ಚನ್ ರೋಲ್ ಇರೋದು ಇಂಟ್ರೆಸ್ಟಿಂಗ್. ಈ ಸಿನಿಮಾದಲ್ಲಿ ಅಶ್ವಥಾಮನಾಗಿ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ.

ಸಿನಿಮಾರಂಗದಲ್ಲಿ ಮೂರು ದಶಕಗಳಿಂದ ಹೆಚ್ಚು ಸಮಯದಿಂದ ಅಭಿನಯಿಸಿಕೊಂಡು ಬಂದಿರೋ ಅಮಿತಾಬ್ ಬಚ್ಚನ್‌ ಹಲವಾರು ಸೂಪರ್‌ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಕಲ್ಕಿ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಇತ್ತೀಚಿಗೆ ಅಮಿತಾಬ್ ಬಚ್ಚನ್ ಅಭಿನಯದ 'ಕಲ್ಕಿ 2898 AD' ಟೀಸರ್ ಸಹ ರಿಲೀಸ್ ಆಗಿದೆ. 

ಬಾಹುಬಲಿ, ಆರ್‌ಆರ್‌ಆರ್, ಸಲಾರ್ ರೆಕಾರ್ಡ್ ಬ್ರೇಕ್: 2024ರ ಬಿಗ್‌ ಬಜೆಟ್ ಸಿನಿಮಾ ಯಾವುದು ಗೊತ್ತಾ?

ಅಶ್ವಥಾಮನ ಪಾತ್ರ ಪರಿಚಯದ ಈ ಟೀಸರ್‌ನಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವೇಳೆ ಅಶ್ವತ್ಥಾಮನಿಗೆ ಪೆಟ್ಟಾಗಿ ರಕ್ತಸ್ರಾವವಾಗುತ್ತದೆ. ಬಾಲಕನೊಬ್ಬ ಒಂದಷ್ಟು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾನೆ. ನಿನಗೆ ಸಾವಿಲ್ಲವೇ? ನೀನು ದೇವರಾ? ಎಂದು ಕೇಳಲು ಆರಂಭಿಸುತ್ತಾನೆ. ಅಲ್ಲಿಂದ ಎದ್ದು ಹೊರಡುವ ವೇಳೆ 'ನಾನು ದ್ರೋಣಾಚಾರ್ಯನ ಪುತ್ರ ಅಶ್ವತ್ಥಾಮ' ಎಂದು ಅಮಿತಾಬ್ ತನ್ನ ಪಾತ್ರ ಪರಿಚಯ ಮಾಡಿದ್ದಾರೆ. ಅಮಿತಾಬ್ಗೆ ಈಗ 81 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲೂ ಅಮಿತಾಬ್ ತನ್ನ ಅಭಿನಯದ ಖದರ್ ತೋರಿಸಿದ್ದಾರೆ.

'ಅಶ್ವತ್ಥಾಮ' ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಪಡೀತಿರೋ ಸಂಭಾವನೆ ಎಷ್ಟು?
ವರದಿಗಳ ಪ್ರಕಾರ 'ಕಲ್ಕಿ 2898 AD' ಸಿನಿಮಾ ಬರೋಬ್ಬರಿ 600 ಕೋಟಿ ಬಜೆಟ್‌ನಲ್ಲಿ ಸಿದ್ಧಗೊಳ್ಳುತ್ತಿದೆ. ಇದು ಭಾರತದ ಅತಿ ಹೆಚ್ಚು ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ. ವರದಿಯ ಪ್ರಕಾರ, ಅಮಿತಾಬ್ ಅವರು ಈ ಚಿತ್ರದಲ್ಲಿ ತಮ್ಮ ಅಶ್ವತ್ಥಾಮ ಪಾತ್ರಕ್ಕಾಗಿ ಬರೋಬ್ಬರಿ 18 ಕೋಟಿ ರೂ. ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಅಮಿತಾಭ್ ಬಚ್ಚನ್ ಅವರಲ್ಲದೆ, ಕಲ್ಕಿ 2898 ಹಲವು ಸೂಪರ್‌ಸ್ಟಾರ್‌ ನಟರನ್ನು ಒಳಗೊಂಡಿದೆ. ಇದರಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಶಾಶ್ವತ ಚಟರ್ಜಿ, ಅನ್ನಾ ಬೆನ್, ಪಶುಪತಿ, ಮೃಣಾಲ್ ಠಾಕೂರ್ ಮತ್ತು ರಾಜೇಂದ್ರ ಪ್ರಸಾದ್ ಕೂಡಾ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ.

Prabhas: ಉಪ್ಪಿ ಸ್ಟೈಲ್‌ನಲ್ಲಿ ಜುಟ್ಟು ಕಟ್ಕೊಂಡು ಬಂದ ಪ್ರಭಾಸ್..! ಇದು ನಟನ ಶಿವರಾತ್ರಿ ಕಲ್ಕಿ ಹೊಸ ಅವತಾರ..!

ಈ ಚಲನಚಿತ್ರವು ಹಿಂದೂ ಪುರಾಣಗಳಿಂದ ಪ್ರೇರಿತವಾಗಿದೆ ಮತ್ತು ಇದು ವಿಷ್ಣುವಿನ ಅಂತಿಮ ಅವತಾರವಾದ ಕಲ್ಕಿಯ ಆಗಮನವನ್ನು ತೋರಿಸುತ್ತದೆ ಎಂದು ಹೇಳಲಾಗ್ತಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಅಂದರೆ, 'ಭೈರವ'ನ ಪಾತ್ರದಲ್ಲಿ ಮಿಂಚಲಿದ್ದಾರೆ. ಕಮಲ್ ಹಾಸನ್ 'ಕಾಳಿ' ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗ್ತಿದೆ. ಕಮಲ್ ಹಾಸನ್‌ ತಮ್ಮ ವಿಲನ್ ಪಾತ್ರಕ್ಕಾಗಿ ಭಾರೀ ಮೊತ್ತವನ್ನು ವಿಧಿಸುತ್ತಿದ್ದಾರೆ ಅನ್ನೋದು ಸಹ ಬಹಿರಂಗಗೊಂಡಿದೆ. ಈ ವರ್ಷ ಜೂನ್ 20ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

Latest Videos
Follow Us:
Download App:
  • android
  • ios