ನಿರ್ದೇಶಕ ಡೆನ್ನಿಸ್ ಜೋಸೆಫ್ 'ಕುಟ್ ಕಟ್' ಸಿನಿಮಾದ ಪ್ರಕಟಣೆಗಾಗಿ ಕೆಲಸ ಮಾಡುತ್ತಿದ್ದಾಗ, ಅವರು ನಟಿಯೊಬ್ಬರೊಂದಿಗೆ ನಡೆಸಿದ ಸಂದರ್ಶನವು ದೊಡ್ಡ ವಿವಾದಕ್ಕೆ ಕಾರಣವಾಯಿತು ಎಂದು ಆಲಪ್ಪಿ ಅಶ್ರಫ್ ಹೇಳಿದ್ದಾರೆ. 

ಮಲಯಾಳಂ ಚಿತ್ರರಂಗದಲ್ಲಿ ನಿರ್ದೇಶಕ, ಚಿತ್ರಕಥೆಗಾರ ಆಗಿ ಡೆನ್ನಿಸ್ ಜೋಸೆಫ್ ಅವರು ಮನೆಮಾತಾಗಿದ್ದರು. ಮಮ್ಮುಟ್ಟಿ, ಮೋಹನ್‌ಲಾಲ್ ಅವರಂತಹ ಸೂಪರ್‌ಸ್ಟಾರ್‌ಗಳ ಬೆಳವಣಿಗೆಯಲ್ಲಿ ಡೆನ್ನಿಸ್ ಅವರ ಪಾತ್ರ ಬಹಳ ದೊಡ್ಡದು. ಅವರು ಒಬ್ಬ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ತಮ್ಮ ವೃತ್ತಿ ಜೀವನದ ಆರಂಭದಲ್ಲಿ 'ಕಟ್ ಕಟ್' ಎಂಬ ಸಿನಿಮಾ ಮ್ಯಾಗಜಿನ್‌ನಲ್ಲಿ ಸಬ್ ಎಡಿಟರ್ ಆಗಿ ಕೆಲಸ ಶುರುಮಾಡಿದ್ದರು. ಆ ಪತ್ರಿಕೆಯಲ್ಲಿ ಮೊದಲು ಪ್ರಕಟವಾದ ಸಂದರ್ಶನ ನಟಿ ಖದೀಜಾ ಅವರದ್ದು. ಆಗ ನಡೆದ ಒಂದು ದೊಡ್ಡ ವಿವಾದದ ಬಗ್ಗೆ ನಿರ್ದೇಶಕ ಆಲಪ್ಪಿ ಅಶ್ರಫ್ ಈಗ ಬಾಯಿಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಸವಾಲು ಹಾಕಿದ್ದ ನಟಿ ಖದೀಜಾ

"ಸಿನಿಮಾ ಮತ್ತು ಸಿನಿಮಾದವರನ್ನು ವಿಡಂಬನೆ ಮಾಡುತ್ತಿದ್ದ 'ಕಟ್ ಕಟ್' ಪತ್ರಿಕೆಯ ಸಬ್ ಎಡಿಟರ್ ಆಗಿದ್ದರು ಡೆನ್ನಿಸ್ ಜೋಸೆಫ್. ಆ ಕಾಲದಲ್ಲಿ ಸುಮಾರು ಒಂದೂವರೆ ಲಕ್ಷ ಕಾಪಿಗಳು ಮಾರಾಟವಾಗುತ್ತಿದ್ದ ಜನಪ್ರಿಯ ಪತ್ರಿಕೆ ಅದು. ಸಿನಿಮಾದ ತೆರೆಮರೆಯ ರಹಸ್ಯಗಳು, ವಿವಾದಗಳ ಬಗ್ಗೆ ಡೆನ್ನಿಸ್ ಬರೆಯುತ್ತಿದ್ದರು. 'ಕಟ್ ಕಟ್'ನಲ್ಲಿ ಮೊದಲು ಪ್ರಕಟವಾದದ್ದು ನಟಿ ಖದೀಜಾ ಅವರ ಸಂದರ್ಶನ. ಅದರಲ್ಲಿ ಖದೀಜಾ ಒಂದು ದೊಡ್ಡ ಸವಾಲು ಹಾಕಿದ್ದರು.

ಏನು ಸವಾಲು ಹಾಕಿದ್ರು?

'ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಬೆಡ್‌ರೂಮ್ ಶೇರ್ ಮಾಡದ ಒಬ್ಬೇ ಒಬ್ಬ ನಟಿ ಇದ್ದರೆ ಹೇಳಿ ನೋಡೋಣ. ಇದು ನನ್ನ ಚಾಲೆಂಜ್' ಅಂತ ಹೇಳಿದ್ದರು. ಇದು ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಮಟ್ಟದ ಚರ್ಚೆ, ವಿವಾದ ಮತ್ತು ಟೀಕೆಗಳಿಗೆ ಕಾರಣವಾಗಿತ್ತು" ಎಂದು ಆಲಪ್ಪಿ ಅಶ್ರಫ್ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಆ ಸಿನಿಮಾ ಹಿಟ್‌ ಆಯ್ತು

'ಕಟ್ ಕಟ್' ಪತ್ರಿಕೆಯ ಮಾಲೀಕರು ಎಲಿಯಾಸ್ ಈರಾಳಿ ಆಗಿದ್ದರು. "ಮಲಯಾಳಂ ಚಿತ್ರರಂಗದಲ್ಲಿ ಈರಾಳಿ ಅವರಿಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ. ಯಾಕಂದ್ರೆ, ಅವರು ಎಲ್ಲೂ ನುಗ್ಗಿ ಹೋಗುವ ಜಾಯಮಾನದವರಲ್ಲ. ಸಾಕಷ್ಟು ಸಿನಿಮಾ ನಿರ್ಮಾಣ ಮಾಡಿದ್ರೂ, ಯಾವುದೂ ಹಿಟ್ ಆಗಲಿಲ್ಲ. ಅವರು ಬೇಡವೆಂದು ಬಿಟ್ಟ ಕಥೆಯೇ ಮುಂದೆ 'ಕೊಟ್ಟಾಯಂ ಕುಂಜಾಚನ್' ಹೆಸರಲ್ಲಿ ಬಂದು ದೊಡ್ಡ ಹಿಟ್ ಆಯ್ತು" ಅಂತಲೂ ಆಲಪ್ಪಿ ಅಶ್ರಫ್ ಹೇಳಿದ್ದಾರೆ.