ಹುಡುಗರು ನಿಮ್ಮನ್ನು ಕಂಡಾಕ್ಷಣ ಎಲ್ಲಿ ನೋಡ್ತಾರೆ ಎಂದಾಗ ಜಾಹ್ನವಿ ಕೊಟ್ಟ ಉತ್ತರ ಕೇಳಿ ಕರಣ್​ ಜೋಹರ್​ ಶಾಕ್​!

ಹುಡುಗರು ನಿಮ್ಮನ್ನು ಕಂಡಾಕ್ಷಣ ಎಲ್ಲಿ ನೋಡ್ತಾರೆ ಎಂದು ಕರಣ್​ ಜೋಹರ್​ ಪ್ರಶ್ನಿಸಿದಾಗ, ಜಾಹ್ನವಿ ಕೊಟ್ಟ ಉತ್ತರ ಕೇಳಿ ಖುದ್ದ ಕರಣ್​ ಶಾಕ್​ ಆದ್ರು! ಅಷ್ಟಕ್ಕೂ ನಟಿ ಹೇಳಿದ್ದೇನು?
 

Karan Johar  shocked to hear Janhvis answer when asked where boys look when   see you suc

ತೀರಾ ಖಾಸಗಿ, ಸೆಕ್ಸ್​ ವಿಷಯಗಳನ್ನೇ ನಟ-ನಟಿಯರಿಗೆ ಕೇಳುವುದಲ್ಲಿ ಫೇಮಸ್​ ಆಗಿರೋ ಷೋ ಎಂದರೆ ಕರಣ್ ಜೋಹರ್  ಹೋಸ್ಟ್ ಮಾಡುವ ಫೇಮಸ್‌ ಟಾಕ್‌ಶೋ 'ಕಾಫಿ ವಿತ್ ಕರಣ್. ಇದೀಗ ಸೀಸನ್ 8 ಆರಂಭಿಸಿದೆ. ಕಾಫಿ ವಿತ್​ ಕರಣ್​ (Koffee With Karan) ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್‌ ( Janhvi Kapoor) ಮತ್ತು ಖುಷಿ ಕಪೂರ್  (Khushi Kapoor) ಕಾಣಿಸಿಕೊಳ್ಳಲಿದ್ದಾರೆ.  ಪ್ರೋಮೋ ಬಿಡುಗಡೆಯಾದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ ನಟಿ ಜಾಹ್ನವಿ ಅವರು ಕರಣ್​ ಜೊತೆ ಮಾತನಾಡಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಇವುಗಳ ಪೈಕಿ ಕೆಲವೊಂದು ತಮಾಷೆಯ ವಿಡಿಯೋಗಳೂ ಇವೆ. ಅಷ್ಟಕ್ಕೂ ಈ ಷೋನಲ್ಲಿ ಕರಣ್​, ನಟ-ನಟಿಯರ ತೀರಾ ಖಾಸಗಿ ಜೀವನಗಳ ಬಗ್ಗೆ ಪ್ರಶ್ನೆ ಕೇಳಿ ಕಾಂಟ್ರವರ್ಸಿ ಮಾಡುವುದೂ ಇದೆ. ಅದೇ ಇನ್ನೊಂದೆಡೆ, ಇಲ್ಲಿಗೆ ಬರುವ ನಟ-ನಟಿಯರು ತಮ್ಮ ತೀರಾ ಖಾಸಗಿ ವಿಷಯಗಳನ್ನು ಹೇಳಿಕೊಳ್ಳುವುದೂ ಇದೆ. 

ಇದೀಗ, ಜಾಹ್ನವಿ ಅವರಿಗೆ ಕರಣ್​, ಹುಡುಗರೆಲ್ಲಾ ನನ್ನನ್ನು ನೋಡಿದಾಗ ನಿಮ್ಮ ಕಣ್ಣುಗಳು ತುಂಬಾ  ಅಟ್ರಾಕ್ಟ್​ ಆಗಿದೆ. ಅದನ್ನೇ  ನೋಡುತ್ತೇವೆ ಎನ್ನುತ್ತಾರೆ. ಆದರೆ ನಾನು ಅವರನ್ನು ಸರಿಯಾಗಿ ನೋಡಿದಾಗ ತಿಳಿಯುತ್ತದೆ. ಅವರ ಕಣ್ಣುಗಳು ನನ್ನ ಕಣ್ಣುಗಳನ್ನು ನೋಡುತ್ತಿರುವುದಿಲ್ಲ, ಬದಲಿಗೆ ಅವರ ದೃಷ್ಟಿ ಬೇರೆಲ್ಲೋ ನೆಟ್ಟಿರುತ್ತದೆ ಎಂದು ಧೈರ್ಯವಾಗಿಯೇ ಹೇಳಿದರು. ಇದನ್ನು ಕೇಳಿ ಖುದ್ದು ಕರಣ್​ ಜೋಹರ್​ ಶಾಕ್​ ಆದರೂ ಈ ಧೈರ್ಯದ ಉತ್ತರ ಕೇಳಿ ಗಹಗಹಿಸಿ ನಕ್ಕರು. ಅಷ್ಟಕ್ಕೂ ಜಾಹ್ನವಿ ಕಪೂರ್​ ಇತ್ತೀಚೆಗೆ ತಮ್ಮ ಫೋಟೋಶೂಟ್​ಗಳಿಂದಲೇ ಫೇಮಸ್​  ಆಗುತ್ತಿರುವವರು. ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ಸಾಕಷ್ಟು ಟ್ರೋಲ್​ಗೂ ಒಳಗಾಗುತ್ತಿರುತ್ತಾರೆ. ಶ್ರೀದೇವಿ ಪುತ್ರಿಯಾಗಿ ಈ ರೀತಿಯ ಅಶ್ಲೀಲತೆ ಸಲ್ಲದು ಎಂದು ಫ್ಯಾನ್ಸ್​ ಆಗಾಗ್ಗೆ ನಟಿಗೆ ಹೇಳುವುದೂ ಉಂಟು. ಇಷ್ಟಿದ್ದರೂ ಅದ್ಯಾವುದರ ಬಗ್ಗೆ ಜಾಹ್ನವಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇದೀಗ ಎಲ್ಲರ ಕಣ್ಣು ಬೇರೆ ಕಡೆ ನೆಟ್ಟಿರುತ್ತದೆ ಎನ್ನುವ ಮೂಲಕ ತಮ್ಮ ಡ್ರೆಸ್​ ಸೆನ್ಸ್​ ಬಗ್ಗೆ ನಟಿ ಹೆಮ್ಮೆ ಪಟ್ಟುಕೊಂಡಿರುವಂತೆ ಕಾಣಿಸುತ್ತಿದೆ. 

ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ಎಂದು ಜಾಹ್ನವಿ ಕಪೂರ್​ಗೆ ಪ್ರಶ್ನಿಸಿದ ಕರಣ್! ನಟಿ ಹೇಳಿದ್ದೇನು?

ಅದೇ ರೀತಿ ಕಾಫಿ ವಿತ್​ ಕರಣ್​ಗೆ ಬಂದಾಗಲೂ ನಟಿ ಇಂಥದ್ದೇ ಡ್ರೆಸ್​ ಧರಿಸಿದ್ದಾರೆ.  ಕೆಂಪು ಡ್ರೆಸ್​ನಲ್ಲಿ ಜಾಹ್ನವಿ ಮಿಂಚಿದ್ದಾರೆ. ಈ ಮೂಲಕ ಕಾಫಿ ವಿತ್​ ಕರಣ್​ ಷೋನ್ನು ಹಾಟ್​ ಆಗಿಸಿದ್ದಾರೆ. ಸೆಲೆಬ್ರಿಟಿಗಳು ಎಂದರೆ ಅವರು ಧರಿಸುವ ಬಟ್ಟೆಯ ರೇಟ್​ ಅಂತೂ ಕೇಳುವುದೇ ಬೇಡ ಬಿಡಿ. ಆದರೆ ಪಾಪರಾಜಿಗಳು ಬಟ್ಟೆಯನ್ನೂ ಬಿಡದೇ ಅದರ ರೇಟ್​ ಕೂಡ ತನಿಖೆ ಮಾಡಿಯೇ ಬಿಡುತ್ತಾರೆ. ಅದೇ ರೀತಿ ಇದೀಗ ಜಾಹ್ನವಿ ಕಪೂರ್​ ತೊಟ್ಟ ಬಟ್ಟೆಯ ವಿಷಯವೂ ಮುನ್ನೆಲೆಗೆ ಬಂದಿದೆ. ಅಂದಹಾಗೆ ನಟಿ ತೊಟ್ಟಿರೋ ಈ ಬಟ್ಟೆಯ ಬೆಲೆ 1 ಲಕ್ಷದ 63 ಸಾವಿರ ರೂಪಾಯಿಗಳು ಎನ್ನಲಾಗಿದೆ.  

ಈ ರೆಡ್ ಬಾಡಿಕಾನ್ ಡ್ರೆಸ್ ಐಷಾರಾಮಿ ಸ್ಯಾಟಿನ್ ಫ್ಯಾಬ್ರಿಕ್, ಹಾಲ್ಟರ್‌ನೆಕ್,  ಮಿಡ್ರಿಫ್ ಕಟೌಟ್, ಬಾಡಿಕಾನ್ ಫಿಟ್ ಆಕಾರ ಹೊಂದಿದೆ. ಮಾಮೂಲಿನಂತೆ ಈ ಡ್ರೆಸ್​ನಲ್ಲಿಯೂ ಯಥೇಚ್ಛವಾಗಿ ಶ್ರೀದೇವಿ ಪುತ್ರಿ ದೇಹ ಪ್ರದರ್ಶನ ಮಾಡಿದ್ದಾರೆ. ಕೇಶ ವಿನ್ಯಾಸಕಿ ಮಾರ್ಸ್ ಪೆಡ್ರೊಜೊ ಅವರ ಕೇಶ ವಿನ್ಯಾಸ ಹಾಗೂ ಈ ದುಬಾರಿ ಬಟ್ಟೆಯಿಂದಾಗಿ ಜಾಹ್ನವಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಬಟ್ಟೆ ಸೀಳು ಕಟೌಟ್​ ಇರುವ ಕಾರಣ ತೊಡೆಯ ಭಾಗಗಳೂ ಕಾಣಿಸುತ್ತವೆ. ಈಕೆಯ ಡ್ರೆಸ್​ ಬೆಲೆ ರಿವೀಲ್​ ಆಗುತ್ತಿದ್ದಂತೆಯೇ ನಟಿಯ ಕಾಲೆಳೆದಿರುವ ಕೆಲವು ತರ್ಲೆಕಮೆಂಟಿಗರು ಬಟ್ಟೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಬಟ್ಟೆಯೇ ಇಲ್ಲದಿರೋ ಬಟ್ಟೆಗೆ ಇಷ್ಟು ರೇಟಾ ಎಂದು ಪ್ರಶ್ನಿಸುತ್ತಿದ್ದಾರೆ. 

ಕಾಫಿ ವಿತ್​ ಕರಣ್​ನಲ್ಲಿ ಜಾಹ್ನವಿ ತೊಟ್ಟ ಬಟ್ಟೆಗೆ ಉಫ್​ ಇಷ್ಟು ರೇಟಾ? ಬಟ್ಟೆ ಎಲ್ಲಿದೆ ಕೇಳಿದ ನೆಟ್ಟಿಗರು!
 

Latest Videos
Follow Us:
Download App:
  • android
  • ios